ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...

ಬಾಹುಬಲಿ ಚಿತ್ರದ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ತೆಲುಗು ನಟ ಪ್ರಭಾಸ್ ಇಂದು 'ಪ್ಯಾನ್ ಇಂಡಿಯಾ ಸ್ಟಾರ್' ಆಗಿ ಬೆಳೆದಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿರುವ ಅವರು ಬಿಡುವಿಲ್ಲದೆ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಿರ್ದೇಶಕರೊಬ್ಬರು ಕಥೆ ಕುರಿತು ಚರ್ಚಿಸಲು ಪ್ರಭಾಸ್ ಮನೆಗೆ ಹೋಗಿ ಅವರ ಕಾರಿನಲ್ಲಿ ರೌಂಡ್ಸ್ ಹಾಕಿದ್ದಾರೆ.

ಕಾಮಿಡಿ ಹಾಗೂ ಹಾರರ್ ಸಿನಿಮಾಗಳ ಮೂಲಕ ಗುರ್ತಿಸಿಕೊಂಡಿರುವ ನಿರ್ದೇಶಕ ಮಾರುತಿ ಸದ್ಯ ಪ್ರಭಾಸ್ ಅವರೊಂದಿಗೆ ಮಾಡುತ್ತಿರುವ 'ರಾಜಾ ಡಿಲಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕುರಿತು ಚರ್ಚಿಸಲು ಪ್ರಭಾಸ್ ಮನೆಗೆ ಹೋಗಿ ಅವರ ದುಬಾರಿ ಲಂಬೋರ್ಗಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್ ಕಾರನ್ನು ಓಡಿಸಿ ಬಂದಿದ್ದಾರೆ. ಈ ಕುರಿತ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ಎರಡೂ ತೆಲುಗು ರಾಜ್ಯಗಳಲ್ಲಿ ಸಖತ್ ವೈರಲ್ ಆಗಿದೆ.

ವಾಸ್ತವವಾಗಿ, ಪ್ರಭಾಸ್ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಇದರ ಭಾಗವಾಗಿ ಅವರು ಈಗಾಗಲೇ ಲಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ. ಸದ್ಯ ಈ ಕಾರಿನಲ್ಲೇ ಸಿನಿಮಾ ಚಿತ್ರೀಕರಣಕ್ಕೆ ಓಡಾಡುತ್ತಿರುತ್ತಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ನಿರ್ದೇಶಕ ಮಾರುತಿ ಪ್ರಭಾಸ್ ಲಂಬೋರ್ಗಿನಿ ಕಾರನ್ನು ಓಡಿಸುವ ಇರಾದೆಯಾಗಿದ್ದು, ಕೊನೆಗೂ ಆಸೆ ಈಡೇರಿಸಿಕೊಂಡಿದ್ದಾರೆ. ಪ್ರಭಾಸ್ ಖರೀದಿಸಿದ ಈ ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್ ಬೆಲೆಯು ಸುಮಾರು ರೂ. 6 ಕೋಟಿ (ಎಕ್ಸ್‌ ಶೋರೂಂ).

ಭಾರತದಲ್ಲಿ ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್ ಅನ್ನು ಹೊಂದಿರುವ ಸೆಲೆಬ್ರಿಟಿಗಳಲ್ಲಿ ಪ್ರಭಾಸ್ ಕೂಡ ಒಬ್ಬರು. ಈ ಸೂಪರ್ ಕಾರು ಉತ್ತಮ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ವೇಗದ ಕಾರುಗಳಲ್ಲಿ ಒಂದಾಗಿದೆ. ಇದು ತೆರೆದ ರೂಫ್ ಹೊಂದಿದ್ದು, ನೋಡಲು ತುಂಬಾ ಆಕರ್ಷಕವಾಗಿದೆ. ಇದು ನ್ಯಾಚುರಲ್ಲಿ ಆಸ್ಪಿರೇಟೆಡ್ 6.5-ಲೀಟರ್ V12 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

