ಬಿಡುಗಡೆಗೂ ಮುನ್ನವೇ ರಸ್ತೆಯಲ್ಲಿ ಕಾಣಿಸಿಕೊಂಡ ಮಾರುತಿ ಜಿಮ್ನಿ 5-ಡೋರ್ ವರ್ಷನ್

ಮಾರುತಿ ಸುಜುಕಿ ಅಂತಿಮವಾಗಿ ಕಳೆದ ತಿಂಗಳು ಆಟೋ ಎಕ್ಸ್‌ಪೋದಲ್ಲಿ ತಮ್ಮ ಮುಂಬರುವ ಜಿಮ್ನಿ 5-ಡೋರ್ 4×4 SUV ಮಾದರಿಯನ್ನು ಅನಾವರಣಗೊಳಿಸಿದೆ. ಗ್ರಾಹಕರ ಬೇಡಿಕೆಯಂತೆ ಬೇಗನೇ ಅದಕ್ಕಾಗಿ ಬುಕಿಂಗ್ ಅನ್ನು ಸಹ ತೆರೆದಿದ್ದಾರೆ. ಮಾರುತಿ ಸುಜುಕಿ ಇತ್ತೀಚೆಗೆ ಜಿಮ್ನಿಗಾಗಿ 15,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಿರುವುದಾಗಿ ಘೋಷಿಸಿದೆ.

ಈ ಎಸ್‌ಯುವಿಯನ್ನು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು ಮತ್ತು ಶೀಘ್ರದಲ್ಲೇ ದೇಶಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಆದರೆ ಇಲ್ಲಿ ಎಲ್ಲರನ್ನು ಬೆರಗುಗೊಳಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾರುತಿ ಸುಜುಕಿ ಜಿಮ್ನಿ 5-ಡೋರ್ ವರ್ಷನ್ ಅಧಿಕೃತ ಬಿಡುಗಡೆಗೂ ಮುನ್ನ ರಸ್ತೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ವಿಡಿಯೋವನ್ನು @amn1050 ಅವರು ತಮ್ಮ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಬಿಡುಗಡೆಗೂ ಮುನ್ನವೇ ರಸ್ತೆಯಲ್ಲಿ ಕಾಣಿಸಿಕೊಂಡ ಮಾರುತಿ ಜಿಮ್ನಿ 5-ಡೋರ್ ವರ್ಷನ್

ಈ ವೀಡಿಯೊದಲ್ಲಿ, ಜಿಮ್ನಿ 5-ಬಾಗಿಲಿನ ಮೂಲ ರೂಪಾಂತರವು ರಸ್ತೆಯಲ್ಲಿ ಕಂಡುಬರುತ್ತದೆ. ಯಾವುದೇ ಮರೆಮಾಚುವಿಕೆ ಇಲ್ಲದೆ ಕಾರನ್ನು ರಸ್ತೆಯಲ್ಲಿ ಓಡಿಸಲಾಗಿದೆ. ಕಾರನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ವಿತರಕರ ಕಾರಾಗಿರಬಹುದು ಎಂದೆನಿಸುತ್ತಿದೆ. ಇಲ್ಲಿ ಕಂಡುಬರುವ SUV ಕೈನೆಟಿಕ್ ಹಳದಿ ಬಣ್ಣದಲ್ಲಿದೆ, ಇದು ಪ್ರಪಂಚದಾದ್ಯಂತದ ಜಿಮ್ನಿ ಮಾಲೀಕರಲ್ಲಿ ಅತ್ಯಂತ ಜನಪ್ರಿಯವಾದ ಬಣ್ಣವಾಗಿದೆ. SUV ರಸ್ತೆಯಲ್ಲಿರುವ ಇತರ ಎಲ್ಲಾ ಕಾರುಗಳಿಗಿಂತ ಭಿನ್ನವಾಗಿ ಆಕರ್ಷಕವಾಗಿ ಕಾಣುತ್ತದೆ.

ಅದರ ರೋಮಾಂಚಕ ಬಣ್ಣದಿಂದಾಗಿ ಇದು ರಸ್ತೆಯ ಮೇಲೆ ಬಹಳಷ್ಟು ಮಂದಿಯನ್ನು ಆಕರ್ಷಿಸಿದೆ. ಜಿಮ್ನಿಯ ಬಾಕ್ಸಿ ವಿನ್ಯಾಸವು ಈ ಹೊಳೆಯುವ ಬಣ್ಣದೊಂದಿಗೆ ಎಸ್‌ಯುವಿಯನ್ನು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡಿದೆ. ಹೊಸ ಮಾರುತಿ ಸುಜುಕಿ ಜಿಮ್ನಿ 5-ಡೋರ್, ಎಕ್ಪೋಸ್ಡ್ ಹಿಂಜ್‌ಗಳೊಂದಿಗೆ ಸಿಂಗಲ್ ಸೈಡ್ ತೆರೆಯುವ ಡೋರ್, ಬ್ಲ್ಯಾಕ್ ಕವರಿಂಗ್ ಡೋರ್- ಮೌಂಟೆಡ್ ಸ್ಪೇರ್ ಟೈರ್ ಮತ್ತು 3- ಡೋರ್ ಜಿಮ್ನಿಯಂತೆ ಬಂಪರ್-ಮೌಂಟೆಡ್ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.

