ನಕಲು ಮಾಡೋದ್ರಲ್ಲಿ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ ಕಂಪನಿ

ಭಾರತದಲ್ಲಿ ಮಾತ್ರವಲ್ಲ ವಿಶ್ವದ ಬಹುತೇಕ ದೇಶಗಳಲ್ಲಿ ಮೇಡ್ ಇನ್ ಚೀನಾ ಎಂದಾಕ್ಷಣ ಜನರು ಆ ಉತ್ಪನ್ನವನ್ನು ನೋಡುವ ವಿಧಾನವೇ ಬದಲಾಗುತ್ತದೆ. ಏಕೆಂದರೆ ಚೀನಾ ಉತ್ಪನ್ನಗಳ ಗುಣಮಟ್ಟ ಕಳೆಪೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಜೊತೆಗೆ ವಿಶ್ವದ ಟಾಪ್ ಬ್ರಾಂಡ್‌ಗಳ ಉತ್ಪನ್ನಗಳನ್ನು ನಖಲು ಮಾಡುವುದರಲ್ಲೂ ಚೀನಾ ಕಂಪನಿಗಳು ಜನಪ್ರಿಯತೆ ಪಡೆದಿವೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ವಿಶ್ವದ ದುಬಾರಿ ಐಷಾರಾಮಿ ಕಾರು ರೋಲ್ಸ್ ರಾಯ್ಸ್ ನಿಂದ ಹಿಡಿದು ವಿವಿಧ ದೇಶಗಳಲ್ಲಿ ಜನಪ್ರಿಯತೆ ಹೊಂದಿರುವ ಬಹುತೇಕ ಎಲ್ಲಾ ಕಾರುಗಳನ್ನು ನಕಲು ಮಾಡಿ ಅಗ್ಗದ ಬೆಲೆಗೆ ತಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಇದೀಗ ಟೆಸ್ಲಾ ಮಾಡೆಲ್ 3 ಕಾರನ್ನು ಸಹ ಕಾಪಿ ಮಾಡಿದ್ದಾರೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಇತ್ತೀಚೆಗೆ ಚೈನೀಸ್ ವಾಹನ ತಯಾರಕ ಚಂಗನ್ ಆಟೋಮೊಬೈಲ್ ಹೊಸ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದೆ, ಇದು ಬಹುತೇಕ ಟೆಸ್ಲಾ ಮಾಡೆಲ್ 3 ಅನ್ನು ಹೋಲುತ್ತದ್ದು, ಇದರ ಬೆಲೆ ಕೇವಲ $26,000 ರಿಂದ ಪ್ರಾರಂಭವಾಗುತ್ತದೆ. ಈ ಹಿಂದೆಯು ಚೀನೀ ಕಂಪನಿಗಳು ತನ್ನ ವಿನ್ಯಾಸಗಳಿಂದ ಸ್ಫೂರ್ತಿ ಪಡೆಯುವ ಮೂಲಕ ಟೆಸ್ಲಾಗೆ ಕೆಲವು ಸಮಸ್ಯೆಗಳನ್ನು ತಂದೊಡ್ಡಿದ್ದವು.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಆ ವಾಹನಗಳನ್ನು ಟೆಸ್ಲಾ ತದ್ರೂಪುಗಳು ಎಂದು ಕರೆಯಲಾಗಿತ್ತು. ಈ ಹಿಂದೆ ವರದಿಯಾಗಿದ್ದ ಕೆಲ ಮೂಲಗಳ ಪ್ರಕಾರ, ಚೀನಾದ ಎಕ್ಸ್‌ಪೆಂಗ್ ಟೆಸ್ಲಾದ ಯೂಸರ್ ಇಂಟರ್‌ಫೇಸ್ ಮತ್ತು ಅದರ ವೆಬ್‌ಸೈಟ್ ಅನ್ನು ಒಂದು ಹಂತದಲ್ಲಿ ನಕಲಿಸಿರುವುದಾಗಿ ವರದಿಯಾಗಿತ್ತು. ಇದು ವಿಶ್ವಾದ್ಯಂತ ಭಾರೀ ಚರ್ಚೆಯಾಗಿತ್ತು.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಟೆಸ್ಲಾದಲ್ಲಿ ಕೆಲಸ ಮಾಡಿದ್ದ ಮಾಜಿ ಉದ್ಯೋಗಿಯೊಬ್ಬರು, Xpeng ಕಂಪನಿಗಾಗಿ ಟೆಸ್ಲಾದಲ್ಲಿನ ಆಟೋಪೈಲಟ್ ಬಗ್ಗೆ ಮಾಹಿತಿಯನ್ನು ಕದ್ದಿರುವುದಾಗಿ ಟೆಸ್ಲಾ ಕಂಪನಿಯು ಮಾಜಿ ಉದ್ಯೋಗಿಯ ವಿರುದ್ಧ ಮೊಕದ್ದಮೆ ಹೂಡಿತ್ತು. ಸದ್ಯ ಚೀನಾದಲ್ಲಿ ತನ್ನ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿರುವ ಟೆಸ್ಲಾಗೆ ಶೆನ್ಲಾನ್ SL03 ಬಿಡುಗಡೆ ಮತ್ತೊಂದು ಆಘಾತವೆಂದೇ ಹೇಳಬಹುದು.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಏಕೆಂದರೆ ಚೀನಾ ಸರ್ಕಾರಿ ಸ್ವಾಮ್ಯದ ವಾಹನ ತಯಾರಕರಾದ ಚಂಗನ್ ಆಟೋಮೊಬೈಲ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಶೆನ್ಲಾನ್ SL03 ಎಂಬ ಸಣ್ಣ ಎಲೆಕ್ಟ್ರಿಕ್ ಸೆಡಾನ್ ಟೆಸ್ಲಾ ಡಿಸೈನ್, ಫೀಚರ್ಸ್ ಪಡೆದುಕೊಂಡು ಟೆಸ್ಲಾಗಿಂತ ಅಗ್ಗದ ಬೆಲೆಯನ್ನು ಹೊಂದಿದೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಸಂಪೂರ್ಣ ನಕಲು

