ಕಾರ್ ಕೇರ್: ನಿಮ್ಮ ಕಾರನ್ನು ಪ್ರೀತಿಯಿಂದ ನೋಡಿಕೊಳ್ಳಿ

ನೀವು ಕಾರು ಶೋರೂಂನಿಂದ ಹೊಸ ಕಾರೊಂದನ್ನು ಖರೀದಿಸಿ ಮನೆ ಬಾಗಿಲಲ್ಲಿ ನಿಲ್ಲಿಸಿದ್ದೀರಿ. ಅಬ್ಬಾ ಎಷ್ಟು ವರ್ಷದ ಕನಸಿದು, ಎಷ್ಟೊಂದು ಕಷ್ಟಪಟ್ಟೆ ಅಂತ ಆಲೋಚಿಸಬಹುದು. ಕನಸಿನ ಕಾರು ಖರೀದಿ ಹಿಂದೆ ಅದೇಷ್ಟೂ ಶ್ರಮ, ಕನಸು ಇರುವುದು ಸುಳ್ಳಲ್ಲ. ಆದರೆ ಅಲ್ಲಿಂದ ಆರಂಭವಾಗುವ ಸಮಸ್ಯೆಗಳ ಕುರಿತ ಮುನ್ನೋಟ ಹೆಚ್ಚಿನವರಿಗೆ ಇರುವುದಿಲ್ಲ.

ದುಡ್ಡಿದ್ದರೆ ಕಾರು ಖರೀದಿಸುವುದು ದೊಡ್ಡ ವಿಷ್ಯನೇ ಅಲ್ಲ. ಆದರೆ ಖರೀದಿಸಿದ ನಂತರ ಅದನ್ನು ಜತನದಿಂದ, ಜೋಪಾನವಾಗಿ ನೋಡಿಕೊಳ್ಳುವುದು ತುಸು ಕಷ್ಟವೇ. ಹೊಸದೊಂದು ಕಾರು ಖರೀದಿಸಿ ಮನೆಗೆ ತೆಗೆದುಕೊಂಡು ಹೋದ ನಂತರ ನಿಜವಾದ ಸಮಸ್ಯೆಗಳ ಆರಂಭವಾಗುತ್ತದೆ.

ಕೆಲವು ಕಾರುಗಳು ಖರೀದಿಸಿ ತಿಂಗಳಾಗಿರುವುದಿಲ್ಲ. ವರ್ಷ ಕಳೆದಂತೆ ಭಾಸವಾಗುತ್ತದೆ. ಇನ್ನು ಕೆಲವು ಕಾರುಗಳು ವರ್ಷ ಕಳೆದರೂ ಈಗಷ್ಟೇ ಶೋರೂಂನಿಂದ ತಂದಂತೆ ಭಾಸವಾಗುತ್ತದೆ.

ಕಾರಿನ ಕಾರ್ಯಕ್ಷಮತೆ, ಮೈಲೇಜ್, ಅಂದಚೆಂದ ಇತ್ಯಾದಿಗಳ ಮೇಲೆ "ಕಾರ್ ಕೇರ್" ಪ್ರಮುಖ ಪಾತ್ರ ವಹಿಸುತ್ತದೆ. ನೀವು ಅದನ್ನು ಪ್ರೀತಿಯಿಂದ ನೋಡಿಕೊಂಡರೆ ಅದು ನಿಮ್ಮನ್ನು ಪ್ರೀತಿಸುತ್ತದೆ. ನೆಗ್ಲೆಕ್ಟ್ ಮಾಡಿದಿರೋ ನಿಮಗೆ ಅನಿರೀಕ್ಷಿತವಾಗಿ ಕೈಕೊಡುತ್ತದೆ.

ದಿನನಿತ್ಯ ನಾವು ಸ್ನಾನ ಮಾಡುತ್ತೇವೆ. ಹಲ್ಲುಜ್ಜುತ್ತೇವೆ. ಊಟ ಮಾಡಿ ಕೈತೊಳೆಯುತ್ತೇವೆ. ವಾರಕ್ಕೊಮ್ಮೆಯಾದರೂ ಉಗುರು ಕಟ್ ಮಾಡುತ್ತೇವೆ. ಹೇರ್ ಕಟ್, ಶೇವಿಂಗ್ ಹೀಗೆ ನಾವು ಸುಂದರವಾಗಿರಲು, ಆರೋಗ್ಯವಾಗಿರಲು ಹೀಗೆ ಏನೇನೂ ಮಾಡುತ್ತಿರುತ್ತೇವೆ.

ಅದೇ ರೀತಿ, ನಮ್ಮ ಸವಾರಿಗೂ ನೆರವಾಗುವ ಕಾರಿನ ಕೇರ್ ಕೂಡ ಅಷ್ಟೇ ಮುಖ್ಯ. ಅದರಲ್ಲೂ ಸಾಕಷ್ಟು ತಾಂತ್ರಿಕ ವಿಷಯವಿರುತ್ತದೆ. ಅದರ ಮೈಗೂ ಧೂಳು, ಕೆಸರು ಅಂಟುತ್ತದೆ. ಅದಕ್ಕೂ ಸ್ಥಾನ ಮಾಡಿಸಬೇಕಾಗುತ್ತದೆ. ಇಂಟಿರಿಯರ್, ಎಕ್ಸ್ ಟೀರಿಯರ್, ಎಂಜಿನ್, ಟೈರ್ ಎಲ್ಲವನ್ನು ಜತನದಿಂದ ನೋಡಿಕೊಳ್ಳಬೇಕು. ಮುಂದಿನ ಪುಟದಲ್ಲಿ..

Most Read Articles

Kannada
English summary
Basic Car Car Tips. Car looks, Car performs and its reliability depends on Car Care. How to take care about y0ur lovely car.. Here is tips.
Story first published: Saturday, August 27, 2011, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X