ಅಶೋಕ್ ಲೇಲ್ಯಾಂಡ್ ಸ್ಟೈಲ್ ಮುಂದಿನ ತಿಂಗಳಲ್ಲಿ ಲಾಂಚ್?

By Nagaraja

ನಿಸ್ಸಾನ್ ಇವಾಲಿಯಾ ರಿ ಬ್ಯಾಡ್ಜ್ ಪಡೆದುಕೊಂಡಿರುವ ಅಶೋಕ್ ಲೇಲ್ಯಾಂಡ್ ಸ್ಟೈಲ್ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಮುಂದಿನ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಎಂದು ವಾಹನೋದ್ಯಮ ಮೂಲಗಳು ತಿಳಿಸಿವೆ.

ನಿಮ್ಮ ಮಾಹಿತಿಗಾಗಿ, ಅಶೋಕ್ ಲೇಲ್ಯಾಂಡ್ ಸ್ಟೈಲ್ ಆವೃತ್ತಿಯು ಮೊದಲ ಬಾರಿಗೆ 2012ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿತ್ತು. ತದಾ ಬಳಿಕ ಸುದೀರ್ಘ ಅವಧಿಯ ನಂತರ ಕಳೆದ ಜುಲೈ 16ರಂದು ಅನವಾರಣಗೊಂಡಿತ್ತು.

ಪ್ರಸ್ತುತ ಸ್ಟೈಲ್ ಎಂಪಿವಿ ಅಕ್ಟೋಬರ್ 5ರಂದು ಬಿಡುಗಡೆಯಾಗುವ ಕುರಿತು ಮಾಹಿತಿ ಲಭಿಸಿವೆ. ಇದು ಪ್ರಮುಖವಾಗಿಯೂ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಎರ್ಟಿಗಾ, ಷೆವರ್ಲೆ ಎಂಜಾಯ್ ಹಾಗೆಯೇ ಮುಂಬರುವ ಕಾರುಗಳಾದ ಹೋಂಡಾ ಮೊಬಿಲಿಯೊ ಮತ್ತು ದಟ್ಸನ್ ಗೊ ಪ್ಲಸ್ ಕಾರುಗಳಿಗೆ ನಿಕಟ ಪ್ರತಿಸ್ಪರ್ಧಿಯೆನಿಸಲಿದೆ.

ಶೀಘ್ರದಲ್ಲೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಲಾಂಚ್

ನೂತನ ಸ್ಟೈಲ್ ಎಂಪಿವಿ ವಿನ್ಯಾಸವು, ನಿಸ್ಸಾನ್ ಇವಾಲಿಯಾಗೆ ಸಾಮತ್ಯೆಯನ್ನು ಪಡೆದುಕೊಂಡಿದೆ. ಹಾಗಿದ್ದರೂ ಇದು ವಿಭಿನ್ನ ಹೆಡ್ ಲ್ಯಾಂಪ್ ಕ್ಲಸ್ಟರ್, ಫ್ರಂಟ್ ಬಂಪರ್ ಹಾಗೂ ಗ್ರಿಲ್ ಪಡೆದುಕೊಳ್ಳಲಿದೆ.

ಶೀಘ್ರದಲ್ಲೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಲಾಂಚ್

ಇನ್ನು ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರಿನ ಒಳಭಾಗದಲ್ಲಿ ಬ್ಲ್ಯಾಕ್ ಗ್ರೇ ವಿನ್ಯಾಸವನ್ನು ಕಲ್ಪಿಸಿಕೊಡಲಾಗಿದೆ. ಹಾಗೆಯೇ ಪ್ರಯಾಣಿಕರಿಗೆ ಆರಾಮದಾಯಕ ಪಯಣ ಖಾತ್ರಿಪಡಿಸುವ ನಿಟ್ಟಿನಲ್ಲಿ ಮೊನೊಕೊಕ್ಯೂ ಬಾಡಿ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಶೀಘ್ರದಲ್ಲೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಲಾಂಚ್

ನೂತನ ಸ್ಟೈಲ್ ಎಂಪಿವಿ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ನಿಸ್ಸಾನ್‌ನಲ್ಲಿರುವ ಎಂಜಿನ್ ಮಾನದಂಡಕ್ಕೆ ಸಮಾನವಾಗಿದ್ದು, 85 ಪಿಎಸ್ ಪವರ್ (200 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಶೀಘ್ರದಲ್ಲೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಲಾಂಚ್

ನಿಸ್ಸಾನ್ ಇವಾಲಿಯಾಗಿಂತಲೂ ವಿಭಿನ್ನವೆನಿಸಿಕೊಳ್ಳಲಿರುವ ಅಶೋಕ್ ಲೇಲ್ಯಾಂಡ್ ಸ್ಟೈಲ್ ಸಿಎನ್‌ಜಿ ಆವೃತ್ತಿಯಲ್ಲೂ ಲಭ್ಯವಿರಲಿದೆ. ಹಾಗೆಯೇ ಎರಡು ಹಾಗೂ ಮೂರು ಸಾಲಿನ ಸಿಟ್ಟಿಂಗ್ ವ್ಯವಸ್ಥೆಯೊಂದಿಗೆ ಆಗಮನವಾಗಲಿದೆ.

ಶೀಘ್ರದಲ್ಲೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಲಾಂಚ್

ಹಾಗೆಯೇ ಇವಾಲಿಯಾಗೆ ಹೋಲಿಸಿದರೆ ಅಶೋಕ್ ಲೇಲ್ಯಾಂಡ್ ಸ್ಟೈಲ್ 50,000 ರು.ಗಳಷ್ಟು ಕಡಿಮೆ ದರಗಳಲ್ಲಿ ದೊರಕಲಿದೆ. ಒಟ್ಟಿನಲ್ಲಿ ದೇಶದ ವಾಣಿಜ್ಯ ಮಾರುಕಟ್ಟೆನಲ್ಲಿ ಹೆಚ್ಚು ಹೆಸರು ಗಿಟ್ಟಿಸಿಕೊಂಡಿರುವ ಅಶೋಕ್ ಲೇಲ್ಯಾಂಡ್‌ನ ಈ ಹೊಸ ಅವತಾರ ಹೇಗೆ ಪ್ರಯಾಣಿಕ ಸೆಗ್ಮೆಂಟ್‌ನಲ್ಲೂ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Ashok Leyland has unveiled its 'Stile' MPV in July 2013. Ashok Leyland Stile MPV will be rolled out from the Nissan's manufacturing plant in Chennai before the upcoming festival season possibly on October 5, 2013.
Story first published: Thursday, September 26, 2013, 16:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X