ಟಾಟಾ ನೆಕ್ಸಾನ್‌ಗೆ ಸೆಡ್ಡು ಹೊಡೆಯಲು ಹೊಸ ನವೀಕರಣಗಳೊಂದಿಗೆ ಹ್ಯುಂಡೈ ವೆನ್ಯೂ ಬಿಡುಗಡೆ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನವೀಕರಿಸಿದ ವೆನ್ಯೂ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ 2023ರ ಹ್ಯುಂಡೈ ವೆನ್ಯೂ (Hyundai Venue) ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.68 ಲಕ್ಷ ವಾಗಿದೆ.

2023ರ ಹ್ಯುಂಡೈ ವೆನ್ಯೂ ಕೆಲವು ಬದಲಾವಣೆಗಳೊಂದಿಗೆ ಹೆಚ್ಚು ಪವರ್ ಫುಲ್ ಆದ ಡೀಸೆಲ್ ಎಂಜಿನ್ ಸೇರಿದಂತೆ ಕೆಲವು ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಹೊಸ ಹ್ಯುಂಡೈ ಕಾಂಪ್ಯಾಕ್ಟ್ ವೆನ್ಯೂ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದು ಕ್ರೆಟಾದಂತೆಯೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವಂತೆ ನವೀಕರಿಸಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಬದಲಿಗೆ, ವೆನ್ಯೂ ಡೀಸೆಲ್ ಈಗ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

ಟಾಟಾ ನೆಕ್ಸಾನ್‌ಗೆ ಸೆಡ್ಡು ಹೊಡೆಯಲು ಹೊಸ ನವೀಕರಣಗಳೊಂದಿಗೆ ಹ್ಯುಂಡೈ ವೆನ್ಯೂ ಬಿಡುಗಡೆ

ಈ ಎಂಜಿನ್ 113.5 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಹಿಂದಿನ ಮಾದರಿಗಿಂತ 15 ಬಿಹೆಚ್‍ಪಿ ಮತ್ತು 10 ಎನ್ಎಂ ಟಾರ್ಕ್ ಹೆಚ್ಚು ಉತ್ಪಾದಿಸುತ್ತದೆ. ಇತರ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಸೇರಿವೆ. ಇದರಲ್ಲಿ 1.2-ಲೀಟರ್ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 1.2 ಲೀಟರ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ, ಆದರೆ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ iMT ಅಥವಾ 7-ಸ್ಪೀಡ್ DCT ಯೊಂದಿಗೆ ನೀಡಲಾಗುತ್ತದೆ. ಇನ್ನು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿರುವ ಹುಂಡೈ ಕ್ರೆಟಾ ಡೀಸೆಲ್‌ಗಿಂತ ಭಿನ್ನವಾಗಿದೆ.

ಹೇಗೆಂದರೆ ಹುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯ ಡೀಸೆಲ್ ರೂಪಾಂತರವು ಪ್ರತ್ಯೇಕವಾಗಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಂದಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಯಾವುದೇ ಬದಲಾವಣೆಗಳಿಲ್ಲದೆ ವೆನ್ಯೂ ಎಸ್‌ಯುವಿಯಲ್ಲಿ ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಗಳನ್ನು ನೀಡುವುದನ್ನು ಮುಂದುವರಿಸಲಾಗಿದೆ. ಇನ್ನು ನವೀಕರಿಸಿದ ಪಟ್ಟಿಗೆ ಸಂಬಂಧಿಸಿದಂತೆ, ಹ್ಯುಂಡೈ ಈಗ ಮಿಡ್-ಸ್ಪೆಕ್ S(O) ಟ್ರಿಮ್ ಮಟ್ಟದಿಂದ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಕೆಲವು ಫೀಚರ್ಸ್ ಗಳನ್ನು ಈಗ ಟಾಪ್ ಸ್ಪೀಡ್ SX(O) ರೂಪಾಂತರದಲ್ಲಿ ಪ್ರತ್ಯೇಕವಾಗಿವೆ.

SX(O) ರೂಪಾಂತರದಲ್ಲಿರುವ ಪ್ರತ್ಯೇಕವಾಗಿ ಹಿಂದಿನ ಸೀಟ್ ರಿಕ್ಲೈನೇಶನ್, ಮತ್ತು ಕಪ್ ಹೋಲ್ಡರ್‌ನೊಂದಿಗೆ ಆರ್ಮ್‌ರೆಸ್ಟ್‌ನಂತಹ ಕೆಲವು ಪ್ರಮುಖ ಫೀಚರ್ಸ್ ಗಳಾಗಿವೆ. ಹ್ಯುಂಡೈ ನವೀಕರಿಸಿದ ಹೊಸ ವೆನ್ಯೂ ಎಸ್‍ಯುವಿಯ ಬೆಲೆಯು ಹಿಂದಿನ ಮಾದರಿಗಿಂತ ರೂ.25,000 ವರೆಗೆ ಹೆಚ್ಚಿಸಿದೆ. ಈ ಎಸ್‍ಯುವಿಯಲ್ಲಿ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದ್ದು, ಎಲ್ಇಡಿ ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ಹಿಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ವಿಭಾಗವನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್‌ನೊಂದಿಗೆ ಜೋಡಿಸಲಾಗಿದೆ.

ಈ ವೆನ್ಯೂ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ಪ್ಲೇ ನೀಡಲಾಗಿದೆ. ಇನು ಎಸ್‍ಯುವಿಯ ಒಳಭಾಗದಲ್ಲಿ 4 ಹಂತದಲ್ಲಿ ಹೊಂದಾಣಿಕೆ ಮಾಡಹುದಾದ ಚಾಲಕನ ಸೀತ್ ಮತ್ತು ಹಿಂಬದಿಯ ಸೀಟುಗಳಿಗೆ ಎರಡು ಹಂತದ ರಿಕ್ಲೈನ್ ಆಯ್ಕೆ ನೀಡಲಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ ಪ್ಲೇಯನ್ನು ನೀಡಲಾಗಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಂ ಗೂಗಲ್ ಅಸಿಸ್ಟ್ ಮತ್ತು ಅಮೆಜಾನ್ ಅಲೆಕ್ಸಾಗೆ ಬೆಂಬಲ ಹೊಂದಿದ್ದು, ಹ್ಯುಂಡೈ ಕಂಪನಿಯು ಬ್ಲೂಲಿಂಕ್ ಕನೆಕ್ಟಿವಿಟಿ ಕಾರ್ ಸೂಟ್ ಮೂಲಕ 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ನೀಡಿದೆ. ಇನ್ನು ಡ್ರೈವರ್ ಸೈಡ್ ಡಿಜಿಟಲ್ ಡಿಸ್‌ಪ್ಲೇ, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಕೂಲ್ಡ್ ಗ್ಲೋ ಬಾಕ್ಸ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸನ್‌ರೂಫ್ ಸೌಲಭ್ಯಗಳಿರಲಿವೆ.

Most Read Articles

Kannada
English summary
2023 hyundai venue launched prices engine details in kannada
Story first published: Thursday, February 2, 2023, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X