ಸ್ಕ್ರಾಪ್ ಆಗಲಿವೆ 15 ವರ್ಷಕ್ಕಿಂತ ಹಳೆಯ 1.19 ಲಕ್ಷ ವಾಹನಗಳು... ಮಾಲೀಕರಿಗೆ ನೋಟಿಸ್

ವಾಹನಗಳ ನೋಂದಣಿ ಅವಧಿ ಮುಗಿದರೂ ನೋಯ್ಡಾದ ರಸ್ತೆಗಳಲ್ಲಿ ಹಲವು ವಾಹನಗಳು ಇಂದಿಗೂ ಸಂಚರಿಸುತ್ತಿವೆ. ಈಗಾಗಲೇ ಎಚ್ಚರಿಕೆ ನೀಡಿದ್ದರೂ ವರಸೆ ಬದಲಾಗದ ಕಾರಣ ರಸ್ತೆಗಿಳಿದ ಪೊಲೀಸರು ಇಂದಿನಿಂದ ಎಲ್ಲಾ ಹಳೆಯ ವಾಹನಗಳಿಗೆ ದಂಡ ವಿಧಿಸಲು ಮತ್ತು ವಶಕ್ಕೆ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಸದ್ಯ ಒಂದು ಲಕ್ಷಕ್ಕೂ ಹೆಚ್ಚು ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ನೋಯ್ಡಾ ಟ್ರಾಫಿಕ್ ಪೋಲಿಸರ ಪ್ರಕಾರ, ನೋಯ್ಡಾದ ಸುಮಾರು 1.19 ಲಕ್ಷ ಕಾರು ಮಾಲೀಕರಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದೆ. ಇಂದಿನಿಂದ, ನೋಯ್ಡಾ ಟ್ರಾಫಿಕ್ ಪೊಲೀಸರು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ಕಾರುಗಳು ಮತ್ತು ಹತ್ತು ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳ ಮೇಲೆ ಕಟ್ಟುನಿಟ್ಟಾಗಿ ಕಠಿಣ ಕ್ರಮವನ್ನು ಜರುಗಿಸಲಿದ್ದಾರೆ. ಈ ವಾಹನಗಳಿಗೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮೂಲಕ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR)ದಲ್ಲಿ ಅಪಾಯಕಾರಿ ಮಾಲಿನ್ಯ ಮಟ್ಟ ಹೆಚ್ಚಳವಾಗುವುದರಿಂದ ನೋಂದಣಿಯನ್ನು ನವೀಕರಿಸುವುದಿಲ್ಲ.

ಸ್ಕ್ರಾಪ್ ಆಗಲಿವೆ 15 ವರ್ಷಕ್ಕಿಂತ ಹಳೆಯ 1.19 ಲಕ್ಷ ವಾಹನಗಳು... ಮಾಲೀಕರಿಗೆ ನೋಟಿಸ್

ನೋಯ್ಡಾ ಟ್ರಾಫಿಕ್ ಪೊಲೀಸರು ನೋಟಿಸ್ ಕಳುಹಿಸಿರುವ 1.19 ಲಕ್ಷ ಕಾರು ಮಾಲೀಕರಲ್ಲಿ 23 ಕಾರುಗಳು ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರೇಟ್, ಟ್ರೇಡ್ ಟ್ಯಾಕ್ಸ್ ಕಮಿಷನರೇಟ್ ಮತ್ತು ಇನ್ನೂ ಹೆಚ್ಚಿನ ಸರ್ಕಾರಿ ಅಧಿಕಾರಿಗಳ ಒಡೆತನದಲ್ಲಿವೆ. ಆದರೆ ಈ ಹೊಸ ನಿಯಮದ ಅಡಿಯಲ್ಲಿ ಯಾರಿಗೂ ವಿಶೇಷ ಸವಲತ್ತುಗಳನ್ನು ನೀಡದೆ ಕಾನೂನಿನ ಮುಂದೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸುವುದಾಗಿ ನೋಯ್ಡಾ ಟ್ರಾಫಿಕ್ ಪೊಲೀಸರು ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ನೋಯ್ಡಾ ಟ್ರಾಫಿಕ್ ಪೋಲೀಸರ ಪ್ರಕಾರ, 'Z' ನಿಂದ ಪ್ರಾರಂಭವಾಗುವ ಅಥವಾ UP16Z ಗಿಂತ ಮೊದಲು ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಕಾರುಗಳು 15 ವರ್ಷಕ್ಕಿಂತ ಹಳೆಯದಾಗಿವೆ ಎಂದು ಸೂಚಿಸುತ್ತದೆ. ನೋಯ್ಡಾ ಟ್ರಾಫಿಕ್ ಪೊಲೀಸರು ಈಗಾಗಲೇ ಸ್ಥಳಗಳಲ್ಲಿ ಸ್ಕ್ಯಾನರ್‌ಗಳನ್ನು ಸ್ಥಾಪಿಸಿ ಸಾರ್ವಜನಿಕ ರಸ್ತೆಗಳಲ್ಲಿ ಇನ್ನೂ ಸಂಚರಿಸುತ್ತಿರುವ ಅಂತಹ ಕಾರುಗಳನ್ನು ಪತ್ತೆಹಚ್ಚುತ್ತಿದ್ದಾರೆ. ಸಿಕ್ಕಿಬಿದ್ದರೆ, ಈ ವಾಹನಗಳನ್ನು ನೋಯ್ಡಾ ಟ್ರಾಫಿಕ್ ಪೊಲೀಸರು ವಶಪಡಿಸಿಕೊಂಡು ಮಾಲೀಕರಿಗೆ 20,000 ರೂ. ದಂಡ ವಿಧಿಸಲಾಗುತ್ತಿದೆ.

