India
YouTube

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಸಾಮಾನ್ಯವಾಗಿ ಭಾರತದಲ್ಲಿ ಮಾರಾಟವಾಗುವ ವಿದೇಶಿ ಕಾರುಗಳು ಹೆಚ್ಚು ಬೆಲೆ ಹೊಂದಿರುತ್ತವೆ. ಇದನ್ನು ಕಂಡು ಅದೆಷ್ಟೋ ಜನ ವಿದೇಶಿ ಕಾರುಗಳಲ್ಲವೇ ಈ ಗರಿಷ್ಟ ಬೆಲೆಯಿರುವುದು ಸಮಾನ್ಯ ಎಂದುಕೊಳ್ಳುತ್ತಾರೆ. ಆದರೆ ಸತ್ಯವೇನೆಂದರೆ ಇಲ್ಲಿ ಮಾರಾಟವಾಗುವ 50 ಲಕ್ಷ ರೂ. ಬೆಲೆಯ ಕಾರು ಅಮೆರಿಕಾದಲ್ಲಿ ಕೇವಲ 20 ಲಕ್ಷ ರೂ.ಗೆ ಮಾರಾಟವಾಗುತ್ತದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕಾರುಗಳ ಬಳಕೆಯು ಯೆಥೇಚವಾಗಿ ಬೆಳೆದಿದೆ. ಇಲ್ಲಿನ ವಾತಾವರಣ ಹಾಗೂ ಜನರ ಆರ್ಥಿಕ ಅಗತ್ಯಗಳಿಗೆ ಸರಿಹೊಂದುವ ಕಾರುಗಳನ್ನು ಕೈಗೆಟುಕುವ ಬೆಲೆಗೆ ಸ್ಥಳೀಯ ಕಾರು ಕಂಪನಿಗಳು ನಿರ್ಮಿಸುತ್ತಿವೆ. ಜೊತೆಗೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಸಹ ಮಾರಾಟಕ್ಕೆ ಲಭ್ಯವಿದ್ದು, ಇವು ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಇದರಲ್ಲಿ ರೂ. 20 ಲಕ್ಷಕ್ಕೆ ಮಾರಾಟವಾಗುವ ಕಾರುಗಳು ಸಹ ಭಾರತದಲ್ಲಿ ತಿಂಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತವೆ. ಇನ್ನು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕೈಗೆಟುಕುವ ಬೆಲೆಯ ಸೆಡಾನ್ ಮಾರುತಿ ಡಿಜೈರ್ ಕಾರು ಪ್ರತಿ ತಿಂಗಳು ಸುಮಾರು 10 ಸಾವಿರ ಕಾರುಗಳು ಮಾರಾಟವಾಗುತ್ತವೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಹಾಗೆಯೇ ಅಮೆರಿಕಾದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್ ಎಂದರೆ ಟೊಯೊಟಾ ಕ್ಯಾಮ್ರಿ. ಈ ಕಾರು ಭಾರತದಲ್ಲಿಯೂ ಮಾರಾಟದಲ್ಲಿದೆ. ಆದರೆ ತಿಂಗಳಿಗೆ 100 ಕಾರುಗಳು ಮಾರಾಟವಾಗುವುದು ಕೂಡ ಕಷ್ಟ. ವಿದೇಶಿಗರಿಗೆ ಕಡಿಮೆ ಬೆಲೆಗೆ ಸಿಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಅದೇ ಕಾರು ಭಾರತದಲ್ಲಿ ಮಾತ್ರ ತೀರಾ ಕಡಿಮೆ ಮಾರಾಟವನ್ನು ದಾಖಲಿಸುತ್ತಿದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಅಮೆರಿಕದ ಜನರು ಬಹುವಾಗಿ ಬಯಸುವ ಕಾರನ್ನು ಭಾರತೀಯ ಜನರು ಏಕೆ ಇಷ್ಟಪಡುತ್ತಿಲ್ಲ. ಅಮೆರಿಕ ಜನರ ಅಭಿರುಚಿ ಮತ್ತು ಭಾರತೀಯರ ಅಭಿರುಚಿಯಲ್ಲಿ ಇಷ್ಟೊಂದು ಭಿನ್ನತೆಯಿದೆಯೇ ಎಂದು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಆದರೆ ಇಲ್ಲಿ ಅಭಿರುಚಿಗಳ ಪ್ರಶ್ನೆಯೇ ಬರುವುದಿಲ್ಲ. ಕಾರಿನ ವೈಶಿಷ್ಟ್ಯಗಳು, ಡಿಸೈನ್ ಹಾಗೂ ಪರ್ಫಾಮೆನ್ಸ್‌ ಉತ್ತಮವಾಗಿದ್ದರೇ ಜನರು ಮುಗಿಬಿದ್ದು ಖರೀದಿಸುತ್ತಾರೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಆದರೂ ಈ ಮಾರಾಟದ ವ್ಯತ್ಯಾಸವೇಕೆಂದರೆ ಕಾರಿನ ಬೆಲೆಯದ್ದಾಗಿದೆ. ಟೊಯೋಟಾ ಕ್ಯಾಮ್ರಿ ಕಾರನ್ನು ಅಮೆರಿಕಾದಲ್ಲಿ ಹೈಬ್ರಿಡ್ ಕಾರ್ ಆಗಿ ಮಾರಾಟ ಮಾಡಲಾಗುತ್ತಿದೆ. ಈ ಕಾರು US ಡಾಲರ್‌ನಲ್ಲಿ $ 27,000 ಗೆ ಮಾರಾಟವಾಗುತ್ತದೆ. ಅಂದರೆ ಭಾರತೀಯ ಮೌಲ್ಯದಲ್ಲಿ 22 ಲಕ್ಷ ರೂ.ಆಗಿದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಈ ಬೆಲೆಯು ಅಮೆರಿಕಾದಲ್ಲಿ ಮಧ್ಯ ತರಗತಿಯ ಕುಟುಂಬದ ಆರ್ಥಿಕತೆಗೆ ತಕ್ಕಂತೆ ಕಾರಿನ ಮೇಲೆ ಖರ್ಚು ಮಾಡುವ ಸರಾಸರಿ ಬೆಲೆಯಾಗಿದೆ. ವಾಸ್ತವವಾಗಿ, ಈ ಕಾರು ಹೆಚ್ಚು ಮೌಲ್ಯಯುತವಾಗಿಲ್ಲ ಎಂದು ಅಮೇರಿಕನ್ನರು ಹೇಳುತ್ತಾರೆ. ಆದರೆ ಅದೇ ಕಾರು ಭಾರತಕ್ಕೆ ಬಂದಾಗ ಅದರ ಬೆಲೆ 50.53 ಲಕ್ಷಕ್ಕೆ ಬದಲಾಗುತ್ತದೆ. ಅಂದರೆ ಅಲ್ಲಿಗಿಂತ ಶೇ2.5 ಪಟ್ಟು ಹೆಚ್ಚಾಗಿದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಟೊಯೊಟಾ ಭಾರತದಲ್ಲಿ ಕಾರುಗಳನ್ನು ತಯಾರಿಸುತ್ತಿದ್ದರೂ, ಕ್ಯಾಮ್ರಿ ಭಾರತದಲ್ಲಿ ಉತ್ಪಾದನೆಯಾಗುವುದಿಲ್ಲ. ಎಲ್ಲಾ ಭಾಗಗಳನ್ನು ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಂಡು ಕಾರನ್ನು ಸ್ಥಳೀಯವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ವಾಹನ ತಯಾರಕರು 3 ವಿಧಗಳಲ್ಲಿ ಕಾರುಗಳನ್ನು ತಯಾರಿಸುತ್ತಿದ್ದಾರೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಅವುಗಳೆಂದರೆ ಭಾರತದಲ್ಲಿ ತಯಾರಿಸಿದ ಕಾರು, ಆಮದಾದ ಭಾಗಗಳಿಂದ ನಿರ್ಮಿಸಿದ ಕಾರು ಹಾಗೂ ಸಂಪೂರ್ಣವಾಗಿ ನಿರ್ಮಿಸಿದ ಕಾರಿನ ಆಮದು ಆಗಿದೆ. ಅಂತೆಯೆ ಟೊಯೊಟಾ ಭಾರತದಲ್ಲಿ ಕ್ಯಾಮ್ರಿ ಕಾರ್ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ತಯಾರಿಸಿ ಮಾರಾಟ ಮಾಡುತ್ತದೆ. ಹಾಗಾದರೆ ಕ್ಯಾಮ್ರಿ ಕಾರಿನ ಬೆಲೆ ಹೇಗೆ ಏರಿಕೆಯಾಗುತ್ತದೆ ಎಂಬುದರ ಪ್ರಮುಖ ಕಾರಣಗಳನ್ನು ತಿಳಿದುಕೊಳ್ಳೋಣ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಟೊಯೊಟಾ ಕಂಪನಿಯು ಕ್ಯಾಮ್ರಿ ಕಾರಿನ ಬಿಡಿಭಾಗಗಳನ್ನು ವಿದೇಶದಿಂದ 20 ಲಕ್ಷಕ್ಕೆ ಆಮದು ಮಾಡಿಕೊಳ್ಳುತ್ತದೆ ಎಂದು ಭಾವಿಸೋಣ. ಕೇಂದ್ರ ಸರ್ಕಾರವು ಅದರ ಮೇಲೆ ಶೇ15 ರಷ್ಟು ಆಮದು ತೆರಿಗೆಯನ್ನು ವಿಧಿಸುತ್ತದೆ. ಆಗ ಅದರ ಬೆಲೆ 23 ಲಕ್ಷ ರೂ. ಆಗುತ್ತದೆ. ನಂತರ ಆ ಭಾಗಗಳಿಗೆ ಶೇ18 ರಷ್ಟು ಐಜಿಎಸ್‌ಟಿ ವಿಧಿಸಲಾಗುತ್ತದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಮೇಲೆ ತಿಳಿಸಿರುವ ತೆರೆಗೆ ಮಾಹಿತಿಯು ಕಾರು ಇನ್ನೂ ಉತ್ಪಾದನೆಯಾಗದಿದ್ದಾಗ ಹಾಕಿದ ತೆರಿಗೆಯಷ್ಟೇ ಎಂಬುದನ್ನು ಇಲ್ಲಿ ನೆನಪಿನಲ್ಲಿಡಬೇಕು. ಮುಂದೆ ಅದೇ ಕಾರನ್ನು ಸ್ಥಾವರದಲ್ಲಿ ಸಂಪೂರ್ಣವಾಗಿ ವಿದೇಶದಿಂದ ಬಂದಂತಹ ಬಿಡಿ ಭಾಗಗಳೊಂದಿಗೆ ತಯಾರಿಸಲಾಗುತ್ತದೆ. ಹೀಗೆ ಕಾರು ತಯಾರಾಗಿ ಸ್ಥಾವರದಿಂದ ಹೊರಬರುವಾಗ ಸರ್ಕಾರ ಮತ್ತೇ 2 ವಿಧದ ತೆರಿಗೆಗಳನ್ನು ವಿಧಿಸುತ್ತದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಶೇ5 ಜಿಎಸ್‌ಟಿಗೆ ಒಳಪಟ್ಟಿವೆ. 1,200 ಸಿಸಿಗಿಂತ ಕಡಿಮೆ ಮತ್ತು 4 ಮೀಟರ್‌ಗಿಂತ ಕಡಿಮೆ ಉದ್ದದ ಪೆಟ್ರೋಲ್ ಎಂಜಿನ್ ವಾಹನಗಳಿಗೆ ಶೇ.18 ತೆರಿಗೆ ಮತ್ತು ಶೇ.1 ರಷ್ಟು ಸೆಸ್ ವಿಧಿಸಲಾಗುತ್ತದೆ. 1,500 ಸಿಸಿಗಿಂತ ಕಡಿಮೆ ಮತ್ತು 4 ಮೀಟರ್‌ಗಿಂತ ಕಡಿಮೆ ಉದ್ದದ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳಾದರೆ ಶೇ.18ರಷ್ಟು ತೆರಿಗೆ ಮತ್ತು ಶೇ.3 ಸೆಸ್ ವಿಧಿಸಲಾಗುತ್ತದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

