ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ

ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ಅವುಗಳ ಕೈಗೆಟುಕುವ ಬೆಲೆ ಹಾಗೂ ಅತ್ಯಾಕರ್ಷಕ ಲುಕ್. ಆದರೀಗ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುವುದಾಗಿ ಕಂಪನಿಯು ಘೋಷಣೆ ಮಾಡಿದೆ.

ಇನ್‌ಪುಟ್ ವೆಚ್ಚದ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಗೆ ಟಾಟಾ ಮೋಟಾರ್ಸ್ ICE (ಇಂಟರ್ನಲ್ ಕಂಬುಸ್ಟಿವ್ನ್ ಎಂಜಿನ್) ಚಾಲಿತ ಪ್ಯಾಸೆಂಜರ್ ವಾಹನಗಳ ದರ ಹೆಚ್ಚಳ ಮಾಡುವ ತೀರ್ಮಾನ ಮಾಡಿದೆ. ನೂತನ ದರಗಳು ಫೆಬ್ರವರಿ 1, 2023ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಶೇಕಡ 1.2% ಬೆಲೆ ಏರಿಕೆಯಾಗಲಿದೆ. ಅದು ಹಲವು ಕಾರು ಮಾದರಿಗಳನ್ನು ಆಧರಿಸಿ ಬೇರೆ, ಬೇರೆಯಾಗಿರುತ್ತದೆ. ಈವರೆಗೆ ಕಂಪನಿಯು ಬಿಡಿ ಭಾಗಗಳು ಒಳಗೊಂಡಂತೆ ಎಲ್ಲ ರೀತಿಯ ಬೆಲೆ ಏರಿಕೆಯನ್ನು ತಾನೇ ಭರಿಸುತ್ತಿತ್ತು. ಅದರಲ್ಲೀಗ ಕೊಂಚ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲಿದೆ.

ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು

ಟಾಟಾ ಮೋಟಾರ್ಸ್, ಭಾರತದ ಮಾರುಕಟ್ಟೆಯಲ್ಲಿ ಕಾರುಗಳು ಮತ್ತು ಜನಪ್ರಿಯ ಎಸ್‌ಯುವಿ ಮಾದರಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಪ್ರಮುಖವಾಗಿ ನೆಕ್ಸಾನ್, ಆಲ್ಟ್ರೋಜ್, ಟಿಯಾಗೊ ಮತ್ತು ಹ್ಯಾರಿಯರ್ ಸೇರಿವೆ. ಕಂಪನಿಯು ಈ ತಿಂಗಳು (ಜನವರಿ) ತನ್ನ ವಾಹನಗಳ ಬೆಲೆಯನ್ನು ಪರಿಷ್ಕರಿಸಿದ ಬಳಿಕ, ಇದೀಗ ಎರಡನೇ ಬಾರಿಗೆ ಬೆಲೆ ಏರಿಕೆಯನ್ನು ಘೋಷಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾದ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಿಯಾಗೊದ ಎಂಟ್ರಿ ಲೆವೆಲ್ ರೂಪಾಂತರದ ಬೆಲೆ ರೂ.5.44 ಲಕ್ಷದಿಂದ ಆರಂಭವಾಗಲಿದೆ.

ಇಷ್ಟೆಲ್ಲ ಟಾಟಾ ಕಾರುಗಳ ಬೆಲೆ ಏರಿಕೆ ಆಗಲಿದೆ ಎಂದು ಹೇಳುವ ನಡುವೆಯು ನೆಮ್ಮದಿಯಾಗಿರುವ ವಿಚಾರವು ಇದೆ. ಅದೇನೆಂದರೆ, ಕಂಪನಿಯು ಅತಿಹೆಚ್ಚು ಬೇಡಿಕೆಯಲ್ಲಿರುವ ನೆಕ್ಸಾನ್ ಇವಿ ಬೆಲೆಯನ್ನು ಕಡಿಮೆ ಮಾಡಿದೆ. ಜೊತೆಗೆ ಇದನ್ನು ಒಂದೇ ಚಾರ್ಜ್ ನಲ್ಲಿ ಗರಿಷ್ಠ 453 ಕಿಮೀ ರೇಂಜ್ ನೀಡುವಂತೆ ರೆಡಿ ಮಾಡಿದೆ. ನೆಕ್ಸಾನ್ ಇವಿ ಪ್ರೈಮ್ ರೂ.14.49 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆತರೆ, ನೆಕ್ಸಾನ್ ಇವಿ ಮ್ಯಾಕ್ಸ್ ರೂ.16.49 ಲಕ್ಷ ದರವನ್ನು ಹೊಂದಿದೆ.

