ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ತನ್ನ ಹೊಸ ಎಕ್ಸ್‌ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಖರೀದಿಗೆ ಬುಕಿಂಗ್ ಆರಂಭವಾದ ಕೇವಲ ಎರಡು ಗಂಟೆಗಳಲ್ಲಿ ಮೊದಲ ಹಂತದಲ್ಲಿ ಮಾರಾಟಕ್ಕೆ ನಿರ್ಧರಿಸಲಾಗಿರುವ 150 ಯುನಿಟ್‌ಗಳು ಸಂಪೂರ್ಣವಾಗಿ ಮಾರಾಟಗೊಂಡಿವೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಹೊಸ ಎಕ್ಸ್‌ಸಿ40 ರೀಚಾರ್ಜ್ ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಬದಲಾಗಿ ಕಂಪನಿಯು ಭಾರತದಲ್ಲಿಯೇ ಹೊಸ ಕಾರನ್ನು ಸಿಕೆಡಿ ಆಮದು ನೀತಿ ಅಡಿಯಲ್ಲಿ ಮರುಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರಿಂದ ಹೊಸ ಇವಿ ಕಾರಿನ ಮೇಲಿನ ತೆರಿಗೆ ಇಳಿಕೆಯು ಉತ್ತಮ ಬೆಲೆ ನಿರ್ಧರಿಸಲು ಸಹಕಾರಿಯಾಗಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಇದೇ ಕಾರಣಕ್ಕೆ ಹೊಸ ಇವಿ ಕಾರಿನ ಬೆಲೆಯು ಸಾಮಾನ್ಯ ಪೆಟ್ರೋಲ್ ಕಾರು ಮಾದರಿಗಿಂತ ಕೇವಲ ರೂ. 11 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಗಿಂತಲೂ ದುಪ್ಪಟ್ಟು ದರ ಹೊಂದಿರಬೇಕಿದ್ದ ಹೊಸ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 55.90 ಲಕ್ಷ ಬೆಲೆ ಪಡೆದುಕೊಂಡಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಹೈ ಎಂಡ್ ವೆರಿಯೆಂಟ್ ಟ್ವಿನ್ ವರ್ಷನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿರುವ ವೊಲ್ವೊ ಹೊಸ ಅಸೆಂಬ್ಲಿ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಸಿಕೆಡಿ ಆಮದು ನೀತಿ ಅಡಿ ಮಾರಾಟಗೊಳ್ಳುವ ಕಾರುಗಳಿಂತಲೂ ಸಿಬಿಯು ಆಮದು ನೀತಿ ಮಾರಾಟಗೊಳ್ಳುವ ಕಾರು ಬೆಲೆ ಸಾಕಷ್ಟು ಹೆಚ್ಚಳವಾಗಿರುತ್ತದೆ. ಹೀಗಾಗಿ ತನ್ನ ಎಂಟ್ರಿ ಲೆವಲ್ ಕಾರನ್ನು ದುಬಾರಿ ಬೆಲೆಯಲ್ಲಿ ಬಿಡುಗಡೆ ಮಾಡಿದರೆ ನಿಗದಿತ ಗ್ರಾಹಕರ ಬೇಡಿಕೆಯನ್ನು ತಲುಪುವುದು ಕಷ್ಟ ಎಂದು ಅರಿತಿದ್ದ ವೊಲ್ವೊ ಕಂಪನಿಯು ಇದೀಗ ಭಾರತದಲ್ಲಿಯೇ ನಿರ್ಮಾಣವಾದ ಎಕ್ಸ್‌ಸಿ40 ರೀಚಾರ್ಜ್ ಬಿಡುಗಡೆ ಮಾಡಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಹೊಸ ಎಕ್ಸ್‌ಸಿ40 ರೀಚಾರ್ಜ್ ಮಾದರಿಯಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಆಯ್ಕೆ ಹೊಂದಿರುವ ಹೊಸ ಕಾರು 402 ಬಿಎಚ್‌ಪಿ ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಹೊಸ ಕಾರಿನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಆಗಿ 11kW ಹೋಂ ಚಾರ್ಜರ್ ನೀಡಲಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 418 ಕಿ.ಮೀ ಮೈಲೇಜ್ ನೀಡುವುದಾಗಿ ಡಬ್ಲ್ಯುಎಲ್‌ಟಿಪಿ ಟೆಸ್ಟಿಂಗ್‌ ಮೂಲಕ ಪ್ರಮಾಣೀಕರಿಸಲಾಗಿದೆ. 11kW ಹೋಂ ಚಾರ್ಜರ್ ಮೂಲಕ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಕನಿಷ್ಠ 12 ರಿಂದ 18 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಇದರ ಜೊತಗೆ ಕೇವಲ 33 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಒಗದಗಿಸಬಲ್ಲ 150kW ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಹೊಸ ಕಾರಿನ ಬ್ಯಾಟರಿ ಪ್ಯಾಕ್ ಸರ್ಪೊಟ್ ಮಾಡಲಿದ್ದು, ಭಾರೀ ಗಾತ್ರದ ಬ್ಯಾಟರಿ ಪ್ಯಾಕ್ ಪರಿಣಾಮ ಹೊಸ ಕಾರು ಬರೋಬ್ಬರಿ 2,188 ಕೆ.