ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..

ಪ್ರತಿಯೊಬ್ಬರು ಜೀವನದಲ್ಲಿ ಕಾರು ಖರೀದಿಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ, ಒಂದೇ ಬಾರಿಗೆ ಹಣ ಪಾವತಿಸಲು ಆಗುವುದಿಲ್ಲ. ಅಂತಹವರಿಗಾಗಿ ವಾಹನ ತಯಾರಕ ಕಂಪನಿಗಳು ಕಡಿಮೆ ಡೌನ್ ಪೇಮೆಂಟ್ ಹಾಗೂ ಇಎಂಐ ಆಯ್ಕೆಯನ್ನು ನೀಡುತ್ತವೆ. ಇಲ್ಲಿ ಕೇವಲ 2 - 3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಖರೀದಿಸಬಹುದಾದ ವಾಹನಗಳ ಬಗ್ಗೆ ವಿವರಿಸಿದ್ದೇವೆ.

ಟಾಟಾ ಪಂಚ್ ಪ್ಯೂರ್ (Tata Punch's Pure):
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟಾಟಾ ಕಂಪನಿಯ ಅಗ್ಗದ ಬೆಲೆಯ ಕಾರಾಗಿರುವ ಪಂಚ್ ಪ್ಯೂರ್ ರೂ.5.97 ಲಕ್ಷ ಆರಂಭಿಕ ಬೆಲೆಯನ್ನು (ಎಕ್ಸ್ ಶೋರೂಂ) ಬೆಲೆ ಹೊಂದಿದೆ. ಆನ್ ರೋಡ್ ಬೆಲೆ ರೂ.6.5 ಲಕ್ಷ ಇದೆ. ನೀವು ಈ ಕಾರನ್ನು ಖರೀದಿಸಲು ಬಯಸಿದರೆ ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಏಳು ವರ್ಷಗಳಿಗೆ ಮಾಸಿಕ ರೂ.7128 ಇಎಂಐ ಕಟ್ಟಬೇಕು.

ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..

ಟಾಟಾ ಪಂಚ್ ಪ್ಯೂರ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 1199 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 84.48 bhp ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 18.97 kmpl ಮೈಲೇಜ್ ನೀಡಲಿದೆ. ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಂಟಿ ಲಾಕ್ ಬ್ರೇಕಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ನಿಸ್ಸಾನ್ ಮ್ಯಾಗ್ನೆಟಿಯಾ XE (Nissan Magnite XE):
ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಕಡಿಮೆ ಬೆಲೆಯ ಕಾರುಗಳಲ್ಲಿ ನಿಸ್ಸಾನ್ ಮ್ಯಾಗ್ನೆಟಿಯಾ XE ಕೂಡ ಪ್ರಮುಖವಾಗಿದೆ. ರೂ.5.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಆನ್ ರೋಡ್ ದರ 6.5 ಲಕ್ಷ ಇದೆ ಎಂದು ಹೇಳಬಹುದು. ಈ ಕಾರನ್ನು ಖರೀದಿಸುವ ಗ್ರಾಹಕರು, ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಬೇಕು. ತಿಂಗಳಿಗೆ ರೂ.7128ಗಳಂತೆ ಏಳು ವರ್ಷ ಇಎಂಐ ಪಾವತಿಸಬೇಕು.

ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..

ನಿಸ್ಸಾನ್ ಮ್ಯಾಗ್ನೆಟಿಯಾ XE ಕಾರು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. 999 ಸಿಸಿ ಪೆಟ್ರೋಲ್ ಎಂಜಿನ್ ಮೂಲಕ ಚಾಲಿತವಾಗಲಿದ್ದು, 71.02 bhp ಪವರ್, 96 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 18.75 kmp ಮೈಲೇಜ್ ನೀಡಲಿದೆ. ಬ್ಲೇಡ್ ಸಿಲ್ವರ್, ಸ್ಟಾರ್ಮ್ ವೈಟ್, ಓನಿಕ್ಸ್ ಬ್ಲಾಕ್ ಸೇರಿದಂತೆ ಹತ್ತು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಅಲಾಯ್ ವೀಲ್ಸ್, ಫಾಗ್ ಲೈಟ್ಸ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

