ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!

ಪ್ರಮುಖ ವಾಹನ ತಯಾರಕ ಕಂಪನಿ ಹೋಂಡಾ ತಯಾರಿಸುವ ಕಾರುಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಅದಕ್ಕೆ ತಕ್ಕಂತೆ ಕಂಪನಿಯು ನವೀನ ವೈಶಿಷ್ಟ್ಯ ಹೊಂದಿರುವ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಹೋಂಡಾ, ಎರಡು ಸೆಡಾನ್ ಸೇರಿದಂತೆ ಒಂದು ಎಸ್‌ಯುವಿಯನ್ನು 2024ರೊಳಗೆ ಭಾರತೀಯ ಖರೀದಿದಾರರಿಗೆ ನೀಡಲು ಮುಂದಾಗಿದೆ.

3ನೇ ತಲೆಮಾರಿನ ಹೋಂಡಾ ಅಮೇಜ್:
ಸದ್ಯ ಹೋಂಡಾ ಕಂಪನಿಯು ಮೂರನೇ ತಲೆಮಾರಿನ ಅಮೇಜ್ ಕಾರನ್ನು ತಯಾರಿಸುವ ಕಾರ್ಯದಲ್ಲಿ ನಿರತವಾಗಿದೆ. ಇದು ಬಹುತೇಕ 2024ಕ್ಕೆ ಭಾರತೀಯ ಮಾರುಕಟ್ಟೆಗೆ ಬರಬಹುದು. ಪ್ರಸ್ತುತ ಖರೀದಿಗೆ ಲಭ್ಯವಿರುವ ಅಮೇಜ್ ಪ್ಲಾಟ್‌ಫಾರ್ಮ್‌ನ್ನು ಆಧರಿಸಿರಲಿದ್ದು, ವೈಶಿಷ್ಟ್ಯಗಳ ವಿಚಾರದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ ಎಂದು ವರದಿಯಾಗಿದೆ. ಈ ಕಾರಿನ ಹೊರಭಾಗದ ವಿನ್ಯಾಸವನ್ನು ಐದನೇ ತಲೆಮಾರಿನ ಸಿಟಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅಕಾರ್ಡ್‌ ಕಾರಿನ ಮಾದರಿಗೆ ಹೋಲಿಕೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!

ಕ್ಯಾಬಿನ್ ಮತ್ತಷ್ಟು ಆಕರ್ಷಕವಾಗಿರುವಂತೆ ವಿನ್ಯಾಸಗೊಳಿಸಲು ಕಂಪನಿ ಮುಂದಾಗಿದ್ದು, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರುವ ಸಾಧ್ಯತೆಯಿದ್ದು, ಜೊತೆಗೆ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್ ಫೋರ್-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಡೀಸೆಲ್ ಎಂಜಿನ್ ಆಯ್ಕೆಯನ್ನು ಕಂಪನಿ ಕೈಬಿಡಲಿದೆ ಎಂದು ಹೇಳಲಾಗಿದೆ. ಈ ಕಾರು, ಮಾರುಕಟ್ಟೆಗೆ ಬಂದ ಮೇಲೆ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೋಂಡಾ ಮಿಡ್‌ಸೈಜ್ ಎಸ್‌ಯುವಿ:
ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ದಪಡಿಸುತ್ತಿರುವ ಈ ಹೋಂಡಾ ಮಿಡ್‌ಸೈಜ್ ಎಸ್‌ಯುವಿಯನ್ನು ಈಗಾಗಲೇ ಹಲವು ಬಾರಿ ಪರೀಕ್ಷಿಸಲಾಗಿದ್ದು, ಹಬ್ಬದ ಸೀಸನ್ ನಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಇದು ಅಮೇಜ್‌ ಕಾರಿನ ಮಾಡಿಫೈ ಮಾಡಿರುವ ಪ್ಲಾಟ್‌ಫಾರ್ಮ್‌ನ್ನು ಆಧರಿಸಲಿದ್ದು, ಹೋಂಡಾ ಸಿಟಿ ಹೊಂದಿರುವ 1.5-ಲೀಟರ್ i-VTEC ಪೆಟ್ರೋಲ್ ಹಾಗೂ 1.5-ಲೀಟರ್ e:HEV ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಖರೀದಿಗೆ ದೊರೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!

ಹೋಂಡಾ ಸಿಟಿ ಫೇಸ್‌ಲಿಫ್ಟ್:
ದೇಶದಲ್ಲಿ ಅತಿಹೆಚ್ಚು ಗ್ರಾಹಕರು ಇಷ್ಟಪಡುವ ಕಾರುಗಳಲ್ಲಿ ಹೋಂಡಾ ಸಿಟಿ ಪ್ರಮುಖವಾಗಿದೆ. ಫೇಸ್‌ಲಿಫ್ಟ್ ಆವೃತ್ತಿಯಾಗಿ ಮುಂದಿನ ತಿಂಗಳು ಮಾರುಕಟ್ಟೆಗೆ ಬರುತ್ತಿದೆ. ಇದು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. 121 hp ಪವರ್ ಉತ್ಪಾದಿಸುವ 1.5-ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು. ಇಲ್ಲವೇ, 126 hp ಪವರ್ ಉತ್ಪಾದಿಸುವ 1.5-ಲೀಟರ್ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿರಬಹುದು.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಬ್ಯವಿರುವ ಹೋಂಡಾ ಸಿಟಿ, ರೂ.11.87 ಲಕ್ಷದಿಂದ ರೂ.15.62 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, V, VX ಮತ್ತು ZX ಎಂಬ ಮೂರು ರೂಪಾಂತರಗಳಲ್ಲಿ ದೊರೆಯಲಿದೆ. ಐದನೇ ತಲೆಮಾರಿನ ಹೋಂಡಾ ಸಿಟಿ, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಎಂಬ ಐದು ಬಣ್ಣಗಳನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 121 PS ಪವರ್, 145 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 17.8 kmpl ಇಂಧನ ದಕ್ಷತೆಯನ್ನು ಹೊಂದಿದೆ.

ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಹೋಂಡಾ ಅಮೇಜ್, ರೂ.6.89 ಲಕ್ಷದಿಂದ ರೂ.9.48 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದೆ. ಇದು ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, E, S ಮತ್ತು VX. ಜೊತೆಗೆ ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್ ಎಂಬ ಐದು ಬಣ್ಣಗಳ ಆಯ್ಕೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 PS ಪವರ್ ಹಾಗೂ 110 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಒಟ್ಟಾರೆಯಾಗಿ ಜಪಾನ್ ಮೂಲಕದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೋಂಡಾ ತನ್ನ ಮೂರು ಹೊಚ್ಚ ಹೊಸ ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ಇತರೆ ವಾಹನ ತಯಾರಕ ಕಂಪನಿಗಳು ತಯಾರಿಸುವ ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ಮುಂದಾಗಿದ್ದು, ನೂತನ ಕಾರುಗಳು ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲು ರೆಡಿಯಾಗಿದ್ದು, ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಾಗಿದೆ ಎಂದು ಹೇಳಬಹುದು.

Most Read Articles

Kannada
Read more on ಹೋಂಡಾ honda
English summary
Three honda cars launched soon india details kannada
Story first published: Friday, February 3, 2023, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X