ಜನಪ್ರಿಯ 'ಮಹೀಂದ್ರಾ XUV700' ಬೆಲೆ ಭಾರೀ ಏರಿಕೆ

ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಮಹೀಂದ್ರಾ, ಈ ತಿಂಗಳ ಆರಂಭದಲ್ಲಿ ಸ್ಕಾರ್ಪಿಯೊ ಎನ್ ಬೆಲೆಯನ್ನು ಸುಮಾರು ಒಂದು ಲಕ್ಷದವರೆಗೆ ಹೆಚ್ಚಿಸಿತ್ತು. ಇದೀಗ ತನ್ನ ಜನಪ್ರಿಯ 'XUV700' ಎಸ್‌ಯುವಿ ಬೆಲೆಯನ್ನು ರೂ.64,000ವರೆಗೆ ಏರಿಕೆ ಮಾಡಿದೆ ಎಂದು ವರದಿಯಾಗಿದೆ. ವಿವಿಧ ವೆಚ್ಚವನ್ನು ಸರಿದೂಗಿಸಲು ಈ ದರವನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.

ಬೆಲೆ ಏರಿಕೆ ನಡುವೆಯೂ ಒಂದು ಖುಷಿ ವಿಚಾರವೆಂದರೆ, ಮಹೀಂದ್ರಾ ಐದು ಸೀಟಿನ ಎಂಟ್ರಿ ಲೆವೆಲ್ ಪೆಟ್ರೋಲ್, ಡೀಸೆಲ್ ಆವೃತ್ತಿ 'ಎಂಎಕ್ಸ್' ಬೆಲೆಯನ್ನು ಏರಿಕೆ ಮಾಡಿಲ್ಲ. ಅದು ರೂ.13.45 ಲಕ್ಷದಿಂದ ರೂ.13.96 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಐದು ಹಾಗೂ ಏಳು ಸೀಟ್ ಲೇಔಟ್ ಹೊಂದಿರುವ AX3 ಮಹೀಂದ್ರಾ XUV700 ಪೆಟ್ರೋಲ್ ಆವೃತ್ತಿ ಬೆಲೆಯನ್ನು ರೂ.41,000 ಹಾಗೂ ಡೀಸೆಲ್ ಆವೃತ್ತಿ ದರವನ್ನು ರೂ.42,000 ವರೆಗೆ ಏರಿಕೆ ಮಾಡಲಾಗಿದೆ.

ಜನಪ್ರಿಯ ಮಹೀಂದ್ರಾ XUV700 ಬೆಲೆ ಬಾರೀ ಏರಿಕೆ

ಪೆಟೋಲ್ ಆವೃತ್ತಿ AX5 ರೂಪಾಂತರದ ಬೆಲೆ ಬರೋಬ್ಬರಿ ರೂ.43,000 ಹಾಗೂ ಡಿಸೇಲ್ ಆವೃತ್ತಿ ದರ ರೂ.45,000 ಹೆಚ್ಚಳವಾಗಿದೆ. ಏಳು ಸೀಟಿನ ಆಯ್ಕೆಯಲ್ಲಿ ಖರೀದಿಗೆ ದೊರೆಯುವ AX7 ಪೆಟ್ರೋಲ್ ರೂಪಾಂತರದ ಬೆಲೆ ರೂ.44,000 ದಿಂದ. ರೂ.47,000 ವರೆಗೆ ಏರಿಕೆಯಾಗಿದೆ. ಸದ್ಯ ರೂ.23.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ AX7 L AT ಪೆಟ್ರೋಲ್ ಆವೃತ್ತಿ ದರ ಭಾರೀ ಹೆಚ್ಚಳವಾಗಿದ್ದು, ಸುಮಾರು ರೂ.50,000 ಏರಿಸಲಾಗಿದೆ.

