ಮಾರುತಿ ಜಿಮ್ನಿಯಿಂದ-ಮಹೀಂದ್ರಾ ಥಾರ್‌ವರೆಗೆ 2023ರಲ್ಲಿ ಕೈಗೆಟಕುವ ಬೆಲೆಯ 4x4 ಎಸ್‌ಯುವಿಗಳು

ಈ ಹಿಂದೆ ದೇಶದಲ್ಲಿ ಆಫ್-ರೋಡಿಂಗ್ ವಾಹನಗಳಿಗೆ ಅಷ್ಟೇನು ಬೇಡಿಕೆಯಿರಲಿಲ್ಲ. ಹಾಗಾಗಿ 4×4 ಸಾಮರ್ಥ್ಯಗಳನ್ನು ನೀಡುವ ಕೆಲವೇ ಬ್ರಾಂಡ್‌ನ ಕಾರುಗಳು ಭಾರತದಲ್ಲಿ ಮಾರಾಟವಾಗುತ್ತಿದ್ದವು. ಇದೀಗ ಎಲ್ಲವೂ ಬದಲಾಗಿದೆ, ಹೆಚ್ಚುತ್ತಿರುವ ಖರೀದಿದಾರರ ಆಸಕ್ತಿಯಿಂದಾಗೆ ವಾಹನ ತಯಾರಕರು ತಮ್ಮ SUV ಗಳಿಗೆ 4×4 ಟೆಕ್ ಅನ್ನು ಹೆಚ್ಚು ಕೈಗೆಟುಕುವ ಬೆಲೆಗೆ ನೀಡಲು ಪ್ರಾರಂಭಿಸಿದ್ದಾರೆ.

ಮಹೀಂದ್ರ ಥಾರ್ 4×4:
ಪ್ರಸ್ತುತ-ಜನ್‌ನ ಮಹೀಂದ್ರಾ ಥಾರ್ 4×4 AX ಮತ್ತು LX ಎಂಬ ಎರಡು ರೂಪಾಂತರಗಳಲ್ಲಿ ಬರುತ್ತದೆ. ಎರಡನ್ನೂ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನಲ್ಲಿ ನೀಡಲಾಗುತ್ತದೆ. ಒಂದು mHawk 1.3 ಡೀಸೆಲ್ ಮಿಲ್ ಮತ್ತು ಎರಡನೆಯದು mStallion 1.5 TGDi ಪೆಟ್ರೋಲ್ ಪವರ್‌ಟ್ರೇನ್. mHawk 1.3 130hp ಮತ್ತು 300Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. mStallion 1.5 ಗರಿಷ್ಠ 150hp ಮತ್ತು 300Nm ಟಾರ್ಕ್ ಅನ್ನು ಹೊರಹಾಕುತ್ತದೆ. ಥಾರ್ 4×4 ಬೆಲೆಯು ರೂ. 14 ಲಕ್ಷದಿಂದ ಪ್ರಾರಂಭವಾಗಿ ರೂ. 16 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ.

ಮಾರುತಿ ಜಿಮ್ನಿಯಿಂದ-ಮಹೀಂದ್ರಾ ಥಾರ್‌ವರೆಗೆ 2023ರಲ್ಲಿ ಕೈಗೆಟಕುವ ಬೆಲೆಯ 4x4 ಎಸ್‌ಯುವಿಗಳು

ಮಾರುತಿ ಸುಜುಕಿ ಜಿಮ್ನಿ:
ಜಿಮ್ನಿ ಈ ಪಟ್ಟಿಯಲ್ಲಿರುವ ಹೊಸ 4×4 SUV ಆಗಿದೆ. ದೇಶದ ಅತಿದೊಡ್ಡ ಕಾರು ತಯಾರಕರಿಂದ ಹೊಚ್ಚಹೊಸ ಮಾದರಿಯನ್ನು ಆಫ್-ರೋಡಿಂಗ್ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಬೆಲೆಗೆ ಪರಿಚಯಿಸಲಿದೆ. ಅದರ ಅಧಿಕೃತ ಬಿಡುಗಡೆಗೆ ಮುಂಚೆಯೇ ಈ SUV ಈಗಾಗಲೇ 15,000 ಬುಕಿಂಗ್‌ಗಳನ್ನು ಗಳಿಸಿದೆ. ಸದ್ಯಕ್ಕೆ ಕಂಪನಿಯು ಈ ಎಸ್‌ಯುವಿಯ ಬೆಲೆಯನ್ನು ಘೋಷಿಸಿಲ್ಲವಾದರೂ ಇದು ರೂ. 12 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇಂಡೋ-ಜಪಾನೀಸ್ ಕಾರು ತಯಾರಕರಿಂದ ಪ್ರಸ್ತುತ ದೇಶಕ್ಕೆ ನಿರ್ದಿಷ್ಟ ಆಫ್-ರೋಡ್ ವ್ಯವಸ್ಥೆಯನ್ನು ಒದಗಿಸುವ ಏಕೈಕ ವಾಹನ ಜಿಮ್ನಿ ಆಗಿದೆ. ಈ SUV ಸುಜುಕಿ ಆಲ್‌ಗ್ರಿಪ್ ಪ್ರೊ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ, ಇದು 2H, 4H ಮತ್ತು 4L ಕಡಿಮೆ-ಶ್ರೇಣಿಯ ವರ್ಗಾವಣೆ ಗೇರ್ ಅನ್ನು ಒಳಗೊಂಡಿದೆ. ಈ ಮಾರುತಿ ಜಿಮ್ನಿಯು ಬಿಡುಗಡೆ ಬಳಿಕ ಥಾರ್‌ಗೆ ತೀರ್ವ ಪೈಪೋಟಿ ನೀಡುವ ನಿರೀಕ್ಷೆಯಿದೆ. ಆದರೆ ಥಾರ್ ಕೂಡ ಉತ್ತಮ ಮಾರಾಟ ಗಳಿಸುತ್ತಿದ್ದು, ಈ ಎರಡೂ ವಾಹನಗಳ ಪೈಪೋಟಿ ನೋಡಲು ಕೆಲ ದಿನಗಳು ಕಾಯಬೇಕು.

