ಜಪಾನ್‌ ಅಂಬಾಸಿಡರ್‌ಗೆ ಬಹುಬೇಡಿಕೆಯ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಗಿಫ್ಟ್ ನೀಡಿದ ಮಾರುತಿ ಸುಜುಕಿ

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯನ್ನು ಬಿಡುಗಡೆಗೊಳಿಸಿತು. ಮಾರುತಿ ಸುಜುಕಿ ಕಂಪನಿಯು ಈ ಜನಪ್ರಿಯ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಜಪಾನ್‌ ಅಂಬಾಸಿಡರ್‌ಗೆ ನೀಡಿದ್ದಾರೆ.

ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.45 ಲಕ್ಷವಾಗಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ. ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಆರು ವಿಭಿನ್ನ ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ.

ಜಪಾನ್‌ ಅಂಬಾಸಿಡರ್‌ಗೆ ಎಸ್‍ಯುವಿ ಗಿಫ್ಟ್ ನೀಡಿದ ಮಾರುತಿ ಸುಜುಕಿ

ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಸಿಗ್ಮಾ, ಡೆಲ್ಟಾ, ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+. ಆಗಿದೆ. ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+ ರೂಪಾಂತರಗಳನ್ನು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಸಹ ಲಭ್ಯವಿದೆ. ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ, ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ.

ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಇನ್ನು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿದೆ.

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಮಾದರಿಯು ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ. ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸ. ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸುಜುಕಿ ಎಸ್-ಕ್ರಾಸ್‌ಗೆ ಹೋಲುತ್ತಿದೆ. ಈ ಹೊಸ ಎಸ್‍ಯುವಿ ಮಾದರಿಯ ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ಹಿಂಭಾಗದ ಬಂಪರ್ ಕೂಡ ಹೈರೈಡರ್‌ಗೆ ಹೋಲುತ್ತವೆ.

ಈ ಎಸ್‍ಯುವಿಯ ಸಿ-ಪಿಲ್ಲರ್‌ನಲ್ಲಿ ಕ್ರೋಮ್ ಅಪ್ಲಿಕ್, ಅಲಾಯ್ ವ್ಹೀಲ್ ನೊಂದಿಗೆ ವಿಭಿನ್ನ ವಿನ್ಯಾಸ ಮತ್ತು ಟೈಲ್‌ಗೇಟ್‌ನಲ್ಲಿ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಕೂಡ ವಿಶಿಷ್ಟವಾಗಿದೆ. ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಒಳಭಾಗವು ಗ್ರ್ಯಾಂಡ್ ವಿಟಾರಾ ಹೈರೈಡರ್‌ನಂತೆಯೇ ಕಾಣುತ್ತದೆ ಮತ್ತು ಬಣ್ಣದ ಯೋಜನೆಗಳು ಮಾತ್ರ ಪ್ರಮುಖ ವ್ಯತ್ಯಾಸವಾಗಿದೆ. ಎರಡೂ ಒಂದೇ ಸ್ಟೀಯರಿಂಗ್ ವೀಲ್ ಅನ್ನು ಪಡೆಯುತ್ತವೆ, ಹೊಸ ಮಾರುತಿ ಸುಜುಕಿ ಮಾದರಿಗಳಲ್ಲಿ ಕಂಡುಬರುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ಲಾ ಸ್ವಿಚ್‌ಗಿಯರ್‌ಗಳು ಎರಡೂ ಎಸ್‍ಯುವಿಗಳಲ್ಲಿ ಒಂದಾಗಿದೆ.

Most Read Articles

Kannada
English summary
Maruti suzuki delivers grand vitara to japan ambassador details in kannada
Story first published: Saturday, February 4, 2023, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X