ಇನ್ನು ಮುಂದೆ ಆಲ್ ಟರೈನ್ ವೆಹಿಕಲ್ ದೇಶದಲ್ಲೇ ನಿರ್ಮಾಣ

ದೇಶದ ಆಫ್ ರೈಡಿಂಗ್ ಚಾಲಕರಿಗೆ ಶುಭ ಸುದ್ದಿಯೊಂದು ಬಂದಿದ್ದು, ಇನ್ನು ಮುಂದೆ ಆಲ್ ಟರೈನ್ ವೆಹಿಕಲ್ (ಎಲ್ಲ ಭೂಪ್ರದೇಶಕ್ಕೆ ಹೊಂದಿಕೆಯಾದ ವಾಹನ) ಭಾರತದಲ್ಲೇ ಸ್ಥಳೀಯವಾಗಿ ಉತ್ಪಾದನೆಯಾಗಲಿದೆ.

ಈ ಸಂಬಂಧ ಹೊರಡಿಸಲಾದ ಪ್ರಸ್ತಾಪಕ್ಕೆ ಹೆದ್ದಾರಿ ಸಚಿವಾಲಯವು ಒಪ್ಪಿಗೆ ಸೂಚಿಸಿದೆ. ಇಂತಹ ಎಟಿವಿ ವಾಹನಗಳು ವಿಶೇಷ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಳ್ಳಲಿದ್ದು, ತನ್ನದೇ ಆದ ಸುರಕ್ಷಾ ಹಾಗೂ ಎಮಿಷನ್ ಮಾನದಂಡಗಳನ್ನು ಹೊಂದಿರಲಿದೆ.

ಆಮದು

ಆಮದು

ನಿಮ್ಮ ಮಾಹಿತಿಗಾಗಿ, ಸದ್ಯ ಆಲ್ ಟರೈನ್ ವಾಹನಗಳು ವಿದೇಶದಿಂದ ದೇಶಕ್ಕೆ ಆಮದಾಗುತ್ತಿದೆ. ಈ ಪೈಕಿ ಕೆಲವೊಂದು ಜನಪ್ರಿಯ ಮಾದರಿಗಳು ಮಾತ್ರ ಸ್ಥಳೀಯವಾಗಿ ಜೋಡಣೆಯಾಗುತ್ತಿದೆ.

ಬೆಲೆ ದುಬಾರಿ

ಬೆಲೆ ದುಬಾರಿ

ಹೀಗೆ ಆಮದು ಮಾಡಿರುವ ಎಟಿವಿ ವಾಹನಗಳ ಮೇಲೆ ತೆರಿಗೆ ಹೇರುವುದರಿಂದ ಬೆಲೆ ತುಂಬಾನೇ ದುಬಾರಿಯಾಗುತ್ತದೆ. ಇದು ಆಸಕ್ತ ಖರೀದಿಗಾರರನ್ನು ತಮ್ಮ ಬಯಕೆಯಿಂದ ದೂರವುಳಿಯುವಂತೆ ಪ್ರೇರೇಪಿಸುತ್ತದೆ.

ಪೊಲರಿಸ್

ಪೊಲರಿಸ್

ಈ ಎಲ್ಲದರ ನಡುವೆಯೂ ಕಳೆದೊಂದು ವರ್ಷದಲ್ಲಿ ಎಟಿವಿ ವಾಹನಗಳು ಅತಿ ಹೆಚ್ಚು ಪ್ರಚಾರವನ್ನು ಗಿಟ್ಟಿಸಿಕೊಂಡಿತ್ತು. ಇದರೆಲ್ಲ ಶ್ರೇಯಸ್ಸು ಅಮೆರಿಕದ ಪ್ರಖ್ಯಾತ ಎಟಿವಿ ತಯಾರಕರಾದ ಪೊಲರಿಸ್‌ಗೆ ಸಲ್ಲುತ್ತದೆ.

ಗುಜರಾತ್ ಪೊಲೀಸ್‌ಗೂ ಎಟಿವಿ

ಗುಜರಾತ್ ಪೊಲೀಸ್‌ಗೂ ಎಟಿವಿ

ಸರಕಾರದಿಂದ ಗ್ರೀಲ್ ಸಿಗ್ನಲ್ ಲಭಿಸಿದ ತಕ್ಷಣವೇ, ಜಗತ್ತಿನ ಅತಿದೊಡ್ಡ ಆಫ್ ರೋಡ್ ತಯಾರಕ ಸಂಸ್ಥೆಯಾಗಿರುವ ಪೊಲರಿಸ್ ದೇಶದಲ್ಲಿ ಸ್ಥಳೀಯ ಘಟಕ ಆರಂಭಿಸುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ಗುಜರಾತ್ ಕರಾವಳಿ ಪೊಲೀಸ್ ಮತ್ತು ಬಿಎಸ್‌ಎಫ್ ಪೊಲರಿಸ್ ಎಟಿವಿ ವಾಹನಗಳನ್ನು ತನ್ನ ತೆಕ್ಕೆಗೆ ಸೇರಿಸಿವೆ.

ಎಮಿಷನ್ ಸಮಸ್ಯೆ

ಎಮಿಷನ್ ಸಮಸ್ಯೆ

ಮುಂದಿನ ದಿನಗಳಲ್ಲಿ ಪೊಲರಿಸ್ ಹಾದಿಯನ್ನು ಜಪಾನ್‌ನ ಸುಜುಕಿ ಹಾಗೂ ಯಮಹಾ ಸಂಸ್ಥೆಗಳು ಸಹ ಹಿಂಬಾಲಿಸುವ ಸಾಧ್ಯತೆಯಿದೆ. ಮೂಲತ: ಪೆಟ್ರೋಲ್ ತಲಹದಿಯ ಮಿನಿ ಟ್ರಾಕ್ಟರ್ ಶೈಲಿ ಹೊಂದಿರುವ ಎಟಿವಿ ಯಾವುದೇ ರೀತಿಯ ಭೂಪ್ರದೇಶದಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಇಂಧನ ಕ್ಷಮತೆ ಹಾಗೂ ಎಮಿಷನ್ ತೃಪ್ತಿದಾಯಕವಾಗಿಲ್ಲ.

Most Read Articles
 
English summary
All-Terrain Vehicles (ATVs) will soon cost a lot less in India if a proposal approved by the highways ministry is implemented.
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X