Just In
- 10 min ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 49 min ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 1 hr ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 3 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್
ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಜನಪ್ರಿಯ ಡಸ್ಟರ್ ಎಸ್ಯುವಿಯ ನ್ಯೂ ಜನರೇಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದರ ಮೂಲಕ ರೆನಾಲ್ಟ್ ಕಂಪನಿಯು ತನ್ನ ಕಾರುಗಳ ಸರಣಿಯನ್ನು ವಿಸ್ತರಿಸಲಿದೆ. ಈ ಜನಪ್ರಿಯ ರೆನಾಲ್ಟ್ ಡಸ್ಟರ್ ಹೊಸ ರೂಪದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ರೆನಾಲ್ಟ್ ಕಂಪನಿಯು 2024 ಅಥವಾ 2025 ರಲ್ಲಿ ಸುಮಾರು $500 ಮಿಲಿಯನ್ ಹೂಡಿಕೆ ಮಾಡಲಿದೆ ಎಂಬ ವದಂತಿಗಳಿವೆ. ಕಂಪನಿಯು ಈ ಹೂಡಿಕೆಯು ಮೂಲಕ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಮತ್ತು CMF-B ಪ್ಲಾಟ್ಫಾರ್ಮ್ ಅನ್ನು ಸ್ಥಳೀಯ ಮಾರುಕಟ್ಟೆಗೆ ಬಳಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ರೆನಾಲ್ಟ್ ಡಸ್ಟರ್ ಜೊತೆಗೆ ರೆನಾಲ್ಟ್ ಕಂಪನಿಯು ಹೊಸ ಬಿಗ್ಸ್ಟರ್ ಎಂಬ 7-ಸೀಟರ್ ಮಿಡ್ ಸೈಜ್ ಎಸ್ಯುವಿ ಕಾನ್ಸೆಪ್ಟ್ ಮಾದರಿಯನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಎರಡಕ್ಕೂ ವ್ಯಾಪಕ ಸರಣಿಯ ಹೊಸ ಮಾದರಿಗಳನ್ನು ಉತ್ಪಾದಿಸಲು ಈ ಪ್ಲಾಟ್ಫಾರ್ಮ್ ಬಳಸಲಾಗುತ್ತದೆ. ರೆನಾಲ್ಟ್ 3ನೇ ತಲೆಮಾರಿನ ಡಸ್ಟರ್ ಎಸ್ಯುವಿಯನ್ನು 2024-25ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹೊಸ ಮಾದರಿಯನ್ನು ಹೊಸ CMF-B ಪ್ಲಾಟ್ಫಾರ್ಮ್ನಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಅಭಿವೃದ್ಧಿಪಡಿಸಲಾಗುವುದು. ಈ ಆಧುನಿಕ ಪ್ಲಾಟ್ಫಾರ್ಮ್ ಹೆಚ್ಚು ಆಧುನಿಕ ವೈಶಿಷ್ಟ್ಯಗಳು ಮತ್ತು ಆಧಾರಗಳನ್ನು ನೀಡಲು ರೆನಾಲ್ಟ್ಗೆ ಅವಕಾಶ ನೀಡುತ್ತದೆ.
ನಿಸ್ಸಾನ್ ಕಂಪನಿಯೊಂದಿಗೆ ರೆನಾಲ್ಟ್ನ ಪಾಲುದಾರಿಕೆಯು ಈ ಹೊಸ ಮಾದರಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಇನ್ನು ರೆನಾಲ್ಟ್ ಡಸ್ಟರ್ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ವಿಡಬ್ಲ್ಯೂ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ. CMF-B ಪ್ಲಾಟ್ಫಾರ್ಮ್ ಅನ್ನು ಭಾರತ ಸೇರಿದಂತೆ ಇತರ ಹೊಸ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಬಳಸಲು ಮಾರ್ಪಡಿಸಲಾಗುತ್ತದೆ.
ಹೊಸ ರೆನಾಲ್ಟ್ ಡಸ್ಟರ್ ಎಸ್ಯುವಿಯಲ್ಲಿ ನೀಡುವ ಎಂಜಿನ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಇನ್ನು ರೆನಾಲ್ಟ್ ಹಿಂದಿನ ಮಾದರಿಯಲ್ಲಿ 1.0-ಲೀಟರ್ ಮೂರು-ಸಿಲಿಂಡರ್ NA ಪೆಟ್ರೋಲ್ ಮತ್ತು 1.0-ಲೀಟರ್ ಮೂರು-ಸಿಲ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿತ್ತು. ಈ ಎಂಜಿನ್ ಗಳೊಂದಿಗೆ ಮ್ಯಾನುಯಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿತ್ತು. ಡಸ್ಟರ್ ಎಸ್ಯುವಿಯ ಉತ್ಪಾದನೆಯನ್ನು ಸುಮಾರು ಒಂದು ವರ್ಷದ ಹಿಂದೆ ತಮಿಳುನಾಡಿನಲ್ಲಿರುವ ರೆನಾಲ್ಟ್ ಉತ್ಪಾದನಾ ಘಟಕದಲ್ಲಿ ಸ್ಥಗಿತಗೊಳಿಸಲಾಯಿತು.
