ಆಟೋ ಎಕ್ಸ್‌ಪೋ ಮಿಸ್ ಮಾಡಿದ್ರಾ? ಪರವಾಗಿಲ್ಲ ಬನ್ನಿ ಬೆಂಗಳೂರಿಗೆ

ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ವಾಹನ ಪ್ರದರ್ಶನ ಮೇಳ, 12ನೇ ಆಟೋ ಎಕ್ಸ್ ಪೋ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆದ್ಧೂರಿಯಾಗಿ ಸಂಪನ್ನಗೊಂಡಿತ್ತು. ಆದರೆ ಹಲವಾರು ಕಾರಣಾಂತರಗಳಿಂದಾಗಿ ಈ ಪ್ರತಿಷ್ಠಿತ ಆಟೋ ಎಕ್ಸ್ ಪೋವನ್ನು ವೀಕ್ಷಿಸುವ ಅವಕಾಶದಿಂದ ಅನೇಕರು ವಂಚಿತರಾಗಿದ್ದರು.

2014 ಆಟೋ ಎಕ್ಸ್ ಪೋ

ಚಿಂತೆ ಬೇಡ, ನೀವು ಬನ್ನಿ ಬೆಂಗಳೂರಿಗೆ, ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ಇಂಡಿಯಾವು, ನಿಮ್ಮ ತ್ರಿಡಿ ಟೈಮ್ ಮೆಷಿನ್ ಸಿದ್ಧಪಡಿಸಿದ್ದು, ಇದು ನಿಮ್ಮನ್ನು ಮತ್ತೆ ಆಟೋ ಎಕ್ಸ್ ಪೋದತ್ತ ಕೊಂಡೊಯ್ಯಲಿದೆ. 2014 ದೆಹಲಿ ಆಟೋ ಎಕ್ಸ್ ಪೋ ಸಂತೋಷವನ್ನು ಎಲ್ಲೆಡೆ ಪಸರಿಸುವುದು ಪೋರ್ಡ್ ಉದ್ದೇಶವಾಗಿದೆ. ಫೋರ್ಡ್ ಟೈಮ್ ಮೆಷಿನ್ ಮುಖಂತಾರ ನಿಮಗೆ 3ಡಿ ಚಿತ್ರಣದಲ್ಲಿ ಆಟೋ ಎಕ್ಸ್ ಪೋ ರೋಚಕ ಕ್ಷಣಗಳನ್ನು ಸವಿಯವಾಗಿದೆ.

ಆಟೋ ಎಕ್ಸ್‌ಪೋ ಮಿಸ್ ಮಾಡಿದ್ರಾ? ಪರವಾಗಿಲ್ಲ ಬನ್ನಿ ಬೆಂಗಳೂರಿಗೆ

ಈಗಾಗಲೇ ಫೆಬ್ರವರಿ 22 ಹಾಗೂ 23ರಂದು ಅನುಕ್ರಮವಾಗಿ ಮುಂಬೈ ಹಾಗೂ ಲಕ್ನೋ ನಗರಗಳನ್ನು ಪ್ರವೇಶಿಸಿರುವ ಫೋರ್ಡ್ ಟೈಮ್ ಮೆಷಿನ್ ಬೆಂಗಳೂರಿಗೂ ಕಾಲಿಟ್ಟಿದೆ. ಹೌದು, ಬೆಂಗಳೂರಿನ ಗರುಡ ಮಾಲ್‌ನಲ್ಲಿ ಮಾರ್ಚ್ 8 (ಇಂದು) ಹಾಗೂ 9ರಂದು (ನಾಳೆ) ಫೋರ್ಡ್ ಟೈಮ್ ಮೆಷಿನ್‌ನಲ್ಲಿ ಆಟೋ ಎಕ್ಸ್ ಪೋದ ಸುಂದರ ಕ್ಷಣಗಳು ಮೂಡಿಬರಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ನಿಮ್ಮ ಮಾಹಿತಿಗಾಗಿ, 2014 ಆಟೋ ಎಕ್ಸ್ ಪೋದಲ್ಲಿ ಸನ್ ರೂಫ್ ಹೊಂದಿದ್ದ ಇಕೊಸ್ಪೋರ್ಟ್ ಆವೃತ್ತಿಯನ್ನು ಪರಿಚಯಿಸಿತ್ತು.

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ಇನ್ನು ಫಿಗೊ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ಮಾತನಾಡುವುದಾದ್ಧಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರದಿದ್ದರೂ ಈ ಸಣ್ಣ ಕಾರಿನೊಳಗೆ ವೈಫೈ ಸೇವೆ ಹೆಚ್ಚು ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ

ಇನ್ನೊಂದೆಡೆ 2014 ಫೋರ್ಡ್ ಫಿಯೆಸ್ಟಾ ಫೇಸ್‌ಲಿಫ್ಟ್ ವರ್ಷನ್ ದೆಹಲಿ ಆಟೋ ಶೋದಲ್ಲಿ ಪ್ರದರ್ಶನ ಕಂಡಿತ್ತು.

ಫಿಗೊ ಕಾಂಪಾಕ್ಟ್ ಸೆಡಾನ್

ಫಿಗೊ ಕಾಂಪಾಕ್ಟ್ ಸೆಡಾನ್

ಈ ನಡುವೆ ಫಿಗೊ ಕಾಂಪಾಕ್ಟ್ ಸೆಡಾನ್ ಕಾರನ್ನು ಪರಿಚಯಿಸಿದ್ದ ಪೋರ್ಡ್, ನೆರೆದಿದ್ದವರನ್ನು ಸ್ಧಬ್ತಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇದು ಪ್ರಮುಖವಾಗಿಯೂ ಹೋಂಡಾ ಅಮೇಜ್ ಕಾರಿಗೆ ಪ್ರತಿಸ್ಪರ್ಧಿಯಾಗಿರಲಿದೆ.

Most Read Articles

Kannada
English summary
If you missed your opportunity to attend the 2014 Auto Expo, usually its a big loss for an auto enthusiast. However, Ford has build a Time Machine which will take you back to Auto Expo 2014.
Story first published: Saturday, March 8, 2014, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X