ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಪ್ರತಿಸ್ಪರ್ಧಿಗಳ ಪ್ರಬಲ ಪೈಪೋಟಿಯ ನಡುವೆಯೂ ಕಳೆದ ತಿಂಗಳು ದಾಖಲೆ ಮಟ್ಟದಲ್ಲಿ ಮಾರಾಟವಾದ ಹ್ಯುಂಡೈ ಕ್ರೆಟಾ

2023ರ ಜನವರಿ ತಿಂಗಳಿನಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಕಂಪನಿಯು ಕ್ರೆಟಾ ಮಾದರಿಯ 15,037 ಯುನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಇದು ಹ್ಯುಂಡೈ ಕ್ರೆಟಾ ಎಸ್‍ಯುವಿಯ ಇದುವರೆಗಿನ ಅತ್ಯಧಿಕ ಮಾಸಿಕ ಮಾರಾಟವಾಗಿದೆ. ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ಮಾದರಿಯು 2020ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತು. 2020ರ ಮಾರ್ಚ್ ಮತ್ತು 2023ರ ಜನವರಿ ನಡುವೆ, ಹ್ಯುಂಡೈ ಕ್ರೆಟಾದ ಒಟ್ಟು 3,71,267 ಯುನಿಟ್‌ಗಳನ್ನು ಮಾರಾಟವಾಗಿವೆ.

ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ

2015ರ ಜೂನ್ ಮತ್ತು 2020ರ ಫೆಬ್ರವರಿ ನಡುವೆ ಮೊದಲ ತಲೆಮಾರಿನ ಕ್ರೆಟಾದ 4,67,030 ಯೂನಿಟ್‌ಗಳು ಭಾರತದಲ್ಲಿ ಮಾರಾಟವಾಗಿವೆ. ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ವಾಸ್ತವವಾಗಿ ಹಿಂದಿನದಕ್ಕಿಂತ ವೇಗವಾಗಿ ಮಾರಾಟವಾಗುತ್ತಿದೆ. 2015 ರಿಂದ ಹ್ಯುಂಡೈ ಕ್ರೆಟಾ ಮಿಡ್ ಸೈಡ್ ಎಸ್‍ಯುವಿಯ 8.3 ಲಕ್ಷ ಯುನಿಟ್ ಗಳು ಮಾರಾಟವಾಗಿವೆ. ಈ ನಡುವೆ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ 2023ರ ಹೊಸ ಕ್ರೆಟಾ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ.

2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಆರಂಭಿಕ ಬೆಲೆಯು ರೂ.10.84 ಲಕ್ಷವಾಗಿದೆ. 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಪವರ್‌ಟ್ರೇನ್‌ಗಳನ್ನು ಪಡೆದುಕೊಂಡಿದೆ. ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾಡೆಲ್ ಅನ್ನು ಬಿಡುಗಡೆ ಮಾಡಿಲ್ಲ. ಹ್ಯುಂಡೈ ಕ್ರೆಟಾ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾದರಿಯನ್ನು 2024 ರಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಬೆಲೆಯನ್ನು ರೂ.45,000 ವರೆಗೆ ಏರಿಕೆ ಮಾಡಿದೆ.

2023ರ ಕ್ರೆಟಾ ಎಸ್‍ಯುವಿಯ ಎಲ್ಲಾ ರೂಪಾಂತರಗಲು ಸ್ಟ್ಯಾಂಡರ್ಡ್ ಆಗಿ ಹೊಸ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ನಿಯಂತ್ರಣ (ESC), ವಾಹನ ಸ್ಟೆಬಿಲಿಟಿ ನಿರ್ವಹಣೆ (VSM), ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಅನ್ನು ಪಡೆಯುತ್ತದೆ. ಈ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಎಲ್ಲಾ ಟ್ರಿಮ್‌ಗಳಲ್ಲಿ 4 ಡಿಸ್ಕ್ ಬ್ರೇಕ್‌ಗಳು, ISOFIX ಆಂಕಾರೇಜ್‌ಗಳು ಮತ್ತು ಎತ್ತರ-ಹೊಂದಾಣಿಕೆ ಸೀಟ್ ಬೆಲ್ಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಕೇವಲ ಎರಡು ಎಂಜಿನ್ ಆಯ್ಕೆಗಳನ್ನು ಮಾತ್ರ ನೀಡಲಾಗಿದೆ. ಇದರಲ್ಲಿ 1.5 ಲೀಟರ್ NA ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಗಿದೆ. ಈ ಎರಡೂ ಎಂಜಿನ್ ಆಯ್ಕೆಗಳನ್ನು ಈಗ ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನದೊಂದಿಗೆ ನೀಡಲಾಗುತ್ತದೆ. ಈ ಎಸ್‍ಯುವಿಯಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ 115 bhp ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಗೇರ್ ಬಾಕ್ಸ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಸ್ಟ್ಯಾಂಡರ್ಡ್, 6-ಸ್ಪೀಡ್ iMT ಜೊತೆಗೆ ಪೆಟ್ರೋಲ್ ಮತ್ತು CVT, ಮತ್ತು ಡೀಸೆಲ್‌ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಸೇರಿವೆ. 2023ರ ಹ್ಯುಂಡೈ ಕ್ರೆಟಾದ ಪೆಟ್ರೋಲ್ ಆವೃತ್ತಿಯು ಈಗ ರೂ. 10.84 ಲಕ್ಷದಿಂದ ರೂ. 18.34 ರ ದರದಲ್ಲಿ ಲಭ್ಯವಿದೆ. ಡೀಸೆಲ್ ಸರಣಿಗೆ ರೂ. 11.89 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಎಂಡ್ ರೂಪಾಂತರದ ಬೆಲೆಯು ರೂ 19.13 ಲಕ್ಷದವರೆಗೆ ಇದೆ. ಪೆಟ್ರೋಲ್ ಆವೃತ್ತಿಯು 20,000 ರೂ.ಗಳ ಏಕರೂಪದ ಬೆಲೆ ಏರಿಕೆಯನ್ನು ಪಡೆದರೆ,

ಇನ್ನು ಡೀಸೆಲ್ ಕ್ರೆಟಾ ಎಸ್‍ಯುವಿಯು ಈಗ 45,000 ರೂ.ಗಳಷ್ಟು ದುಬಾರಿಯಾಗಿದೆ.ಹುಂಡೈ ಕಂಪನಿಯು ನವೀಕರಿಸಿದ ಕ್ರೆಟಾ ಫೇಸ್‌ಲಿಫ್ಟೆಡ್ ಎಸ್‌ಯುವಿಯನ್ನು 2024 ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಪ್ರಕಾರ, ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಮತ್ತು ಈ ವಿಳಂಬಕ್ಕೆ ಕಾರಣವನ್ನು ಬಹಿರಂಗಪಡಿಸಿದೆ. ಈ ವಿಳಂಬಕ್ಕೆ ಕಾರಣ, ಹ್ಯುಂಡೈ ಕಂಪನಿಯು ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಹನಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ವಾಹನವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.

Most Read Articles

Kannada
English summary
Hyundai sold over 15000 units of hyundai creta in jan 2023 details
Story first published: Friday, February 3, 2023, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X