ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG

ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ S-CNG ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG (Maruti Grand Vitara CNG) ಎಸ್‍ಯುವಿಯು ಡೆಲ್ಟಾ ಎಂಟಿ ಮತ್ತು ಝೀಟಾ ಎಂಟಿ ಎಂಬ ಎರಡು ರೂಪಾಂತರಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಇದೀಗ ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯು ಸ್ಥಳೀಯ ಡೀಲರ್‌ಶಿಪ್‌ಗಳಿಗೆ ತಲುಪಲು ಪ್ರಾರಂಭಿಸಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯ ಡೆಲ್ಟಾ ಎಂಟಿ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.12.85 ಲಕ್ಷವಾದರೆ, ಝೀಟಾ ಎಂಟಿ ರೂಪಾಂತರದ ಬೆಲೆಯು ರೂ.14.84 ಲಕ್ಷವಾಗಿದೆ. ಇನ್ನು ಟೊಯೊಟಾ ಕಂಪನಿ ಕೂಡ ಹೈರೈಡರ್‌ನ ಸಿಎನ್‌ಜಿ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯಲ್ಲಿ 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನೊಂದಿಗೆ ಫ್ಯಾಕ್ಟರಿ ಫಿಟಡ್ ಸಿಎನ್‌ಜಿ ಕಿಟ್ ಅನ್ನು ಹೊಂದಿದೆ. CNG ಮೋಡ್‌ನಲ್ಲಿ, ಎಂಜಿನ್ ಗ್ರ್ಯಾಂಡ್ ವಿಟಾರಾ ಎಸ್-ಸಿಎನ್‌ಜಿ K15C ಎಂಜಿನ್ 86.63 ಬಿಹೆಚ್‍ಪಿ ಪವರ್ ಮತ್ತು 121.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್-ಸಿಎನ್‌ಜಿ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.

ಇದು ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ S-CNG ಎಸ್‍ಯುವಿಯು 26.6km/kg (ARAI) ಮೈಲೇಜ್ ಅನ್ನು ಒದಗಿಸುತ್ತದೆ. ಅದರ ಪೆಟ್ರೋಲ್-ಚಾಲಿತ ಒಡಹುಟ್ಟಿದವರಂತೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ ಬೆಂಬಲದೊಂದಿಗೆ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವಾರು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

ಇದರೊಂದಿಗೆ 40+ ಕನೆಕ್ಟಿವಿಟಿ ಸುಜುಕಿ ಕನೆಕ್ಟ್ ಸೂಟ್. ಸ್ಮಾರ್ಟ್ ವಾಚ್ ಕನೆಕ್ಟಿವಿಟಿ, ಅಮೆಜಾನ್ ಅಲೆಕ್ಸಾಗಾಗಿ ಸುಜುಕಿ ಕನೆಕ್ಟ್ ಕೌಶಲ್ಯದೊಂದಿಗೆ ರಿಮೋಟ್ ವಾಯ್ಸ್ ಅಕ್ಸೆಸ್, ವಾಹನ ಟ್ರ್ಯಾಕಿಂಗ್, ರಿಮೋಟ್ ಎಸಿ ಆನ್/ಆಫ್, ಜಿಯೋಫೆನ್ಸಿಂಗ್ ಮತ್ತು ಇತರ ಪೀಚರ್ಸ್ ಗಳನ್ನು ಹೊಂದಿವೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್-ಸಿಎನ್‌ಜಿ ಕೂಡ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ. ಮಾರುತಿಯ ಫ್ಲ್ಯಾಗ್‌ಶಿಪ್ ಗ್ರ್ಯಾಂಡ್ ವಿಟಾರಾ CNG ಎಸ್‍ಯುವಿಯ ಟಾಪ್ ಸ್ಪೆಕ್ ಝೀಟಾ ಸ್ಪೆಕ್ ಆವೃತ್ತಿಯು 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಇನ್ನು ಈ CNG ಎಸ್‍ಯುವಿಯ ಹಿಂಭಾಗದಲ್ಲಿ ಪಾರ್ಕಿಂಗ್ ಮಾಡಲು ರಿವರ್ಸಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು, EBD, ESP, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್ ಪಾಯಿಂಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. CNG ಆಯ್ಕೆಯ ಪರಿಚಯವು ಗ್ರ್ಯಾಂಡ್ ವಿಟಾರಾದ ಆಕರ್ಷಣೆಯನ್ನು ಇನ್ನಷ್ಟು ವಿಸ್ತರಿಸುತ್ತದೆ.. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ.

