ಭಾರತದಲ್ಲಿ ಆಕರ್ಷಕ ವಿನ್ಯಾಸದ 2023ರ ಬಿಎಂಡಬ್ಲ್ಯು X1 ಎಸ್‍ಯುವಿ ಬಿಡುಗಡೆ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ X1 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 45.90 ಲಕ್ಷವಾಗಿದೆ. ಈ ಹೊಸ ಐಷಾರಾಮಿ ಎಸ್‍ಯುವಿಯು ಎರಡೂ ರೂಪಾಂತರಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೊಸ 2023ರ ಬಿಎಂಡಬ್ಲ್ಯು X1 ಎಸ್‍ಯುವಿಯು sDrive18i xLine (ಪೆಟ್ರೋಲ್) ಮತ್ತು sDrive18d M ಸ್ಪೋರ್ಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಬಿಎಂಡಬ್ಲ್ಯು X1 ಎಸ್‍ಯುವಿಯ sDrive18i xLine ರೂಪಾಂತರದ ಬೆಲೆಯು ರೂ.45.90 ಲಕ್ಷಗಳಾದರೆ, X1 sDrive18d M ಸ್ಪೋರ್ಟ್ ರೂಪಾಂತರದ ಬೆಲೆಯು ರೂ.47.90 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಎಸ್‍ಯುವಿಯ sDrive18i xLine ರೂಪಾಂತರದಲ್ಲಿ 134 ಬಿಹೆಚ್‍ಪಿ ಪವರ್ ಮತ್ತು 230 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ 1,499cc ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ 2023ರ ಬಿಎಂಡಬ್ಲ್ಯು X1 ಎಸ್‍ಯುವಿ ಬಿಡುಗಡೆ

ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.ಈ ಬಿಎಂಡಬ್ಲ್ಯು X1 ಎಸ್‍ಯುವಿಯಲ್ಲಿ 9.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ರೂಪಾಂತರವು 208 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಪೆಟ್ರೋಲ್ ಎಂಜಿನ್ 16.3 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ sDrive18d M ಸ್ಪೋರ್ಟ್ ರೂಪಾಂತರದಲ್ಲಿ, 2.0-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ.

ಈ ಎಂಜಿನ್ 147.5 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ sDrive18d M ಸ್ಪೋರ್ಟ್ ರೂಪಾಂತರವು 8.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ರೂಪಾಂತರವು 210 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಡೀಸೆಲ್ ಎಂಜಿನ್ 20.37k ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಕಳೆದ ವರ್ಷ ಜಾಗತಿಕವಾಗಿ ಪರಿಚಯಿಸಲಾದ ಮೂರನೇ ತಲೆಮಾರಿನ ಬಿಎಂಡಬ್ಲ್ಯು X1 ಎಸ್‍ಯುವಿಯು 4,500 mm ಉದ್ದ, 1,845 mm ಅಗಲ ಮತ್ತು 1,642 mm ಎತ್ತರವನ್ನು ಹೊಂದಿದ್ದರೆ, ಇದರ ವ್ಹೀಲ್ ಬೇಸ್ 2,692 mm ಆಗಿದೆ.ಇದು ಅದರ ಹಿಂದಿನ ಮಾದರಿಗಿಂತ 61 mm ಉದ್ದವಾಗಿದೆ, 24 mm ಅಗಲ ಮತ್ತು 30mm ಎತ್ತರವಾಗಿದೆ ಮತ್ತು 22 mm ಹೆಚ್ಚು ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.

