ಭಾರತದಲ್ಲಿ ಭಾರೀ ವೇಗವಾಗಿ ಮುನ್ನುಗುತ್ತಿದೆ ಟಾಟಾ.. ನಂಬರ್ 1 ಆಗುತ್ತಾ?

ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ತಯಾರಿಸುವ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದಕ್ಕೆ ಕಾರಣವೇನೆಂದರೇ ಅವುಗಳ ವೈಶಿಷ್ಟ್ಯ, ವಿನ್ಯಾಸ, ಕಾರ್ಯವೈಖರಿ ಹಾಗೂ ಕೈಗೆಟುಕುವ ಬೆಲೆ. ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಪ್ರಗತಿಯೊಂದಿಗೆ ಟಾಟಾ, ಈ ವರ್ಷವು ಶುಭಾರಂಭ ಮಾಡಿದೆ.

ಟಾಟಾ ಮೋಟಾರ್ಸ್ 2023ರ ಜನವರಿ ತಿಂಗಳ ತನ್ನ ಪ್ರಯಾಣಿಕ ವಾಹನ ಮಾರಾಟ ವರದಿಯ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಂಪನಿಯು ಕಳೆದ ಜನವರಿ ತಿಂಗಳಲ್ಲಿ ಬರೋಬ್ಬರಿ 47,987 ಯುನಿಟ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ವರ್ಷದಿಂದ ವರ್ಷ (YoY)ಕ್ಕೆ ಶೇಕಡ 18% ಪ್ರಗತಿಯನ್ನು ದಾಖಲಿಸಿದೆ. 2022ರ ಜನವರಿಯಲ್ಲಿ ಕೇವಲ 40,777 ಯುನಿಟ್ ವಾಹನಗಳನ್ನು ಮಾತ್ರ ಸೇಲ್ ಮಾಡಿತ್ತು. ಅಲ್ಲದೆ, ತಿಂಗಳ (MoM) ಮಾರಾಟದಲ್ಲೂ (ಶೇಕಡ 19.84%) ಉತ್ತಮ ಸಾಧನೆ ಮಾಡಿದೆ. ಕಳೆದ ಡಿಸೆಂಬರ್ 2022ರಲ್ಲಿ 40,043 ಯುನಿಟ್ ಸೇಲ್ ಮಾಡಿತ್ತು.

ಭಾರತದಲ್ಲಿ ಭಾರೀ ವೇಗವಾಗಿ ಮುನ್ನುಗುತ್ತಿದೆ ಟಾಟಾ.. ನಂಬರ್ 1 ಆಗುತ್ತಾ?

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಟಾಟಾ ಮೋಟಾರ್ಸ್ ಇವಿ ಮಾರಾಟದಲ್ಲೂ ಉತ್ತಮ ಸಾಧನೆಯನ್ನು ಮಾಡಿದೆ. ಜನವರಿ ತಿಂಗಳಲ್ಲಿ ಬರೋಬ್ಬರಿ 4,133 ಇವಿಗಳನ್ನು ಸೇಲ್ ಮಾಡಿದೆ. ವರ್ಷದಿಂದ ವರ್ಷದ (YoY) ಮಾರಾಟ ಪ್ರಮಾಣದಲ್ಲಿ ಶೇಕಡ 39% ಪ್ರಗತಿಯನ್ನು ದಾಖಲಿಸಿದೆ. ಕಳೆದ ವರ್ಷದ ಅಂದರೆ 2022ರ ಜನವರಿಯಲ್ಲಿ 2,982 ಎಲೆಕ್ಟ್ರಿಕ್ ವಾಹನಗಳನ್ನು ಸೇಲ್ ಮಾಡಿತ್ತು. ಈ ಮೂಲಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲೂ ವೇಗವಾಗಿ ಮುನ್ನುಗ್ಗುತ್ತಿದೆ.

ಇಷ್ಟೇಅಲ್ಲದೆ, ಟಾಟಾ ಮೋಟಾರ್ಸ್, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ತನ್ನ ಮಾರಾಟವನ್ನು ವೃದ್ಧಿಸಿಕೊಂಡಿದೆ. ಈ ಜನವರಿ ತಿಂಗಳಲ್ಲಿ 302 ಯುನಿಟ್ ಗಳನ್ನು ಸೇಲ್ ಮಾಡುವ ಮೂಲಕ ವರ್ಷದಿಂದ ವರ್ಷ (YoY)ಕ್ಕೆ ಶೇಕಡ 83% ಮಾರಾಟ ಪ್ರಗತಿಯನ್ನು ದಾಖಲಿಸಿದ್ದು, 2022ರಲ್ಲಿ 165 ಯುನಿಟ್ ಗಳನ್ನು ಮಾರಾಟ ಮಾಡಿತ್ತು. ಜೊತೆಗೆ ಕಂಪನಿಯು ನಿನ್ನೆಯಿಂದ (ಫೆಬ್ರುವರಿ 1) ಜಾರಿಗೆ ಬರುವಂತೆ ತನ್ನ ICE ಚಾಲಿತ ಕಾರುಗಳ ದರವನ್ನು ಏರಿಸಿದೆ. ಇನ್‌ಪುಟ್ ವೆಚ್ಚಗಳ ಏರಿಕೆಯಿಂದಾಗಿ ಬೆಲೆ ಹೆಚ್ಚಳ ಎಂದು ತಿಳಿಸಿದೆ.