ಬಾನೆಟ್ ತಂತುಕೋಶವನ್ನು ಸಂಧಿಸುವ ವಾಹನದ ಮುಂಭಾಗವು ಟೆಸ್ಲಾ ಮಾಡೆಲ್ 3ಗೆ ಹೋಲುತ್ತದೆ. ವಾಹನದ ಉದ್ದಳತೆಗಳು ಸಹ ಮಾಡೆಲ್ 3 ಅನ್ನು ಹೋಲುತ್ತವೆ. ಇದು ಕೇವಲ 4 ಇಂಚುಗಳಷ್ಟು ಉದ್ದವಾಗಿದೆ, ಆದರೆ ಇದು ವಾಸ್ತವಿಕವಾಗಿ ಟೆಸ್ಲಾ ಮಾಡೆಲ್ 3 ನಂತೆಯೇ ಒಂದೇ ವೀಲ್‌ಬೇಸ್, ಅಗಲ ಮತ್ತು ಎತ್ತರವನ್ನು ಹೊಂದಿದೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಅಲ್ಲದೆ, ಒಳಾಂಗಣವು ಕನಿಷ್ಠವಾಗಿ ಟೆಸ್ಲಾವನ್ನೇ ಹೋಲುತ್ತಿದ್ದು, ದೊಡ್ಡ ಹಾರಿಜಾಂಟಲ್ ಸೆಂಟರ್ ಡಿಸ್ಪ್ಲೇ ಅನ್ನು ಸಹ ಹೊಂದಿದೆ. ಇನ್ನು ಡಿಸ್ಪ್ಲೇ ಥೇಟ್ ಟೆಸ್ಲಾವನ್ನು ಪ್ರತಿಬಿಂಬಿಸುವ ಯೂಸರ್ ಇಂಟರ್‌ಫೇಸ್ ಅನ್ನು ಸಹ ಹೊಂದಿದೆ. ಸಾಫ್ಟ್‌ವೇರ್ ವೈಶಿಷ್ಟ್ಯಗಳು, ವಿಶೇಷವಾಗಿ ಯೂಸರ್ ಇಂಟರ್‌ಫೇಸ್, ಟೆಸ್ಲಾಗಳಿಂದ ಹೆಚ್ಚಾಗಿ ನಕಲು ಮಾಡಲಾದ ವೈಶಿಷ್ಟ್ಯವಾಗಿದೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ವಿಶೇಷತೆಗಳ ವಿಷಯದಲ್ಲಿ, ಮೂಲ ಆವೃತ್ತಿಯು ಚೈನೀಸ್ ಮಾನದಂಡದ ಆಧಾರದ ಮೇಲೆ 515 ಕಿ.ಮೀ (320 ಮೈಲುಗಳು) ಮೈಲೇಜ್‌ನೊಂದಿಗೆ ಬರುತ್ತದೆ. 705 ಕಿ.ಮೀ (438 ಮೈಲುಗಳು) ದೀರ್ಘ ಮೈಲೇಜ್ ನೀಡುವ ದೊಡ್ಡ ಬ್ಯಾಟರಿ ಪ್ಯಾಕ್ ಕೂಡ ಲಭ್ಯವಿದೆ. Shenlan SL03 ಟೆಸ್ಲಾಗಿಂತ ಯಾವ ವಿಭಾಗದಲ್ಲಿ ಉತ್ತಮ ಎಂಬುದನ್ನು ಗಮನಿಸಿದರೆ, ಮೊದಲಿಗೆ ಅದರ ಬೆಲೆ ಎಂದೇ ಹೇಳಬಹುದು.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಈ ಎಲೆಕ್ಟ್ರಿಕ್ ಕಾರ್ ಕೇವಲ ¥183,900 ರಿಂದ ಪ್ರಾರಂಭವಾಗುತ್ತದೆ, ಇದು ಸುಮಾರು $26,000 USD ಗೆ ಸಮನಾಗಿದೆ. ಇದನ್ನು ಭಾರತೀಯ ಕರೆನ್ಸಿಯಲ್ಲಿ ನೋಡುವುದಾದರೆ 21 ಲಕ್ಷ ರೂ. ಇರಬಹುದು. ಇನ್ನು ಟೆಸ್ಲಾ ಮಾಡೆಲ್ 3 ಚೀನಾದಲ್ಲಿ ¥279,900 ಅಥವಾ ಸುಮಾರು $40,000 USD ನಿಂದ ಪ್ರಾರಂಭವಾಗುತ್ತದೆ. ಭಾರತೀಯ ರೂ.ಗಳಲ್ಲಿ ಸುಮಾರು 32 ಲಕ್ಷ ರೂ. ಇರಬಹುದು.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಎಲೆಕ್ಟ್ರಾನಿಕ್ಸ್ ದೈತ್ಯ Huawei ಮತ್ತು CATL, ಬ್ಯಾಟರಿ ಸೆಲ್ ತಯಾರಕ ಕಂಪನಿಗಳ ಸಹಕಾರದಿಂದಲೇ ಶೆನ್ಲಾನ್ SL03 ಬೆಳೆಯುತ್ತಿದೆ. ಇಲ್ಲಿ ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಟೆಸ್ಲಾಗೆ ಪ್ರಮುಖ ಪೂರೈಕೆದಾರರು ಕೂಡ ಇದೇ ಕಂಪನಿಗಳಾಗಿವೆ, ಸರ್ಕಾರಿ ಸ್ವಾಮ್ಯದ ಚಂಗನ್ ಆಟೋಮೊಬೈಲ್‌ನೊಂದಿಗೆ ಶೆನ್ಲಾನ್ SL03 ಅಭಿವೃದ್ಧಿಯಲ್ಲಿ ಈ ಕಂಪನಿಗಳು ಭಾಗಿಯಾಗಿವೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ 15,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಇದು ವರ್ಷದ ಅಂತ್ಯದ ವೇಳೆಗೆ ಗ್ರಾಹಕರಿಗೆ ತನ್ನ ಮೊದಲ ಯೂನಿಟ್‌ಗಳನ್ನು ತಲುಪಿಸಲು ಮತ್ತು ತಿಂಗಳಿಗೆ 15,000 ಯೂನಿಟ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸಿದೆ.

