ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು

ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಅನೇಕ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾದವು. ಈ ವರ್ಷವು ವಿವಿಧ ಕಂಪನಿಯ ಇವಿಗಳು ಲಾಂಚ್ ಆಗುವ ಸಾಧ್ಯತೆಯಿದೆ. ಹೆಚ್ಚುತ್ತಿರುವ ಇಂಧನ ವೆಚ್ಚಗಳಿಂದ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡಿದ್ದು, ಮುಂಬರುವ ಟಾಪ್ ಎಲೆಕ್ಟ್ರಿಕ್ 5 ಕಾರುಗಳು ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.

ಸಿಟ್ರಸ್ eC3:
ಸಿಟ್ರಸ್ ಇಂಡಿಯಾ ಇತ್ತೀಚೆಗೆ 'eC3' ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಕಾರಿಗಾಗಿ ಬುಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು 25,000 ರೂ. ಪಾವತಿಸಿ ಬುಕ್ ಮಾಡಬಹುದು. ಫೆಬ್ರವರಿ ವೇಳೆಗೆ ಸಿಟ್ರಸ್ eC3 ಶೋರೂಂ ತಲುಪಲಿದ್ದು, ಅಷ್ಟರಲ್ಲಿ ಬೆಲೆ ಬಗ್ಗೆಯು ಮಾಹಿತಿ ಸಿಗಲಿದೆ. ಈ ಕಾರು, ಒಂದೇ 29.2 kWh ಬ್ಯಾಟರಿ ಪ್ಯಾಕ್‌ ಹಾಗೂ 3.3 kW ಆನ್‌ಬೋರ್ಡ್ AC ಚಾರ್ಜರ್‌ನೊಂದಿಗೆ ಲಭ್ಯವಿದೆ. DC ಚಾರ್ಜರ್‌ನೊಂದಿಗೆ 57 ನಿಮಿಷಗಳಲ್ಲಿ eC3 ಬ್ಯಾಟರಿ ಶೇಕಡ 10-80% ಚಾರ್ಜ್ ಆಗಲಿದೆ.

ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು

ಹೋಮ್ ಚಾರ್ಜರ್‌ನಲ್ಲಿ, ಬ್ಯಾಟರಿಯು 10.5 ಗಂಟೆಗಳಲ್ಲಿ ಶೇಕಡ 10-100% ಚಾರ್ಜ್ ಆಗಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ eC3, 320 ಕಿಮೀ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದ್ದು, ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್‌ 57 hp ಗರಿಷ್ಠ ಪವರ್ ಮತ್ತು 143 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 6.8 ಸೆಕೆಂಡುಗಳಲ್ಲಿ 0-60 kmph ವೇಗವನ್ನು ಪಡೆಯಲಿದೆ. 107 kph ಟಾಪ್ ಸ್ವೀಡ್ ಹೊಂದಿದೆ. ಆಪಲ್ ಕಾರ್ ಪ್ಲೇ/ ಆಂಡ್ರಾಯ್ಡ್ ಆಟೋ ಜೊತೆಗೆ 10.2-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಏರ್‌ಬ್ಯಾಗ್‌, EBD ಜೊತೆಗೆ ABS ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ಪಂಚ್ ಇವಿ:
ಮುಂಬರುವ ದಿನಗಳಲ್ಲಿ ಟಾಟಾ ಪಂಚ್ ಇವಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ ಹೊಂದಿರುವ ರೀತಿಯೇ ಟಾಟಾ ಪಂಚ್ ಇವಿ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಜಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಶಕ್ತಿಯನ್ನು ಪಡೆಯಬಹುದು. ಈ ಕಾರು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಅವುಗಳೆಂದರೆ, ಮಿಡ್ ರೇಂಜ್ ಮತ್ತು ಲಾಂಗ್ ರೇಂಜ್. ಆದರೆ, ICE ರೂಪಾಂತರಕ್ಕಿಂತ ಬೇರೆಯಾಗಿ ಕಾಣಲು ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ಹೊಂದಿರಲಿದೆ.

ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು

ಪಂಚ್ ಇವಿಯ ಒಳಭಾಗದ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಬಹುತೇಕ ತನ್ನ ಪೆಟ್ರೋಲ್ ರೂಪಾಂತರಕ್ಕೆ ಹೋಲುತ್ತದೆ. ಜೊತೆಗೆ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ. ಇದು ಈ ಕಾರು ಖರೀದಿಸುವ ಹೊಸ ಗ್ರಾಹಕರನ್ನು ಆಕರ್ಷಿಸಬಹುದು. ಅಲ್ಲದೆ, ಬೆಲೆಯು ಗ್ರಾಹಕರ ಕೈಗೆಟುಕುವಂತೆ ಇರಲಿದ್ದು, ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ ರೂ.10 ಲಕ್ಷ, ಟಾಪ್ ಎಂಡ್ ಮಾದರಿ ಬೆಲೆ 14 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ವೋಲ್ವೋ C40 ರೀಚಾರ್ಜ್:
ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ವೋಲ್ವೋ C40 ರೀಚಾರ್ಜ್ ಇವಿ ಬಿಡುಗಡೆಯಾಗಲಿದೆ. XC40 ರೀಚಾರ್ಜ್ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ನಂತರ C40 ರೀಚಾರ್ಜ್ ಅನ್ನು ಲಾಂಚ್ ಮಾಡುವುದಾಗಿ ಕಂಪನಿ ಈ ಹಿಂದೆ ಘೋಷಿಸಿತ್ತು. ನೂತನ ಕಾರು, ಟ್ವಿನ್ ಎಲೆಕ್ಟ್ರಿಕ್ ಮೋಟಾರ್ ಆಯ್ಕೆಯನ್ನು ಹೊಂದಿದ್ದು, ಇದರಲ್ಲಿ ಬಳಕೆ ಮಾಡಿರುವ 78-kWh ಬ್ಯಾಟರಿ ಬರೋಬ್ಬರಿ 420 ರೇಂಜ್ ನೀಡಲಿದೆ. ಇದರಲ್ಲಿವ ಎಲೆಕ್ಟ್ರಿಕ್ ಮೋಟಾರ್ 408 bhp ಗರಿಷ್ಠ ಪವರ್ ಮತ್ತು 660 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸ್ಕೋಡಾ ಎನ್ಯಾಕ್ ಇವಿ:
ಇದು ಅತ್ಯುನ್ನತ ಕಾರ್ಯಕ್ಷಮತೆ ಹೊಂದಿರುವ ಇವಿ ಆಗಿದೆ ಎಂದು ಹೇಳಬಹುದು. 125kW DC ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವ 82kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಬರೋಬ್ಬರಿ 513km ರೇಂಜ್ ನೀಡುವ ಸಾಮರ್ಥ್ಯ ಪಡೆದಿದೆ. ಇದರಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್, 265 hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಕಾರು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದರಲ್ಲಿ ಪ್ರಮುಖವಾಗಿ ಕ್ಲೇಮೇಟ್ ಕಂಟ್ರೋಲ್, 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಒಂಬತ್ತು ಏರ್‌ಬ್ಯಾಗ್‌ಗಳು ಸೇರಿವೆ.

ಎಂಜಿ ಏರ್ ಇವಿ:
ಇದೊಂದು 2-ಡೋರ್, 4 ಸೀಟ್ ಹೊಂದಿರುವ ಎಲೆಕ್ಟ್ರಿಕ್ ಕಾರಾಗಿದೆ. ಸದ್ಯ ಇಂಡೋನೇಷ್ಯಾದಲ್ಲಿ ಮಾರಾಟವಾಗುವ ಲಭ್ಯವಿರುವ ವುಲಿಂಗ್ ಏರ್ ಇವಿಗೆ ಹೋಲುತ್ತದೆ. ಮುಂಬರುವ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಲಿದೆ. ಈ ಕಾರು ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗುವಂತೆ ಮಾಡಲು ಎಂಜಿ ಇದರ ಬ್ಯಾಟರಿ ಪ್ಯಾಕ್ ಅನ್ನು ಟಾಟಾ ಆಟೋಕಾಪ್ ನಲ್ಲಿ ರೆಡಿ ಮಾಡುತ್ತಿದೆ. ಇದು ಇನ್ಫೋಟೈನ್‌ಮೆಂಟ್ ಮತ್ತು ಕ್ಲಸ್ಟರ್ ಎರಡಕ್ಕೂ 10.25-ಇಂಚಿನ ಡಿಜಿಟಲ್ ಸ್ಕ್ರೀನ್‌ನ್ನು ಹೊಂದಿರುವುದು ಗಮನರ್ಹವಾಗಿದೆ.

ಎಂಜಿ ಏರ್ ಇವಿ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಅವುಗಳೆಂದರೆ, 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್‌. ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 300 km ರೇಂಜ್ ನೀಡಿದರೆ, ಚಿಕ್ಕ ಪ್ಯಾಕ್ ಹೊಂದಿರುವ ಕಾರು, ಕೇವಲ 200 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಈ ಹೊಸ ಕಾರು, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ಸಿಗಬಹುದು. ಬಹುತೇಕ 8-10 ಲಕ್ಷ ರೂ.(ಎಕ್ಸ್ ಶೋ ರೂಂ) ದರವನ್ನು ಹೊಂದಿರಲಿದೆ.

Most Read Articles

Kannada
English summary
Top 5 electric cars to buy this year details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X