ಭಾರತದದಲ್ಲಿ ಟ್ರೆಂಡಿಂಗ್‌ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!

ಭಾರತದ ಮಾರುಕಟ್ಟೆಯಲ್ಲಿ ವಿವಿಧ ವಾಹನ ತಯಾರಕ ಕಂಪನಿಗಳು, ಹಲವು ಬೇಡಿಕೆ ಹೊಂದಿರುವ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿವೆ. ಅವುಗಳಲ್ಲಿ ಕೆಲವನ್ನು ಖರೀದಿಸಲು ತಿಂಗಳುಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಸ್‌ಯುವಿಗಳ ಆಕರ್ಷಕ ವಿನ್ಯಾಸ, ಕಾರ್ಯವೈಖರಿ ಹಾಗೂ ವೈಶಿಷ್ಟ್ಯಗಳು ಬಹುತೇಕ ಖರೀದಿದಾರರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಮಹೀಂದ್ರಾ XUV700:
ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಎಸ್‌ಯುವಿಗಳಲ್ಲಿ ಮಹೀಂದ್ರಾ XUV700 ಪ್ರಮುಖವಾಗಿದೆ. ಬಿಡುಗಡೆಯಾದಾಗಿನಿಂದಲೂ ಗ್ರಾಹಕರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿದ್ದು, ಕೆಲವು ರೂಪಾಂತರಗಳನ್ನು ಖರೀದಿಸಲು ಗ್ರಾಹಕರು ಕನಿಷ್ಠ 18-20 ತಿಂಗಳವರೆಗೆ ಕಾಯಬೇಕಾಗಿದೆ. ಈ ಎಸ್‌ಯುವಿ ಖರೀದಿದಾರರನ್ನು ಆಕರ್ಷಿಸಲು ಕಾರಣಗಳೆಂದರೆ, ಅದರ ಲುಕ್ ಹಾಗೂ ಫೀಚರ್ಸ್. ಇದು ಪನೋರಮಿಕ್ ಸನ್ ರೋಫ್, ಫ್ರಂಟ್ ವೆಂಟಿಲೇಟೆಡ್ ಸೀಟ್ಸ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 9.2-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಭಾರತದದಲ್ಲಿ ಟ್ರೆಂಡಿಂಗ್‌ನಲ್ಲಿರುವ ಜನಪ್ರಿಯ ಕಾರುಗಳು

ಈ ಹೊಸ ಮಹೀಂದ್ರಾ XUV700 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.2-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು,185 hp ಗರಿಷ್ಠ ಪವರ್, 450 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಅಲ್ಲದೆ, ಇದರ 2.0-ಲೀಟರ್ ಪೆಟ್ರೋಲ್ ಎಂಜಿನ್, 197 hp ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ರೂ.13.45 ಲಕ್ಷದಿಂದ ರೂ.24.95 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್:
ದೇಶದಲ್ಲಿ ಇದನ್ನು ಗ್ರಾಹಕರು ತುಂಬಾ ಇಷ್ಟಪಟ್ಟು ಖರೀದಿ ಮಾಡುತ್ತಾರೆ. ನೂತನ ಮಹೀಂದ್ರಾ ಸ್ಕಾರ್ಪಿಯೊ ಎನ್ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅದು ಹೊಸದಾದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ ಎಂದು ಹೇಳಬಹುದು. 2.2-ಲೀಟರ್ ಡೀಸೆಲ್ ಎಂಜಿನ್‌ ಸಹಾಯದಿಂದ ಚಾಲಿತವಾಗಲಿದ್ದು, 185 hp ಗರಿಷ್ಠ ಪವರ್ ಮತ್ತು 420 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಭಾರತದದಲ್ಲಿ ಟ್ರೆಂಡಿಂಗ್‌ನಲ್ಲಿರುವ ಜನಪ್ರಿಯ ಕಾರುಗಳು

ಇಷ್ಟೇಅಲ್ಲದೆ ಈ ಸ್ಕಾರ್ಪಿಯೊ ಎನ್, 6 - ಸ್ಪೀಡ್ ಮಾನ್ಯುಯಲ್ ಇಲ್ಲವೇ 6 - ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದ್ದು, ಗ್ರಾಹಕರಿಗೆ ರೂ.12.5 - 23 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದರ ಖ್ಯಾತಿ ಎಷ್ಟಿದೆ ಅಂದರೆ, ನೀವು ಹೊಸ ಸ್ಕಾರ್ಪಿಯೊ ಎನ್ ಎಂಟ್ರಿ ಲೆವೆಲ್ ಹಾಗೂ ಮಿಡ್ ರೇಂಜ್ ವೇರಿಯಂಟ್ ವಿತರಣೆಯನ್ನು ಪಡೆಯಬೇಕಾದರೆ ಗರಿಷ್ಠವೆಂದರೂ 2 ವರ್ಷ ಕಾಯಬೇಕಾಗಿದೆ ಎಂದು ಹೇಳಬಹುದು.