ನಕಲು ಮಾಡೋದ್ರಲ್ಲಿ ನಾವೇ ನಂ.1: ಟೆಸ್ಲಾ ಡಿಸೈನ್ ಕಾಪಿ ಮಾಡಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ ಚೀನಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾಮಾನ್ಯವಾಗಿ ಚೀನಾ ಕಂಪನಿಗಳು ನಕಲು ಮಾಡುವುದರಲ್ಲಿ ಮುಂದಿರುತ್ತವೆ. ಆದರೆ ಇವುಗಳಲ್ಲಿ ಪ್ರಮುಖವಾಗಿ ಕಾಣುವ ಸಮಸ್ಯೆ ಎಂದರೆ ಅವುಗಳ ಗುಣಮಟ್ಟ. ಇದನ್ನು ಮನಗಂಡಿರುವ ಭಾರತೀಯರು ಚೀನಾ ಉತ್ಪನ್ನಗಳನ್ನು ಬಹುತೇಕ ಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ಆದರೆ ಇದೀಗ ಬಿಡುಗಡೆಯಾಗಿ ಟೆಸ್ಲಾ ನಕಲು ಮಾದರಿ ಎನ್ನಲಾಗುತ್ತಿರುವ Shenlan SL03 ಟೆಸ್ಲಾ ಮಾರಾಟವನ್ನು ಕುಗ್ಗಿಸಲಿದೆಯೇ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

Most Read Articles

Kannada
English summary
We are No 1 among copycats Chinese company ready to compete by copying design features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X