ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು

ಭಾರತದಲ್ಲಿ ಮಾರುತಿ ಸುಜುಕಿ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಅವುಗಳ ಕಾರ್ಯವೈಖರಿ ಹಾಗೂ ವೈಶಿಷ್ಟ್ಯಗಳು ಖರೀದಿದಾರರನ್ನು ಆಕರ್ಷಿಸುತ್ತವೆ ಎಂದು ಹೇಳಬಹುದು. ಈ ವರ್ಷದ ಲಾಂಚ್ ಆಗಲಿರುವ ಬಹುನಿರೀಕ್ಷಿತ ಮಾರುತಿ ಕಾರುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮಾರುತಿ ಸುಜುಕಿ ಜಿಮ್ನಿ 5-ಡೋರ್:
ಆಫ್-ರೋಡ್ ವಾಹನ ಪ್ರಿಯರು ವರ್ಷಗಟ್ಟಲೆ ಕಾದ ಬಳಿಕ ಮಾರುತಿ ಸುಜುಕಿ ಕಂಪನಿ, ಜಿಮ್ನಿ 5-ಡೋರ್ ಎಸ್‌ಯುವಿಯನ್ನು ದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿತು. ಈಗಾಗಲೇ ಜಿಮ್ನಿ 5-ಡೋರ್ ಬುಕಿಂಗ್‌ಗಳು ಆರಂಭವಾಗಿದ್ದು, ಗ್ರಾಹಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡಲಿದೆ.

ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು

ನೂತನ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು,105 PS ಗರಿಷ್ಠ ಪವರ್ ಮತ್ತು 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5-ಸ್ಪೀಡ್ MT (ಮ್ಯಾನುವಲ್ ಟ್ರಾನ್ಸ್ಮಿಷನ್) ಅಥವಾ 4-ಸ್ಪೀಡ್ AT (ಅಟೋಮೆಟಿಕ್ ಟ್ರಾನ್ಸ್ಮಿಷನ್) ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ. ಆಲ್ ಗ್ರಿಪ್ ಪ್ರೊ 4WD ಸಿಸ್ಟಮ್ ಮೂಲಕ ನಾಲ್ಕು ವೀಲ್ಸ್ ಗಳಿಗೆ ಪವರ್ ವರ್ಗಾಯಿಸುತ್ತದೆ. ಈ ಜಿಮ್ನಿ, 9 ಲಕ್ಷ ಬೆಲೆಯಲ್ಲಿ ದೊರೆಯಬಹುದು.

ಮಾರುತಿ ಸುಜುಕಿ ಫ್ರಾಂಕ್ಸ್:
ಮತ್ತೊಂದು ಅತ್ಯಾಕರ್ಷಕ ಎಸ್‌ಯುವಿ 'ಫ್ರಾಂಕ್ಸ್' ಅನ್ನು ಆಟೋ ಎಕ್ಸ್‌ಪೋದಲ್ಲಿ ಜಿಮ್ನಿ 5-ಡೋರ್ ಜೊತೆಯಲ್ಲಿಯೇ ಪ್ರದರ್ಶಿಸಲಾಯಿತು. ಇದು ಬಲೆನೊದ ಕ್ರಾಸ್‌ಒವರ್ ವೇರಿಯೆಂಟ್ ಆಗಿದ್ದು, ಈಗಾಗಲೇ ಬುಕಿಂಗ್‌ ಕೂಡ ಶುರುವಾಗಿದೆ. ಈ ಫ್ರಾಂಕ್ಸ್ ಎಸ್‌ಯುವಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಅವುಗಳಲ್ಲಿ ಪ್ರಮುಖವಾಗಿ ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಕ್ರೂಸ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾಗಳು ಸೇರಿವೆ.

ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು

ಬಲೆನೊ ಆಧರಿತ ಈ ಕ್ರಾಸ್‌ಒವರ್‌ ಎಸ್‌ಯುವಿ ಫ್ರಾಂಕ್ಸ್ ಎಂಜಿನ್ ಕಾರ್ಯವೈಖರಿ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿ ಸಿಗಲಿದೆ. 1.2-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ 90 PS ಪವರ್ 113 Nm ಪೀಕ್ ಟಾರ್ಕ್ ಉತ್ಪಾದಿಸಿದರೆ, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 PS ಗರಿಷ್ಠ ಪವರ್ ಮತ್ತು 148 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಫ್ರಾಂಕ್ಸ್ ಎಸ್‌ಯುವಿ, ರೂ.7 ಲಕ್ಷದಿಂದ 7.5 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ:
ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯ ಗ್ರಾಹಕರು ಇಷ್ಟಪಟ್ಟು ಖರೀದಿಸುವ ಮಾರುತಿ ಸುಜುಕಿಯ ಬ್ರೆಝಾ, ಸಿಎನ್‌ಜಿ ವೇರಿಯಂಟ್ ಆಗಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಆದರೆ, ಲಾಂಚ್ ದಿನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತ್ತಿಲ್ಲ. ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಇದರ ಫಸ್ಟ್ ಲುಕ್ ನೋಡಿದವರೂ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಬಹದು. ಇದು ಫ್ಯಾಕ್ಟರಿಯಲ್ಲಿ ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಖರೀದಿಗೆ ಲಭ್ಯವಾಗಲಿರುವ ಭಾರತದಲ್ಲಿನ ಮೊದಲ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ.

ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು

ಹೊಸ ಬ್ರೆಝಾ ಸಿಎನ್‌ಜಿಯು ಅದರ ಹಿಂದಿನ ಆವೃತ್ತಿಯಂತೆ 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಬಹುದು. ಸಿಎನ್‌ಜಿ ಮೋಡ್‌ನಲ್ಲಿ, 88 PS ಗರಿಷ್ಠ ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ MT (ಮ್ಯಾನುವಲ್ ಟ್ರಾನ್ಸ್ಮಿಷನ್) ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದು ಒಂದು ಕೆಜಿ ಸಿಎನ್‌ಜಿ ಇಂಧನ ದಹಿಸಿ, 26 - 27 ಕಿಮೀ ಮೈಲೇಜ್ ನೀಡಲಿದ್ದು, ಹೆಚ್ಚಿನ ಕಾರ್ಯಕ್ಷಮತೆ ಯನ್ನು ಹೊಂದಿರುವುದರಿಂದ ಪೆಟ್ರೋಲ್ ಮಾದರಿಗಿಂತ ರೂ.90,000 ಹೆಚ್ಚಿನ ದರವನ್ನು ಹೊಂದಿರಲಿದೆಯಂತೆ.

ಇನ್ನೋವಾ ಹೈಕ್ರಾಸ್ ಆಧಾರಿತ ಎಂಪಿವಿ:
ಕಾರು ತಯಾರಿಕೆಯ ತಂತ್ರಜ್ಞಾನ ಹಂಚಿಕೊಳ್ಳುವ ಸಂಬಂಧ ಟೊಯೊಟಾ ಮತ್ತು ಸುಜುಕಿ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಇದರ ಭಾಗವಾಗಿ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ ಎಂಪಿವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಲಾಂಚ್ ಮಾಡಲು ಮಾರುತಿ ಸುಜುಕಿ ತೀರ್ಮಾನ ಮಾಡಿದೆ. ಇದು 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಬಹುದು.

Most Read Articles

Kannada
English summary
Upcoming maruti suzuki cars india details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X