ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?

ಇಸ್ರೇಲ್ ದೇಶದ ಇವಿ ಸ್ಟಾರ್ಟಪ್‌ವೊಂದು ಟಾಟಾದ ನ್ಯಾನೋಗಿಂತ ಚಿಕ್ಕದಾಗಿರುವ ಎಲೆಕ್ಟ್ರಿಕ್ ಕಾರೊಂದನ್ನು ರೆಡಿ ಮಾಡುತ್ತಿದೆ. ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಸುಲಭವಾಗಿ ಚಲಿಸುವಂತೆ ಈ ಕಾರನ್ನು ತಯಾರಕರು ವಿನ್ಯಾಸ ಮಾಡಿದ್ದು, ದೊಡ್ಡ ಕಾರು ಹೊಂದಿರುವ ರೀತಿಯಲ್ಲೇ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ವಿಶ್ವಾದ್ಯಂತ ಬಹುತೇಕ ದೊಡ್ಡ ನಗರಗಳು ಎದುರಿಸುತ್ತಿರುವ ಸಾಮಾನ್ಯ ಹಾಗೂ ಅತಿದೊಡ್ಡ ಸಮಸ್ಯೆ ಎಂದರೆ, ಟ್ರಾಫಿಕ್ ಜಾಮ್.. ಆಧುನಿಕ ತಂತ್ರಜ್ಞಾನಗಳು ಬೆಳೆದಂತೆ ನಗರಗಳು ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಅದಕ್ಕೆ ತಕ್ಕಂತೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ವಾಹನಗಳು ತೀರಾ ಅಗತ್ಯ. ಎಷ್ಟೇ ಸಾರ್ವಜನಿಕ ಸಾರಿಗೆಗಳು ಇದ್ದರೂ ಜನರು ಸಂಚರಿಸಲು ಖಾಸಗಿ ವಾಹನಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ವಿಪರೀತವಾಗಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಜನರು ಕಾರುಗಳ ಬದಲಿಗೆ ದ್ವಿಚಕ್ರ ವಾಹನಗಳಲ್ಲಿಯೇ ಪ್ರಯಾಣಿಸಲು ಬಯಸುತ್ತಾರೆ.

ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?

ಆದರೆ, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಗೋಳು ಕೇಳುವವರೇ ಇಲ್ಲ.. ಮಳೆ, ಬಿಸಿಲು, ಚಳಿ ಹಾಗೂ ಧೂಳು ಎನ್ನದೇ ಮನೆಯಿಂದ ಕಚೇರಿ, ಅಲ್ಲಿಂದ ಮನೆ ತಲುಪಲು ಪರದಾಡುವ ಪರಿಸ್ಥಿತಿ ಇದ್ದು, ಅಂತಹವರ ಸಮಸ್ಯೆ ಬಗೆಹರಿಸಲು ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ಪ್ರಯಾಣಿಸಬಹುದಾದ ಪುಟ್ಟದಾದ ಕಾರನ್ನು ಇಸ್ರೇಲ್ ಎಲೆಕ್ಟ್ರಿಕ್ ವಾಹನ ಕಂಪನಿ ಸಿಟಿ ಟ್ರಾನ್ಸ್‌ಫಾರ್ಮರ್ ಅಭಿವೃದ್ಧಿಪಡಿಸಿದೆ. ಇದಕ್ಕೆ ಅರ್ಬನ್ CT-2 ಎಂದು ಹೆಸರಿಡಲಿದ್ದು, 2024ರ ಅಂತ್ಯ ವೇಳೆಗೆ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದ್ದು, ವಾರ್ಷಿಕ 15,000 ಯುನಿಟ್ ತಯಾರಿಸಲು ತೀರ್ಮಾನಿಸಿದೆ.

ಇದಕ್ಕೆ $50 ಮಿಲಿಯನ್ ಬಂಡವಾಳ ಸಂಗ್ರಹಿಸಲು ಸಿಟಿ ಟ್ರಾನ್ಸ್‌ಫಾರ್ಮರ್ ಮುಂದಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಮಾತುಕತೆಯನ್ನು ನಡೆಸಲಾಗುತ್ತಿದೆ ಎಂದು ಕಂಪನಿಯು ಸೋಮವಾರ ಪ್ರಕಟಿಸಿದೆ. ಯುರೋಪ್ ಒಕ್ಕೂಟ ಮತ್ತು ಬ್ರಿಟನ್‌ ದೇಶದಲ್ಲಿ ಈ ಕಾರನ್ನು ಬಳಸಲು ಅಲ್ಲಿನ ಆಡಳಿತಗಳು ಈಗಾಗಲೇ ಅನುಮತಿಸಿವೆ. ಇದು ಒಂದೇ ಚಾರ್ಜಿನಲ್ಲಿ 180 ಕಿಲೋಮೀಟರ್ (112 ಮೈಲುಗಳು) ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದ್ದು, ಎಷ್ಟು ಚಿಕ್ಕದಾಗಿದೆ ಅಂದರೆ, 1 ಮೀಟರ್ (3.28 ಅಡಿ) ಅಗಲವಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಂದು ಕಾರಿನ ಪಾರ್ಕಿಂಗ್ ಸ್ಥಳದಲ್ಲಿ CT-2 ನಾಲ್ಕು ಕಾರನ್ನು ನಿಲ್ಲಿಸಬಹುದು.