ಗ್ರ್ಯಾಂಡ್ ವಿಟಾರಾ ಮಾರುತಿ ಸುಜುಕಿ ಶ್ರೇಣಿಯ ಇತ್ತೀಚಿನ ವಾಹನವಾಗಿದ್ದು, S-CNG ಫ್ಯಾಕ್ಟರಿ-ಅಳವಡಿಕೆಯ CNG ಪಡೆದುಕೊಂಡೆ. ಅಲ್ಲದೇ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಎಸ್‍ಯುವಿಯು ಆಕರ್ಷಕ ಬೆಲೆಯಲ್ಲಿ ನೀಡಲಾಗಿದೆ. ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ.ಮಾರುತಿ ಸುಜುಕಿಯ 'ಗ್ರ್ಯಾಂಡ್ ವಿಟಾರಾ' ಎಸ್‌ಯುವಿಯನ್ನು ಕಂಪನಿಯು ಇದೀಗ ರೀಕಾಲ್ ಮಾಡುವುದಾಗಿ ಘೋಷಿಸಿದೆ. ತಾನು ವಿತರಿಸಿದ 11,000 ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ವಿಟಾರಾ ಎಸ್‌ಯುವಿಗಳನ್ನು ಹಿಂಪಡೆಯುವುದಾಗಿ ಇತ್ತೀಚೆಗೆ ಘೋಷಿಸಿತು.

ಗ್ರ್ಯಾಂಡ್ ವಿಟಾರಾ ಎಸ್‍ಯುವಿಗಾಗಿ ಕಂಪನಿಯು ಹಿಂಪಡೆಯುವಿಕೆಯನ್ನು ಘೋಷಿಸಿದ್ದು ಇದು ಎರಡನೇ ಬಾರಿಗೆ. ಈ ಹಿಂದೆ, ಗ್ರ್ಯಾಂಡ್ ವಿಟಾರಾ ಏರ್‌ಬ್ಯಾಗ್ ನಿಯಂತ್ರಕದಲ್ಲಿನ ದೋಷದಿಂದಾಗಿ ಹಿಂಪಡೆಯುವಿಕೆಯನ್ನು ಘೋಷಿಸಿತ್ತು. ಇದೀಗ ಹೊಸ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಹಿಂದಿನ ಸೀಟ್ ಬೆಲ್ಟ್ ಅನ್ನು ತೊಡಗಿಸಿಕೊಳ್ಳುವಾಗ ಬ್ರಾಕೆಟ್‌ಗಳಲ್ಲಿನ ದೋಷದಿಂದಾಗಿ ಕಂಪನಿಯು ಈಗ ಹಿಂಪಡೆಯುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ಆಗಸ್ಟ್ 08, 2022 ಮತ್ತು ನವೆಂಬರ್ 15, 2022 ರ ನಡುವೆ ತಯಾರಿಸಲಾದ ಸುಮಾರು 11,177 ಗ್ರಾಂಡ್‌ ವಿಟಾರಾ ಯುನಿಟ್‌ಗಳನ್ನು ಹಿಂಪಡೆಯುತ್ತಿದ್ದಾರೆ.

Most Read Articles

Kannada
English summary
New maruti grand vitara cng arrives at dealership details in kannada
Story first published: Tuesday, January 31, 2023, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X