ಬ್ಯಾಟರಿ ಇಲ್ಲದೆ 2000 ಕಿ.ಮೀ ಓಡುವ ಎಲೆಕ್ಟ್ರಿಕ್ ಕಾರು... ತಂತ್ರಜ್ಞಾನ ಕಂಡು ಬೆರಗಾದ ವಿಶ್ವ ಇವಿ ತಯಾರಕರು!

ಕ್ವಾಂಟಿನೊ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯ ಹೊಸ ಬ್ಯಾಟರಿ ರಹಿತ ತಂತ್ರಜ್ಞಾನವು ಇತ್ತೀಚೆಗೆ ವಿಶ್ವದಾದ್ಯಂತ ಚರ್ಚೆಯಾಗಿದೆ. ಈ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ತಂತ್ರಜ್ಞಾನವು ಬ್ಯಾಟರಿಯ ಬದಲಿಗೆ ನ್ಯಾನೊಫ್ಲೋಸೆಲ್ ಅನ್ನು ಬಳಸಿಕೊಂಡು ಬೈ-ಐಯಾನ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಾರು ಮಾರುಕಟ್ಟೆಗೆ ಬಂದರೆ ಆಟೋ ವಲಯದಲ್ಲಿ ದೋಡ್ಡ ಕ್ರಾಂತಿಯಾಗಲಿದೆ.

ಕ್ವಾಂಟಿನೋ ಕಂಪನಿಯು ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಅಂಗವಾಗಿ ಈ ಹೊಸ ಕಾರಿಗೆ 25 ಎಂದು ಹೆಸರಿಟ್ಟಿದೆ. ಇದನ್ನು ಬ್ಯಾಟರಿ ರಹಿತ ಎಲೆಕ್ಟ್ರಿಕ್ ಕಾರ್ ಆಗಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ತಂತ್ರಜ್ಞಾನವನ್ನು ಇವರ ಗ್ವಾನ್-ಇ ಕಾರಿನಲ್ಲೂ ಅಳವಡಿಸಲಾಗಿದೆ. ಇದರ ಪ್ರತ್ಯೇಕತೆ ಏನೆಂದರೆ ಇದು ಪ್ರತಿಯೊಂದು ಚಕ್ರದಲ್ಲೂ ಮೋಟಾರ್ ಅನ್ನು ಹೊಂದಿರುತ್ತದೆ. ಈ ಮೋಟಾರ್‌ ಕಾರಿಗೆ ಬರೋಬ್ಬರಿ 320 ಎಚ್‌ಪಿ ಪವರ್ ನೀಡುತ್ತದೆ.

ಬ್ಯಾಟರಿ ಇಲ್ಲದೆ 2000 ಕಿ.ಮೀ ಓಡುವ ಎಲೆಕ್ಟ್ರಿಕ್ ಕಾರು... ತಂತ್ರಜ್ಞಾನ ಕಂಡು ಬೆರಗಾದ ಇವಿ ತಯಾರಕರು!

ಈ ಪವರ್‌ನಿಂದಾಗಿ ಕಾರು 62 ಮೈಲಿ ಅಂದರೆ 100 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡುಗಳಲ್ಲಿ ತಲುಪುತ್ತದೆ. ಇದರ ವೇಗದಂತೆಯೇ ಇದರ ರೇಂಜ್ ಕೂಡ ಅಧಿಕ, ಸುಮಾರು 1,242 ಮೈಲಿ ಅಂದರೆ ಬರೋಬ್ಬರಿ 2000 ಕಿ.ಮೀ ರೇಂಜ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲದಕ್ಕಿಂತ ಪ್ರಮುಖ ಅಂಶವೆಂದರೆ ಕಾರಿನ ಬೈ-ಐಯಾನ್ ತಂತ್ರಜ್ಞಾನ, ಇದು ಬ್ಯಾಟರಿ ಇಲ್ಲದೆ ಕಾರನ್ನು ಮುನ್ನಡೆಸುತ್ತದೆ ಎಂದು ವರದಿಗಳು ಹೇಳುತ್ತಿವೆ.

ಈ ತಂತ್ರಜ್ಞಾನವು PT Quantino ಕಾರಿನಲ್ಲಿ ಬ್ಯಾಟರಿಯ ಬದಲಿಗೆ ಧನಾತ್ಮಕ ಚಾರ್ಜ್ಡ್ ಎಲೆಕ್ಟ್ರೋಲೈಟ್‌ಗಳು ಮತ್ತು ಋಣಾತ್ಮಕ ಚಾರ್ಜ್ಡ್ ಅನೋಲೈಟ್ ಅನ್ನು ಬಳಸುತ್ತದೆ. ಈ ಎರಡು ಅಯಾನುಗಳನ್ನು ಆಯ್ದ ಪೊರೆಗೆ ಬಂಧಿಸಿದಾಗ, ವಿದ್ಯುತ್ ಪ್ರವಾಹವು ಉತ್ಪತ್ತಿಯಾಗುತ್ತದೆ. ಹೀಗಾಗಿ ಎಲೆಕ್ಟ್ರೋಲೈಟ್‌ಗಳು ಮತ್ತು ಅನೋಲೈಟ್‌ಗಳನ್ನು ಸಾಗಿಸಲು ನೀರನ್ನು ಬಳಸಲಾಗುತ್ತದೆ. ಈ ನೀರನ್ನು ಕಾರಿನಲ್ಲಿರುವ 125 ಲೀಟರ್ ಟ್ಯಾಂಕ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಕಾರಣಾಂತರಗಳಿಂದ ಈ ಇಂಜಿನೀಯರಿಂಗ್ ಬಗ್ಗೆ ಕಂಪನಿಯು ಹೆಚ್ಚಾಗಿ ತಿಳಿಸಿಲ್ಲ.

