ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ

ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅರೆನಾ ಡೀಲರ್‌ಶಿಪ್‌ಗಳಲ್ಲಿ ಮೂಲಕ ಮಾರಾಟ ಮಾಡುವ ಎಂಟ್ರಿ ಲೆವೆಲ್ ಕಾರುಗಳಿಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ. ರೂ.44,000 ರವರೆಗೆ ಪ್ರಯೋಜನಗಳು ಸಿಗಲಿವೆ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಗಳ ಮೇಲೆ ಮಾರುತಿ ಸುಜುಕಿಯು ರೂ.25,000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3,100 ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ.43,100 ರಿಯಾಯಿತಿ ಪ್ರಯೋಜನಗಳನ್ನು ನೀಡುತ್ತದೆ. ಈ ಕೊಡುಗೆಗಳು ಬಹುತೇಕ ಫೆಬ್ರುವರಿ ತಿಂಗಳಲ್ಲಿ ಮಾತ್ರ ಲಭ್ಯವಾಗಲಿವೆ ಎಂದು ವರದಿಯಾಗಿದೆ. ಗ್ರಾಹಕರು ಸಮೀಪದ ಅರೆನಾ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ

ಎಲ್ಲರ ಹಾಟ್ ಫೇವೆರೆಟ್ ಹಾಗೂ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಲ್ಟೊ 800 ಹೆಚ್ಚಿನ ಡಿಸ್ಕೌಂಟ್ ಆಫರ್ ಅನ್ನು ಪಡೆದುಕೊಂಡಿದೆ. ರೂ.20,000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಬೋನಸ್, ರೂ.4,000 ಕಾರ್ಪೊರೇಟ್ ರಿಯಾಯತಿ ಸೇರಿದಂತೆ ಒಟ್ಟು ರೂ.39,000 ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಮಾರುತಿ ಸುಜುಕಿ ಸೆಲೆರಿಯೊ ಕೂಡ ಈ ತಿಂಗಳು ಅತಿ ಹೆಚ್ಚಿನ ರಿಯಾಯಿತಿಯನ್ನು ಪಡೆದುಕೊಂಡಿದೆ. ರೂ.20,000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3,100 ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ.38,100 ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಗರಿಷ್ಠ ರಿಯಾಯತಿ ಪ್ರಯೋಜನಗಳನ್ನು ಪಡೆದುಕೊಂಡಿರುವ ಕಾರಾಗಿದೆ. ಒಟ್ಟು ರೂ.44,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಬೋನಸ್, ರೂ.4,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿದೆ. ದೇಶೀಯ ಗ್ರಾಹಕರು ಇಷ್ಟಪಟ್ಟು ಖರೀದಿಸುವ ಮಾರುತಿ ಸುಜುಕಿ ವ್ಯಾಗನ್ಆರ್ ಕೂಡ ರೂ.25,000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4,000 ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ.44,000 ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ.

ಸ್ವಿಫ್ಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಕೂಡ ವ್ಯಾಗನ್‌ಆರ್‌ನಂತೆಯೇ ಒಟ್ಟು ರೂ.44,000 ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರೆ, ಮಾರುತಿಯ ಸುಜುಕಿ ಡಿಜೈರ್ ಕಡಿಮೆ ಡಿಸ್ಕೌಂಟ್ ಆಫರ್ ಒಳಗೊಂಡಿದೆ ಎಂದು ಹೇಳಬಹುದು. ಇದು ರೂ. 10,000 ನಗದು ರಿಯಾಯಿತಿ ಹಾಗೂ ರೂ.10,000 ಎಕ್ಸ್ಚೇಂಜ್ ಬೋನಸ್ ಅನ್ನು ಪಡೆದುಕೊಂಡಿದೆ. ಮುಂದಿನ ವರ್ಷದ ಮೊದಲಾರ್ಧದಲ್ಲಿ ಭಾರತ ಮಾರುಕಟ್ಟೆಯಲ್ಲಿ 35-40 kmpl ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಪ್ರಬಲ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳು ಖರೀದಿಗೆ ಸಿಗಲಿವೆ.

ಬಹುನೀರಿಕ್ಷಿತ ಮಾರುತಿ ಸುಜುಕಿ ಇಕೋ ವ್ಯಾನ್ ಕೂಡ ರೂ.24,000 ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ. ಅದರಲ್ಲಿ ರೂ.10,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಅರೆನಾ ಡೀಲರ್‌ಶಿಪ್‌ಗಳಲ್ಲಿ ಮೂಲಕ ಮಾರಾಟ ಮಾಡುವ ಅಗ್ಗದ ಬೆಲೆಯ ಕಾರುಗಳಿಗೆ ಈ ರಿಯಾಯಿತಿ ಸೌಲಭ್ಯವನ್ನು ಕಂಪನಿ ನೀಡುತ್ತಿದೆ. ಹಬ್ಬದ ಸೀಸನ್ ನಲ್ಲಿ ಡಿಸ್ಕೌಂಟ್ ಆಫರ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಆಲ್ಟೊ 800 ರೂ 3.54 ಲಕ್ಷದಿಂದ ರೂ.5.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು. ನಾಲ್ಕು ರೂಪಾಂತರದಲ್ಲಿ ಲಭ್ಯವಿದೆ. ಅವುಗಳೆಂದರೇ, ಸ್ಟ್ಯಾಂಡರ್ಡ್ (O), LXi (O), VXi and VXi ಪ್ಲಸ್. ಮಾರುತಿ ಸುಜುಕಿ ಸೆಲೆರಿಯೊ ರೂ 5.35 ಲಕ್ಷದಿಂದ ರೂ.7.13 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 25.24 kmpl ಇಂಧನ ದಕ್ಷತೆಯನ್ನು ಹೊಂದಿದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ರೂ.4.25 ದಿಂದ ರೂ.6.10 ಲಕ್ಷ ಬೆಲೆಯನ್ನು ಹೊಂದಿದ್ದು, 24.44 kmpl ಇಂಧನ ದಕ್ಷತೆಯನ್ನು ಪಡೆದಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್, ರೂ.5.52 ಲಕ್ಷದಿಂದ ರೂ. ರೂ.7.39 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಮಾರುತಿ ಸುಜುಕಿ ಡಿಸೈರ್, ರೂ.6.43 ಲಕ್ಷದಿಂದ ರೂ. 9.31 ಲಕ್ಷ ಬೆಲೆಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ಕೂಡ ತನ್ನ ಆಯ್ದ ಕಾರುಗಳ ಮೇಲೆ ಈ ಫೆಬ್ರವರಿ ತಿಂಗಳಿಗೆ ಭರ್ಜರಿ ರಿಯಾಯಿತಿ ನೀಡುತ್ತಿದ್ದು, ರೂ.35,000 ಪ್ರಯೋಜನಗಳನ್ನು ಒಳಗೊಂಡಿದೆ. ಹೊಸ ಖರೀದಿದಾರರನ್ನು ಸೆಳೆಯಲು ಕಂಪನಿಗಳು ಈ ಡಿಸ್ಕೌಂಟ್ ಆಫರ್ ನೀಡುತ್ತೇವೆ ಎಂದು ಹೇಳಬಹುದು.

Most Read Articles

Kannada
English summary
Maruti suzuki arena discounts entry level hatchback details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X