ಟಾಟಾ ಮೋಟಾರ್ಸ್‌ನಲ್ಲಿ ಪುರುಷರಷ್ಟೇ ಸಮರ್ಥರು ಮಹಿಳೆಯರು: ಎರಡು ದೊಡ್ಡ ಕಾರುಗಳ ನಿರ್ಮಾಣ

ನಾಯಕತ್ವದ ಸ್ಥಾನದಿಂದ ಹಿಡಿದು ಅಂಗಡಿಯ ಬಿಡಿಭಾಗಗಳವರೆಗೂ ಭಾರತೀಯ ವಾಹನ ಉದ್ಯಮದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ. ಇದೀಗ ಟಾಟಾ ಮೋಟಾರ್ಸ್ ಸಹಕಾರದೊಂದಿಗೆ ಮತ್ತೊಂದು ಸಾಧನೆ ಮಾಡುವ ಮೂಲಕ ಮಹಿಳೆಯರು ಸುದ್ದಿಯಾಗಿದ್ದಾರೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಹೌದು ಟಾಟಾ ಮೋಟಾರ್ಸ್ ತನ್ನ ಪ್ರಮುಖ SUV ಗಳಾದ ಹ್ಯಾರಿಯರ್ ಮತ್ತು ಸಫಾರಿಯನ್ನು ಮಹಿಳಾ ತಂಡದಿಂದ ತಯಾರಿಸಲಾಗುತ್ತಿದೆ ಎಂದು ವರದಿ ಮಾಡಿದೆ. 1,500 ಮಹಿಳಾ ವೃತ್ತಿಪರರ ಸಮರ್ಪಿತ ತಂಡವು ಈ ಎರಡೂ SUV ಗಳನ್ನು ಜೋಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಮುಗಿಸಿದೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಟಾಟಾ ಮೋಟಾರ್ಸ್ ಪ್ರತಿ ತಿಂಗಳು ಈ ಎರಡೂ ಮಾದರಿಗಳ ಸುಮಾರು 2000 ಯುನಿಟ್‌ಗಳನ್ನು ಮಾರಾಟ ಮಾಡುತ್ತದೆ. ಹಾಗೆಯೇ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಫೋರ್ಡ್‌ನ ಉತ್ಪಾದನಾ ಘಟಕವು ಮುಂದಿನ ವರ್ಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಮಹಿಳಾ ಉದ್ಯೋಗಿಗಳನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

MG ಮೋಟಾರ್ ಇಂಡಿಯಾ ಇತ್ತೀಚೆಗೆ ತನ್ನ ಬರೋಡ ಸ್ಥಾವರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ತನ್ನ 50,000ದ ಯೂನಿಟ್‌ ಆದ ಹೆಕ್ಟರ್ ಅನ್ನು ಹೊರತಂದಿತ್ತು. ಈ ಮಹಿಳೆಯರ ತಂಡ ಕೊನೆಯ ಯೂನಿಟ್‌ ಅನ್ನು ಆರಂಭದಿಂದ ಅಂತ್ಯದ ವೆರೆಗೆ ಉತ್ಪಾದನೆಯನ್ನು ಮುನ್ನಡೆಸಿದ್ದಾರೆ. ಈ ತಂಡವು ಪ್ಯಾನಲ್ ಪ್ರೆಸ್, ಪೇಂಟಿಂಗ್ ಕೆಲಸ, ವೆಲ್ಡಿಂಗ್ ಹಾಗೂ ಪೋಸ್ಟ್-ಪ್ರೊಡಕ್ಷನ್ ಪರೀಕ್ಷಾ ಓಟಗಳಂತಹ ಕಾರ್ಯಗಳನ್ನೂ ಸಹ ಮಾಡಿದ್ದಾರೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಮಹಿಳಾ ಸಬಲೀಕರಣವೆಂದರೆ ಕೇವಲ ಬೋರ್ಡ್ ರೂಮ್‌ಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮಾತ್ರವಲ್ಲ. ಇದು ಸಮಾಜದ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸಹಾಯ ಮಾಡುತ್ತದೆ. ಇದನ್ನೂ ಮೀರಿದ ಕಲ್ಪನೆಯು ಹೆಚ್ಚು ಸಮಗ್ರವಾದ ಕೆಲಸದ ಸಂಸ್ಕೃತಿಯನ್ನು ಸೃಷ್ಟಿಸುತ್ತದೆ. ಜೊತೆಗೆ ಕೈಗಾರಿಕೆಗಳು ಮತ್ತು ಶ್ರೇಣಿಗಳಾದ್ಯಂತ ಅವರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಈ ನಿಟ್ಟಿನಲ್ಲಿ ಹೀರೋ ಮೋಟೋಕಾರ್ಪ್, ಎಂಜಿ ಮೋಟಾರ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್‌ನಂತಹ ಕಂಪನಿಗಳು ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವ ದಿಕ್ಕಿನಲ್ಲಿ ಭಾರತೀಯ ಆಟೋ ಉದ್ಯಮವು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಕೂಡ ಆಟೋ ಉದ್ಯಮದ ಎಲ್ಲಾ ವಿಭಾಗಗಳಲ್ಲೂ ಹೆಸರು ಮಾಡಲಿದ್ದಾರೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಟಾಟಾ ಹ್ಯಾರಿಯರ್ ಮತ್ತು ಸಫಾರಿ

ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬಗ್ಗೆ ಮಾತನಾಡುವುದಾದರೆ ಮಧ್ಯಮ ಕ್ರಮಾಂಕದಲ್ಲಿರುವ ಹ್ಯಾರಿಯರ್ ಮತ್ತು ಸಫಾರಿ ಕಾರು ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಳಾದ ಎಂಜಿ ನಿರ್ಮಾಣದ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿವೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್ ಮಾರಾಟವು ಆಯಾ ಕಂಪನಿಗಳ ಮಾರಾಟದಲ್ಲಿ ಅಗ್ರಸ್ಥಾನದಲಿದ್ದು, ತನನಂತರ ಬಿಡುಗಡೆಯಾದ ಹೆಕ್ಟರ್ ಪ್ಲಸ್ ಮತ್ತು ಸಫಾರಿ ಎಸ್‌ಯುವಿ ವಿಸ್ತರಿತ ವ್ಹೀಲ್‌ಬೆಸ್‌ನೊಂದಿಗೆ ಬಿಡುಗಡೆಗೊಂಡವು.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಆರಂಭದಲ್ಲಿ ಬಿಎಸ್-4 ಮಾದರಿಯೊಂದಿಗೆ ಬಿಡುಗಡೆಯಾಗಿದ್ದ ಹ್ಯಾರಿಯರ್ ಕಾರು ಮಾದರಿಯು 2020 ಮಧ್ಯಂತರದಲ್ಲಿ ಬಿಎಸ್-6 ಆವೃತ್ತಿಯೊಂದಿಗೆ ಉನ್ನತೀಕರಣಗೊಂಡಿತ್ತು. ಬಿಎಸ್-4 ಮಾದರಿಯಲ್ಲಿ ಕನಿಷ್ಠ ಬೇಡಿಕೆ ಹೊಂದಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಮಾದರಿಯ ಬಿಡುಗಡೆಯ ನಂತರ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಕೋವಿಡ್ ನಂತರ ಸ್ವದೇಶಿ ಕಾರುಗಳ ಬಳಕೆಗಾಗಿ ಭಾರತೀಯ ಗ್ರಾಹಕರಲ್ಲಿ ಉಂಟಾದ ಸ್ಪದೇಶಿ ಅಭಿಯಾನವು ಟಾಟಾ ಕಾರುಗಳ ಬೇಡಿಕೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿತು. ಪರಿಣಾಮ ಟಾಟಾ ಕಾರುಗಳ ಮಾರಾಟವು ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಬೇಡಿಕೆ ದಾಖಲಿಸಿತು.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಹ್ಯಾರಿಯರ್ ಕಾರು ಮತ್ತು ಸಫಾರಿ ಕಾರು ಮಾದರಿಗಳು ಸದ್ಯ ಪ್ರತಿ ತಿಂಗಳು ಕನಿಷ್ಠ ಎರಡೂವರೆ ಸಾವಿರ ಮೂರು ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದ್ದು, ಟಾಟಾ ಕಾರು ನಿರ್ಮಾಣದ ಬಹುತೇಕ ಕಾರುಗಳು ಇದೀಗ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರಯಾಣಿಕರ ಕಾರು ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿಯು ಅಗ್ರಸ್ಥಾನದಲ್ಲಿ ಮುಂದುವರಿದ್ದು, ಎರಡನೇ ಸ್ಥಾನಕ್ಕಾಗಿ ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಹೆಚ್ಚಿನ ಪೈಪೋಟಿ ನಡೆಸುತ್ತಿವೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಮುಂಬರುವ ದಿನಗಳಲ್ಲಿ ಕಂಪನಿಯು ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಜೊತೆಗೆ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು 2022ರ ಆಗಸ್ಟ್‌ನಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ವಿವಿಧ ಮಾದರಿಯ ಇವಿ ಆವೃತ್ತಿಗಳೊಂದಿಗೆ ಅತ್ಯುತ್ತಮ ಬೇಡಿಕೆ ದಾಖಲಿಸಿದೆ.

ಟಾಟಾ ಮೋಟಾರ್ಸ್‌ನ ಮಹಿಳೆಯರು ಪುರುಷರಷ್ಟೇ ಸಮರ್ಥರು: ಎರಡು ದೊಡ್ಡ ಕಾರುಗಳ ನಿರ್ಮಾಣ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಳೆದ ಒಂದು ದಶಕದಿಂದಲೂ ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಮತ್ತು ಎರಡನೇ ಸ್ಥಾನದಲ್ಲಿ ಮುಂದುವರಿದ್ದ ಹ್ಯುಂಡೈ ಕಂಪನಿಯು ಕಾರು ಮಾರಾಟದಲ್ಲಿ ಶೇ. 70ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿರುವ ಎರಡು ಕಂಪನಿಗಳು ಅಧಿಪತ್ಯ ಮುಂದುವರಿಸಿದ್ದು, ಮುಂಬರುವ ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ಹ್ಯುಂಡೈ ಅನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.

Most Read Articles

Kannada
English summary
Women are just as capable as men at Tata Motors the successful production of two cars
Story first published: Thursday, September 22, 2022, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X