ಅಂತಹ ಹಳೆಯ ವಾಹನಗಳ ಮಾಲೀಕರಿಗೆ ಉಳಿದಿರುವ ಎರಡು ಆಯ್ಕೆಗಳೆಂದರೆ ಅವುಗಳನ್ನು ಸ್ಕ್ರ್ಯಾಪ್ ಮಾಡುವುದು ಅಥವಾ NOC ಗಳನ್ನು ತೆಗೆದುಕೊಂಡ ನಂತರ ಅವುಗಳನ್ನು ಇತರ ನಗರಗಳಿಗೆ ಕೊಂಡೊಯ್ಯಲು ಅನುಮತಿ ಕೋರುವುದು. ನೋಯ್ಡಾ ಟ್ರಾಫಿಕ್ ಪೋಲೀಸರ ಹೊಸ ಕಟ್ಟುನಿಟ್ಟಿನ ಕ್ರಮವು ದೆಹಲಿಯಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಮೇಲಿನ ಅನುಸರಣೆಯಾಗಿದೆ. ಇದು ಜನವರಿ 2022 ರಲ್ಲಿ ಸಂಕ್ಷಿಪ್ತ ಅವಧಿಯಲ್ಲಿ ಮುನ್ನಲೆಗೆ ಬಂದಿದೆ.

ವಾಯು ಗುಣಮಟ್ಟ ಸೂಚ್ಯಂಕ ಸುಧಾರಿಸಲು ಪ್ರಾರಂಭಿಸಿದ ನಂತರ ಜನವರಿ 12 ರಂದು ಈ ತಾತ್ಕಾಲಿಕ ನಿಷೇಧವನ್ನು ಶೀಘ್ರದಲ್ಲೇ ತೆಗೆದುಹಾಕಲಾಯಿತು. ಇತ್ತೀಚಿನ ದಿನಗಳಲ್ಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅಪಾಯಕಾರಿ ಮಾಲಿನ್ಯ ಮಟ್ಟವು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ವಾಹನಗಳ ಬಳಕೆಯನ್ನು ನಿರ್ಮೂಲಿಸಲು ಸರ್ಕಾರಗಳನ್ನು ಒತ್ತಾಯಿಸಿದೆ. ಹಾಗಾಗಿ ಇದೀಗ ಸರ್ಕಾರ ಯುಪಿ ಸರ್ಕಾರ ಹಳೆಯ ವಾಹನಗಳನ್ನು ನಿಷೇಧಿಸಲು ಮುಂದಾಗಿದೆ.

ದೆಹಲಿ ಮತ್ತು ನೋಯ್ಡಾದ ಟ್ರಾಫಿಕ್ ಪೊಲೀಸ್ ತಂಡಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ, ಅನೇಕ ಕಾರು ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಎನ್‌ಸಿಆರ್‌ನಿಂದ ಹೊರತೆಗೆಯಲು ಅಥವಾ ವಿವಿಧ ರಾಜ್ಯಗಳಲ್ಲಿ ವಾಸಿಸುವ ಕಾರು ಮಾಲೀಕರಿಗೆ, ವಿಶೇಷವಾಗಿ ಹತ್ತಿರದವರಿಗೆ ಮಾರಾಟ ಮಾಡಲು ಒತ್ತಾಯಿಸಲಾಗುತ್ತಿದೆ. ಹೇಗೂ ನೋಯ್ಡಾದಲ್ಲಿ ಇದ್ದರೆ ವಾಹನಗಲು ಸ್ಕ್ರಾಪ್ ಆಗುವುದು ಖಚಿತ, ಹಾಗಾಗಿ ಹೊರ ರಾಜ್ಯಗಳಲ್ಲಿ ಇಂತಹ ಕಾನೂನು ಇಲ್ಲದ ಕಾರಣ ಅಲ್ಲಿಗೆ ಮಾರಾಟ ಮಾಡಲು ಸಜ್ಜಾಗುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Police have decided to scrap 1 19 lakh vehicles older than 15 years
Story first published: Wednesday, February 1, 2023, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X