ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್

ಜನಪ್ರಿಯ ಕಾರು ತಯಾರಕ ಹ್ಯುಂಡೈ ಇಂಡಿಯಾ ತನ್ನ ಐ20 ಎನ್ ಲೈನ್ ಕಾರಿನ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಸ್ಪೋರ್ಟಿಯರ್ ಆವೃತ್ತಿಯಾದ ಐ20 ಎನ್ ಲೈನ್ ಬೆಲೆಯು ರೂ.16,500 ವರೆಗೂ ಹೆಚ್ಚಿಸಿದೆ. ಈ ಹ್ಯುಂಡೈ ಐ20 ಎನ್ ಲೈನ್ ಕಾರಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ಒಂದೇ ರೀತಿ ಹೆಚ್ಚಿಸಿದೆ.

ಬೆಲೆ ಏರಿಕೆ ಬಳಿಕ ಹ್ಯುಂಡೈ ಐ20 ಎನ್ ಲೈನ್ (Hyundai i20 N Line) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.16 ಲಕ್ಷವಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಕಳೆದ ವರ್ಷ ಹ್ಯುಂಡೈ ಕಂಪನಿಯು ಐ20 ಎನ್ ಲೈನ್ ಕಾರು ಭಾರತದಲ್ಲಿ ಹೊಸ ಬಣ್ಣಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು. ಈ ಕಾರು ಥಂಡರ್ ಬ್ಲೂ, ಟೈಟಾನ್ ಗ್ರೇ, ಪೋಲಾರ್ ವೈಟ್ ಮತ್ತು ಹೊಸ ಸ್ಟಾರ್ರಿ ನೈಟ್ ಆಯ್ಕೆ ಸೇರಿದಂತೆ ನಾಲ್ಕು ಹೊಸ ಸಿಂಗಲ್-ಟೋನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹ್ಯುಂಡೈ ಐ20 ಎನ್ ಲೈನ್

ಇನ್ನು ಹ್ಯುಂಡೈ ಐ20 ಎನ್ ಲೈನ್ ಕಾರು ಫಿಯರಿ ರೆಡ್ ಸಿಂಗಲ್-ಟೋನ್ ಸಿಂಗಲ್-ಟೋನ್ ಬಣ್ಣದ ಆಯ್ಕೆಯಾಗಿ ಲಭ್ಯವಿಲ್ಲ. ಕಂಪನಿಯು ಇದಕ್ಕಾಗಿ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಸಹ ಲಭ್ಯಗೊಳಿಸಿದೆ. ಹ್ಯುಂಡೈ ಐ20 ಎನ್ ಲೈನ್ ಕಾರು ಥಂಡರ್ ಬ್ಲೂ, ಪೋಲಾರ್ ವೈಟ್ ಮತ್ತು ಫೇರಿ ರೆಡ್ ಫ್ಯಾಂಟಮ್ ಬ್ಲ್ಯಾಕ್ ರೂಫ್‌ನೊಂದಿಗೆ ನೀಡಲಾಗುತ್ತದೆ. ಇದರೊಂದಿಗೆ ಸೈಡ್ ಸ್ಕರ್ಟ್‌ಗಳು ಮತ್ತು ರೂಫ್ ಸ್ಪಾಯ್ಲರ್‌ಗಳನ್ನು ಈ ಕಾರಿನಲ್ಲಿ ಕೆಂಪು ಅಸ್ಸೆಂಟ್ ಗಳನ್ನು ನೀಡಲಾಗಿದೆ.

