13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ

ಆರ್ಥಿಕ ಹಿಂಜರಿತದ ಭೀತಿಯಲ್ಲಿ ದೈತ್ಯ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಹೊತ್ತಿನಲ್ಲಿ ಅಹಮದಾಬಾದ್ ಮೂಲದ ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದೆ. ಉತ್ತಮ ಪರ್ಫಾಮೆನ್ಸ್ ತೋರಿದ ಬರೋಬ್ಬರಿ 13 ಉದ್ಯೋಗಿಗಳಿಗೆ ಹೊಚ್ಚಹೊಸ ಟೊಯೋಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ಗಳನ್ನು ನೀಡಿದೆ.

ತನ್ನ ಕಾರ್ಯಾಚರಣೆಯ ಐದು ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಅಹಮದಾಬಾದ್‌ನ IT-ಆಧಾರಿತ ಕಂಪನಿಯಾದ ತ್ರಿಧ್ಯಾ ಟೆಕ್ ತನ್ನ ಹದಿಮೂರು ಉದ್ಯೋಗಿಗಳಿಗೆ ಉತ್ತಮ ಪ್ರದರ್ಶನಕ್ಕಾಗಿ ಬಹುಮಾನವಾಗಿ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಎಲ್ಲಾ ಹದಿಮೂರು ಉದ್ಯೋಗಿಗಳಿಗೆ ಹೊಚ್ಚಹೊಸ ಟೊಯೋಟಾ ಗ್ಲ್ಯಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಲಾಯಿತು, ಅದರ ಫೋಟೊಗಳನ್ನು ಕಂಪನಿಯು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಫೋಟೊಗಳು ಸದ್ಯ ಸಖತ್ ವೈರಲ್ ಆಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ

ತ್ರಿಧ್ಯಾ ಟೆಕ್‌ನ ಎಂಡಿ ರಮೇಶ್ ಮಾರನ್ ಅವರು ನೀಡಿದ ಹೇಳಿಕೆಯಂತೆ, ಕಂಪನಿಯು ಸಾಕಷ್ಟು ಯಶಸ್ಸನ್ನು ಸಾಧಿಸಿದೆ. ತನ್ನ ಎಲ್ಲಾ ಉದ್ಯೋಗಿಗಳಿಗೆ ಋಣಿಯಾಗಿದೆ ಎಂದು ಹೇಳಿದರು. ಕಂಪನಿಯು ತನ್ನ ಉದ್ಯೋಗಿಗಳ ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸಿನ ಹೊಸ ಎತ್ತರವನ್ನು ಮುಟ್ಟಿದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಕಂಪನಿಯು ಗಳಿಸಿದ ಲಾಭದಲ್ಲಿ ಉದ್ಯೋಗಿಗಳಿಗೆ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತನ್ನ ಆನಂದವನ್ನು ಹಂಚಿಕೊಳ್ಳಲು ನಿರ್ಧರಿಸಿದೆ.

ಮಾರಂಡ್ ಅವರ ಪ್ರಕಾರ, ಉದ್ಯೋಗಿಗಳಿಗೆ ಈ ಬಹುಮಾನವನ್ನು ನೀತ್ತಿರುವುದು ಕೊನೆಯ ಬಾರಿ ಅಲ್ಲ, ಭವಿಷ್ಯದಲ್ಲಿ ತನ್ನ ಉದ್ಯೋಗಿಗಳಿಗೆ ಬಹುಮಾನಗಳನ್ನು ನೀಡುವುದನ್ನು ಮುಂದುವರಿಸುತ್ತದೆ. ಅವರ ಪ್ರಕಾರ, ಇದು ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಿಬ್ಬಂದಿ ಸದಸ್ಯರಲ್ಲಿ ನಂಬಿಕೆ ಮತ್ತು ಪ್ರೇರಣೆಯನ್ನು ತುಂಬುತ್ತದೆ. ತಮ್ಮ ಕಂಪನಿಯ ಎಲ್ಲಾ ಉದ್ಯೋಗಿಗಳು ತಮ್ಮ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡಿದ ಈ ಗೆಸ್ಚರ್ ಅನ್ನು ಶ್ಲಾಘಿಸಿದ್ದಾರೆ ಎಂದು ಹೇಳಿದರು.

