ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಐಷಾರಾಮಿ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಡನ್ ಕಂಪನಿ ವೊಲ್ವೊ ಭಾರತದಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಯ 9600 ಬಸ್ ಶ್ರೇಣಿ ಪರಿಚಯಿಸಿದ್ದು, ಇದು ಭಾರತದ ಅತಿ ಉದ್ದದ ಐಷಾರಾಮಿ ಬಸ್ ಮಾದರಿಯೆಂದೆ ಜನಪ್ರಿಯವಾಗಿದೆ.

ಹೊಸ ಪ್ಲಾಟ್‌ಫಾರ್ಮ್‌ ಆಧರಿಸಿರುವ ವೊಲ್ವೊ 9600 ಐಷಾರಾಮಿ ಬಸ್ ಮಾದರಿಯು ಫ್ಲಿಟ್ ಗ್ರಾಹಕರ ಬೇಡಿಕೆಯೆಂತೆ ಸ್ಲೀಪರ್ ಮತ್ತು ಸೀಟರ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದು, ಸ್ಲೀಪರ್ ಸೌಲಭ್ಯ ಹೊಂದಿರು ಮಾದರಿಯು ವೊಲ್ವೊ 9600 ಹೆಸರಿನಲ್ಲಿ ಮಾರಾಟಗೊಳ್ಳಲಿದ್ದರೆ ಸೀಟರ್ ಸೌಲಭ್ಯ ಹೊಂದಿರುವ ಮಾದರಿಯು ವೊಲ್ವೊ ಡಿಕೆ8 ಹೆಸರಿನಲ್ಲಿ ಮಾರಾಟವಾಗಲಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಸುಧಾರಿತ ತಂತ್ರಜ್ಞಾನ ಪ್ರೇರಿತ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ವೊಲ್ವೊ 9600 ಮಾದರಿಯು 15 ಮೀಟರ್ ಉದ್ದಳತೆ ಹೊಂದಿದ್ದರೆ ಡಿಕೆ8 ಮಾದರಿಯು 13.5 ಮೀಟರ್ ಉದ್ದಳತೆ ಹೊಂದಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ವೊಲ್ವೊ ಕಂಪನಿಯು ಹೊಸ ಬಸ್‌ಗಳಲ್ಲಿ ಸಂಪೂರ್ಣವಾಗಿ ಯುರೋಪಿಯನ್ ವಿನ್ಯಾಸ ತಂತ್ರಜ್ಞಾನವನ್ನು ಬಳಸಲಾಗಿದ್ದು, 15 ಮೀಟರ್ ಗಾತ್ರದ ಸೀಟರ್ ಕೋಚ್ ಬಸ್‌ನಲ್ಲಿ 55 ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿದ್ದರೆ 13.5 ಮೀಟರ್ ಸ್ಲೀಪರ್ ಕೋಚ್ ಬಸ್‌ನಲ್ಲಿ 40 ಪ್ರಯಾಣಿಕರು ಪ್ರಯಾಣಮಾಡಬಹುದಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಇದಲ್ಲದೆ ಈ ಬಸ್‌ಗಳಲ್ಲಿ ಕ್ರಮವಾಗಿ 15 ಕ್ಯೂಬಿಕ್ ಮೀಟರ್ ಮತ್ತು 9.2 ಕ್ಯೂಬಿಕ್ ಮೀಟರ್ ಲಗೇಜ್ ಜಾಗವನ್ನು ನೀಡಲಾಗಿದ್ದು, ಹೊಸ ಬಸ್‌ಗಳು ಐಷಾರಾಮಿ ಸೌಲಭ್ಯ, ಗರಿಷ್ಠ ಸೌಕರ್ಯಗಳು ಮತ್ತು ಗರಿಷ್ಠ ಸುರಕ್ಷತೆಯೊಂದಿಗೆ ಹೊಸ ಮಾನದಂಡಗಳು ಪೂರೈಸಲು ಯಶಸ್ವಿಯಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಹೊಸ ವೊಲ್ವೊ 9600 ಬಸ್‌ಗಳಲ್ಲಿ ಐ-ಶಿಫ್ಟ್ ಸ್ವಯಂಚಾಲಿತ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಬಳಸಲಾಗಿದ್ದು, ಡಿ8ಕೆ(8000-ಸಿಸಿ) ಎಂಜಿನ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸಲಿದೆ. ಈ ಬಸ್‌ಗಳು ಗರಿಷ್ಠ 350 ಬಿಎಚ್‌ಪಿ ಮತ್ತು ಗರಿಷ್ಠ 1350 ಎನ್‌ಎಂ ಟಾರ್ಕ್ ಉತ್ಪಾದಿಸಲಿದ್ದು, ಬಸ್‌ಗಳ ಕಾರ್ಯಕ್ಷಮತೆ ಮತ್ತು ಮೈಲೇಜ್ ಹೆಚ್ಚಳಕ್ಕಾಗಿ ಕಂಪನಿಯು ಏರೋಡೈನಾಮಿಕ್ ವಿನ್ಯಾಸ ನೀಡಿಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಗರಿಷ್ಠ ಸುರರಕ್ಷತೆಗಾಗಿ ಮುಂಭಾಗದ ಡ್ರೈವರ್ ಕ್ಯಾಬಿನ್ ಅನ್ನು ಈ ಬಾರಿ ಹೆಚ್ಚಿಸಲಾಗಿದೆ. ಅಪಘಾತಗಳ ಸಂದರ್ಭದಲ್ಲಿ ಮುಂಭಾಗದಿಂದ ಹರಿದುಬರುವ ಘರ್ಷಣೆಯ ಪ್ರಭಾವವನ್ನು ಮುಂಭಾಗ ಕ್ಯಾಬಿನ್ ಹಿರಿಕೊಳ್ಳಲಿದ್ದು, ಈ ಮೂಲಕ ಪ್ರಯಾಣಿಕರ ಕ್ಯಾಬಿನ್‌ಗೆ ಆಗಬಹುದಾದ ಅಪಘಾತದ ತೀವ್ರತೆಯನ್ನು ತಗ್ಗಿಸುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಹಾಗೆಯೇ ಡ್ರೈವರ್ ಆಸನವು ಈ ಬಾರಿ ಸಾಕಷ್ಟು ಸುಧಾರಿತ ಸೌಲಭ್ಯಗಳೊಂದಿಗೆ ಪ್ರಿಮಿಯಂ ಅನುಭವ ನೀಡಲಿದ್ದು, ಫಸ್ಟ್ ಇನ್ ಕ್ಲಾಸ್ ಸೌಲಭ್ಯಗಳಾದ ಡ್ಯಾಶ್‌ಬೋರ್ಡ್, ಟೆಲಿಮ್ಯಾಟಿಕ್ ಸಿಸ್ಟಂ, ಮತ್ತು ಆರಾಮದಾಯಕವಾಗಿರುವ ಆಸನ ಸೌಲಭ್ಯವು ಚಾಲನೆಯನ್ನು ಸುಲಭಗೊಳಿಸುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಏರೋಡೈನಾಮಿಕ್ ವಿನ್ಯಾಸದ ಪರಿಣಾಮ ಹೊರಭಾಗದ ಶಬ್ದವು ಕ್ಯಾಬಿನ್ ಪ್ರವೇಶಿಸುವುದನ್ನು ಗಣನೀಯವಾಗಿ ತಗ್ಗಿಸಿರುವುದರಿಂದ ಪ್ರಯಾಣಿಕರಿಗೆ ಶಾಂತವಾದ ಕ್ಯಾಬಿನ್ ವಾತಾವರಣವು ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಪ್ರಯಾಣಿಕರ ಆಸನ ಸೌಲಭ್ಯಗಳು ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಪ್ರತ್ಯೇಕ ಯುಎಸ್‌ಬಿ ಚಾರ್ಜರ್ ಸ್ಲಾಟ್‌ನೊಂದಿಗೆ ವಿಹಂಗಮ ಕಿಟಕಿಗಳನ್ನು ಹೊಂದಿರಲಿದ್ದಾರೆ. ಹಾಗೆಯೇ ಸ್ಲೀಪರ್ ಕೋಚ್‌ನ ಒಳಾಂಗಣವು ಆರಾಮದಾಯಕವಾದ ದೂರದ ಪ್ರಯಾಣದ ಅನುಭವವನ್ನು ನೀಡಲು ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಸುರಕ್ಷತೆಗಾಗಿ ಹೊಸ ಬಸ್‌ನಲ್ಲಿ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್‌, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವು ಆಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

