ಯಾವೆಲ್ಲ ಎಸ್‌ಯುವಿ ಮೇಲೆ ಬಜೆಟ್ ಎಫೆಕ್ಟ್?

By Nagaraja

ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ 2013-14ನೇ ಸಾಲಿನ ಕೇಂದ್ರ ಬಜೆಟ್ ಸಂಸತ್ತಿನಲ್ಲಿ ಮಂಡಿಸಿದ್ದರು. ಪ್ರಸ್ತುತ ಬಜೆಟ್ ಆಟೋಮೊಬೈಲ್ ಮೇಲೆ ನೇರ ಪರಿಣಾಮ ಬೀರಲಿದ್ದು, ಲಗ್ಷುರಿ ಸೇರಿದಂತೆ ಎಸ್‌ಯುವಿ ಕಾರುಗಳ ದರಗಳಲ್ಲಿ ಭಾರಿ ಏರಿಕೆ ಕಂಡುಬರಲಿದೆ.

ಈ ನಡುವೆ ವಿತ್ತ ಸಚಿವರು ಘೋಷಣೆ ಮಾಡಿರುವ ಬಜೆಟ್‌ ಕೆಲವೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅವು ಏನೆಂದರೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಯಾವುದೆಂದು ವ್ಯಾಖ್ಯಾನಿಸುವುದು ಕಷ್ಟ. ಯಾಕೆಂದರೆ ಬಜೆಟ್ ಪ್ರಕಾರ ನಾಲ್ಕು ಮೀಟರ್‌ಗಿಂತಲೂ ಉದ್ದವಿರುವ ವಾಹನಗಳು ಎಸ್‌ಯುವಿ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ.

ಅಂದರೆ ಎಸ್‌ಯುವಿ ವಾಹನಗಳು ರಸ್ತೆ ಹಾಗೂ ನಿಲುಗಡೆ ಸ್ಥಳಗಳಲ್ಲಿ ಹೆಚ್ಚಿನ ಜಾಗ ಬಯಸುತ್ತಿದೆ. ಹೀಗಾಗಿ ಹೆಚ್ಚಿನ ತೆರಿಗೆ ಭರಿಸಲು ಅರ್ಹವಾಗಿದೆ ಎಂದು ಚಿದಂಬರಂ ನುಡಿದಿದ್ದರು. ಇದೇ ಕಾರಣಕ್ಕಾಗಿ ಎಸ್‌ಯುವಿ ಮೇಲಿನ ಅಬಕಾರಿ ಸುಂಕ ಶೇಕಡಾ 27ರಿಂದ 30ಕ್ಕೆ ಏರಿಸಲಾಗಿತ್ತು.

ಇಲ್ಲಿ ಕುತೂಹಲಕಾರಿ ಅಂಶವೆಂದರೆ ಮಹೀಂದ್ರ ಕ್ವಾಂಟೊ, ಎಸ್‌ಯುವಿ ತೆರಿಗೆಯಿಂದ ವಿನಾಯಿತಿ ಪಡೆಯಲಿದೆ. ಯಾಕೆಂದರೆ ಬಜೆಟ್ ಪ್ರಕಾರ ನಾಲ್ಕು ಮೀಟರ್ ಉದ್ದದ ಮಿತಿಯೊಳಗಿರುವ ವಾಹನಗಳಿಗೆ ತೆರಿಗೆ ವಿನಾಯಿತಿ ಸಿಗಲಿದೆ. ಹಾಗಿದ್ದರೆ ಕ್ವಾಂಟೊ ಎಸ್‌ಯುವಿ ಕಾರಾಲ್ಲವೇ ಎಂಬ ಅನುಮಾನ ಮೂಡುವುದು ಸಹಜವೇ ಸರಿ.

