ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

By Praveen Sannamani

ಐಷಾರಾಮಿ ಕಾರು ಸಂಸ್ಥೆಯಾಗಿರುವ ಆಡಿ ಇಂಡಿಯಾ, ಅತಿ ದುಬಾರಿ ಬೆಲೆಯ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಪ್ರಸ್ತುತ ಕಾರು ಜರ್ಮನಿಯ ವಾಹನ ತಯಾರಕ ಸಂಸ್ಥೆಯಿಂದ ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಗರಿಷ್ಠ ನಿರ್ವಹಣಾ ಸ್ಟೇಷನ್ ವ್ಯಾಗನ್ ಕಾರೆನಿಸಿಕೊಳ್ಳಲಿದೆ.

ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಹೊಸ ಹೊಸ ಯೋಜನೆಗಳನ್ನ ರೂಪಿಸುತ್ತಿರುವ ಆಡಿ ಸಂಸ್ಥೆಯು ಈ ಹಿಂದೆ 2015ರಲ್ಲಿ ಬಿಡುಗಡೆ ಮಾಡಲಾಗಿದ್ದ ಆರ್‌ಎಸ್6 ಅವಂತ್ ಕಾರುಗಳನ್ನು ಪರ್ಫಾಮೆನ್ಸ್ ಮಾದರಿಗಳಲ್ಲಿ ಇದೀಗ ಪರಿಚಯಿಸಲಾಗಿದ್ದು, ಹೊಸ ಕಾರಿನ ಬೆಲೆಯನ್ನ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1.65 ಕೋಟಿ ದರ ನಿಗದಿ ಮಾಡಲಾಗಿದೆ.

ಸಾಮಾನ್ಯ ಮಾದರಿಗಿಂತ ಎಂಜಿನ್ ವಿಭಾಗದಲ್ಲಿ ಗಣನೀಯ ಬದಲಾವಣೆ ಹೊಂದಿರುವ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರುಗಳು ಹೆಚ್ಚುವರಿಯಾಗಿ 45-ಬಿಎಚ್‌ಪಿ ಮತ್ತು 50-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

ಗರಿಷ್ಠ ನಿರ್ವಹಣಾ ಸ್ಟೇಷನ್ ವ್ಯಾಗನ್ ಕಾರೆನಿಸಿಕೊಳ್ಳಲಿರುವ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರುಗಳು ಸದ್ಯ ಹೊಸ ಎಂಜಿನ್ ಆಯ್ಕೆಯೊಂದಿಗೆ ವೇಗದಲ್ಲೂ ಬದಲಾವಣೆ ಕಂಡಿದ್ದು, ಕಾರಿನ ಪ್ರತಿ ವೆರಿಯೆಂಟ್‌ಗಳಲ್ಲೂ ಕ್ವಾಟ್ರೋ ಆಲ್-ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

5-ಲೀಟರ್(5,000 ಸಿಸಿ) ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರುಗಳು, 8-ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಹಾಯದೊಂದಿಗೆ 597-ಬಿಎಚ್‌ಪಿ ಮತ್ತು 750-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

ಈ ಮೂಲಕ ಆಡಿ ಪರ್ಫಾಮೆನ್ಸ್ ಕಾರು ಮಾದರಿಯು 3.9 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗದ ಸಾಮರ್ಥ್ಯವನ್ನ ಹೊಂದಿದ್ದು, ಪ್ರತಿ ಗಂಟೆಗೆ 250 ಕಿ.ಮಿ ಟಾಪ್ ಸ್ಪೀಡ್ ಗುಣ ಹೊಂದಿದೆ. ಆದ್ರೆ ಪರ್ಫಾಮೆನ್ಸ್ ಪ್ರಿಯರು ಇದೇ ಕಾರಿನಲ್ಲಿ ಡೈನಾಮಿಕ್ ಪ್ಯಾಕೇಜ್‌ನೊಂದಿಗೆ ಪ್ರತಿ ಗಂಟೆಗೆ 305 ಕಿ.ಮಿ ಟಾಪ್ ಸ್ಪೀಡ್ ಹೆಚ್ಚಿಸಿಕೊಳ್ಳಬಹುದಾಗಿದೆ.

ಆಡಿ ಸಂಸ್ಥೆಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರನ್ನ ಸಿದ್ದಗೊಳಿಸಿದ್ದು, ಕಾರಿನ ಒದಗಿಸಲಾಗಿರುವ ವಿಶ್ವದರ್ಜೆ ಸೌಲಭ್ಯಗಳು ಕಾರಿನ ಮೌಲ್ಯವನ್ನ ಹೆಚ್ಚಿಸಿವೆ ಎನ್ನಬಹುದು.

ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

ಹೊಸ ಕಾರಿನಲ್ಲಿ 21-ಇಂಚಿನ ಅಲಾಯ್ ವೀಲ್ಹ್‌ಗಳು, ಆರ್‌ಎಸ್ ಸ್ಪೋರ್ಟ್ ಎಕ್ಸಾಸ್ಟ್, ಮುಂಭಾಗದ ಗ್ರೀಲ್‌ನಲ್ಲಿ ಕ್ವಾಟ್ರೋ ಆಲ್ ವೀಲ್ಹ್ ಡ್ರೈವ್ ಬ್ಯಾಡ್ಜ್, ಅಡಾಪ್ಟಿವ್ ಏರ್ ಸಸ್ಷೆಷನ್ ಮತ್ತು ಹಿಂದಿನ ಮಾದರಿಗಿಂತ ಅಧಿಕ ಮಟ್ಟದ ಇಂಧನ ದಕ್ಷತೆ ಪರ್ಫಾಮನ್ಸ್ ಕಾರುಗಳಲ್ಲಿ ಹೆಚ್ಚಿಸಲಾಗಿದೆ.

ದುಬಾರಿ ಬೆಲೆಯ ಆಡಿ ಆರ್‌ಎಸ್6 ಅವಂತ್ ಪರ್ಫಾಮೆನ್ಸ್ ಕಾರು ಬಿಡುಗಡೆ

ಜೊತೆಗೆ ಕಾರಿನ ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ಕಾರು ಬರೋಬ್ಬರಿ 2 ಸಾವಿರ ಕೆ.ಜಿ ತೂಕ ಪಡೆದುಕೊಂಡಿದೆ. ಹೀಗಾಗಿ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿರುವ ಆಡಿ ಸಂಸ್ಥೆಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ ಕಾರನ್ನ ಹೊರತಂದಿರುವುದು ಹಲವು ಸೂಪರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

Most Read Articles

Kannada
Read more on audi super car
English summary
Audi RS6 Avant Performance Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X