ರೆನಾಲ್ಟ್ ಡಸ್ಟರ್ ಎಸ್ಯುವಿಯು ಸುಮಾರು ಒಂದು ದಶಕದ ಕಾಲ ಪ್ರೀಮಿಯಂ ಬ್ರ್ಯಾಂಡ್ ಇಮೇಜ್ ಅನ್ನು ರಚಿಸುವ ಮೂಲಕ ನಿಜವಾಗಿಯೂ ರೆನಾಲ್ಟ್ ಕಂಪನಿಗೆ ದೊಡ್ಡ ಕೊಡುಗೆಯನ್ನು ನೀಡಿತ್ತು. ನ್ಯೂ ಜನರೇಷನ್ ಡಸ್ಟರ್ ಎಸ್ಯುವಿ ಬಿಡುಗಡೆಯ ಬಳಿಕ, ರೆನಾಲ್ಟ್ CBU ಮಾರ್ಗದ ಮೂಲಕ ಜಾಗತಿಕ ಮಾದರಿಗಳನ್ನು ಭಾರತಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಫ್ರೆಂಚ್ ವಾಹನ ತಯಾರಕರು 2021ರ ಆರಂಭದಲ್ಲಿ ಬಿಗ್ಸ್ಟರ್ 7-ಸೀಟರ್ ಎಸ್ಯುವಿ ಕಾನ್ಸೆಪ್ಟ್ ಅನ್ನು ಬಹಿರಂಗಪಡಿಸಿದ್ದರು. ಎಸ್ಯುವಿಯ ಉತ್ಪಾದನಾ ಆವೃತ್ತಿಯು 2024-25 ರಲ್ಲಿ ಬರಲಿದೆ
ಈ ಎಸ್ಯುವಿ ಗಾತ್ರವು ಸ್ಕೋಡಾ ಕೊಡಿಯಾಕ್ನಂತಹ ದೊಡ್ಡ ಎಸ್ಯುವಿಗಳಿಗೆ ಪರೋಕ್ಷ ಪ್ರತಿಸ್ಪರ್ಧಿಯಾಗಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ನ 7-ಸೀಟುಗಳ ಎಸ್ಯುವಿ ಟಾಟಾ ಸಫಾರಿ ಮತ್ತು ಮಹೀಂದ್ರಾ XUV700 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬಿಗ್ಸ್ಟರ್ ಕಾನ್ಸೆಪ್ಟ್ ಮೀಟರ್ ಉದ್ದವನ್ನು ಹೊಂದಿರುತ್ತದೆ. ಈ ರೆನಾಲ್ಟ್ ಡಸ್ಟರ್ ಎಸ್ಯುವಿಯು 2012ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ರೆನಾಲ್ಟ್ ಡಸ್ಟರ್ (Renault Duster) ಮಿಡ್ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು.
ಈ ರೆನಾಲ್ಟ್ ಡಸ್ಟರ್ ಎಸ್ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು. ರೆನಾಲ್ಟ್ ಡಸ್ಟರ್ 2014ರಲ್ಲಿ ಎಡಬ್ಲ್ಯೂಡಿ ರೂಪಾಂತರವನ್ನು ಪಡೆದುಕೊಂಡಿತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 2016ರಲ್ಲಿ ಮಿಡ್-ಸೈಕಲ್ ನವೀಕರಣವನ್ನು ಪಡೆದುಕೊಂಡಿತ್ತು. ಇನ್ನು 2017ರ ಅಂತ್ಯದಲ್ಲಿ ರೆನಾಲ್ಟ್ ಕಂಪನಿಯು ಎರಡನೇ ತಲೆಮಾರಿನ ಡಸ್ಟರ್ ಎಸ್ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಎಸ್ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. 2019ರ ಜುಲೈ ತಿಂಗಳಿನಲ್ಲಿ ಡಸ್ಟರ್ಗೆ ಜಾಗತಿಕ ಮಾದರಿಯಂತೆಯೇ ವಿನ್ಯಾಸ ಪರಿಷ್ಕರಣೆಗಳೊಂದಿಗೆ ಹೆಚ್ಚು ಅಗತ್ಯವಿರುವ ಫೇಸ್ಲಿಫ್ಟ್ ಅನ್ನು ನೀಡಿತು.