ಅದು ಏನೇ ಇರಲಿ ಐಷಾರಾಮಿ ಕಾರುಗಳ ಆಮದು ಸುಂಕವನ್ನು ಸಹ ಶೇಕಡಾ 75ರಿಂದ 100ಕ್ಕೆ ಏರಿಸಲಾಗಿದೆ. ಇದು ಕೂಡಾ ಲಗ್ಷುರಿ ಕಾರು ಪ್ರಿಯರ ಮೇಲೆ ನೇರ ಪರಿಣಾಮ ಬೀರಲಿದೆ. ವಿದೇಶದಿಂದ ಆಮದಾಗುವ ಕಾರು ಅಥವಾ ಬೈಕ್‌ಗಳನ್ನು ದೇಶದ ಅನೇಕ ಶ್ರೀಮಂತರು ಬಯಸುತ್ತಾರೆ. ಅವರಿಗೇನೂ ಈ ಹೆಚ್ಚಿನ ತೆರಿಗೆ ಹೆಚ್ಚಿನ ಪರಿಣಾಮ ಬೀರಲ್ಲ ಎಂಬುದು ಚಿದು ವಾದ...

ಈ ನಡುವೆ ಟ್ಯಾಕ್ಸಿ ಎಂದು ನೋಂದಾಯಿತ ಎಸ್‌ಯುವಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಸಂತಸದ ವಿಚಾರವಾಗಿದೆ. ಒಟ್ಟಿನಲ್ಲಿ ಬಜೆಟ್, ಎಸ್‌ಯುವಿ ಕಾರಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಲಭಿಸಲಿದೆ.

ಹಾಗಿದ್ದರೆ ಬನ್ನಿ ಯಾವುದೆಲ್ಲ ಎಸ್‌ಯುವಿ ಕಾರುಗಳ ದರ ಏರಿಕೆ ಕಾಣಲಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...

ಮಹೀಂದ್ರ ಎಕ್ಸ್‌ಯುವಿ 500

ಮಹೀಂದ್ರ ಎಕ್ಸ್‌ಯುವಿ 500

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

ಆಡಿ ಕ್ಯೂ3

ಆಡಿ ಕ್ಯೂ3

ಬಿಎಂಡಬ್ಲ್ಯು ಎಕ್ಸ್‌1

ಬಿಎಂಡಬ್ಲ್ಯು ಎಕ್ಸ್‌1

ಷೆವರ್ಲೆ ಕಾಪ್ಟಿವಾ

ಷೆವರ್ಲೆ ಕಾಪ್ಟಿವಾ

ಫೋರ್ಸ್ ಒನ್

ಫೋರ್ಸ್ ಒನ್

ಫೋರ್ಡ್ ಎಂಡೋವರ್

ಫೋರ್ಡ್ ಎಂಡೋವರ್

ಫೋರ್ಡ್ ಎಂಡೋವರ್

ಫೋರ್ಡ್ ಎಂಡೋವರ್

ಹೋಂಡಾ ಸಿಆರ್-ವಿ

ಹೋಂಡಾ ಸಿಆರ್-ವಿ

ಹ್ಯುಂಡೈ ಸಾಂತಾ ಫೆ

ಹ್ಯುಂಡೈ ಸಾಂತಾ ಫೆ

ನ್ಯೂ ಟೊಯೊಟಾ ಫೋರ್ಚುನರ್

ನ್ಯೂ ಟೊಯೊಟಾ ಫೋರ್ಚುನರ್

ಪಜೆರೊ ಸ್ಪೋರ್ಟ್

ಪಜೆರೊ ಸ್ಪೋರ್ಟ್

ರೆನೊ ಡಸ್ಟರ್

ರೆನೊ ಡಸ್ಟರ್

ರೆನೊ ಡಸ್ಟರ್

ರೆನೊ ಡಸ್ಟರ್

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸುಮೋ ಗೋಲ್ಡ್

ಟಾಟಾ ಸುಮೋ ಗೋಲ್ಡ್

ಟೊಯೊಟಾ ಫೋರ್ಚುನರ್

ಟೊಯೊಟಾ ಫೋರ್ಚುನರ್

Most Read Articles

Kannada
English summary
Union budget 2013 has increased the excise duty on SUVs, imported vehicles and both small and large cars.Check out, here are some SUVs whose are going to be more expensive.
Story first published: Saturday, March 2, 2013, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X