ಆಟೋ ಎಕ್ಸ್ ಪೋದಲ್ಲಿ ಹೋಂಡಾ ಸ್ಪೆಷಾಲಿಟಿ ಏನಾಗಿತ್ತು?

By Nagaraja

2014 ಆಟೋ ಎಕ್ಸ್ ಪೋದಲ್ಲಿ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಬೆಳವಣಿಗೆಯನ್ನು ಆಟೋ ವಲಯವು ಅತಿ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಯಾಕೆಂದರೆ ಇತ್ತೀಚೆಗಷ್ಟೇ ಅಮೇಜ್ ಹಾಗೂ ಸಿಟಿಗಳಂತಹ ಮೈಲೇಜ್ ಕಾರುಗಳನ್ನು ಪ್ರದಾನ ಮಾಡಿರುವ ಹೋಂಡಾ ಭವಿಷ್ಯದಲ್ಲೂ ಗರಿಷ್ಠ ಇಂಧನ ದಕ್ಷತೆಯುಳ್ಳ ಕಾರುಗಳನ್ನು ಭಾರತಕ್ಕೆ ಸನ್ಮಾನಿಸಲಿದೆಯೆಂಬ ಭರವಸೆ ಕಾರು ಪ್ರಿಯರದ್ದು.

2014 ಆಟೋ ಎಕ್ಸ್ ಪೋ

ಮೈಲೇಜ್ ಮಾತ್ರವಲ್ಲ. ತಂತ್ರಾಂಶದಲ್ಲೂ ಹೋಂಡಾ ಕಾರುಗಳು ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಿರುವಾಗ ದೆಹಲಿಯಲ್ಲಿ ನಡೆದ ಆಟೋ ಶೋದಲ್ಲಿ ಹೋಂಡಾ ಅವತರಣಿಕೆಗಳನ್ನು ನೀವು ಮಿಸ್ ಮಾಡ್ಕೊಂಡ್ರಾ. ಚಿಂತೆ ಬಿಡಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಆಟೋ ಎಕ್ಸ್ ಪೋದಲ್ಲಿ ಹೋಂಡಾ ಸ್ಪೆಷಾಲಿಟಿ ಏನಾಗಿತ್ತು?

12ನೇ ಆಟೋ ಎಕ್ಸ್ ಪೋದಲ್ಲಿ ಹೋಂಡಾ ಸಂಸ್ಥೆಯು ಪ್ರಮುಖವಾಗಿಯೂ ಮೊಬಿಲಿಯೊ, ಜಾಝ್, ಅಕಾರ್ಡ್ ಹೈಬ್ರಿಡ್, ಎನ್‌ಎಸ್‌ಎಕ್ಸ್ ಕಾನ್ಸೆಪ್ಟ್ ಮತ್ತು ವಿಷನ್ ಎಕ್ಸ್‌ಎಸ್-1 ಆವೃತ್ತಿಗಳನ್ನು ಪರಿಚಯಿಸಿತ್ತು.

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ

ಈ ಪೈಕಿ ಮೊಬಿಲಿಯೊ ಮಲ್ಟಿ ಪರ್ಪಸ್ ವಾಹನವು ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಎರ್ಟಿಗಾಗೆ ಪ್ರತಿಸ್ಪರ್ಧಿಯೆಂದೇ ಪರಿಗಣಿಸಲ್ಪಟ್ಟಿದೆ. ಇದು ಎರ್ಟಿಗಾಗಿಂತಲೂ ಹೆಚ್ಚು ಪ್ರೀಮಿಯಂ ಹಾಗೂ ಆರಾಮದಾಯಕವಾಗಿರಲಿದೆ.

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ

ವಿಶೇಷವಾಗಿಯೂ ಏಷ್ಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಮೊಬಿಲಿಯೊ ವಿನ್ಯಾಸ ರಚಿಸಲಾಗಿದೆ. ಇದು ವಿಶಾಲವಾದ ಕ್ಯಾಬಿನ್ ಸ್ಪೇಸ್ ಹೊಂದಿದ್ದು, ಒಟ್ಟು ಮೂರು ಸಾಲುಗಳಲ್ಲಾಗಿ ಏಳು ಮಂದಿಗೆ ಆರಾಮವಾಗಿ ಪಯಣಿಸಬಹುದಾಗಿದೆ.

