ಪ್ರತಿ ಚಾರ್ಜ್‌ಗೆ 418 ಕಿ.ಮೀ ಮೈಲೇಜ್ ನೀಡುವ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಸ್ವಿಡಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಎಕ್ಸ್‌ಸಿ40 ರೀಚಾರ್ಜ್ ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 55.90 ಲಕ್ಷ ಬೆಲೆ ಹೊಂದಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಹೈ ಎಂಡ್ ವೆರಿಯೆಂಟ್ ಟ್ವಿನ್ ವರ್ಷನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾದರಿಗಾಗಿ ಗ್ರಾಹಕರು ಅಧಿಕೃತ ವೆಬ್‌ಸೈಟ್ ಮೂಲಕ ನಾಳೆಯಿಂದಲೇ ರೂ. 50 ಸಾವಿರ ಮುಂಗಡ ಪಾವತಿಯೊಂದಿಗೆ ಬುಕಿಂಗ್ ಸಲ್ಲಿಸಬಹುದಾಗಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯನ್ನು ವೊಲ್ವೊ ಕಂಪನಿಯು ನಮ್ಮ ಬೆಂಗಳೂರಿನಲ್ಲಿರುವ ತನ್ನ ಹೊಸ ಅಸೆಂಬ್ಲಿ ಘಟಕದಲ್ಲಿ ಉತ್ಪಾದನೆ ಕೈಗೊಳ್ಳಲಿದ್ದು, ಹೊಸ ಕಾರು ಸಿಕೆಡಿ ಆಮದು ನೀತಿ ಅಡಿ ಮಾರಾಟಗೊಳ್ಳಲಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಸಿಬಿಯು ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡ ಮಾದರಿಯನ್ನು ಆಮದು ಮಾಡಿಕೊಂಡರೆ ಬೆಲೆ ಹೆಚ್ಚಳವಾಗುವ ಕಾರಣಕ್ಕೆ ಕಂಪನಿಯು ಹೊಸ ಕಾರಿನ ಬಿಡಿಭಾಗಗಳನ್ನು ಮಾತ್ರ ಆಮದು ಮಾಡಿಕೊಂಡು ಭಾರತದಲ್ಲಿ ಮರುಜೋಡಣೆ ಮಾಡುವ ಮೂಲಕ ಸಿಕೆಡಿ ಆಮದು ನೀಡಿ ಅಡಿ ಮಾರಾಟ ಮಾಡುತ್ತಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಸಿಕೆಡಿ ಆಮದು ನೀತಿ ಅಡಿ ಮಾರಾಟಗೊಳ್ಳುವ ಕಾರುಗಳಿಂತಲೂ ಸಿಬಿಯು ಆಮದು ನೀತಿ ಮಾರಾಟಗೊಳ್ಳುವ ಕಾರು ಬೆಲೆ ಸಾಕಷ್ಟು ಹೆಚ್ಚಳವಾಗಿರುತ್ತದೆ. ಹೀಗಾಗಿ ತನ್ನ ಎಂಟ್ರಿ ಲೆವಲ್ ಕಾರನ್ನು ದುಬಾರಿ ಬೆಲೆಯಲ್ಲಿ ಬಿಡುಗಡೆ ಮಾಡಿದರೆ ನಿಗದಿತ ಗ್ರಾಹಕರ ಬೇಡಿಕೆಯನ್ನು ತಲುಪುದು ಕಷ್ಟ ಎಂದು ಅರಿತಿರುವ ವೊಲ್ವೊ ಕಂಪನಿಯು ಇದೀಗ ಭಾರತದಲ್ಲಿಯೇ ನಿರ್ಮಾಣವಾದ ಎಕ್ಸ್‌ಸಿ40 ರೀಚಾರ್ಜ್ ಬಿಡುಗಡೆ ಮಾಡಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಇವಿ ಕಾರು ಮಾದರಿಗಳಿಂತಲೂ ಉತ್ತಮ ಫೀಚರ್ಸ್ ಜೊತೆ ಹಲವಾರು ಸುಧಾರಿತ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಪೆಟ್ರೋಲ್ ಮಾದರಿಗಿಂತ ರೂ.11.40 ಲಕ್ಷದಷ್ಟು ದುಬಾರಿ ಬೆಲೆಯೊಂದಿಗೆ ಅತ್ಯುತ್ತಮ ಬ್ಯಾಟರಿ ಆಯ್ಕೆ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಎಕ್ಸ್‌ಸಿ40 ರೀಚಾರ್ಜ್ ಮಾದರಿಯಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಆಯ್ಕೆ ಹೊಂದಿರುವ ಹೊಸ ಕಾರು 402 ಬಿಎಚ್‌ಪಿ ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಹೊಸ ಕಾರಿನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಆಗಿ 11kW ಹೋಂ ಚಾರ್ಜರ್ ನೀಡಲಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 418 ಕಿ.ಮೀ ಮೈಲೇಜ್ ನೀಡುವುದಾಗಿ ಡಬ್ಲ್ಯುಎಲ್‌ಟಿಪಿ ಟೆಸ್ಟಿಂಗ್‌ ಮೂಲಕ ಪ್ರಮಾಣೀಕರಿಸಲಾಗಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

