ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ 2023ರ ಜನವರಿ ತಿಂಗಳಿನಲ್ಲಿ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ. 2023ರ ಜನವರಿ ತಿಂಗಳ ಕಾರು ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಕಿಯಾ ಇಂಡಿಯಾ ಕಂಪನಿಯು ಒಟ್ಟು 28,634 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ದಕ್ಷಿಣ ಕೊರಿಯಾದ ಆಟೋ ಮೇಜರ್ ಕಿಯಾ ನಾಲ್ಕು ವರ್ಷಗಳಲ್ಲಿ 6.5 ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಕಾರು ಮಾರಾಟದಲ್ಲಿ ಸೆಲ್ಟೋಸ್ ಮತ್ತು ಸೊನೆಟ್ ಮಾದರಿಗಳು ಹೆಚ್ಚಿನ ಕೊಡುಗೆಯನ್ನು ನೀಡಿದೆ. ಇನ್ನು ಕಿಯಾ ಕಾರ್ನಿವಲ್ (Kia Carnival) ಪ್ರೀಮಿಯಂ ವಿಭಾಗದಲ್ಲಿ ಯೋಗ್ಯ ಕೊಡುಗೆಯನ್ನು ನೀಡಿದೆ. ಕಳೆದ ತಿಂಗಳು ಕಿಯಾ ಕಾರ್ನಿವಲ್ ಮಾದರಿಯ ಒಟ್ಟು 1,003 ಯುನಿಟ್‌ಗಳು ಮಾರಾಟವಾಗಿದೆ. ಈ ಪ್ರೀಮಿಯಂ ಕಿಯಾ ಕಾರಿಗೆ ಪ್ರಸ್ತುತ ಹೆಚ್ಚಿನ ಬೇಡಿಯನ್ನು ಹೊಂದಿದೆ.

ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್

ಕಿಯಾ ಕಂಪನಿಯು ಕಾರ್ನಿವಲ್ ಕಾರಿನ ಮೇಲೆ ಯಾವುದೇ ದೊಡ್ಡ ರಿಯಾಯಿತಿಗಳನ್ನು ನೀಡಲಾಗುತ್ತಿಲ್ಲ. ಆದರೂ ಈ ಪ್ರೀಮಿಯಂ ಕಾರಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ. ಇನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾದ ಈ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್‌ನ ಎರಡನೇ ಮಾದರಿಯಾಗಿದೆ. ಹೊಸ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 8 ಇಂಚಿನ ಇನ್ಫೋಟೈನ್‌ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್, ಇಸಿಎಂ ಮಿರರ್, ಹಿಂಭಾಗದ ಪ್ರಯಾಣಿಕರಿಗಾಗಿ ಸಿಂಗಲ್ 10.1 ಇಂಚಿನ ಡಿಸ್‌ಪ್ಲೇ, ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಗಳನ್ನು ಒಳಗೊಂಡಿದೆ.

ಇದರ ಜೊತೆಗೆ ಸಂಪೂರ್ಣ ಸುಸಜ್ಜಿತವಾದ ಲಿಮೋಸಿನ್ ಪ್ಲಸ್ ಮಾದರಿಯು ಹರ್ಮನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10 ವೇ ಪವರ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ವೆಂಟಿಲೇಷನ್, ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ನಾಬ್, ಪ್ರೀಮಿಯಂ ವುಡ್ ಗಾರ್ನಿಷ್, ಡ್ಯುಯಲ್ 10.1 ಇಂಚಿನ ಹಿಂಭಾಗದ ಡಿಸ್ಪ್ಲೇ, ಟಿಪಿಎಂಎಸ್ ಫೀಚರ್ ಗಳನ್ನು ಹೊಂದಿವೆ. ಇದರೊಂದಿಗೆ 18 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್‌ಗಳನ್ನು ಎಲ್ಲಾ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

ಹೆಚ್ಚುವರಿಯಾಗಿ ಪ್ರೀಮಿಯಂ ಲೆಥರೆಟ್ ಸೀಟುಗಳನ್ನು ಈಗ ಪ್ರೇಸ್ಟಿಜ್, ಲಿಮೋಸಿನ್ ಹಾಗೂ ಲಿಮೋಸಿನ್ ಪ್ಲಸ್ ಮಾದರಿಗಳಲ್ಲಿ ಕೂಡ ನೀಡಲಾಗುತ್ತದೆ. ಹೆಚ್ಚುವರಿ ಬೆಂಬಲ, ಸೌಕರ್ಯವನ್ನು ನೀಡಲು ಡೈಮಂಡ್ ಶೇಪ್ ಕ್ವಿಲ್ಟಿಂಗ್‌ನೊಂದಿಗೆ ಬ್ರಾಂಡ್ ವಿಐಪಿ ಸೀಟಿನೊಂದಿಗೆ ಟಾಪ್ ಮಾದರಿಯನ್ನು ನೀಡಲಾಗಿದೆ. ಇನ್ನು ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 197 ಬಿ‌ಹೆಚ್‌ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್'ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ಕಿಯಾ ಕಾರ್ನಿವಲ್ ಎಂಪಿವಿಯನ್ನು ಕಂಪ್ಲೀಟ್ಲಿ ನಾಕ್ ಡೌನ್ (ಸಿಕೆಡಿ) ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತದಲ್ಲಿ ಮಾರಾಟವಾದ ಕಾರು ಈಗ ಅಂತರರಾಷ್ಟ್ರೀಯ ಆವೃತ್ತಿಗಿಂತ ಒಂದು ತಲೆಮಾರಿನ ಹಿಂದೆ ಇದೆ. ಇನ್ನು ಕಿಯಾ ತನ್ನ KA4 ಎಂಪಿವಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಕಿಯಾ KA4 ಎಂಪಿವಿಯು ದೊಡ್ಡ ಗಾತ್ರದ ಎಂಪಿವಿಯಾಗಿದ್ದು, ಇದು 2020 ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿತು.

ಈ ಕಿಯಾ KA4 ಮೂಲಭೂತವಾಗಿ ಕಾರ್ನಿವಲ್‌ನ ಮುಂದಿನ ಜನರೇಷನ್ ಮಾದರಿಯಾಗಿದೆ. ಈ ಹೊಸ ಕಿಯಾ KA4 ಎಂಪಿವಿಯು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.ಈ ಕಿಯಾ KA4 ಎಂಪಿವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದು 2.2-ಲೀಟರ್ ಟರ್ಬೊ ಡೀಸೆಲ್ ಮತ್ತು 3.5 ಲೀಟರ್ V6 ಪೆಟ್ರೋಲ್ ಎಂಜಿನ್ ಆಗಿದೆ. ಇದರಲ್ಲಿ 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ 197 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಇನ್ನು 3.5 ಲೀಟರ್ V6 ಪೆಟ್ರೋಲ್ ಎಂಜಿನ್ 292 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಪ್ರಸುತ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇನ್ನು ಭಾರತದಲ್ಲಿ ಈ ಹೊಸ ಕಿಯಾ KA4 ಎಂಪಿವಿಯು ಇದೇ ಎಂಜಿನ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಿಯಾ KA4 ಎಂಪಿವಿಯು 5,155 mm ಉದ್ದ, 1,995 mm ಅಗಲ ಮತ್ತು 1,775 mm ಎತ್ತರವನ್ನು ಹೊಂದಿದೆ.

Most Read Articles

Kannada
English summary
Kia carnival clocks over 1000 unit sales in january 2023 details in kannada
Story first published: Thursday, February 2, 2023, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X