ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ವರ್ಟಸ್ ಸೆಡಾನ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಹೊಸ ಕಾರು ಮಾರುಕಟ್ಟೆಗೆ ಪ್ರವೇಶಿಸಿದ ಕೇವಲ ಎರಡು ತಿಂಗಳ ಅವಧಿಯಲ್ಲಿ 5 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಇದುವರೆಗೆ ಸುಮಾರು 10 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಜೂನ್ ಮಧ್ಯಂತರದಲ್ಲಿ ಹೊಸ ವರ್ಟಸ್ ಕಾರಿನ ವಿತರಣೆ ಆರಂಭಿಸಿದ್ದ ಫೋಕ್ಸ್‌ವ್ಯಾಗನ್ ಕಂಪನಿಯು ಉತ್ಪಾದನಾ ಪ್ರಮಾಣವನ್ನು ಆಧರಿಸಿ ಇದುವರೆಗೆ ಸುಮಾರು 5 ಸಾವಿರ ಯುನಿಟ್‌ಗಳನ್ನು ವಿತರಣೆ ಮಾಡಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಹೊಸ ಕಾರುಗಳ ಮೂಲಕ ಫೋಕ್ಸ್‌ವ್ಯಾಗನ್ ಕಂಪನಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಟೈಗುನ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಕಾರು ಮಾದರಿಗಳೊಂದಿಗೆ ಕಂಪನಿಯು ಕಾರು ಮಾರಾಟದ ಪಾಲನ್ನು ಹೆಚ್ಚಿಸಿಕೊಂಡಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

2.0 ಇಂಡಿಯಾ ಯೋಜನೆಯ ಅಡಿಯಲ್ಲಿ ಹೊಸ ಕಾರುಗಳನ್ನು ಪರಿಚಯಿಸಿರುವ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯು ಸಹಭಾಗಿತ್ವ ಯೋಜನೆ ಅಡಿ ಒಟ್ಟು ನಾಲ್ಕು ಕಾರುಗಳನ್ನು ಬಿಡುಗಡೆ ಮಾಡಿದ್ದು, ಸ್ಕೋಡಾ ಕಂಪನಿಯು ಕುಶಾಕ್, ಸ್ಲಾವಿಯಾ ಮಾದರಿಯನ್ನು ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯು ಟೈಗನ್, ವರ್ಟಸ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ನಾಲ್ಕು ಮಾದರಿಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ವಿಭಿನ್ನವಾದ ತಾಂತ್ರಿಕ ಸೌಲಭ್ಯದೊಂದಿಗೆ ತಮ್ಮದೆ ಗ್ರಾಹಕರ ವರ್ಗವನ್ನು ಹೊಂದಿವೆ. ಅದರಲ್ಲೂ ಹೊಸದಾಗಿ ಬಿಡುಗಡೆಯಾಗಿರುವ ಹೊಸ ವರ್ಟಸ್ ಮಾದರಿಯು ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಅನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡೈನಾಮಿಕ್ ಲೈನ್‌ನಲ್ಲಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ಎಂಬ ಮೂರು ರೂಪಾಂತರಗಳನ್ನು ಮತ್ತು ಪರ್ಫಾಮೆನ್ಸ್ ಲೈನ್‌ನಲ್ಲಿ ಜಿಟಿ ಪ್ಲಸ್ ವೆರಿಯೆಂಟ್ ನೀಡಲಾಗಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್, ಇವುಗಳ ಬೆಲೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.22 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 15.71 ಲಕ್ಷ ಬೆಲೆ ಹೊಂದಿದ್ದರೆ ಟಾಪ್-ಎಂಡ್ ಪರ್ಫಾರ್ಮೆನ್ಸ್ ಲೈನ್‌ನಲ್ಲಿರುವ ಜಿಟಿ ಲೈನ್‌ ಎಕ್ಸ್‌ಶೋರೂಂ ಪ್ರಕಾರ ರೂ. 17.92 ಲಕ್ಷ ಬೆಲೆ ಹೊಂದಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಹೊಸ ಕಾರು ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ MQB A0 IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಇದು ಬ್ರ್ಯಾಂಡ್‌ನ ಮಾಡ್ಯುಲರ್ ಆರ್ಕಿಟೆಕ್ಚರ್‌ನ ಸ್ಥಳೀಯ ಆವೃತ್ತಿಯಾಗಿದೆ. ವಿಶೇಷವಾಗಿ ಭಾರತದಲ್ಲಿ ಉತ್ಪಾದನೆಗೊಳ್ಳುವ ಮಾದರಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಟೈಗನ್ ಕೂಡಾ ಅಭಿವೃದ್ದಿಗೊಂಡಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ವರ್ಟಸ್ ಕಾರು ಮಾದರಿಯನ್ನು ಈ ಹಿಂದಿನ ವೆಂಟೊ ಮಾದರಿಯ ಸ್ಥಾನಕ್ಕೆ ಬದಲಿಸಿದ್ದು, ಇದು ವೆಂಟೊ ಮಾದರಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಹೆಚ್ಚಿನ ಮಟ್ಟದ ಉದ್ದಳತೆ ಹೊಂದಿದೆ. ಹೊಸ ಕಾರು 4,561 ಎಂಎಂ ಉದ್ದ, 1,752 ಎಂಎಂ ಅಗಲ ಮತ್ತು 1,507 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೆಸ್ ಅನ್ನು ಒಳಗೊಂಡಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ವರ್ಟಸ್ ಸೆಡಾನ್ ಮಾದರಿಯಲ್ಲಿ ಕಂಪನಿಯು ಒಟ್ಟು ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ 1.0 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಮಾದರಿಯು 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ಇನ್ನು ಟಾಪ್ ಎಂಡ್ ಮಾದರಿಯಾಗಿರುವ 1.5 ಲೀಟರ್ ಟಿಎಸ್ಐ ಪೆಟ್ರೋಲ್ ಮಾದರಿಯು 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್‌ನಲ್ಲಿ ಕಂಪನಿಯು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಿದೆ.

ಹೊಸ ವರ್ಟಸ್ ಸೆಡಾನ್ ಮಾದರಿಯೊಂದಿಗೆ ಹೋಂಡಾ ಸಿಟಿಗೆ ಭರ್ಜರಿ ಪೈಪೋಟಿ ನೀಡಿದ ಫೋಕ್ಸ್‌ವ್ಯಾಗನ್

ವರ್ಟಸ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಎಸ್ ಜೊತೆಗೆ ಎಬಿಎಸ್, ಪಾರ್ಕಿಂಗ್ ಸೆನ್ಸಾರ್, 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC),ಟೈರ್ ಒತ್ತಡದ ಡಿಫ್ಲೇಶನ್ ಅಲರ್ಟ್, ಹಿಲ್ ಹೋಲ್ಡ್ ಕಂಟ್ರೋಲ್ ಸೌಲಭ್ಯಗಳಿವೆ.

Most Read Articles

Kannada
English summary
Volkswagen delivers over 5 000 units of its new virtus sedan in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X