ವೀಲ್ ಬೇಸ್ ಬಗ್ಗೆ ಮಾತನಾಡುವುದಾದರೆ, ಅದನ್ನು 1.4 ಮೀಟರ್‌ವರೆಗೆ ವಿಸ್ತರಿಸಬಹುದು. ಅಲ್ಲದೆ, ಗಂಟೆಗೆ 90 ಕಿಲೋಮೀಟರ್ (56 ಮೈಲುಗಳು) ಟಾಪ್ ಸ್ವೀಡ್ ಹೊಂದಿದೆ. ಇಬ್ಬರು ವ್ಯಕ್ತಿಗಳು ಪುಟ್ಟ CT-2 ಎಲೆಕ್ಟ್ರಿಕ್ ಕಾರಿನಲ್ಲಿ ಸುಲಭವಾಗಿ ಪ್ರಯಾಣಿಸಬಹುದು. ಜೊತೆಗೆ ಇತರೆ ವಾಣಿಜ್ಯ ಚಟುವಟಿಕೆ ಉದ್ದೇಶಗಳಿಗೂ ಬಳಸಬಹುದು. ಈ ಕಾರಿನ ತೂಕದ ಬಗ್ಗೆ ಹೇಳುವುದಾದರೆ, 450 ಕೆಜಿ (0.5 ಟನ್) ಇದ್ದು, ಟೆಸ್ಲಾ ಮಾಡೆಲ್ 3 ಕಾರಿಗಿಂತ ಚಿಕ್ಕದಾದ ಬ್ಯಾಟರಿಯನ್ನು ಪಡೆದಿದೆ ಎಂದು ಹೇಳಬಹುದು.

ಈ ಬಗ್ಗೆ ಮಾತನಾಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಸಫ್ ಫಾರ್ಮೋಜಾ, 'ಈ ಕಾರು, 16,000 ಯುರೋ (ಭಾರತದ ರೂಪಾಯಿಗಳಲ್ಲಿ ಸುಮಾರು ರೂ.14 ಲಕ್ಷ) ಬೆಲೆಯನ್ನು ಹೊಂದಿದ್ದು, ಈ ಚಿಕ್ಕ ಕಾರಿನ ಮೂಲಕ ನಮ್ಮ ಕಂಪನಿಯು ಉತ್ತಮ ಪ್ರಗತಿಯನ್ನು ಸಾಧಿಸುತ್ತದೆ ಎಂದು ನಂಬಿದ್ದೇವೆ. ದೊಡ್ಡ ಕಾರು ತಯಾರಕ ಕಂಪನಿಗಳು ಕೇವಲ ಎಸ್‌ಯುವಿ ತಯಾರಿಸಲು ಪ್ರಾಮುಖ್ಯತೆ ನೀಡಲಿದ್ದು, ಸಣ್ಣ ಕಾರುಗಳನ್ನು ತಯಾರಿಸುವುದನ್ನು ಮರೆತ್ತಿದ್ದು, ನಾವು ಚಿಕ್ಕ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದೇವೆ' ಎಂದು ಹೇಳಿದ್ದಾರೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಕಾರು ಎಂದು ಹೇಳಲಾಗುವ ಟಾಟಾ ಟಿಯಾಗೊ ಇವಿ, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 19.2kWh ಮತ್ತು 24kWh. ಕ್ರಮವಾಗಿ 250 km ಮತ್ತು 315 km ರೇಂಜ್ ನೀಡುವ ಸಾಮರ್ಥ್ಯ ಹೊಂದಿವೆ. ಟಿಯಾಗೊ ಇವಿ ಆರಂಭಿಕ ಬೆಲೆ ರೂ.8.49 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ 11.79 ಲಕ್ಷ ಇದೆ. 7-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಕ್ಲೈಮೇಟ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ಸ್, ಡ್ಯುಯಲ್ ಏರ್‌ಬ್ಯಾಗ್‌ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನೂ ಹೊಂದಿದೆ.

ಇನ್ನು, CT-2 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಕಂಪನಿಯು ಈ ಕಾರನ್ನು ಯುರೋಪ್ ಮಾರುಕಟ್ಟೆಯಲ್ಲಿ ಕೊಂಚ ಅಧಿಕ ಬೆಲೆಯಲ್ಲಿಯೇ ಮಾರಾಟ ಮಾಡಲು ಕಂಪನಿ ತೀರ್ಮಾನ ಮಾಡಿದೆ. ಸಂಚಾರ ದಟ್ಟಣೆ ಹೊಂದಿರುವ ರಸ್ತೆಗಳಲ್ಲಿ ಇದು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದ್ದು, ಗ್ರಾಹಕರು ಖರೀದಿ ಮಾಡಬಹುದು ಎಂಬ ನಂಬಿಕೆಯಲ್ಲಿ ಕಂಪನಿಯಿದೆ. ಒಟ್ಟಾರೆ, ರಸ್ತೆಗೆ ಇಳಿದ ಮೇಲೆಯೇ ಇದರ ಕಾರ್ಯಕ್ಷಮತೆ ಬಗ್ಗೆ ಗೊತ್ತಾಗಲಿದೆ.

Most Read Articles

Kannada
English summary
City transformer small car urban ct 2 in production 2024 details kannada
Story first published: Tuesday, January 31, 2023, 14:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X