ಮಹೀಂದ್ರಾ ಸ್ಕಾರ್ಪಿಯೋ N Z4 4X4:
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ-ಎನ್ ಅನ್ನು 4×4 ಸಿಸ್ಟಮ್‌ನೊಂದಿಗೆ ನೀಡುತ್ತದೆ. ಇದರ ಉತ್ತಮ ಭಾಗವೆಂದರೆ ಇದು ಟಾಪ್ ಸ್ಪೆಕ್ Z8 ರೂಪಾಂತರಕ್ಕೆ ಮಾತ್ರ ಸೀಮಿತವಾಗಿಲ್ಲ. ಮಹೀಂದ್ರಾ 4×4 ಸಿಸ್ಟಂನೊಂದಿಗೆ Z4 ಅನ್ನು ಬೇಸ್ ಮಾಡೆಲ್‌ಗೂ ಒದಗಿಸುತ್ತದೆ. ಈ Scorpio-N Z4 ಬೆಲೆ ಸುಮಾರು 17.19 ಲಕ್ಷ ರೂ. (ಎಕ್ಸ್ ಶೋ ರೂಂ) ಇದೆ. ಮಹೀಂದ್ರಾ ಸ್ಕಾರ್ಪಿಯೋ-ಎನ್ Z4 ಎರಡು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.

ಒಂದು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್. Scorpio-N Z4 ನ ಡೀಸೆಲ್ ಎಂಜಿನ್ 175 bhp ಮತ್ತು 370 Nm ಟಾರ್ಕ್ ನೀಡುತ್ತದೆ, ಆದರೆ SUV ಯ ಪೆಟ್ರೋಲ್ ಪವರ್‌ಪ್ಲಾಂಟ್ ಗರಿಷ್ಠ 203 bhp ಉತ್ಪಾದಿಸುತ್ತದೆ. Z4 ಆವೃತ್ತಿಗೆ ಎರಡು 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಗಳಿವೆ, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್. ಸದ್ಯ ಈ ಕಾರು ಉತ್ತಮ ಮಾರಾಟವನ್ನು ಕಾಣುತ್ತಿದೆ.

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ AWD:

ಮಾರುತಿ ಸುಜುಕಿಯ ಪ್ರಮುಖ SUV ಗ್ರಾಂಡ್ ವಿಟಾರಾ ಹೊರನೋಟಕ್ಕೆ ಕಾಣಿಸದಿದ್ದರೂ ದೇಶದ ಹೆಚ್ಚು ಕೈಗೆಟುಕುವ AWD ವಾಹನಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ಸ್ವಾಮ್ಯದ AllGrip AWD ವೈಶಿಷ್ಟ್ಯದೊಂದಿಗೆ ಗ್ರಾಂಡ್ ವಿಟಾರಾವನ್ನು ನೀಡುತ್ತದೆ. ಜಪಾನಿನ ಕಾರು ತಯಾರಕರು AWD ಅನ್ನು ಒಂದೇ ಆಲ್ಫಾ ಮ್ಯಾನುವಲ್ ಟ್ರಿಮ್‌ನಲ್ಲಿ ಮಾತ್ರ ನೀಡುತ್ತಾರೆ, ಇದರ ಬೆಲೆ ರೂ. 16.89 ಲಕ್ಷ (ಎಕ್ಸ್ ಶೋ ರೂಂ).

ಮಾರುತಿ ಗ್ರ್ಯಾಂಡ್ ವಿಟಾರಾ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ AWD ವೈಶಿಷ್ಟ್ಯದೊಂದಿಗೆ ಲಭ್ಯವಿದೆ. ಈ ಇಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಜೊತೆಗೆ ಬರುತ್ತದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಐಚ್ಛಿಕ ಹೆಚ್ಚುವರಿಯಾಗಿದೆ. ಈ ಎಂಜಿನ್ ಆಫ್-ರೋಡ್ ಭೂಪ್ರದೇಶಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತದೆ. ಇವೆಲ್ಲವು ಸದ್ಯ ಭಾರತದಲ್ಲಿ ಕೈಗೆಟುಕುವ 4×4 ಎಸ್‌ಯುವಿಗಳಾಗಿವೆ.

Most Read Articles

Kannada
English summary
Affordable 4x4 SUVs in 2023 from maruti jimny to mahindra thar
Story first published: Monday, February 6, 2023, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X