ಹೊಸ ಟ್ರೆಂಡ್ ಅಲ್ಲ
ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಚೆನ್ನೈ ಮೂಲದ ಐಟಿ ಕಂಪನಿಯಾದ ಐಡಿಯಾಸ್2ಐಟಿ ತನ್ನ 100 ಉದ್ಯೋಗಿಗಳಿಗೆ ಹೊಸ ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದು, ಕಂಪನಿಯನ್ನು ವಿಸ್ತರಿಸಲು ಮತ್ತು ಯಶಸ್ಸಿನ ಹೊಸ ಎತ್ತರವನ್ನು ಸಾಧಿಸಲು ಸಹಾಯ ಮಾಡಿದೆ. ಚೆನ್ನೈನ ಮತ್ತೊಂದು ಐಟಿ ಕಂಪನಿಯಾದ ಕಿಸ್‌ಫ್ಲೋ ಟೆಕ್, ತನ್ನ ಐವರು ಹಿರಿಯ ಅಧಿಕಾರಿಗಳಿಗೆ ಹೊಚ್ಚಹೊಸ BMW 5-ಸರಣಿ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು.

ಹೊಸ ಕಾರುಗಳೊಂದಿಗೆ ಉದ್ಯೋಗಿಗಳಿಗೆ ಬಹುಮಾನ ನೀಡುವುದು ಉದ್ಯೋಗಿಗಳಲ್ಲಿ ಬಲವಾದ ನಂಬಿಕೆಯನ್ನು ಸೃಷ್ಟಿಸುತ್ತದೆ. ಉದ್ಯೋಗ ಭದ್ರತೆಯ ಅರ್ಥವನ್ನು ಖಾತ್ರಿಗೊಳಿಸುತ್ತದೆ, ಇದು ಅಂತಿಮವಾಗಿ ಉತ್ತಮ ಕಾರ್ಯಕ್ಷಮತೆ ಮತ್ತು ಒಟ್ಟಾರೆಯಾಗಿ ಕಂಪನಿಯ ವರ್ಧಿತ ಬೆಳವಣಿಗೆಗೆ ಕಾರಣವಾಗುತ್ತದೆ. ಭಾರತದಲ್ಲಿನ ಈ ಸಣ್ಣ ಕಂಪನಿಗಳಲ್ಲಿ ಕಂಡುಬರುವ ಈ ಪ್ರವೃತ್ತಿ ಮತ್ತು ಗೆಸ್ಚರ್ ಇದೀಗ ಐಟಿ ದೈತ್ಯರು ಆಲೋಚಿಸುತ್ತಿರುವುದಕ್ಕೆ ವಿರುದ್ಧವಾಗಿದೆ, ಇವುಗಳಲ್ಲಿ ಹೆಚ್ಚಿನವು ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿ ಮನೆಗೆ ಕಳುಹಿಸಿವೆ.

ಸೂರತ್‌ನ ಹೆಸರಾಂತ ವಜ್ರದ ವ್ಯಾಪಾರಿ, ಸಾವ್ಜಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ ಕಾರುಗಳು ಮತ್ತು ಮನೆಗಳನ್ನು ಉಡುಗೊರೆಯಾಗಿ ನೀಡುವುದಕ್ಕಾಗಿ ಹಲವಾರು ಬಾರಿ ಸುದ್ದಿಯಾಗಿದ್ದರು. 2018 ರಲ್ಲಿ, ಧೋಲಾಕಿಯಾ ತನ್ನ ಉದ್ಯೋಗಿಗಳಿಗೆ ಮಾರುತಿ ಸುಜುಕಿ ಆಲ್ಟೊ ಮತ್ತು ಸೆಲೆರಿಯೊದ 600 ಯುನಿಟ್‌ಗಳನ್ನು ಉಡುಗೊರೆಯಾಗಿ ನೀಡಿದರು. ಕಾರುಗಳನ್ನು ಉಡುಗೊರೆಯಾಗಿ ಬಯಸದವರಿಗೆ, ಧೋಲಾಕಿಯಾ ಫ್ಲಾಟ್‌ಗಳು ಅಥವಾ ಸ್ಥಿರ ಠೇವಣಿಗಳನ್ನು ಬಹುಮಾನವಾಗಿ ನೀಡಿದ್ದರು. ಈ ಪ್ರವೃತ್ತಿ ಹೀಗೆ ಮುಂದುವರಿಯಲು ಹಲವರು ಉದ್ಯೋಗಿಗಳು ಬಯಸುತ್ತಿದ್ದಾರೆ.

Most Read Articles

Kannada
English summary
Company gifted new toyota glanza cars to 13 employees
Story first published: Friday, February 3, 2023, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X