ಡೀಸೆಲ್ ಹಾಗೂ ಏಳು ಸೀಟ್ ಒಳಗೊಂಡಿರುವ ಸಾಮಾನ್ಯ ಆವೃತ್ತಿಯಾಗಿರುವ AX7 (MT: ಮ್ಯಾನುಯಲ್ ಟ್ರಾನ್ಸ್ಮಿಷನ್) ರೂಪಾಂತರದ ಬೆಲೆಯನ್ನು ರೂ.45,000 ಏರಿಕೆ ಮಾಡಲಾಗಿದೆ. AX7 ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿರುವ ರೂಪಾಂತರದ ಬೆಲೆಯನ್ನು ರೂ.64,000 ಏರಿಸಲಾಗಿದ್ದು, AX7 (AWD: ಆಲ್ ವೀಲ್ ಡ್ರೈವ್) ಬೆಲೆಯನ್ನು ರೂ.50,000 ಹೆಚ್ಚಳ ಮಾಡಲಾಗಿದೆ. ಇಷ್ಟೇಅಲ್ಲದೆ, AX7 L AT, AX7 L AT (AWD) ಬೆಲೆಯನ್ನು ಕ್ರಮವಾಗಿ ರೂ.51,000 ಹಾಗೂ ರೂ.53,000 ಹೆಚ್ಚಳ ಮಾಡಲಾಗಿದೆ.

ಮಹೀಂದ್ರಾ XUV700 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.2-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು,185 hp ಗರಿಷ್ಠ ಪವರ್, 450 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 2.0-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 197 hp ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಈ ಎಸ್‌ಯುವಿ ಐದು ಬಣ್ಣಗಳನ್ನು ಹೊಂದಿದೆ. ಅವುಗಳೆಂದರೆ, ಮಿಡ್ನೈಟ್ ಬ್ಲ್ಯಾಕ್, ದಾಝ್ಲಿಂಗ್ ಸಿಲ್ವರ್, ಎಲೆಕ್ಟ್ರಿಕ್ ಬ್ಲೂ, ರೆಡ್ ರೇಜ್ ಮತ್ತು ಎವರೆಸ್ಟ್ ವೈಟ್.

ಈ ಎಸ್‌ಯುವಿ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಮಲ್ಟಿ ಫಂಕ್ಷನ್ ಸ್ಟೇರಿಂಗ್ ವೀಲ್, ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಅಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಅಲಾಯ್ ವೀಲ್ಸ್, ಫಾಗ್ ಲೈಟ್ಸ್ ಹಾಗೂ ಫ್ರಂಟ್ ರೇರ್ ಪವರ್ ವಿಂಡೋಸ್ ಅನ್ನು ಹೊಂದಿದೆ.

ಇನ್ನು, ಮಹೀಂದ್ರಾ ಸ್ಕಾರ್ಪಿಯೊ ಎನ್ ಬೆಲೆಯನ್ನು ಈ ತಿಂಗಳ ಆರಂಭದಲ್ಲಿಯೇ ಒಂದು ಲಕ್ಷದವರೆಗೂ ಏರಿಕೆ ಮಾಡಲಾಗಿದೆ. ಆದರೆ, ಈ ದರ ಹೆಚ್ಚಳವು ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಿಗೆ ಅನುಗುಣವಾಗಿ ಬೇರೆ-ಬೇರೆಯಾಗಿದೆ. ಮಹೀಂದ್ರಾ ಸ್ಕಾರ್ಪಿಯೊ ಎನ್ ಪೆಟ್ರೋಲ್ ರೂಪಾಂತರದ ಎಂಟ್ರಿ ಲೆವೆಲ್ ಮಾದರಿ, ಏಳು ಆಸನಗಳ Z2 MT ಬೆಲೆ ಇದೀಗ ರೂ.12.74 ಲಕ್ಷದಿಂದ ಶುರುವಾಗಲಿದೆ. ಇದು ಹಿಂದಿನ ಬೆಲೆ 11.99 ಲಕ್ಷಕ್ಕಿಂತ ಶೇ.6.26% ಅಥವಾ 75,000 ಹೆಚ್ಚಳವಾಗಿದೆ.

ಸ್ಕಾರ್ಪಿಯೊ ಎನ್ ಎಂಜಿನ್ ಸಾಮರ್ಥ್ಯ ಹಾಗೂ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದರ 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 203 PS ಪವರ್ ಮತ್ತು 380 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 175 PS ಪವರ್ ಮತ್ತು 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್‌, ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

Most Read Articles

Kannada
English summary
Popular mahindra xuv700 price hike details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X