ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಬಲೆನೊ ಆಧಾರಿತ Fronx ಕೂಪೆ ಎಸ್‍ಯುವಿಯನ್ನು ಇತ್ತೀಚೆಗೆ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಮಾರುತಿ ಸುಜುಕಿ ಕಂಪನಿಯು ತನ್ನ ಈ Fronx ಎಸ್‍ಯುವಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ Fronx ಎಸ್‍ಯುವಿಯ ಬೆಲೆಯ 2023ರ ಆರ್ಥಿಕ ವರ್ಷದಲ್ಲೇ ಬೆಲೆಯನ್ನು ಘೋಷಿಸಬಹುದು ಎಂದು ನಿರೀಕ್ಷಿಸುತ್ತೇವೆ. ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಕೂಪೆ ಎಸ್‌ಯುವಿಯ ಬಿಡುಗಡೆ ದಿನಾಂಕವನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ Fronx ಎಸ್‍ಯುವಿಯು ಮಾರುತಿಯ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಈ ಹೊಸ Fronx ಕೊಪೆ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ

ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹೊಸ ಮಾರುತಿ ಸುಜುಕಿ Fronx ಎಸ್‍ಯುವಿಯು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಆರ್ಟಿನ್ ಬ್ರೌನ್, ಸ್ಲೈಂಡಿಡ್ ಸಿಲ್ವರ್, ಒಪ್ಯೂಲೆಂಟ್ ರೆಡ್, ಬ್ಲೂಶ್ ಬ್ಲ್ಯಾಕ್ ರೂಪ್ ಹೊಂದಿರುವ ಎರ್ಥ್ ಬ್ರೋ, ಬ್ಲೂಯೆಷ್ ಬ್ಲ್ಯಾಕ್ ರೂಫ್ ನೊಂದಿಗೆ ಒಪೆಲೆಂಟ್ ರೆಡ್ ಮತ್ತು ಬ್ಲೂ ಬ್ಲ್ಯಾಕ್ ರೂಫ್ ನೊಂದಿಗೆ ಸ್ಲೈಂಡಿಡ್ ಸಿಲ್ವರ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ಮಾರುತಿ ಫ್ರಾಂಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಮಾರುತಿ ಕೂಪೆ ಎಸ್‌ಯುವಿಯನ್ನು ಪ್ರೀಮಿಯಂ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇನ್ನು ಈ ಮಾರುತಿ ಫ್ರಾಂಕ್ಸ್ ಎಸ್‍ಯುವಿಯ ಮುಂಭಾಗದ ಫಾಸಿಕ ಬ್ರ್ಯಾಂಡ್‌ನ ಹೊಸ ಸಿಗ್ನೇಚರ್ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್‌ನಿಂದ ಸ್ಲಿಮ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನಾವು ಗ್ರ್ಯಾಂಡ್ ವಿಟಾರಾದಲ್ಲಿ ನೋಡಿದಂತೆ ಅಲಂಕರಿಸಲಾಗಿದೆ.

ಈ ಮಾರುತಿ ಎಸ್‌ಯುವಿಯು ಫ್ಲೇರ್ಡ್ ವೀಲ್ ಆರ್ಚ್‌ಗಳು, ಅಲಾಯ್ ವೀಲ್‌ಗಳು, ರೈಸ್ಡ್ ವೇಸ್ಟ್‌ಲೈನ್, ಕೂಪ್ ತರಹದ ರೂಫ್‌ಲೈನ್ ಮತ್ತು ಡೋರ್ ಹಿಂಭಾಗದ ಗ್ಲಾಸ್ ಪ್ರದೇಶವನ್ನು ಸಹ ಒಳಗೊಂಡಿದೆ. ಹೊಸ ಮಾರುತಿ ಕೂಪೆ ಎಸ್‌ಯುವಿಯ ಒಳಭಾಗವು ಬಲೆನೊ ಹ್ಯಾಚ್‌ಬ್ಯಾಕ್‌ನೊಂದಿಗೆ ಹೋಲಿಕೆಯನ್ನು ಹೊಂದಿದೆ. ಈ ಹೊಸ ಮಾರುತಿ ಫ್ರಾಂಕ್ಸ್ ಕಾರಿನಲ್ಲಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಸುಜುಕಿ ಕನೆಕ್ಟ್ ಮತ್ತು ವಾಯ್ಸ್ ಕಮಾಂಡ್‌ಗಳನ್ನು ಹೊಂದಿದೆ.

ಇದರೊಂದಿಗೆ ಡಿಜಿಟಲ್ ಕನ್ಸೋಲ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಹಿಂದಿನ ಎಸಿ ವೆಂಟ್‌ಗಳನ್ನು ಹೊಂದಿವೆ. ಇದರೊಂದಿಗೆ ಆಟೋಮ್ಯಾಟಿಕ್ ಎಸಿ ಯುನಿಟ್, ಡ್ಯುಯಲ್-ಟೋನ್ ಇಂಟೀರಿಯರ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, 3- ಮುಂತಾದ ವೈಶಿಷ್ಟ್ಯಗಳು ಹೊಂದಿವೆ, ಈ ಎಸ್‍ಯುವಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬೂಸ್ಟ್ ಮಾಡಲಾದ ಮೋಟಾರ್, 102 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಇನ್ನು ಈ ಎಸ್‍ಯುವಿ 1.2 ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ. ಗೇರ್ ಬಾಕ್ಸ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಮಾರುತಿ ಫ್ರಾಂಕ್ಸ್ ಕಾರಿನ ಬಿಡುಗಡೆಯ ಕುರಿತು ಮಾಹಿತಿಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಹೊಸ ಮಾರುತಿ ಫ್ರಾಂಕ್ಸ್ ಎಸ್‌ಯುವಿ ವಿನ್ಯಾಸ ಮತ್ತು ವಿನ್ಯಾಸವು ಹೊಸ ಗ್ರ್ಯಾಂಡ್ ವಿಟಾರಾ ಮತ್ತು ಬಲೆನೊ ಹ್ಯಾಚ್‌ಬ್ಯಾಕ್‌ನಿಂದ ಪ್ರೇರಿತವಾಗಿದೆ. ವಾಸ್ತವವಾಗಿ, ಅದರ ಕೆಲವು ವಿನ್ಯಾಸ ಅಂಶಗಳು ಮಾರುತಿ ಫ್ಯೂಚುರೊ-ಇ ಕಾನ್ಸೆಪ್ಟ್ ಮಾದರಿಗೆ ಹೋಲುತ್ತವೆ,

ಮಾರುತಿ ಸುಜುಕಿ ಕಂಪನಿಯ ಈ ಹೊಸ ಫ್ರಾಂಕ್ಸ್ ಎಸ್‍ಯುವಿಯು 3,995 ಎಂಎಂ ಉದ್ದ, 1,765 ಎಂಎಂ ಅಗಲ ಮತ್ತು 1,550 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ಫ್ರಾಂಕ್ಸ್ ಎಸ್‍ಯುವಿಯು 308-ಲೀಟರ್ ಬೂಟ್ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 37-ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2,520 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಒಳಭಾಗವು ಬಲೆನೊ ಕಾರಿನ ಒಳಭಾಗದಂತೆ ಕಾಣುತ್ತದೆ.

Most Read Articles

Kannada
English summary
New maruti suzuki fronx launch soon details in kannada
Story first published: Thursday, January 26, 2023, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X