ಮಹೀಂದ್ರಾ ಥಾರ್:
ಮತ್ತೊಂದು ಬೇಡಿಕೆಯಲ್ಲಿರುವ ಎಸ್‌ಯುವಿ ಇದಾಗಿದ್ದು, ಹೊಸ ಆವೃತ್ತಿ ಥಾರ್, RWD (ರೇರ್ ವೀಲ್ ಡ್ರೈವ್) ಡೀಸೆಲ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಬಹುತೇಕ 4WD (ಫೋರ್ ವೀಲ್ ಡ್ರೈವ್) ಆವೃತ್ತಿಗೆ ಹೋಲುತ್ತದೆ. ಇದರ 1.5-ಲೀಟರ್ ಡಿಸೇಲ್ ಎಂಜಿನ್ 117 hp ಪವರ್, 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿದೆ. 2.0-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿದ್ದು, ರೂ.9.9 ಲಕ್ಷದಿಂದ ರೂ.12.9 ಲಕ್ಷ ಬೆಲೆಯನ್ನು ಹೊಂದಿದೆ.

ಭಾರತದದಲ್ಲಿ ಟ್ರೆಂಡಿಂಗ್‌ನಲ್ಲಿರುವ ಜನಪ್ರಿಯ ಕಾರುಗಳು

ಟೊಯೊಟಾ ಹೈಕ್ರಾಸ್, ಟೊಯೊಟಾ ಹೈರಿಡರ್:
ಸದ್ಯ ಇವೆರೆಡು ಕಾರುಗಳ ಬುಕಿಂಗ್ ಮುಕ್ತಾಯಗೊಂಡಿದೆ. ಟೊಯೊಟಾ ಹೈಕ್ರಾಸ್, 2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 184 hp ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ರೂ.24 ಲಕ್ಷದಿಂದ 28 ಲಕ್ಷ ಬೆಲೆಯನ್ನು ಹೊಂದಿದೆ. ಟೊಯೊಟಾ ಹೈರಿಡರ್, 1.5-ಲೀಟರ್ ಪೆಟ್ರೋಲ್ & ಹೈಬ್ರಿಡ್ ಎಂಜಿನ್ ಪಡೆದಿದ್ದು, ಇದು 116 hp ಪವರ್, 137 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ರೂ.10.5 ಲಕ್ಷದಿಂದ 19.5 ಲಕ್ಷ ಬೆಲೆಯಿದೆ. ಇದರ ವಿತರಣೆ ಪಡೆಯಲು ಗ್ರಾಹಕರು ಒಂದು ವರ್ಷ ಕಾಯಬೇಕಾಗಿದೆ.

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಹುಂಡೈ ಕ್ರೆಟಾ & ಟಾಟಾ ಪಂಚ್:
ಭಾರತದ ಮಾರುಕಟ್ಟೆಯಲ್ಲಿ ಇವುಗಳನ್ನು ಅತ್ಯಧಿಕ ಗ್ರಾಹಕರು ಖರೀದಿಸುತ್ತಾರೆ ಎಂದು ಹೇಳಬಹುದು. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, 28 kmpl ಮೈಲೇಜ್ ನೀಡುತ್ತದೆ. ಗ್ರಾಹಕರ ಕೈಗೆಟುಕುವ ಬೆಲೆ ದೊರೆಯಲಿದ್ದು, ರೂ.10 ಲಕ್ಷದಿಂದ 19 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಹುಂಡೈ ಕ್ರೆಟಾವನ್ನು ರೂ.9 ರಿಂದ18 ಲಕ್ಷ ಬೆಲೆಯಲ್ಲಿ ಸಿಗಲಿದೆ. ಟಾಟಾ ಪಂಚ್ ಕಡಿಮೆ ಬೆಲೆಯ ಎಸ್‌ಯುವಿಯಾಗಿದ್ದು, ರೂ.5-8 ಲಕ್ಷಕ್ಕೆ ಖರೀದಿಸಬಹುದು.

Most Read Articles

Kannada
English summary
Top trending suvs in india details kannada
Story first published: Friday, January 27, 2023, 13:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X