ಈ ಹ್ಯುಂಡೈ ಐ20 ಎನ್ ಲೈನ್ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ 16-ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಸೈಡ್ ಗಾರ್ನಿಶ್ ಜೊತೆ ರೆಡ್ ಇನ್ಸರ್ಟ್, ಮುಂಭಾಗದ ಚಕ್ರಗಳಲ್ಲಿ ರೆಡ್ ಬ್ರೇಕ್ ಕ್ಯಾಲಿಪರ್‌ನೊಂದಿಗೆ ಕಾರಿನ ಹಿಂಬದಿಯಲ್ಲಿ ಸ್ಪೋರ್ಟಿ ಬಂಪರ್, ಡಿಫ್ಯೂಸರ್, ಟ್ವಿನ್ ಎಕ್ಸಾಸ್ಟ್, ಟೈಲ್ ಗೇಡ್ ಸ್ಪಾಯ್ಲರ್, ಟೈಲ್ ಲ್ಯಾಂಪ್ ನೊಂದಿಗೆ ಡಾರ್ಕ್ ಕ್ರೋಮ್ ಅನ್ನು ನೀಡಿದೆ,

ಹೊರಭಾಗದಲ್ಲಿ ಮಾತ್ರವಲ್ಲ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಸ್ಪೋರ್ಟಿ ಅಂಶಗಳನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೊಸ ಕಾರಿನ ಡ್ಯಾಶ್‌ಬೋರ್ಡ್ ಆಕರ್ಷಕವಾಗಿದೆ. ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ನೀಡಲಾಗಿದ್ದು, ರೆಡ್ ಆಕ್ಸೆಂಟ್ ಜೊತೆ ಆ್ಯಂಬಿಯೆಂಟ್ ಲೈಟಿಂಗ್ಸ್ ಅನ್ನು ಹೊಂದಿದೆ. ಕೆಲವು ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಜೋಡಣೆ ಮಾಡಲಾಗಿದೆ. ಈ ಕಾರಿನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನಕ್ಟಿವಿಯನ್ನು ಹೊಂದಿದೆ.

ಇದರೊಂದಿಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸಿಂಗಲ್ ಪ್ಯಾನ್ ಸನ್‌ರೂಫ್, ಬಾಷ್ ಕಂಪನಿಯ 7-ಸ್ಪೀಕರ್ಸ್ ಸೌಂಡ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳಿವೆ. ಈ ಐ20 ಎನ್ ಲೈನ್ ಕಾರಿನಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು ಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಇಂಟಲಿಜೆಂಟ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಈ ಹ್ಯುಂಡೈ ಐ20 ಎನ್ ಲೈನ್ ಪರ್ಫಾರ್ಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಗಳನ್ನು ಗಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಪರ್ಫಾಮೆನ್ಸ್ ಕಾರುಗಳ ಸಂಖ್ಯೆಯು ವಿರಳವಾಗಿದೆ. ಆದರೆ ಈ ಮೊದಲು ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿತ್ತು.

ಆದರೆ ಆ ಪರ್ಫಾಮೆನ್ಸ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ವಿಯನ್ನು ಗಳಿಸಿಲ್ಲ. ಜನಪ್ರಿಯ ಹ್ಯುಂಡೈ ಕಂಪನಿಯು ಈ 20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕ ಯಶಸ್ವಿಯನ್ನು ಗಳಿಸಿದೆ. ಒಟ್ಟಾರೆಯಾಗಿ ಈ ಹ್ಯುಂಡೈ ಐ20 ಎನ್ ಲೈನ್ ಮಾದರಿಯು ಕಾರು ಪ್ರಿಯರನ್ನು ಸೆಳೆಯುಂತಹ ಆಕರ್ಷಕ ಲುಕ್ ಒಳಗೊಂಡಿದೆ. ಈ ಕಾರು ಭಾರತದಲ್ಲಿ ಹೆಚ್ಚಾಗಿ ಯುವ ಗ್ರಾಹಕರನ್ನು ಮತ್ತು ಪರ್ಫಾಮೆನ್ಸ್ ಕಾರು ಪ್ರಿಯರನ್ನು ಸೆಳೆಯುತ್ತಿದೆ.

Most Read Articles

Kannada
English summary
Hyundai hiked the prices of i20 n line details in kannada
Story first published: Sunday, January 29, 2023, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X