'9600 ಪ್ಲಾಟ್‌ಫಾರ್ಮ್' ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಇದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹಲವಾರು ಮಾದರಿಗಳು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿವೆ. ಹೀಗಾಗಿ ಕಂಪನಿಯು ಹೊಸ ಪ್ಲಾಟ್‌ಫಾರ್ಮ್ ಅನ್ನು ಇದೀಗ ಭಾರತದಲ್ಲಿಯೇ ನಿರ್ಮಾಣ ಮಾಡುವ ಮೂಲಕ ಹೊಸ ತಲೆಮಾರಿನ ಬಸ್ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಭಾರತಕ್ಕೆ ಲಗ್ಗೆಯಿಟ್ಟಿರುವ ಅತಿ ಉದ್ದದ ಐಷಾರಾಮಿ ಬಸ್ ವೊಲ್ವೊ 9600 ವಿಶೇಷತೆಗಳಿವು!

ಮೇಕ್-ಇನ್-ಇಂಡಿಯಾ ಅಭಿಯಾನದ ಅಡಿಯಲ್ಲಿ ವೊಲ್ವೊ ಕಂಪನಿಯು ಹೊಸ ಬಸ್‌ಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡುವುದರಿಂದ ಹೊಸ ಬಸ್ ಉತ್ಪಾದನಾ ವೆಚ್ಚವು ಗಣನೀಯವಾಗಿ ತಗ್ಗಲಿದ್ದು, ಭಾರತದಲ್ಲಿಯೇ ಉತ್ಪಾದನೆಯಾಗುವುದರಿಂದ ಗ್ರಾಹಕರಿಗೆ ಬಸ್‌ಗಳ ವಿತರಣೆಯು ಅತಿ ಕಡಿಮೆ ಅವಧಿಯಲ್ಲಿ ಲಭ್ಯವಾಗಲಿದೆ.

Most Read Articles

Kannada
English summary
Volvo new 9600 bus range launched features design interior performance
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X