ಟಾಟಾ ಕಂಪನಿಯು ಶೇಕಡ 1.2% ಬೆಲೆ ಏರಿಕೆ ಮಾಡಿದೆ. ಆದರೆ, ವಿವಿಧ ಮಾದರಿಗಳಿಗೆ ಅನುಗುಣವಾಗಿ ಅದು ಬೇರೆ-ಬೇರೆಯಾಗಿರುತ್ತದೆ. ಗ್ರಾಹಕರಿಗೆ ಕೈಗೆಟುಕುವ ಕಾರುಗಳೆಂದು ಖ್ಯಾತಿಗಳಿಸಿರುವ ಟಾಟಾ ಟಿಯಾಗೊ, ಪಂಚ್, ಟಿಗೊರ್, ಆಲ್ಟ್ರೋಜ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಮೇಲೆ ಇದು ಪರಿಣಾಮ ಬೀರಲಿದೆ. ಅಲ್ಲದೆ, ಮತ್ತೊಂದು ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ, ತನ್ನ ಹಲವು ಮಾದರಿಗಳ ಬೆಲೆಯನ್ನು ಶೇಕಡ 1.1% ಹೆಚ್ಚಿಸಿದೆ. ವೆಚ್ಚಗಳನ್ನು ಸರಿದೂಗಿಸಲು ಮುಂಬರುವ ದಿನಗಳಲ್ಲಿ ವಿವಿಧ ವಾಹನ ತಯಾರಕ ಕಂಪನಿಗಳು ಬೆಲೆ ಏರಿಸುವ ಸಾಧ್ಯತೆಯಿದೆ.

ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಆಲ್ಟ್ರೋಜ್ ಹಾಗೂ ಪಂಚ್ CNG ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ. ಇವೆರೆಡು ಮಾದರಿಗಳನ್ನು ಕೆಲದಿನಗಳ ಹಿಂದಷ್ಟೇ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿತ್ತು. ಈ ಕಾರುಗಳು ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ ಎಂದು ಹೇಳಬಹುದು. ಇವುಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಆಲ್ಟ್ರೋಜ್ ಹಾಗೂ ಪಂಚ್ CNG ಆವೃತ್ತಿಗಳು 1.2-ಲೀಟರ್, 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಇದು 86 bhp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. CNG ಮೋಡ್ ನಲ್ಲಿ ಈ ಕಾರುಗಳು ಕೊಂಚ ಕಡಿಮೆ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇವು 72 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಆದರೆ, ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದೆ. ಈ ಕಾರುಗಳು, 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು. ಟಾಟಾ ಕಂಪನಿ, ಇವುಗಳಿಗೆ AMT (ಆಟೋಮೆಟಿಕ್ ಮ್ಯಾನುವಲ್) ಆಯ್ಕೆಯನ್ನು ನೀಡಬಹುದು.

ಟಾಟಾ ಮೋಟಾರ್ಸ್ ತನ್ನ ಗಮನವನ್ನು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯತ್ತ ಹರಿಸಿದ್ದು, ಟಿಯಾಗೊ ಇವಿ ಸದ್ಯ ಅಗ್ಗದ ಬೆಲೆಯ ಕಾರಾಗಿದೆ. ರೂ.8.49 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 315 km ರೇಂಜ್ ನೀಡುವ ಸಾಮರ್ಥ್ ಹೊಂದಿದೆ. ಜನವರಿ ತಿಂಗಳ ಮಾರಾಟ ಪ್ರಮಾಣವನ್ನು ಗಮನಿಸಿದಾಗ ಟಾಟಾ ಉತ್ತಮ ಪ್ರಗತಿಯನ್ನು ದಾಖಲಿಸಿದೆ ಎಂದು ಹೇಳಬಹುದು. ಮುಂಬರುವ ತಿಂಗಳಲ್ಲಿ ಸಾಲು-ಸಾಲು ಹಬ್ಬಗಳು ಬರುವುದರಿಂದ ಟಾಟಾ ಮೋಟಾರ್ಸ್ ಮತ್ತಷ್ಟು ಉತ್ತಮ ಸಾಧನೆಯನ್ನು ಮಾಡಲಿದೆ ಎಂದು ಹೇಳಬಹದು.

Most Read Articles

Kannada
English summary
Tata motors 18 persent growth in january 2023 details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X