ಥಾಯ್ಲೆಂಡ್‌ನಲ್ಲಿ 2014 ಹೋಂಡಾ ಜಾಝ್ ಲಾಂಚ್

By Nagaraja

ಜಪಾನ್‌ನ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಹೊಸ ಜಾಝ್ ಕಾರನ್ನು ಲಾಂಚ್ ಮಾಡಿದೆ. ಈ ಬಹುನಿರೀಕ್ಷಿತ ಕಾರು ಭಾರತ ಮಾರುಕಟ್ಟೆಯನ್ನು ಮುಂದಿನ ವರ್ಷಾರಂಭದಲ್ಲಿ ತಲುಪಲಿದೆ.

ಥಾಯ್ಲೆಂಡ್‌ನಲ್ಲಿ ಹೋಂಡಾ ಜಾಝ್ 9.97 ಲಕ್ಷ ರು.ಗಳಿಂದ 14.19 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಆದರೆ ಭಾರತ ಎಂಟ್ರಿ ವೇಳೆಗೆ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ಥಾಯ್ಲೆಂಡ್‌ನಲ್ಲಿ 2014 ಹೋಂಡಾ ಜಾಝ್ ಲಾಂಚ್

ಈಗಾಗಲೇ ಜಪಾನ್ ಮಾರುಕಟ್ಟೆಯನ್ನು ಪ್ರವೇಶಿಸಿರುವ ಹೋಂಡಾ ಭರ್ಜರಿ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿದೆ.

ಥಾಯ್ಲೆಂಡ್‌ನಲ್ಲಿ 2014 ಹೋಂಡಾ ಜಾಝ್ ಲಾಂಚ್

ನೂತನ ಜಾಝ್‌ನಲ್ಲಿ ಎಬಿಎಸ್, ಇಬಿಡಿ, ಜಿ ಫೋರ್ಸ್ ಕಂಟ್ರೋಲ್ ಸಿಸ್ಟಂ (G-CON), ಹಿಲ್ ಸ್ಟಾರ್ಟ್ ಅಸಿಸ್ಟ್, ವಾಹನ ಸ್ಥಿರತೆ ಕಂಟ್ರೋಲ್ ಜತೆಗೆ ಆರು ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳಿರಲಿದೆ. ಹಾಗೆಯೇ ದೊಡ್ಡದಾದ 7 ಇಂಚಿನ ಟಿಎಫ್‌ಟಿ ಆಡಿಯೋ ಸಿಸ್ಟಂ ಕೂಡಾ ಇರಲಿದೆ.

ಥಾಯ್ಲೆಂಡ್‌ನಲ್ಲಿ 2014 ಹೋಂಡಾ ಜಾಝ್ ಲಾಂಚ್

2014 ಹೋಂಡಾ ಜಾಝ್, 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 117 ಅಶ್ವಶಕ್ತಿ (146 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಸಿವಿಟಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಥಾಯ್ಲೆಂಡ್‌ನಲ್ಲಿ 2014 ಹೋಂಡಾ ಜಾಝ್ ಲಾಂಚ್

2014 ಜಾಝ್‌ನಲ್ಲಿ ಸ್ಟಾರ್ಟ್/ಸ್ಟಾಪ್ ಬಟನ್ ಪ್ರಮುಖ ವಿಶಿಷ್ಟತೆಯಾಗಿರಲಿದೆ. ಅಂತೆಯೇ ಪ್ರಯಾಣಿಕರಿಗೆ ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ.

ಥಾಯ್ಲೆಂಡ್‌ನಲ್ಲಿ 2014 ಹೋಂಡಾ ಜಾಝ್ ಲಾಂಚ್

ಇನ್ನು ಭಾರತದಲ್ಲಿ ಡೀಸೆಲ್ ವೆರಿಯಂಟ್ ಆಗಮನವಾಗುವ ಸಾಧ್ಯತೆಯಿದೆ. ಈ ಎಲ್ಲದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

Most Read Articles

Kannada
English summary
Japanese manufacturer, Honda, has launched a new Jazz in Thailand and we expect it to come to India in the beginning of 2015.
Story first published: Saturday, May 24, 2014, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X