ಇದಕ್ಕೆ ಉಪ್ಪು ನೀರು, ತ್ಯಾಜ್ಯ ನೀರು ಇತ್ಯಾದಿ ಮಾನವ ಬಳಕೆಗೆ ಯೋಗ್ಯವಲ್ಲದ ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನ್ಯಾನೊ ಇಂಧನ ಕೋಶದಲ್ಲಿ ಬಳಸಲಾಗುತ್ತದೆ. ಈ ರೀತಿ ಬಳಸಿದಾಗ ನೀರು ವಿಷಕಾರಿಯಾಗುವುದಿಲ್ಲ ಮತ್ತು ದಹಿಸುವುದಿಲ್ಲ. ಹಾಗಾಗಿ ಈ ಕಾರು ಬೆಂಕಿಗೆ ಆಹುತಿಯಾಗುವುದಿಲ್ಲ. ಬ್ಯಾಟರಿ ವಾಹನಗಳು ಇತ್ತೀಚೆಗೆ ಬೆಂಕಿಗೆ ಆಹುತಿಯಾಗುವ ಹಲವು ಘಟನೆಗಳನ್ನು ನೋಡಿದ್ದೇವೆ, ಆದರೆ ಈ ಕಾರಿನಲ್ಲಿ ಬ್ಯಾಟರಿ ಇಲ್ಲದಿರುವುದರಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇಲ್ಲ.

ಈ ಕಾರಿಗೆ ಎಲೆಕ್ಟ್ರೋಲೈಟ್ ದ್ರವವು ಕೇವಲ ನೀರಾಗಿದ್ದು, ಅದಕ್ಕೆ ಸಣ್ಣ ಪ್ರಕ್ರಿಯೆಯ ಅಗತ್ಯವಿದೆ. ಇದಕ್ಕಾಗಿ ನೀರನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ವೆಚ್ಚವು 10 ಯುರೋ ಸೆಂಟ್ಸ್ ಆಗಿದೆ, ಇದು ಭಾರತೀಯ ರೂ.ನಲ್ಲಿ ಕೇವಲ 7 ರೂಪಾಯಿಗಳಷ್ಟಿದೆ. ಅದೇ ರೀತಿ ಈ ಕಾರಿನಲ್ಲಿ ನಾನೊಫ್ಲೋಸೆಲ್ ತಯಾರಿಸಲು 53,000 ರೂ. ವೆಚ್ಚವಾಗುತ್ತದೆ. ಇದು ಸುಮಾರು 50 ಸಾವಿರ ಗಂಟೆಗಳವರೆಗೆ ಕೆಲಸ ಮಾಡುತ್ತದೆ. ಅಂದರೆ ಕಾರು ಸುಮಾರು 18 ಲಕ್ಷ ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸಾಮಾನ್ಯವಾಗಿ ತಂತ್ರಜ್ಞಾನವು ಹೊಸದಾಗಿದ್ದರೆ ಅದನ್ನು ಪ್ರಪಂಚದಾದ್ಯಂತ ಕೊಂಡೊಯ್ಯುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳು ಎಲೆಕ್ಟ್ರಿಕ್ ಕಾರುಗಳಿಗೆ ಪರ್ಯಾಯವಾಗಿ ಪ್ರಚಾರವಾಗುತ್ತಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಹೈಡ್ರೋಜನ್ ಅನ್ನು ಉತ್ಪಾದಿಸುವುದು, ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು ಮತ್ತು ಅದನ್ನು ಸಂಗ್ರಹಿಸುವುದು ಎಲ್ಲವೂ ತುಂಬಾ ಕಷ್ಟಕರ ಮತ್ತು ಅಪಾಯಕಾರಿಯಾಗಿದೆ. ಹಾಗಾಗಿ ಇದನ್ನು ಒಂದು ಪಕ್ಕಾ ಯೋಜನೆಯಂತೆ ಮಾಡಬೇಕಾಗಿರುವುದರಿಂದ ಇದಕ್ಕೆ ತುಂಬಾ ಸಮಯ ಹಿಡಿಯಲಿದೆ.

ಆದರೆ ಈ ಬೈ-ಐಯಾನ್ ತಂತ್ರಜ್ಞಾನವು ನೀರು ಮಾತ್ರವಲ್ಲ, ಪ್ರಪಂಚದಾದ್ಯಂತ ಈ ಕಾರಿಗೆ ಬೇಕಾದ ರಚನೆಗಳನ್ನು ನಿರ್ಮಿಸುವುದು ಸುಲಭವಾಗಿದೆ. ಪೆಟ್ರೋಲ್/ಡೀಸೆಲ್‌ನಿಂದಾಗಿ ಪ್ರಪಂಚದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಇಂಧನ ರಚನೆಯು ಈಗ ಬಂದಿದೆ. ಅದೇ ರೀತಿ ಈ ತಂತ್ರಜ್ಞಾನವು ಯಶಸ್ವಿಯಾದರೆ ಅದೇ ರಚನೆಯನ್ನು ಈ ಬೈ-ಐಯಾನ್ ತಂತ್ರಜ್ಞಾನಕ್ಕೆ ಬಳಸಬಹುದು. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಈ ತಂತ್ರಜ್ಞಾನವು 2030 ರ ವೇಳೆಗೆ ದೊಡ್ಡ ಹಿಟ್ ಆಗಲಿದೆ ಎಂದು ಹೇಳಬಹುದು.

Most Read Articles

Kannada
English summary
Quantino nanoflowcell electric car runs 2000 km without a battery
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X