ಪರ್ಫಾಮೆನ್ಸ್ ಕಾರು ಪ್ರಿಯರಿಗಾಗಿ Altroz Racer ಬಿಡುಗಡೆಗೊಳಿಸಲು ಸಜ್ಜಾದ ಟಾಟಾ ಮೋಟಾರ್ಸ್

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2023ರ ತನ್ನ ಆಲ್‌‌ಟ್ರೊಜ್ ರೇಸರ್ ಆವೃತ್ತಿಯನ್ನು ಪ್ರದರ್ಶಿಸಿದೆ. ಈ ಹೊಸ ಆಲ್‌‌ಟ್ರೊಜ್ ರೇಸರ್ ಶಕ್ತಿಶಾಲಿ ಎಂಜಿನ್, ಹೊಸ ವೈಶಿಷ್ಟ್ಯಗಳು ಮತ್ತು ಕಾಸ್ಮೆಟಿಕ್ ವಿನ್ಯಾಸ ನವೀಕರಣಗಳೊಂದಿಗೆ ಬರುತ್ತದೆ. ಹೊಸ ಆಲ್ಟ್ರೊಜ್ ರೇಸರ್ ಅನ್ನು ಮುಂದಿನ ದಿನಗಳಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅದು ಖಚಿತಪಡಿಸಿದೆ.

ಆಲ್‌‌ಟ್ರೊಜ್ ರೇಸರ್ ತನ್ನ ವಿಭಾಗದಲ್ಲಿ ತನ್ನ ಅತ್ಯಂತ ಪವರ್ ಫುಲ್ ಮಾದರಿಯಾಗಿದೆ. ಟಾಟಾ ಆಲ್‌‌ಟ್ರೊಜ್ ರೇಸರ್ ಎಂದು ಕರೆಯಲ್ಪಡುವ ಹೊಸ ಮಾದರಿಯು 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ನೊಂದಿಗೆ ಬರುತ್ತದೆ. ಹೊಸ ಆಲ್‌‌ಟ್ರೊಜ್ ರೇಸರ್ ರೂಪಾಂತರವು 1.0 ಲೀಟರ್ ಟರ್ಬೊ ಪೆಟ್ರೋಲ್ ಯುನಿಟ್ ನೊಂದಿಗೆ ಬರುವ ಹ್ಯುಂಡೈ ಐ20 ಎನ್ ಲೈನ್ ಕಾರಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

Altroz Racer ಬಿಡುಗಡೆಗೊಳಿಸಲು ಸಜ್ಜಾದ ಟಾಟಾ ಮೋಟಾರ್ಸ್

ಹ್ಯುಂಡೈ ಎನ್ ಲೈನ್ ಕಾರಿನಲ್ಲಿರುವ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಎರಡು ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ, ಇದು ಸ್ಪೀಡ್ iMT ಮತ್ತು 7-ಸ್ಪೀಡ್ DCT ಆಟೋಮ್ಯಾಟಿಕ್ ಆಗಿದೆ. ಇನ್ನು ಟಾಟಾ ಹ್ಯಾಚ್‌ಬ್ಯಾಕ್‌ನ ರೇಸರ್ ಆವೃತ್ತಿಯು i20 N-ಲೈನ್‌ನಂತೆಯೇ ಶಕ್ತಿಯುತವಾಗಿರುತ್ತದೆ. ಹೊಸ ಆಲ್ಟ್ರೋಜ್ ರೇಸರ್ ಸ್ಟ್ಯಾಂಡರ್ಡ್ ಮಾದರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಇದನ್ನು ಡ್ಯುಯಲ್-ಟೋನ್ ಕೆಂಪು ಮತ್ತು ಕಪ್ಪು ಬಣ್ಣಗಳಿಂದ ಕೂಡಿದೆ.

