2014ರಲ್ಲಿ ಬದಿಗೆ ಸರಿಸಲ್ಪಟ್ಟ ಐಕಾನಿಕ್ ಮಾದರಿಗಳು

By Nagaraja

2014ನೇ ವರ್ಷ ಭಾರತದ ವಾಹನೋದ್ಯಮದ ಪಾಲಿಗೆ ಅತ್ಯಂತ ಮಹತ್ವಪೂರ್ಣವೆನಿಸಿತ್ತು. ಕಳೆದ ಸಾಲಿನಲ್ಲಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಲ್ಲದೆ ಹಲವಾರು ಐಕಾನಿಕ್ ಮಾದರಿಗಳು ತನ್ನ ಓಡಾಟವನ್ನು ನಿಲ್ಲಿಸಿದ್ದವು.

ಒಂದು ದಶಕದಲ್ಲಿ ಭಾರತದ ರಸ್ತೆಯನ್ನು ಆಳಿದ ಇಂತಹ ಮಾದರಿಗಳು ನಿಧಾನವಾಗಿ ಆಧುನಿಕ ಮಾದರಿಗಳ ಪ್ರಭಾವದೊಂದಿಗೆ ಬದಿಗೆ ಸರಿಸಲ್ಪಟ್ಟಿದ್ದವು. ಹಾಗಿದ್ದರೂ ಈ ಮಾದರಿಗಳು ದೇಶದ ವಾಹನ ಇತಿಹಾಸದಲ್ಲಿ ಎಂದೆಂದಿಗೂ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವುದಂತೂ ಮಾತ್ರ ನಿಜ.

2014ರಲ್ಲಿ ಬದಿಗೆ ಸರಿಸಲ್ಪಟ್ಟ ಐಕಾನಿಕ್ ಮಾದರಿಗಳು

ಮುಂದಿನ ಒಂದೊಂದೇ ಸ್ಲೈಡರ್ ಮೂಲಕ ಕಳೆದ ಒಂದೆರಡು ದಶಕಗಳಲ್ಲಿ ದೇಶದ ವಾಹನೋದ್ಯಮ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಗೂ 2014ನೇ ಸಾಲಿನಲ್ಲಿ ಓಡಾಟ ನಿಲ್ಲಿಸಿರುವ ಐಕಾನಿಕ್ ಮಾದರಿಗಳ ಬಗ್ಗೆ ಚರ್ಚಿಸೋಣವೇ...

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

ಜನಸಾಮಾನ್ಯರ ಕಾರೇ ಎಂದೇ ಪ್ರಸಿದ್ಧಿ ಪಡೆದಿರುವ ಮಾರುತಿ 800 ಐಕಾನಿಕ್ ಕಾರಿನ ನಿರ್ಮಾಣವನ್ನು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್‌) ಸ್ಥಗಿತಗೊಳಿಸಿದೆ. ಹಾಗಿದ್ದರೂ ಮುಂದಿನ ಎಂಟು ಹತ್ತು ವರ್ಷಗಳ ವರೆಗೆ ಮಾರುತಿ 800 ಬಿಡಿಭಾಗಗಳು ಮಾರುಕಟ್ಟೆಯಲ್ಲಿ ದೊರಕಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

1980ರ ದಶಕದ ಆರಂಭದಲ್ಲಿ ಲಾಂಚ್ ಆಗಿದ್ದ ಮಾರುತಿ 800 ದರವು 50,000 ರು.ಗಳಿಷ್ಟಿತ್ತು. ಈಗ ನಿರ್ಮಾಣ ಸ್ಥಗಿತವಾಗುವಾಗ 2.35 ರು.ಗಳ ವರೆಗೆ ತಲುಪಿದೆ. ಹಾಗಿದ್ದರೂ ಇಂದಿಗೂ ಜನ ಸಾಮಾನ್ಯ ಕಾರು ಎಂಬ ಬಿರುದನ್ನು ಕಾಪಾಡಿಕೊಂಡಿದೆ.

ಅಂಬಾಸಿಡರ್

ಅಂಬಾಸಿಡರ್

ದಶಕಗಳಷ್ಟು ಕಾಲ 'ಭಾರತೀಯ ರಸ್ತೆಗಳ ರಾಜ' ಎಂಬ ಹೆಸರು ಗಳಿಸಿದ್ದ ಐಕಾನಿಕ್ ಅಂಬಾಸಿಡರ್ ಉತ್ಪಾದನೆಯನ್ನು ಹಿಂದೂಸ್ತಾನ್ ಮೋಟಾರ್ಸ್ ಸ್ಥಗಿತಗೊಳಿಸಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದೇ ಈ ಕ್ಲಾಸಿಕ್ ಕಾರಿನ ಯುಂಗಾತ್ಯಕ್ಕೆ ಕಾರಣವಾಗಿದೆ.

ಅಂಬಾಸಿಡರ್

ಅಂಬಾಸಿಡರ್

ದೇಶದೆಲ್ಲೆಡೆ 'ಅಂಬಿ' ಎಂಬ ಅಕ್ಕರೆಯ ಹೆಸರಿನಿಂದ ಜನಪ್ರಿಯವಾಗಿದ್ದ ಅಂಬಾಸಿಡರ್, ಒಂದು ಕಾಲದಲ್ಲಿ ರಾಜಕಾರಣಿಗಳಿಂದ ಹಿಡಿದು ತಾರ ಪ್ರಮುಖರ ನೆಚ್ಚಿನ ಕಾರೆನಿಸಿಕೊಂಡಿತ್ತು. ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮಾದರಿಯನ್ನು ಹೋಲುವ ಅಂಬಾಸಿಡರ್ 1958ರ ಇಸವಿಯಿಂದಲೇ ದೇಶದಲ್ಲಿ ಮಾರಾಟದಲ್ಲಿದೆ. ಅಲ್ಲದೆ ಕಳೆದ ಹಲವಾರು ವರ್ಷಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಕಾರೆಂದು ಗುರುತಿಸಿಕೊಂಡಿತ್ತು.