ಮುಂದಿನ ತಿಂಗಳು (ಫೆಬ್ರವರಿ 15) ಟಾಟಾ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಿದ್ದು, ನೆಕ್ಸಾನ್ ಇವಿ ಹೊಂದಿರುವವರಿಗೆ ಹೊಸ ಡ್ರೈವಿಂಗ್ ರೇಂಜ್ ಸೌಲಭ್ಯ ಸಿಗಲಿದೆ. ಈ ನೆಕ್ಸಾನ್ ಇವಿ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಅವುಗಳಲ್ಲಿ ಪ್ರಮುಖವಾಗಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಎಲ್ಇಡಿ DRL, ಎಲ್ಇಡಿ ಟೈಲ್ ಲ್ಯಾಂಪ್‌, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಪುಶ್ ಬಟನ್ ಸ್ಟಾರ್ಟ್, ಡಿಜಿಟಲ್ TFT ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ.

ಮಾರುಕಟ್ಟೆಯಲ್ಲಿ ದೊರೆಯುವ ICE ಚಾಲಿತ ಟಾಟಾ ನೆಕ್ಸಾನ್ ಆರಂಭಿಕ ಬೆಲೆ ರೂ.7.69 ಲಕ್ಷ ಇದ್ದು, ಸುರಕ್ಷತೆಯ ವಿಚಾರದಲ್ಲೂ ಉತ್ತಮವಾಗಿದೆ. ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದ್ದು, 16.3 ರಿಂದ 22 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಮತ್ತೊಂದು ಕಾರು, ಟಾಟಾ ಆಲ್ಟ್ರೋಜ್ ಪೆಟ್ರೋಲ್, ಡಿಸೇಲ್ ಎಂಜಿನ್ ಚಾಲಿತ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ. 6.34 ಲಕ್ಷ (ಎಕ್ಸ್ ಶೋರೂಂ) ದರ ಇದೆ. ಟಾಟಾ ಹ್ಯಾರಿಯರ್ ರೂ.14.80 ಲಕ್ಷದಿಂದ 22.35 ಲಕ್ಷ ಬೆಲೆಯನ್ನು ಹೊಂದಿದೆ.

ಟಾಟಾ ಮಾತ್ರವಲ್ಲದೆ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಹೀಂದ್ರಾ ಸಹ ತನ್ನ ವಿವಿಧ ಮಾದರಿಗಳ ಬೆಲೆಯನ್ನು ಏರಿಕೆ ಮಾಡಿದೆ. ಅವುಗಳಲ್ಲಿ ಪ್ರಮುಖವಾಗಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್, ಸ್ಕಾರ್ಪಿಯೊ ಎನ್ ಹಾಗೂ ಮಹೀಂದ್ರಾ XUV700 ಸೇರಿವೆ. ಸ್ಕಾರ್ಪಿಯೊ ಎನ್ ಬೆಲೆ ವಿವಿಧ ಮಾದರಿಗಳಿಗೆ ಆಧರಿಸಿ, ಸುಮಾರು ಒಂದು ಲಕ್ಷದವರೆಗೆ ಹೆಚ್ಚಿಸಿದರೆ, ಜನಪ್ರಿಯ ಮಹೀಂದ್ರಾ XUV700 ಎಸ್‌ಯುವಿ ಬೆಲೆಯನ್ನು ರೂ.64,000ವರೆಗೆ ಏರಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Price hike tata popular cars details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X