ಹೋಂಡಾ ಜಾಝ್

ಹೋಂಡಾ ಜಾಝ್

ಹೋಂಡಾ ಕಾರುಗಳಲ್ಲಿ ಅತಿ ಹೆಚ್ಚು ಗಮನ ಕೇಂದ್ರಿತವಾಗಿರುವ ಕಾರೆಂದರೆ ಅದುವೇ ಜಾಝ್. ಈಗಾಗಲೇ ಜಪಾನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಮೆಚ್ಚುಗೆಗೆ ಪಾತ್ರವಾಗಿರುವ ಜಾಝ್ ಪ್ರಸಕ್ತ ಸಾಲಿನಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಹೋಂಡಾ ಜಾಝ್

ಹೋಂಡಾ ಜಾಝ್

ಹೋಂಡಾದ ನೂತನ ಫ್ಲೆಕ್ಸಿಬಲ್ ಕಾರ್ಗೊ ಕೆಪಬಿಲಿಟಿ ಮತ್ತು ಫನ್ ಟು ಡ್ರೈವ್ ಸಿದ್ಧಾಂತದ ಅಡಿಯಲ್ಲಿ ನೂತನ ಜಾಝ್ ಅಭಿವೃದ್ಧಿಪಡಿಸಲಾಗಿದೆ. ಇದು ಕಾರಿನೊಳಗೆ ಹೆಚ್ಚು ಸ್ಥಳಾವಕಾಶವನ್ನು ಒದಗಿಸಲಿದೆ.

ಹೋಂಡಾ ಅಕಾರ್ಡ್ ಹೈಬ್ರಿಡ್

ಹೋಂಡಾ ಅಕಾರ್ಡ್ ಹೈಬ್ರಿಡ್

ಈ ಹಿಂದೆ ಘೋಷಿಸಿರುವಂತೆಯೇ ಕೊಟ್ಟ ಮಾತನ್ನು ಪಾಲಿಸಿರುವ ಹೋಂಡಾ, ಅಕಾರ್ಡ್ ಹೈಬ್ರಿಡ್ ವರ್ಷನ್ ಕಾರನ್ನು ಪರಿಚಯಿಸಿದೆ.

ಹೋಂಡಾ ಅಕಾರ್ಡ್ ಹೈಬ್ರಿಡ್

ಹೋಂಡಾ ಅಕಾರ್ಡ್ ಹೈಬ್ರಿಡ್

ಪ್ರಸ್ತುತ ಹೋಂಡಾ ಅಕಾರ್ಡ್ ಕಾರಿನಲ್ಲಿ 2.0 ಲೀಟರ್ ಗ್ಯಾಸೋಲೈನ್ ಎಂಜಿನ್ ಆಳವಡಿಸಲಾಗುತ್ತಿದ್ದು, 141 ಪಿಎಸ್ ಪವರ್ (165 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಜತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಹೊಂದಿರಲಿದ್ದು, ಇವೆರಡು ಒಟ್ಟು ಸೇರಿ 196 ಅಶ್ವಶಕ್ತಿ (306 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

2014 ಆಟೋ ಎಕ್ಸ್ ಪೋದಲ್ಲಿ ಹೋಂಡಾ ನೂತನ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್ ನೆರೆದಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಿತ್ತು.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಇಲ್ಲೂ ವೆಜೆಲ್ ತರಹನೇ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್ ಕಾರು ಸಹ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹೆಚ್ಚು ಕ್ರೀಡಾತ್ಮಕ ಅದೇ ಹೊತ್ತಿಗೆ ಗರಿಷ್ಠ ಸ್ಥಳಾವಕಾಶಕ್ಕೆ ಒತ್ತು ಕೊಡಲಾಗಿದೆ.

ಹೋಂಡಾ ಸ್ಪೋರ್ಟ್ಸ್ ಕಾನ್ಸೆಪ್ಟ್ - ಎನ್‌ಎಸ್‌ಎಕ್ಸ್

ಹೋಂಡಾ ಸ್ಪೋರ್ಟ್ಸ್ ಕಾನ್ಸೆಪ್ಟ್ - ಎನ್‌ಎಸ್‌ಎಕ್ಸ್

ಬಹುತೇಕ ಎಲ್ಲ ಪ್ರಖ್ಯಾತ ವಾಹನ ಸಂಸ್ಥೆಗಳು ತಮ್ಮ ಸ್ಪೋರ್ಟ್ಸ್ ಕಾರು ಕಾನ್ಸೆಪ್ಟ್‌ನೊಂದಿಗೆ ಮುಂದೆ ಬಂದಿದ್ದವು. ಇದರಿಂದ ಹೋಂಡಾ ಕೂಡಾ ಹೊರತಾಗಿರಲಿಲ್ಲ. ಇದು ಹೋಂಡಾ ಪಾಲಿಗೆ ಭವಿಷ್ಯದ ಕಾರು ಮಾತ್ರವಾಗಿರಲಿಲ್ಲ. ಬದಲಾಗಿ ಎನ್‌ಎಸ್‌ಎಕ್ಸ್ ಮುಖಾಂತರ ಭವಿಷ್ಯದ ವಿನ್ಯಾಸ ಶೈಲಿಯನ್ನು ಹೋಂಡಾ ಪ್ರದರ್ಶಿಸಿತ್ತು.

Most Read Articles

Kannada
English summary
The Japanese love their cars and it is emphasized in their concepts. This year the Honda stable showcase their Mobilio, Jazz, Accord Hybrid, NSX concept car and the Vision XS-1.
Story first published: Saturday, February 15, 2014, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X