ಈ ಹೊಸ ರೂಪಾಂತರವು ಸ್ವಲ್ಪ ವಿಭಿನ್ನವಾದ ಮುಂಭಾಗದ ಬಂಪರ್, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು, ಬಾಡಿ ಡಿಕಾಲ್ಗಳು ಮತ್ತು 'ರೇಸರ್' ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕ್ಯಾಬಿನ್‌ನ ಒಳಭಾಗದಲ್ಲಿ, ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿಯರ್ ಮಾದರಿಯು ಹೊಸ ಸಜ್ಜು ಮತ್ತು 'ರೇಸರ್' ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಇನ್ನು ಈ ಹೊಸ ಆಲ್ಟ್ರೋಜ್ ರೇಸರ್ ಕಾರಿನ ಕೆಲವು ಪ್ರಮುಖ ವೈಶಿಷ್ಟ್ಯಗಳು ಹರ್ಮನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕದ 7.0-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಇದರೊಂದಿಗೆ ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್, ರಿಯರ್ ಕ್ಯಾಮೆರಾ ಡಿಸ್‌ಪ್ಲೇ, ಐಡಲ್ ಸ್ಟಾರ್ಟ್-ಸ್ಟಾಪ್ ಮತ್ತು 7.0-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ರಿಯರ್ ಸೆಂಟರ್ ಆರ್ಮ್‌ರೆಸ್ಟ್, ಡ್ರೈವರ್ ಸೀಟ್ ಎತ್ತರ ಹೊಂದಾಣಿಕೆ ಲೆದರ್ ಸುತ್ತುವ ಸ್ಟೀರಿಂಗ್ ಮತ್ತು ಗೇರ್ ಲಿವರ್, ರಿಯರ್ ಪಾರ್ಕಿಂಗ್ ಅಸಿಸ್ಟ್, ಡೈವರ್ಸ್ ಫುಟ್‌ವೆಲ್‌ಗಾಗಿ ಆಂಬಿಯೆಂಟ್ ಲೈಟಿಂಗ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ.

ಇದರೊಂದಿಗೆ ಇಬಿಡಿಯೊಂದಿಗೆ ಎಬಿಎಸ್, ಸೆಂಟ್ರಲ್ ಲಾಕಿಂಗ್ ಮತ್ತು ರಿಯರ್ ಫಾಗ್ ಲ್ಯಾಂಪ್ ಅನ್ನು ಹೊಂದಿದೆ, ಇದರೊಂದಿಗೆ ಟಾಟಾ ಕಂಪನಿಯು ಆಲ್‌‌ಟ್ರೊಜ್ ಕಾರಿನ CNG ಆವೃತ್ತಿಯನ್ನು ಅನಾವರಣಗೊಳಿಸಿದ್ದಾರೆ. ಕಂಪನಿಯು ಟಾಟಾ ಆಲ್ಟ್ರೊಜ್ ಇವಿಯನ್ನು ಸಹ ತರುತ್ತದೆ, ಆಲ್ಟ್ರೊಜ್ ಇವಿ ಬ್ರ್ಯಾಂಡ್‌ನ ನವೀಕರಿಸಿದ ಜಿಪ್ಟ್ರಾನ್ ತಂತ್ರಜ್ಞಾನದೊಂದಿಗೆ ಉತ್ತೇಜಿಸಲ್ಪಡುತ್ತದೆ. ಇದು ಶಾಶ್ವತ ಮ್ಯಾಗ್ನೆಟ್ ಎಸಿ ಮೋಟರ್ ಅನ್ನು ಒಳಗೊಂಡಿದೆ. ಇನ್ನು ಸಿಂಗಲ್-ಸ್ಪೀಡ್ ಗೇರ್ ಬಾಕ್ಸ್ ಮೂಲಕ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಇನ್ನು ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ-300 ಕಿ.ಮೀ ರೇಂಜ್ ಅನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು ವಿಶೇಷವೆಂದರೆ ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಅರಿವಿನೊಂದಿಗೆ ಟಾಟಾ ಕಾರುಗಳು ಖರೀದಿದಾರರಲ್ಲಿ ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ. ಟಾಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಿತು. ಟಾಟಾ ಆಲ್‌‌ಟ್ರೊಜ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಈ ಆಲ್‌‌ಟ್ರೊಜ್ ಅನ್ನು ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಹ್ಯಾಚ್‌ಬ್ಯಾಕ್ ವಯಸ್ಕರ ವಿಭಾಗದಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸ್ಟ್ಯಾಂಡರ್ಡ್ ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದ್ದು, ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ.

Most Read Articles

Kannada
English summary
Tata altroz racer launch soon engine features specs details in kannada
Story first published: Wednesday, January 18, 2023, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X