ಧೂಳೆಬ್ಬಿಸುತ್ತಿರುವ ಮಹೀಂದ್ರಾ XUV400 EV ಬುಕಿಂಗ್ಸ್... ನೆಕ್ಸಾನ್ ಇವಿಗೆ ಸೆಡ್ಡು ಹೊಡಿಯಲಿದೆಯೇ?

ಮಹೀಂದ್ರಾ ಕಂಪನಿಯು ಇತ್ತೀಚೆಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ತನ್ನ XUV400 EV ಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿತು. ಇದೀಗ ದಾಖಲೆಯ ಬುಕಿಂಗ್ಸ್ ಪಡೆದುಕೊಂಡಿರುವುದಾಗಿ ತಿಳಿದುಬಂದಿದ್ದು, ಅತಿ ಕಡಿಮೆ ಸಮಯದಲ್ಲಿ 10,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

ರೂ. 21,000 ದಿಂದ ಬುಕ್ಕಿಂಗ್ ಆರಂಭಿಸಿದ ಮಹೀಂದ್ರಾ ಈಗ ಬುಕ್ಕಿಂಗ್ ವಿಷಯದಲ್ಲಿ ದಾಖಲೆ ನಿರ್ಮಿಸಿದೆ. XUV400 EV ಗಾಗಿ ಕಾಯುವ ಅವಧಿಯು ಈಗ 7 ತಿಂಗಳವರೆಗೆ ಇರುತ್ತದೆ. ಕಂಪನಿಯು 2023 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕೇವಲ 20,000 ಯುನಿಟ್‌ಗಳನ್ನು ಮಾತ್ರ ನೀಡಲು ಯೋಜಿಸಿದೆ. ಆದಾಗ್ಯೂ, ಬುಕ್ಕಿಂಗ್‌ಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಈಗ ಸ್ಪಷ್ಟವಾಗಿದ್ದು, ಉತ್ಪಾದನೆ ಹೆಚ್ಚಿಸಲು ಸಜ್ಜಾಗಿದೆ. ಹಾಗೆಯೇ ಮೊದಲ ವಿತರಣೆ ಮಾರ್ಚ್‌ನಿಂದ ಆರಂಭವಾಗಲಿದೆ.

ಧೂಳೆಬ್ಬಿಸುತ್ತಿರುವ ಮಹೀಂದ್ರಾ XUV400 EV ಬುಕಿಂಗ್ಸ್... ನೆಕ್ಸಾನ್ ಇವಿಗೆ ಸೆಡ್ಡು ಹೊಡಿಯಲಿದೆಯೇ?

ಮಹೀಂದ್ರಾ ಕಂಪನಿಯು ಈ XUV400 EV ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ EC (3.2kw), EC (7.2kw) ಮತ್ತು EL (7.2kw). ಇವುಗಳಲ್ಲಿ EL ರೂಪಾಂತರವು ಮೊದಲು ವಿತರಣೆಯಾಗುವ ಸಾಧ್ಯತೆಯಿದೆ. ಅದರ ನಂತರ ಉಳಿದ ರೂಪಾಂತರಗಳನ್ನು ಹಬ್ಬದ ಸೀಸನ್‌ನಲ್ಲಿ ವಿತರಿಸಲಾಗುವುದು. ಮಹೀಂದ್ರಾ XUV400 EV ಬೆಲೆ ರೂ. 15.99 ಲಕ್ಷ ಹಾಗೂ ರೂ. 18.99 ಲಕ್ಷ ನಡುವೆ ಇವೆ. ಈ ಬೆಲೆಗಳು ಮೊದಲ 5,000 ಯೂನಿಟ್‌ಗಳಿಗೆ ಮಾತ್ರ ಸೀಮಿತವಾಗಿದೆ.

