2014 ಮಾರುತಿ ಸ್ವಿಫ್ಟ್ ಆಗಮನಕ್ಕೆ ಸಿದ್ಧ; ನಿರೀಕ್ಷೆ ಹುಸಿ?

By Nagaraja

ಹಾಗೊಂದು ವೇಳೆ ನೀವು ನೂತನ ಸ್ವಿಫ್ಟ್ ಆಗಮನಕ್ಕಾಗಿ ಕಾಯುತ್ತಿದ್ದರೆ ನಿಮ್ಮ ಯೋಜನೆ ಈ ಕೂಡಲೇ ಬದಲಾಯಿಸುವುದು ಒಳ್ಳೆಯದು. ಯಾಕೆಂದರೆ ಈಗಾಗಲೇ ಯುರೋಪ್ ಮಾರುಕಟ್ಟೆ ಪ್ರವೇಶಿಸುತ್ತಿರುವ ನೂತನ ಸ್ವಿಫ್ಟ್ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಎಂಬುದನ್ನು ಆಟೋ ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ 2014ನೇ ಇಸವಿಯಲ್ಲಿ ಆಗಮಿಸಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಕಾರಿನ ಇಂಟಿರಿಯರ್ ಸೇರಿದಂತೆ ಹೊರಂಗಣ ಚಿತ್ರಣಗಳು ಈಗಾಗಲೇ ಬಯಲಾಗಿದ್ದು, ಹೆಚ್ಚಿನ ಅಪ್‌ಗ್ರೇಡ್ ಕಂಡುಬಂದಿಲ್ಲ.

2014 ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಕೆಲವೊಂದು ಬದಲಾವಣೆ ಮಾತ್ರ ಕಂಡುಬಂದಿದೆ. ಆದರೆ ಇಂಟಿರಿಯರ್ ಭಾಗಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಇನ್ನು ತನ್ನ ಹಿಂದಿನ ಆವೃತ್ತಿಗಳ ವಿನ್ಯಾಸವನ್ನು ಕಾಪಾಡಿಕೊಂಡು ಬಂದಿದೆ. ಎಲ್ ಆಕಾರದ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಹಾಗೂ ಟರ್ನ್ ಇಂಡಿಕೇಟರ್ ಒಆರ್‌ವಿಎಂಗೆ ಬದಲಾಯಿಸಲಾಗಿದೆ.

2014 ಸುಜುಕಿ ಸ್ವಿಫ್ಟ್

2014 ಸುಜುಕಿ ಸ್ವಿಫ್ಟ್ ಸಮಾನ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

2014 ಸುಜುಕಿ ಸ್ವಿಫ್ಟ್

ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಅಧಿಕೃತ ಎಂಟ್ರಿ ಕೊಡಲಿರುವ ಮಾರುತಿ ಸ್ವಿಫ್ಟ್ ಇದೇ ವರ್ಷಾಂತ್ಯದಲ್ಲಿ ಭಾರತ ಪ್ರವೇಶ ಪಡೆದರೆ ಅಚ್ಚರಿ ಪಡಬೇಕಾಗಿಲ್ಲ.

2014 ಸುಜುಕಿ ಸ್ವಿಫ್ಟ್

ನಿಮ್ಮ ಮಾಹಿತಿಗಾಗಿ, ಕಳೆದ ಕೆಲವು ವರ್ಷಗಳಲ್ಲಿ ಮಾರುತಿ ಸ್ವಿಫ್ಟ್ ಭಾರತೀಯ ಮಧ್ಯ ವರ್ಗದ ಜನರ ನೆಚ್ಚಿನ ಕಾರು ಎಂದೆನಿಸಿಕೊಂಡಿದೆ.

2014 ಸುಜುಕಿ ಸ್ವಿಫ್ಟ್

ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿರುವ ಸ್ವಿಫ್ಟ್ ಆಗಮನಕ್ಕಾಗಿ ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಹೊಸ ವರ್ಷನ್‌ನಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದಿರುವುದು ಬೇಸರಕ್ಕೆ ಕಾರಣವಾಗಿದೆ.

2014 ಸುಜುಕಿ ಸ್ವಿಫ್ಟ್

ಹಾಗಿದ್ದರೂ ಸ್ವಿಫ್ಟ್ ಈ ಬಗ್ಗೆ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ. ಹಾಗಾಗಿ ಸ್ವಿಫ್ಟ್ ತಮ್ಮ ನಿರೀಕ್ಷೆ ಉಳಿಸಿಕೊಳ್ಳುವ ನಂಬಿಕೆ ಗ್ರಾಹಕರಲ್ಲಿದೆ.

2014 ಸುಜುಕಿ ಸ್ವಿಫ್ಟ್
2014 ಸುಜುಕಿ ಸ್ವಿಫ್ಟ್
2014 ಸುಜುಕಿ ಸ್ವಿಫ್ಟ್
2014 ಸುಜುಕಿ ಸ್ವಿಫ್ಟ್

Most Read Articles

Kannada
English summary
The 2014 model year Suzuki Swift has not been officially revealed, however, images from Suzuki's Belgium website have leaked. The information that one can gather from these images are not encouraging. The 2014 MY Suzuki Swift looks virtually unchanged
Story first published: Tuesday, June 18, 2013, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X