ಭಾರತದ X1 ಪೆಟ್ರೋಲ್ ಆವೃತ್ತಿಯು 1,500 ಕೆಜಿ ತೂಕವನ್ನು ಹೊಂದಿದೆ, ಮೂರನೇ ತಲೆಮಾರಿನ ಬಿಎಂಡಬ್ಲ್ಯು X1 ಎಸ್‍ಯುವಿ ಕೆಲವು ಬದಲಾವಣೆಗಳಿಗೆ ಒಳಗಾಗಿದೆ, ಅದು ಅದರ ಪೂರ್ವವರ್ತಿಯಿಂದ ಅದನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಸ್ಲಿಮ್ಮರ್ ಅಡಾಪ್ಟಿವ್ LED ಹೆಡ್‌ಲೈಟ್‌ಗಳೊಂದಿಗೆ ಮುಂಭಾಗದಲ್ಲಿ ದೊಡ್ಡ ಕಿಡ್ನಿ ಗ್ರಿಲ್‌ಗಳು ಕೂಡ ಸೇರಿದೆ. ಈ ಎಸ್‍ಯುವಿಯ ಮುಂಭಾಗದ ಬಂಪರ್ ಕೂಡ ವಿಭಿನ್ನವಾಗಿದೆ ಮತ್ತು ಇದರ ಸ್ಲೀಕರ್ ಇನ್ಟೇಕ್ಗಳು ಮತ್ತು ದೊಡ್ಡ ಸೆಂಟರ್ ಏರ್ ವೆಂಟ್ ಒಳಗೊಂಡಿದೆ.

ಈ ಮೂರನೇ ತಲೆಮಾರಿನ ಬಿಎಂಡಬ್ಲ್ಯು X1 ಎಸ್‍ಯುವಿಯ ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಇಂಟಿಗ್ರೇಟೆಡ್ ಸ್ಪಾಯ್ಲರ್ ಎಲಿಮೆಂಟ್ ಮತ್ತು ಹೊಸ 3D LED ಟೈಲ್ ಲೈಟ್‌ಗಳಿವೆ. ಈ ಎಸ್‍ಯುವಿಯನ್ನು 476-ಲೀಟರ್ ಬೂಟ್ ಸ್ಪೇಸ್ ಅನ್ನು ನೀಡುತ್ತದೆ.ಟೈಲ್‌ಗೇಟ್‌ನ ಕೆಳಗಿನ ವಿಭಾಗಗಳಲ್ಲಿ X1 ಮತ್ತು ವೇರಿಯಂಟ್ ಬ್ಯಾಡ್ಜ್ ಕಂಡುಬಂದರೆ ರೇಕ್ ಮಾಡಿದ ಹಿಂಬದಿಯ ವಿಂಡ್‌ಸ್ಕ್ರೀನ್ ಅಡಿಯಲ್ಲಿ ಕಾಣಬಹುದು. ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಕ್ಯಾಬಿನ್ ಹಿಂದಿನ ತಲೆಮಾರಿನ ಮಾದರಿಗಿಂತ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಈ ಎಸ್‍ಯುವಿಯಲ್ಲಿ 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು 10.7-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನೊಂದಿಗೆ ಇತ್ತೀಚಿನ BMW iDrive ಸಿಸ್ಟಮ್‌ನೊಂದಿಗೆ OS8 ಅನ್ನು ಪ್ಲೇ ಮಾಡುತ್ತದೆ. ಭಾರತದಲ್ಲಿ ಈ ಎಸ್‍ಯುವಿಯ ಎರಡೂ ರೂಪಾಂತರಗಳಲ್ಲಿ ಸ್ಪೋರ್ಟ್ಸ್ ಸೀಟ್‌ಗಳನ್ನು ಗುಣಮಟ್ಟವಾಗಿ ಪಡೆಯುತ್ತವೆ, ಇದು ಮಸಾಜ್ ಫಂಕ್ಷನ್ ಅನ್ನು ಹೊಂದಿದೆ. ಇನ್ನು ಬಿಎಂಡಬ್ಲ್ಯು X1 ಎಸ್‍ಯುವಿಯ ಡೀಸೆಲ್ ರೂಪಾಂತರದಲ್ಲಿ ಹಿಂಬದಿಯ ಪ್ರಯಾಣಿಕರು ತಮ್ಮ ಸೀಟ್ ಅನ್ನು ಮುಂದಕ್ಕೆ ಮತ್ತು ಹಿಮ್ಮುಖವಾಗಿ 130 ಎಂಎಂ ಗರಿಷ್ಠ ಸೌಕರ್ಯಕ್ಕಾಗಿ ಹೊಂದಿಸಬಹುದು.

Most Read Articles

Kannada
English summary
2023 bmw x1 launched specs features variants price details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X