11kW ಹೋಂ ಚಾರ್ಜರ್ ಮೂಲಕ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಕನಿಷ್ಠ 12 ರಿಂದ 18 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಇದರ ಜೊತಗೆ ಕೇವಲ 33 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಒಗದಗಿಸಬಲ್ಲ 150kW ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಹೊಸ ಕಾರಿನ ಬ್ಯಾಟರಿ ಪ್ಯಾಕ್ ಸರ್ಪೊಟ್ ಮಾಡಲಿದ್ದು, ಭಾರೀ ಗಾತ್ರದ ಬ್ಯಾಟರಿ ಪ್ಯಾಕ್ ಪರಿಣಾಮ ಹೊಸ ಕಾರು ಬರೋಬ್ಬರಿ 2,188 ಕೆ.ಜಿ ಪಡೆದುಕೊಂಡಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಹೊಸ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಸಾಮಾನ್ಯ ಎಕ್ಸ್‌ಸಿ40 ಪೆಟ್ರೋಲ್ ಕಾರಿಗಿಂತಲೂ 400 ಕೆ.ಜಿಯಷ್ಟು ಹೆಚ್ಚಿನ ತೂಕ ಹೊಂದಿದ್ದು, ಭಾರೀ ಗಾತ್ರದ ಬ್ಯಾಟರಿ ಅವಳವಡಿಕೆಯ ನಂತರವೂ ಹೊಸ ಕಾರು ಕೇವಲ 4.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಈ ಮೂಲಕ ಹೊಸ ಕಾರಿನಲ್ಲಿ ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ನೀಡಲಾಗಿದ್ದು, ಇದು ಸಿಂಗಲ್ ಸ್ಪೀಡ್ ಗೇರ್‌ಬಾಕ್ಸ್ ಮೂಲಕ ನಾಲ್ಕು ಚಕ್ರಗಳಿಗೆ ಶಕ್ತಿ ಪೂರೈಕೆ ಮಾಡುತ್ತದೆ. ಹಾಗೆಯೇ ಹೊಸ ಕಾರು ಪೆಟ್ರೋಲ್ ಮಾದರಿಗಿಂತಲೂ 15 ಎಂಎಂ ಹೆಚ್ಚಿನ ಉದ್ದಳತೆಯೊಂದಿಗೆ 4,425 ಎಂಎಂ ಉದ್ದ, 1,863 ಎಂಎಂ ಅಗಲ, 1,652 ಎಂಎಂ ಅಗಲ ಮತ್ತು 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಚಾರ್ಸಿಯ‌ಲ್ಲಿ ಬ್ಯಾಟರಿ ಜೋಡಣೆಯ ಪರಿಣಾಮ ಹೊಸ ಕಾರಿನ ಗ್ರೌಂಡ್ ಕ್ಲಿಯೆರೆನ್ಸ್ ಪೆಟ್ರೋಲ್ ಮಾದರಿಗಿಂತಲೂ ತುಸು ಕಡಿಮೆಯಾಗಿದ್ದು, 19 ಇಂಚಿನ ಅಲಾಯ್ ವ್ಹೀಲ್, 452 ಲೀಟರ್ ಸಾಮರ್ಥ್ಯದ ಬೂಟ್‌ಸ್ಪೆಸ್ ನೀಡಲಾಗಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಇವಿ ಮಾದರಿಯಾಗಿರುವುದರಿಂದ ಹೊಸ ಕಾರಿನ ಬಾನೆಟ್ ಅಡಿಯಲ್ಲೂ ಸುಮಾರು 31 ಲೀಟರ್ ನಷ್ಟು ಸ್ಟೋರೇಜ್ ಸ್ಪೆಸ್ ಲಭ್ಯವಿದ್ದು, ಹೊಸ ಕಾರಿನಲ್ಲಿ ಐಷಾರಾಮಿ ಚಾಲನೆಗೆ ಪೂರಕವಾದ ಹಲವಾರು ತಾಂತ್ರಿಕ ಸೌಲಭ್ಯಗಳಿವೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಆಕರ್ಷಕ ತಾಂತ್ರಿಕ ಸೌಲಭ್ಯಗಳಿದ್ದು, ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಕ್ಯಾಬಿನ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ಇ-ಸಿಮ್ ಮೂಲಕ ಗೂಗಲ್ ಮ್ಯಾಪ್ ಅಂಡ್ ಅಸಿಸ್ಟ್, ಸನ್‌ರೂಫ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಸೆನ್ಸಾರ್ ಆಧರಿಸಿರುವ ಲೆವಲ್ 2 ಎಡಿಎಸ್ ಸಿಸ್ಟಂ ಇದರಲ್ಲಿದೆ.

ಹೊಸ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಕನೆಕ್ಟೆಡ್ ಕಾರ್ ಟೆಕ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದು ಮುಂಭಾಗದ ಆಸನಗಳು, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಕಾರಿನ ಮೇಲೆ ಕಂಪನಿಯು ಒಟ್ಟು ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ ಮಾಡಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ವಾರಂಟಿ ನೀಡುತ್ತಿದೆ.

Most Read Articles

Kannada
English summary
Volvo xc40 recharge suv launched at rs 55 90 lakh range features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X