1,500 ಸಿಸಿಗಿಂತ ಹೆಚ್ಚಿನ ಕಾರುಗಳಿಗೆ ಶೇ 28 ತೆರಿಗೆ ಮತ್ತು ಶೇ 17 ಸೆಸ್ ವಿಧಿಸಲಾಗುತ್ತದೆ. ಎಸ್‌ಯುವಿಗಳಿಗೆ 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಕಾರುಗಳಾದರೆ ಶೇಕಡಾ 28 ಮತ್ತು 22 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅದರಂತೆ ಕ್ಯಾಮ್ರಿ ಕಾರು 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, ಶೇ.28 ತೆರಿಗೆ ಮತ್ತು ಶೇ.17 ಸೆಸ್ ತೆರಿಗೆಗೆ ಒಳಪಟ್ಟಿದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಒಟ್ಟಾರೆಯಾಗಿ ಕ್ಯಾಮ್ರಿ ಕಾರು ಸಂಪೂರ್ಣವಾಗಿ ನಿರ್ಮಾಣಗೊಂಡು ಹೊರಬಂದಾಗ ಇದರ ಬೆಲೆ 38.8 ಲಕ್ಷ ರೂ. ಆಗಿರುತ್ತದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ, ಕಾರಿನ ರಸ್ತೆ ತೆರಿಗೆಯೊಂದು ಉಳಿದಿದೆ. ರಸ್ತೆ ತೆರಿಗೆಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅದರ ಪ್ರಕಾರ ಕರ್ನಾಟಕದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ ಶೇ.17ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿ: ಅಲ್ಲಿ 20 ಲಕ್ಷವಿದ್ದರೆ ಇಲ್ಲಿ 50 ಲಕ್ಷ ರೂ.!

ಈ ಹಣ ಹೋಗುವುದಕ್ಕೆ TCS 1 ಪರ್ಸೆಂಟ್, ಈ ಕಾರಿಗೆ ವಿಮೆ 2 ಲಕ್ಷ, ಎಲ್ಲಾ ಸೇರಿ ಕಾರಿನ ಬೆಲೆ 45.3 ಲಕ್ಷ ರೂ. ಆಗುತ್ತದೆ. ಹಾಗಾಗಿ ಭಾರತದಲ್ಲಿ ಬಿಡಿಭಾಗಗಳಾಗಿ ಬರುವ ಕಾರು ಕೇವಲ 20 ಲಕ್ಷ ರೂ.ಗೆ ಭಾರತಕ್ಕೆ ಬಂದು, ಗ್ರಾಹಕರ ಕೈ ಸೇರುವ ವೇಳೆಗೆ 45.3 ಲಕ್ಷ ರೂ. ಆಗುತ್ತದೆ. ಇದು ಟೊಯೊಟಾ ಕ್ಯಾಮ್ರಿ ಕಾರಿಗೆ ಮಾತ್ರವಲ್ಲದೆ ಬಿಡಿ ಭಾಗಗಳಲ್ಲಿ ಭಾರತಕ್ಕೆ ಬರುವ ಎಲ್ಲಾ ಕಾರುಗಳಿಗೂ ವರ್ತಿಸುತ್ತದೆ. ಇದೇ ಕಾರಣಕ್ಕೆ ವಿದೇಶಿ ಕಾರುಗಳು ಭಾರತದಲ್ಲಿ ಹೆಚ್ಚು ದುಬಾರಿಯಾಗುತ್ತವೆ.

Most Read Articles

Kannada
English summary
Why Foreign cars are more expensive in India
Story first published: Thursday, June 23, 2022, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X