ಮಾರುತಿ ಝೆನ್ ಎಸ್ಟಿಲೊ

ಮಾರುತಿ ಝೆನ್ ಎಸ್ಟಿಲೊ

ಸೆಲೆರಿಯೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಗಮನದೊಂದಿಗೆ ಮಾರುತಿ ಝೆನ್ ಎಸ್ಟಿಲೊ ಹಾಗೂ ಎ ಸ್ಟಾರ್ ಹಾದಿ ಬಿಟ್ಟುಕೊಟ್ಟಿತ್ತು. ಟಾಲ್ ಬಾಯ್ ವಿನ್ಯಾಸವನ್ನು ಹೊಂದಿರುವ ಹೊರತಾಗಿಯೂ ಆಧುನಿಕ ಬೇಡಿಕೆಗಳನ್ನು ಪೂರೈಸಲು ವಿಫಲವಾಗಿರುವುದು ನಿಧಾನವಾಗಿ ಎಸ್ಟಿಲೊ ಹಿನ್ನಡೆಗೆ ಕಾರಣವಾಗಿತ್ತು.

ಮಾರುತಿ ಸುಜುಕಿ ಎ ಸ್ಟಾರ್

ಮಾರುತಿ ಸುಜುಕಿ ಎ ಸ್ಟಾರ್

ಕಳೆದ ವರ್ಷದಲ್ಲೇ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಿಂದ ಬದಿಗೆ ಸರಿಸಲ್ಪಟ್ಟ ಕಾರುಗಳಲ್ಲಿ ಎಸ್ಟಾರ್ ಗುರುತಿಸಿಕೊಂಡಿದೆ. 2008ರಲ್ಲಿ ಬಿಡುಗಡೆಯಾಗಿದ್ದ ಎ ಸ್ಟಾರ್‌ನಲ್ಲಿ ಕೆ ಸಿರೀಸ್ ಕೆ10ಬಿ ಎಂಜಿನ್ ಬಳಕೆ ಮಾಡಲಾಗಿತ್ತು. ಇದು 67 ಅಶ್ವಶಕ್ತಿ (90 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯವಿದೆ.

ಮಾರುತಿ ಸುಜುಕಿ ಎಸ್‌ಎಕ್ಸ್4

ಮಾರುತಿ ಸುಜುಕಿ ಎಸ್‌ಎಕ್ಸ್4

ಕೊನೆಯ ತಲೆಮಾರಿನ ಎಸ್‌ಎಕ್ಸ್5 ಸೆಡಾನ್ ಕಾರು, ಬಹುನಿರೀಕ್ಷಿತ ಸಿಯಾಝ್ ಮಾದರಿಗೆ ತನ್ನ ಹಾದಿ ಬಿಟ್ಟುಕೊಟ್ಟಿತ್ತು. ಆರಂಭದಲ್ಲಿ ಹ್ಯುಂಡೈ ವೆರ್ನಾ ಮಾದರಿಗೆ ಸೆಡ್ಡು ಹೊಡಿದಿದ್ದ ಮಧ್ಯಮ ಗಾತ್ರದ ಎಸ್‌ಎಕ್ಸ್4 ಸೆಡಾನ್ ಕಾರು 1586 ಸಿಸಿ 4 ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 102 ಅಶ್ವಶಕ್ತಿ (154 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.

ಹ್ಯುಂಡೈ ಸ್ಯಾಂಟ್ರೊ, ಷೆವರ್ಲೆ ಸ್ಪಾರ್ಕ್

ಹ್ಯುಂಡೈ ಸ್ಯಾಂಟ್ರೊ, ಷೆವರ್ಲೆ ಸ್ಪಾರ್ಕ್

1997ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಿದ್ದ ಹ್ಯುಂಡೈ ಸ್ಯಾಂಟ್ರೊ ಕ್ಸಿಂಗ್ ಹ್ಯಾಚ್‌ಬ್ಯಾಕ್ ಕಾರು ಸಣ್ಣ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜೆನ್‌ಗಳಂತಹ ಮಾದರಿಗಳಿಗೆ ಭಾರಿ ಪೈಪೋಟಿ ಒಡ್ಡಿತ್ತು. ಇದೀಗ ದೇಶದ ರಸ್ತೆಯಲ್ಲಿ 15 ವರ್ಷಗಳ ಅಧಿಪತ್ಯದ ಬಳಿಕ ಹ್ಯುಂಡೈ ಸ್ಯಾಂಟ್ರೊ ಓಡಾಟ ನಿಲುಗಡೆಗೊಂಡಿದೆ.

ಇನ್ನೊಂದೆಡೆ ಕಳೆದ ಏಳು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿರುವ ಜನರಲ್ ಮೋಟಾರ್ಸ್ 1,65,000 ಯುನಿಟ್‌ಗಳ ಮಾರಾಟ ಸಾಧಿಸಿದ್ದ ಸ್ಪಾರ್ಕ್ ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ಇನ್ನು ನಿಸ್ಸಾನ್ ಎಕ್ಸ್ ಟ್ರೈಲ್ ಹಾಗೂ ನಿಸ್ಸಾನ್ 370ಝಡ್ ನಿರ್ಮಾಣವನ್ನು 2014ನೇ ಸಾಲಿನಲ್ಲೇ ಸ್ಧಗಿತಗೊಳಿಸಲಾಗಿದೆ.

Most Read Articles

Kannada
English summary
Here is the list of top cars that were discontinued in India in 2014. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X