ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ

ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿ ಹ್ಯುಂಡೈ, ತನ್ನ ಅಗ್ಗದ ಕಾರಾಗಿರುವ i20 ಬೆಲೆಯನ್ನು ರೂ.21,000 ವರೆಗೆ ಭಾರತದ ಮಾರುಕಟ್ಟೆಯಲ್ಲಿ ಏರಿಕೆ ಮಾಡಿದೆ. ಪ್ರತಿಯೊಂದು ರೂಪಾಂತರಗಳ ದರ ಹೆಚ್ಚಳವಾಗಿದ್ದು, ಇನ್ಮುಂದೆ ಟರ್ಬೊ ಎಂಜಿನ್ ಹೊಂದಿರುವ ಕಾರುಗಳು 'iMT' ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುವುದಿಲ್ಲ.

ಹುಂಡೈ ಕಾರುಗಳ ಬೆಲೆ ಏರಿಕೆಗೆ ಬಗ್ಗೆ ಮಾತನಾಡುವುದಾದರೆ, ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ (ಮ್ಯಾನ್ಯುವಲ್ ಮತ್ತು IVT) ರೂಪಾಂತರಗಳ ಬೆಲೆಗಳನ್ನು ರೂ.11,500 ಏರಿಸಲಾಗಿದ್ದು, ಡಿಸಿಟಿ ರೂಪಾಂತರ ಹೊರತುಪಡಿಸಿ, ಆಸ್ಟಾ ಮಾದರಿಗಳ ದರವನ್ನು ರೂ.16,600 ಹೆಚ್ಚಿಸಲಾಗಿದೆ. 1.0 - ಲೀಟರ್ 3 - ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್, ಡ್ಯುಯಲ್-ಕ್ಲಚ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಹೊಸ ಕಾರುಗಳ ಬೆಲೆಯನ್ನು ರೂ.21,500 ಏರಿಕೆ ಮಾಡಲಾಗಿದೆ. ಇದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ

ಮುಂಬರುವ ಹ್ಯುಂಡೈ i20 ಟರ್ಬೊ ಆವೃತ್ತಿಗಳಲ್ಲಿ iMT (ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್ ಆಯ್ಕೆ ಇರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು, ಈ ದರ ಏರಿಕೆಯು 'ಎನ್' ಲೈನ್ ರೂಪಾಂತರಗಳಿಗೂ ಬಿಟ್ಟಿಲ್ಲ ಎಂದು ಹೇಳಬಹುದು. ಎನ್6, ಎನ್8 ಹಾಗೂ ಎನ್8 DCT ಮಾದರಿಗಳ ಬೆಲೆ ರೂ.16,500 ಏರಿಕೆಯಾಗಿದೆ. ದರ ಹೆಚ್ಚಳ ಪರಿಣಾಮ ಎನ್6 iMT ರೂಪಾಂತರ ರೂ.10.16 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಎನ್8 iMT ದರ ರೂ.11.19 ಲಕ್ಷವಿದ್ದು, ಟಾಪ್ ಎಂಡ್ ಮಾದರಿ, ಎನ್8 DCT ಬೆಲೆ ರೂ.12.12 ಲಕ್ಷ ಇದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಎನ್ ಲೈನ್ ಮಾದರಿಗಳನ್ನು ಮಾತ್ರ iMT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ನೀಡಲಾಗುತ್ತದೆ. ಇಷ್ಟೆಲ್ಲ ಬೆಲೆ ಏರಿಕೆ ನಡುವೆ ಒಂದು ಖುಷಿ ವಿಚಾರವೆಂದರೆ, ಹ್ಯುಂಡೈ i20 ಡಿಸೇಲ್ ಆವೃತ್ತಿಗಳ ದರವನ್ನು ಹೆಚ್ಚಳ ಮಾಡಿಲ್ಲ. ಭಾರತದಾದ್ಯಂತ 1 ಏಪ್ರಿಲ್ 2023ರಿಂದ ಕಠಿಣ ಎಮಿಷನ್ ಮಾನದಂಡಗಳು ಜಾರಿಯಾಗಲಿದ್ದು, ಅದರನ್ವಯ ಹೆಚ್ಚಿನ ವೆಚ್ಚದ ಕಾರಣ, ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಉತ್ಪಾದನೆಯನ್ನು ಹ್ಯುಂಡೈ ನಿಲ್ಲಿಸಲಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ

ಪೆಟ್ರೋಲ್ ಆವೃತ್ತಿಯ ಹ್ಯುಂಡೈ i20 ಕಾರುಗಳು ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿವೆ. ಅವುಗಳೆಂದರೆ, 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 4 - ಸಿಲಿಂಡರ್ ಎಂಜಿನ್ ಹಾಗೂ 1.0 - ಲೀಟರ್ 3 - ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್. 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಹೊಂದಿರುವ ಕಾರು, 82 bhp ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6 - ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್ ಅನ್ನು ಹೊಂದಿರಲಿದೆ.

ಚಿಕ್ಕದಾದ, 1.0 - ಲೀಟರ್ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದ್ದು, 118 bhp ಗರಿಷ್ಠ ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿರಲಿದ್ದು, 6 - ಸ್ವೀಡ್ DCT ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇನ್ನು, ಹ್ಯುಂಡೈ ಈ ವರ್ಷದ ಆರಂಭದಲ್ಲಿ ಎಂಟ್ರಿ ಲೆವೆಲ್ ಕಾರಿನ ಬೆಲೆಯನ್ನೇ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ ಎಂದು ಹೇಳಬಹುದು. ಇದರ ಸಾಧಕ-ಭಾದಕಗಳು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ

ಕೆಲ ದಿನಗಳ ಹಿಂದೆಯಷ್ಟೇ ಹ್ಯುಂಡೈ ಭಾರತದ ಮಾರುಕಟ್ಟೆಯಲ್ಲಿ ಎರಡು ಕೈಗೆಟುಕುವ ಬೆಲೆಯ ಕಾರುಗಳನ್ನು ಲಾಂಚ್ ಮಾಡಿದೆ. ಅವುಗಳೆಂದರೆ, ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಹಾಗೂ ಔರಾ ಫೇಸ್‌ಲಿಫ್ಟ್ ಬಿಡುಗಡೆಗೊಳಿಸಿದೆ. ಗ್ರಾಹಕರು, ಐ10 ನಿಯೋಸ್ ಫೇಸ್‌ಲಿಫ್ಟ್ ರೂ.11,000 ರೂ. ಟೋಕನ್ ಮೊತ್ತಕ್ಕೆ ಬುಕಿಂಗ್ ಮಾಡಬಹುದು. ಇದು 1.2-ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಬರೋಬ್ಬರಿ 20.7 kmpl ಇಂಧನ ದಕ್ಷತೆಯನ್ನು ಪಡೆದಿದೆ.

ಅಲ್ಲದೆ, ಬಹುನಿರೀಕ್ಷಿತ ಔರಾ ಫೇಸ್‌ಲಿಫ್ಟ್ ಅನ್ನು ಲಾಂಚ್ ಮಾಡಲಿದ್ದು, ಪೆಟ್ರೋಲ್ ರೂಪಾಂತರದ ಆರಂಭಿಕ ಬೆಲೆ ರೂ.6.29 ಲಕ್ಷ ಇದ್ದು, ಸಿಎನ್‌ಜಿ ರೂಪಾಂತರದ ಬೆಲೆ ರೂ.8.87 ಲಕ್ಷ ಇದೆ. CNG ಕಿಟ್ ಹೊಂದಿರುವ ಕಾರು, 69 hp ಗರಿಷ್ಠ ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 8.0 ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ರೇರ್ ಎಸಿ ವೆಂಟ್‌ಗಳು ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.

Most Read Articles

Kannada
English summary
Hyundai i20 price hike in india details kannada
Story first published: Wednesday, February 1, 2023, 6:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X