ಜಿ ಪಡೆದುಕೊಂಡಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಹೊಸ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಸಾಮಾನ್ಯ ಎಕ್ಸ್‌ಸಿ40 ಪೆಟ್ರೋಲ್ ಕಾರಿಗಿಂತಲೂ 400 ಕೆ.ಜಿಯಷ್ಟು ಹೆಚ್ಚಿನ ತೂಕ ಹೊಂದಿದ್ದು, ಭಾರೀ ಗಾತ್ರದ ಬ್ಯಾಟರಿ ಅವಳವಡಿಕೆಯ ನಂತರವೂ ಹೊಸ ಕಾರು ಕೇವಲ 4.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಈ ಮೂಲಕ ಹೊಸ ಕಾರಿನಲ್ಲಿ ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ನೀಡಲಾಗಿದ್ದು, ಇದು ಸಿಂಗಲ್ ಸ್ಪೀಡ್ ಗೇರ್‌ಬಾಕ್ಸ್ ಮೂಲಕ ನಾಲ್ಕು ಚಕ್ರಗಳಿಗೆ ಶಕ್ತಿ ಪೂರೈಕೆ ಮಾಡುತ್ತದೆ. ಹಾಗೆಯೇ ಹೊಸ ಕಾರು ಪೆಟ್ರೋಲ್ ಮಾದರಿಗಿಂತಲೂ 15 ಎಂಎಂ ಹೆಚ್ಚಿನ ಉದ್ದಳತೆಯೊಂದಿಗೆ 4,425 ಎಂಎಂ ಉದ್ದ, 1,863 ಎಂಎಂ ಅಗಲ, 1,652 ಎಂಎಂ ಅಗಲ ಮತ್ತು 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಚಾರ್ಸಿಯ‌ಲ್ಲಿ ಬ್ಯಾಟರಿ ಜೋಡಣೆಯ ಪರಿಣಾಮ ಹೊಸ ಕಾರಿನ ಗ್ರೌಂಡ್ ಕ್ಲಿಯೆರೆನ್ಸ್ ಪೆಟ್ರೋಲ್ ಮಾದರಿಗಿಂತಲೂ ತುಸು ಕಡಿಮೆಯಾಗಿದ್ದು, 19 ಇಂಚಿನ ಅಲಾಯ್ ವ್ಹೀಲ್, 452 ಲೀಟರ್ ಸಾಮರ್ಥ್ಯದ ಬೂಟ್‌ಸ್ಪೆಸ್ ನೀಡಲಾಗಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಇವಿ ಮಾದರಿಯಾಗಿರುವುದರಿಂದ ಹೊಸ ಕಾರಿನ ಬಾನೆಟ್ ಅಡಿಯಲ್ಲೂ ಸುಮಾರು 31 ಲೀಟರ್ ನಷ್ಟು ಸ್ಟೋರೇಜ್ ಸ್ಪೆಸ್ ಲಭ್ಯವಿದ್ದು, ಹೊಸ ಕಾರಿನಲ್ಲಿ ಐಷಾರಾಮಿ ಚಾಲನೆಗೆ ಪೂರಕವಾದ ಹಲವಾರು ತಾಂತ್ರಿಕ ಸೌಲಭ್ಯಗಳಿವೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಆಕರ್ಷಕ ತಾಂತ್ರಿಕ ಸೌಲಭ್ಯಗಳಿದ್ದು, ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಕ್ಯಾಬಿನ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ಇ-ಸಿಮ್ ಮೂಲಕ ಗೂಗಲ್ ಮ್ಯಾಪ್ ಅಂಡ್ ಅಸಿಸ್ಟ್, ಸನ್‌ರೂಫ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಸೆನ್ಸಾರ್ ಆಧರಿಸಿರುವ ಲೆವಲ್ 2 ಎಡಿಎಸ್ ಸಿಸ್ಟಂ ಇದರಲ್ಲಿದೆ.

ಭಾರತದಲ್ಲಿಯೇ ನಿರ್ಮಾಣದ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಕಾರು ಕೇವಲ ಎರಡು ಗಂಟೆಗಳಲ್ಲಿ ಸೋಲ್ಡೌಟ್

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಕನೆಕ್ಟೆಡ್ ಕಾರ್ ಟೆಕ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದು ಮುಂಭಾಗದ ಆಸನಗಳು, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಕಾರಿನ ಮೇಲೆ ಕಂಪನಿಯು ಒಟ್ಟು ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ ಮಾಡಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ವಾರಂಟಿ ನೀಡುತ್ತಿದೆ.

Most Read Articles

Kannada
Read more on ವೊಲ್ವೊ volvo
English summary
Volvo xc40 recharge electric suv sold out in india just in two hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X