ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ನೂತನ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಅನ್ನು ಅನಾವರಣ ಮಾಡಿದ್ದು, ಶೀಘ್ರದಲ್ಲೇ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.

ನೂತನ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಬಗ್ಗೆ ಮಾತನಾಡುವುದಾದರೆ, ಈ ಸ್ಪೆಷಲ್ ಎಡಿಷನ್ ಹ್ಯಾಚ್‌ಬ್ಯಾಕ್ ಅನ್ನು ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ, ಇದು ಹೊರ ಮತ್ತು ಒಳಭಾಗದಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಲಿದೆ ಎಂದು ಹೇಳಬಹುದು. ಕೆಲವೇ ದಿನಗಳಲ್ಲಿ ಖರೀದಿಗೆ ಸಿಗಲಿರುವ ಈ ಕಾರು ಗ್ರಾಹಕರಿಗೆ ಇಷ್ಟವಾಗಲಿದೆ ಎನ್ನುವ ನಂಬಿಕೆಯಲ್ಲಿ ಕಂಪನಿಯಿದ್ದು, ಈ ಹ್ಯಾಚ್‌ಬ್ಯಾಕ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್

ಹೊಚ್ಚ ಹೊಸ ಆಲ್ಟೊ K10 ಎಕ್ಸ್‌ಟ್ರಾ ಎಡಿಷನ್ ಕಾರಿನ ಹೊರಭಾಗದಲ್ಲಿ ಯಾವೆಲ್ಲ ಕಾಸ್ಮೆಟಿಕ್ ಬದಲಾವಣೆಗಳಲಿವೆ ಎಂಬುದನ್ನು ನೋಡಿದಾಗ ಈ ಹ್ಯಾಚ್‌ಬ್ಯಾಕ್, ಪೆಪ್ರಿಕಾ ಆರೆಂಜ್ ಬಣ್ಣದ ನೂತನ ORVMಗಳು ಹಾಗೂ ಸ್ಪಾಯ್ಲರ್ ಅನ್ನು ಹೊಂದಿರಲಿದೆ. ಅಲ್ಲದೆ, ಫ್ರಂಟ್ ಮತ್ತು ರೇರ್ ಸ್ಕಿಡ್ ಪ್ಲೇಟ್‌ಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಈ ಆಲ್ಟೊ ಕೆ10 ವೀಲ್ ಆರ್ಚ್ ಕ್ಲಾಡಿಂಗ್ ಅನ್ನು ಒಳಗೊಂಡಿರಲಿದೆ ಎಂಬುದು ಗಮನಿಸಬೇಕಾದ ಅಂಶವಾಗಿದ್ದು, ಹೊರಭಾಗದ ಲುಕ್ ನೋಡುಗರನ್ನು ಆಕರ್ಷಿಸುತ್ತದೆ ಎಂದು ಹೇಳಬಹುದು.

ಮೇಲೆ ತಿಳಿಸಲಾದ ಕೆಲವು ಹೊರಭಾಗದ ವಿನ್ಯಾಸದ ಬದಲಾವಣೆಗಳನ್ನು ಹೊರತುಪಡಿಸಿದರೆ, ಬಹುತೇಕ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಲಿರುವ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ ಎಂದು ಹೇಳಬಹುದು. ಮುಂಬರಲಿರುವ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಕೂಡ ಹೊಸದಾದ ಸ್ವೆಪ್ಟ್‌ಬ್ಯಾಕ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ದೊಡ್ಡದಾದ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್, ಹ್ಯಾಲೊಜೆನ್ ಟೈಲ್‌ಲ್ಯಾಂಪ್‌ಗಳು, ಸಿಲ್ವರ್ ಕವರ್‌ ಹೊಂದಿರುವ ಸ್ಟೀಲ್ ವೀಲ್ಸ್ ಹಾಗೂ ಬಾಡಿ ಕಲರ್ ಡೋರ್ ಹ್ಯಾಂಡಲ್‌ ಅನ್ನು ಪಡೆದಿರಲಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಒಳಭಾಗದ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹತ್ತು ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಇದರ ಒಳಭಾಗವು ಆಕರ್ಷಕವಾಗಿ ಕಾಣಿಸಲಿದೆಯಂತೆ. ಇಂಟರ್ನಲ್ ಡೋರ್ ಹ್ಯಾಂಡಲ್ಸ್ ಸೇರಿದಂತೆ ಒಳಭಾಗದ ಕೆಲವೊಂದು ಕಡೆ ಆರೆಂಜ್ (ಕಿತ್ತಳೆ) ಕಲರ್ ಇರಲಿರುವುದರಿಂದ ಈ ಕಾರು, ನೋಡಲು ಸುಂದರವಾಗಿ ಕಾಣುತ್ತದೆ. ಇಷ್ಟೇಅಲ್ಲದೆ, 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಉತ್ತಮ ಕಾರು ಎಂದು ಹೇಳಬಹುದು. ಇದು ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೇ, ಡ್ಯುಯಲ್ ಏರ್‌ಬ್ಯಾಗ್‌, ಎಬಿಎಸ್ (ಆಂಟಿ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಇಬಿಎಸ್ (ಇಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್, ಡಿಫಾಗರ್, ಸೀಟ್ ಬೆಲ್ಟ್ ರಿಮೈಂಡರ್ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ಪ್ರತಿಯೊಬ್ಬರು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಾರೆ. ಅಂತಹವರಿಗೆ ಇದು ಹೇಳಿಮಾಡಿಸಿದ ಕಾರಾಗಿದೆ.

ನೂತನ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ ಎಂಜಿನ್ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ ಎಂದು ಹೇಳಬಹುದು. ಇದು, K10C ಸೀರಿಯಸ್ ಎಂಜಿನ್ ಹೊಂದಿದ್ದು, ಇದು 64.3 bhp ಗರಿಷ್ಠ ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 - ಸ್ವೀಡ್ ಮ್ಯಾನುಯಲ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇದು ಬಹುತೇಕರಿಗೆ ಇಷ್ಟವಾಗಬಹುದು.

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಆಲ್ಟೊ ಕೆ10 ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಕಾರಾಗಿದ್ದು, 3.99 ಲಕ್ಷ ಮತ್ತು 5.95 ಲಕ್ಷ (ಎಕ್ಸ್ ಶೋರೂಂ ದೆಹಲಿ) ದರದಲ್ಲಿ ಖರೀದಿಗೆ ಸಿಗಲಿದೆ. ಒಟ್ಟು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳೆಂದರೇ, Std (O), LXi, VXi ಮತ್ತು VXi+. ಇನ್ನು, ಆಲ್ಟೊ ಕೆ10, ಸುಮಾರು 24.39 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ನವೀನ ವೈಶಿಷ್ಟ್ಯಗಳೊಂದಿಗೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್ ಇದೇ ಬೆಲೆಯ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು.

Most Read Articles

Kannada
English summary
Maruti suzuki alto k10 xtra edition debuts launch soon details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X