195/80 ಸೆಕ್ಷನ್ ಟೈರ್‌ಗಳೊಂದಿಗೆ 15- ಇಂಚಿನ ಅಲಾಯ್ ವೀಲ್ಸ್ ಅನ್ನು ಜಿಮ್ನಿ 5- ಡೋರ್ ವರ್ಷನ್ ಪಡೆದಿದೆ. ಜಿಮ್ನಿ 5- ಡೋರ್ ಒಳಭಾಗವು 3-ಡೋರ್ ಜಿಮ್ನಿ ಮಾದರಿಯಂತೆ ಇದೆ ಎಂದು ಹೇಳಬಹುದು. ಡ್ಯಾಶ್‌ಬೋರ್ಡ್ ಸಂಪೂರ್ಣ-ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಇಷ್ಟೇಅಲ್ಲದೆ, ಹೈ - ಮೌಂಟೆಡ್ 9.0- ಇಂಚಿನ ಟಚ್‌ಸ್ಕ್ರೀನ್ ಟೇಕಿಂಗ್ ಸೆಂಟರ್ ಸ್ಟೇಜ್‌ನೊಂದಿಗೆ ನೂತನ ಜಿಮ್ನಿ 5-ಡೋರ್ ವರ್ಷನ್ ಸಾಕಷ್ಟು ರಗಡ್ ಆಗಿ ಕಾಣುತ್ತದೆ.

HVAC ಕಂಟ್ರೋಲ್ ನೊಂದಿಗೆ ಸ್ಟೀರಿಂಗ್ ವೀಲ್ ಮತ್ತು ವೃತ್ತಾಕಾರದ ಡಯಲ್‌ಗಳಂತಹ ಕೆಲವು ಅಂಶಗಳನ್ನು ಸ್ವಿಫ್ಟ್‌ನಂತಹ ಇತರೆ ಮಾರುತಿ ಸುಜುಕಿ ಮಾದರಿಗಳಿಗೆ ಹೋಲುತ್ತದೆ. ಇದು ಪ್ಯಾಸೆಂಜರ್ ಸೈಡ್ ಡ್ಯಾಶ್‌ಬೋರ್ಡ್-ಮೌಂಟೆಡ್ ಗ್ರ್ಯಾಬ್ ಹ್ಯಾಂಡಲ್ ಮತ್ತು ರಗಡ್ ಅಪೀಲ್ ಆಡ್ ಮಾಡುವ ಫಾಕ್ಸ್ ಎಕ್ಸ್‌ಪೋಸ್ಡ್ ಬೋಲ್ಟ್‌ಗಳನ್ನು ಸಹ ಹೊಂದಿದೆ. ಒಟ್ಟರೆಯಾಗಿ ಹೊಸ ಐದು ಬಾಗಿಲಿನ ಜಿಮ್ನಿ ಕಾರು ಆಕರ್ಷಕ ಡಿಸೈನ್‌ನೊಂದಿಗೆ ಸಖತ್ ಸ್ಟೈಲಿಷ್ ಆಫ್‌ ರೋಡರ್ ಎನಿಸಿಕೊಂಡಿದೆ.

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಜಿಮ್ನಿ 5-ಡೋರ್ ಮಾರುತಿಯ ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆರ್ಕಮಿಸ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಸುರಕ್ಷತಾ ವೈಶಿಷ್ಟ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಿದ್ದು , 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ESP, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್-ವ್ಯೂ ಕ್ಯಾಮೆರಾ ಮತ್ತು EBD ಜೊತೆಗೆ ABS ಅನ್ನು ಹೊಂದಿದೆ.

ಜಿಮ್ನಿ 5- ಡೋರ್ ವರ್ಷನ್ ಹಿಂದಿನ ಮಾದರಿಯಂತೆ K15B ಎಂಜಿನ್‌ ಹೊಂದಿದ್ದು, 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಹೊಂದಿರಲಿದೆ. 3- ಡೋರ್ ವರ್ಷನ್ ಜಿಮ್ನಿಯಂತೆಯೇ ಇದರ ಎಂಜಿನ್ 105 hp ಗರಿಷ್ಠ ಪವರ್ ಮತ್ತು 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು ಮಾರುತಿ ಸುಜುಕಿಯ ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪಡೆದಿದೆ.

Most Read Articles

Kannada
English summary
Maruti Jimny 5 door version appeared on the road
Story first published: Friday, February 3, 2023, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X