ಹ್ಯುಂಡೈ ವೆನ್ಯೂ ಇ (Hyundai Venue E):
ಇದು ಕೂಡ ಮಧ್ಯಮ ವರ್ಗದ ಜನರು ಖರೀದಿಸಬಹುದಾದ ಕಾರಾಗಿದೆ. ಹೊಸ ಹ್ಯುಂಡೈ ವೆನ್ಯೂ ಇ ರೂ.7.61 ಲಕ್ಷ (ಎಕ್ಸ್ ಶೋರೂಂ) ಪ್ರಾರಂಭಿಕ ಬೆಲೆಯನ್ನು ಹೊಂದಿದೆ. ರೂ.8.4 ಲಕ್ಷ ಆನ್ ರೋಡ್ ದರದಲ್ಲಿ ಸಿಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಕಾರು ಖರೀದಿಸಲು ಗ್ರಾಹಕರು, ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಏಳು ವರ್ಷಗಳ ಅವಧಿಗೆ ರೂ.8552 ಇಎಂಐ ಕಟ್ಟಬೇಕು.

ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..

ಹೊಸ ಹ್ಯುಂಡೈ ವೆನ್ಯೂ ಇ ಎಂಜಿನ್ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು 1197 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.80 bhp ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಅಲಾಯ್ ವೀಲ್ಸ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಎಂಜಿನ್ ಸ್ಟಾರ್ಟ್, ಸ್ಟಾಪ್ ಬಟನ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಮಾರುತಿ ಸುಜುಕಿ ಬ್ರೆಝಾ Lxi (Maruti Suzuki Brezza Lxi):
ದೇಶೀಯ ಮಾರುಕಟ್ಟೆಯಲ್ಲಿ ಎಲ್ಲರೂ ಇಷ್ಟಪಟ್ಟು ಖರೀದಿ ಮಾಡುವ ಮಾರುತಿ ಸುಜುಕಿ ಬ್ರೆಝಾ Lxi, ರೂ.7.99 ಲಕ್ಷ ಎಕ್ಸ್ ಶೋರೂಂ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಆನ್ ರೋಡ್ ಬೆಲೆ ರೂ.8.90 ಲಕ್ಷ ಇದ್ದು, ಕೊಂಚ ಮಟ್ಟಿಗೆ ಅಗ್ಗವಾಗಿದೆ. ಗ್ರಾಹಕರು ಈ ಕಾರನ್ನು ಖರೀದಿಸಲು ಬಯಸಿದರೆ, ರೂ.3 ಲಕ್ಷ ಡೌನ್ ಪೇಮೆಂಟ್ ಕಟ್ಟಬೇಕು. ಬಳಿಕ, 7 ವರ್ಷಗಳ ಅವಧಿಗೆ ರೂ.9502 ಇಎಂಐ ಪಾವತಿಸಬೇಕು.

ಈ ಕಾರು, 1462 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 101.65 bhp ಗರಿಷ್ಠ ಪವರ್, 136.8nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 20.15 kmpl ಮೈಲೇಜ್ ನೀಡಲಿದೆ. ಮ್ಯಾಗ್ಮಾ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ಒಂಬತ್ತು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಇಷ್ಟೇ ಅಲ್ಲದೆ, ರೆನಾಲ್ಟ್ ಕಿಗರ್ RXE, ಕಿಯಾ ಸೊನೆಟ್ HTE ಹಾಗೂ ಟಾಟಾ ನೆಕ್ಸನ್ XE ಅತಿ ಕಡಿಮೆ ಬೆಲೆಯ ಡೌನ್ ಪೇಮೆಂಟ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ನಿಮ್ಮ ಬಜೆಟ್ ಅನುಗುಣವಾಗಿ ಖರೀದಿ ಮಾಡಿದರೆ ಒಳ್ಳೆಯದು.

Most Read Articles

Kannada
English summary
Tata punch brezza hyundai venue lowest down payment details kannada
Story first published: Thursday, January 26, 2023, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X