ಬರೋಬ್ಬರಿ 740 hp ಪವರ್ ಮತ್ತು 690 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸಿಂಗಲ್ ಕ್ಲಚ್ 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವುದರಿಂದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್‌ನ ಗರಿಷ್ಠ ವೇಗವು ಗಂಟೆಗೆ 300 ಕಿ.ಮೀ. ಇದ್ದು ಕೇವಲ 9 ಸೆಕೆಂಡುಗಳಲ್ಲಿ ಗಂಟೆಗೆ 200 ಕಿ.ಮೀ ವೇಗವನ್ನು ತಲುಪಬಲ್ಲದು. ಸೂಪರ್‌ಕಾರ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ.

Aventador S ರೋಡ್‌ಸ್ಟರ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ಬನ್-ಸೆರಾಮಿಕ್ ಡಿಸ್ಕ್ ಬ್ರೇಕ್‌ಗಳು ಲಭ್ಯವಿದೆ. ಮುಂಭಾಗದಲ್ಲಿ 6 ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ 400 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 4 ಪಿಸ್ಟನ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 380 ಎಂಎಂ ಕಾರ್ಬನ್ ಸೆರಾಮಿಕ್ ಡಿಸ್ಕ್ ಬ್ರೇಕ್ ಇದೆ. ಈ ಸೂಪರ್‌ಕಾರ್ ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದೆಲ್ಲವೂ ವಾಹನ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಕಂಪನಿಯು ತನ್ನ ತೂಕವನ್ನು ಕಡಿಮೆ ಮಾಡಲು ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್‌ನಲ್ಲಿ ಕಾರ್ಬನ್ ಫೈಬರ್ ಮೊನೊಕೊಕ್ ಚಾಸಿಸ್ ಅನ್ನು ಬಳಸಿದೆ. ಆದ್ದರಿಂದ ಇದು ಕಡಿಮೆ ತೂಕದ ಕಾರಣದಿಂದಾಗಿ ಹೆಚ್ಚಿನ ವೇಗದಲ್ಲಿ ಚಲಿಸಬಲ್ಲದು. ಇಂಟೀರಿಯರ್ ಡಿಸೈನ್ ಮತ್ತು ಇಂಟೀರಿಯರ್ ಫೀಚರ್‌ಗಳೆಲ್ಲವೂ ತುಂಬಾ ಆಕರ್ಷಕವಾಗಿವೆ. ಇವೆಲ್ಲವೂ ವಾಹನ ಬಳಕೆದಾರರಿಗೆ ತುಂಬಾ ಸೂಕ್ತವಾಗಿದೆ. ಒಟ್ಟಾರೆಯಾಗಿ ನೀವು ಈ ಸೂಪರ್ ಕಾರಿನೊಂದಿಗೆ ಉತ್ತಮ ಚಾಲನಾ ಅನುಭವವನ್ನು ಪಡೆಯಬಹುದು.

ಬಾಹುಬಲಿ ಚಿತ್ರದ ದೊಡ್ಡ ಹಿಟ್ ನಂತರ ಪ್ರಭಾಸ್ ಈಗ ಅದಿ ಪುರುಷ್ ಮತ್ತು ರಾಜ ಡಿಲಕ್ಸ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ, ಸಲಾರ್ ಚಿತ್ರವು ಸೆಪ್ಟೆಂಬರ್ 28, 2023 ರಂದು ಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳುತ್ತಿವೆ. ನಮ್ಮ ಕರ್ನಾಟಕದಲ್ಲೂ ದುಬಾರಿ ಬೆಲೆಯ ಕಾರುಗಳನ್ನು ಹೊಂದಿರುವ ಹಲವರು ನಟರಿದ್ದಾರೆ. ಅವರಲ್ಲಿ ಮೊದಲಿಗರು ಡಿಬಾಸ್ ಎಂದೇ ಹೇಳಬಹುದು. ಇವರು ಕೂಡ ದುಬಾರಿ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

Most Read Articles

Kannada
English summary
Director maruthi drove actor prabhass expensive car
Story first published: Tuesday, January 31, 2023, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X