ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್

By Nagaraja

ಕಳೆದ ಕೆಲವು ಸಮಯಗಳಿಂದ ದೇಶದ ವಾಹನೋದ್ಯಮದಲ್ಲಿ ತೀವ್ರ ಕುತೂಹಲ ಮನೆ ಮಾಡುವಲ್ಲಿ ಹೋಂಡಾ ಜಾಝ್ ಯಶಸ್ವಿಯಾಗಿರುವುದಂತೂ ನಿಜ. ತವರೂರಾದ ಜಪಾನ್‌ನಲ್ಲಿ ಲಭಿಸಿದ ಅದೇ ಯಶಸ್ಸು ಹೋಂಡಾ ಜಾಝ್‌ಗೆ ಭಾರತದಲ್ಲೂ ಲಭಿಸಲಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ.

ವಿಷಯ ಏನೇ ಇರಲಿ ಜಾಝ್ ಭಾರತ ಮಾರುಕಟ್ಟೆ ಪ್ರವೇಶಿಸಲು ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ. ಅಂದರೆ ಮುಂಬರುವ ಹೊಸ ವರ್ಷಾರಂಭದಲ್ಲಿ ಬಹುನಿರೀಕ್ಷಿತ ಹೋಂಡಾ ಜಾಝ್ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್

ಸೆಗ್ಮೆಂಟ್ ಲೀಡರ್ ಎನಿಸಿಕೊಳ್ಳಲಿರುವ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಅತ್ಯುತ್ತಮ ವಿನ್ಯಾಸ ಕಾಪಾಡಿಕೊಂಡಿದೆ. ಈ ಮೂಲಕ ಹೋಂಡಾ ಅಮೇಜ್, ಸಿಟಿ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಸಂಸ್ಥೆ ಹೊಂದಿದೆ.

ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್

ಜಾಗತಿಕವಾಗಿ ಬಿಡುಗಡೆಯಾಗಿರುವ ಹೋಂಡಾ ಜಾಝ್ ಪೆಟ್ರೋಲ್ ಎಂಜಿನ್ ಮಾತ್ರ ಪಡೆದುಕೊಂಡಿದೆ. ಇದು 1.2 ಲೀಟರ್ ಹಾಗೂ 1.4 ಲೀಟರ್ ಐ-ವಿಟೆಕ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್

ಇದಕ್ಕೂ ಮಿಗಿಲಾಗಿ ಅಂತರಾಷ್ಟ್ರೀಯವಾಗಿ ಹೈಬ್ರಿಡ್ ಎಂಜಿನ್ ಸಹ ನೀಡಲಾಗುತ್ತಿದೆ. ಆದರೆ ಭಾರತಕ್ಕಿದು ಪರಿಚಯವಾಗುವುದು ಬಹುತೇಕ ಅನುಮಾನವಾಗಿದೆ. ಇದರ ಬದಲು ಎರಡು ಪೆಟ್ರೋಲ್ ಜತೆ ಡೀಸೆಲ್ ಎಂಜಿನ್ ಇರುವ ಸಾಧ್ಯತೆಯಿದೆ.

ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್

2014ರಲ್ಲಿ ಅತ್ಯಂತ ವಿಸ್ವಾಸಾರ್ಹ ಕಾರೆಂಬ ಪ್ರಶಸ್ತಿಗೆ ಭಾಜನವಾಗಿರುವ ಹೋಂಡಾ ಜಾಝ್‌ಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ದೊರಕುವ ಸಾಧ್ಯತೆಯಿದೆ. ಹಾಗಿದ್ದರೂ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬೆಲೆ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹಿಂದಿನ ಮಾದರಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಜಾಝ್ ಉತ್ಪಾದನೆಯನ್ನು ಸ್ಥಳೀಯವಾಗಿಸಿರುವುದು ಇದಕ್ಕಿರುವ ಪ್ರಮುಖ ಕಾರಣವಾಗಲಿದೆ.

Most Read Articles

Kannada
English summary
Honda had launched the Jazz in India a while ago, the hatchback was superior in all sense and was a segment leader. The Japanese manufacturer went all wrong with the promotions and the pricing of its vehicle.
Story first published: Thursday, June 12, 2014, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X