ವಿನ್ಯಾಸ ಮತ್ತು ಬಣ್ಣಗಳು
ಮಹೀಂದ್ರಾ XUV400 EV ಆಧುನಿಕ ವೈಶಿಷ್ಟ್ಯಗಳೊಂದಿಗೆ ಉತ್ತಮ ವಿನ್ಯಾಸವನ್ನು ಹೊಂದಿದೆ. ಇದು ಒಟ್ಟು ಆರು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಾಪೋಲಿ ಬ್ಲ್ಯಾಕ್ ಜೊತೆಗೆ ಕಾಪರ್ ಫಿನಿಶ್ ರೂಫ್ ಮತ್ತು ಬ್ಲೂ ಸ್ಯಾಟಿನ್ ಕಲರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ವಿನ್ಯಾಸದ ವಿಷಯಕ್ಕೆ ಬಂದರೆ, ಈ ಎಲೆಕ್ಟ್ರಿಕ್ ಕಾರು ಮುಂಭಾಗದ ಬಂಪರ್, ಸೈಡ್ ಡೋರ್ಸ್, ರೂಫ್, ಹಿಂಭಾಗ ಮತ್ತು ಒಳಭಾಗದಲ್ಲಿ ಮಹೀಂದ್ರಾ ಲೋಗೋ ಕಂಡುಬರುತ್ತದೆ.

ವೈಶಿಷ್ಟ್ಯಗಳು
XUV400 EV ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಕಾರು ಬಳಕೆದಾರರಿಗೆ ಬಹಳ ಆಕರ್ಷಕವಾಗಿದೆ. ಎಲೆಕ್ಟ್ರಿಕ್ ಕಾರ್ 7.0-ಇಂಚಿನ ಟಚ್‌ಸ್ಕ್ರೀನ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಓವರ್-ದಿ-ಏರ್ (OTA) ನವೀಕರಣಗಳು ಮತ್ತು AC ನಿಯಂತ್ರಣಗಳೊಂದಿಗೆ ಬರುತ್ತದೆ. ಪ್ರಸ್ತುತ ಬಳಕೆದಾರರಿಗೆ ಯಾವ ರೀತಿಯ ಫೀಚರ್‌ಗಳು ಬೇಕಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಹೀಂದ್ರಾ ಕಂಪನಿಯು ಆಕರ್ಷಕ ವೈಶಿಷ್ಟ್ಯಗಳನ್ನು ಒದಗಿಸಿದೆ.

ಬ್ಯಾಟರಿ
ಮಹೀಂದ್ರಾ XUV400 EV ಬ್ಯಾಟರಿಯಲ್ಲಿ ಎರಡು ರೂಪಾಂತರಗಳನ್ನು ಹೊಂದಿದೆ. 34.5kWh ಬ್ಯಾಟರಿ ಮತ್ತು 39.4kWh ಬ್ಯಾಟರಿ. ಇವೆರಡೂ 150 ಎಚ್‌ಪಿ ಮತ್ತು 310 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆದಿವೆ. ಇದು ಕೇವಲ 8.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಇದು ಗಂಟೆಗೆ 150 ಕಿ.ಮೀ ವೇಗವನ್ನು ತಲುಪಬಲ್ಲದು.

ಚಾರ್ಜರ್
ಮಹೀಂದ್ರಾ XUV400 EV ನಲ್ಲಿನ 34.5 kWh ಬ್ಯಾಟರಿಯು ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 375 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. 39.4 kWh ಬ್ಯಾಟರಿಯು ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 456 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರನ್ನು 50kW DC ಫಾಸ್ಟ್ ಚಾರ್ಜರ್ ಬಳಸಿ 50 ನಿಮಿಷಗಳಲ್ಲಿ 0 ರಿಂದ ಶೇ80 ರವರೆಗೆ ಚಾರ್ಜ್ ಮಾಡಬಹುದು. ಇದು ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

ಸುರಕ್ಷತಾ ವೈಶಿಷ್ಟ್ಯಗಳು
ಮಹೀಂದ್ರಾದ XUV400 EV ಸುರಕ್ಷತಾ ವೈಶಿಷ್ಟ್ಯಗಳಿಗೆ ಬಂದಾಗ, ಕಂಪನಿಯು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಿದೆ. ಆದ್ದರಿಂದ ಇದು ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಅನ್ನು ಪಡೆದಿದೆ. ಇದೆಲ್ಲವೂ ವಾಹನ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಸದ್ಯ ಭಾರತದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು ಮಾರಾಟದಲ್ಲಿ ಮುನ್ನುಗ್ಗುತ್ತಿದ್ದು, ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಮಹೀಂದ್ರಾ ಇವಿ ಪೈಪೋಟಿ ನೀಡಲಿದೆ ಕಾದುನೋಡಬೇಕಿದೆ.

Most Read Articles

Kannada
English summary
Record level bookings of mahindra xuv 400 ev
Story first published: Tuesday, January 31, 2023, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X