ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

ಇತ್ತೀಚೆಗೆ ಕಾರು ಖರೀದಿಸುವ ಗ್ರಾಹಕರು ಈ ಕುರಿತಾಗಿ ಬಹಳ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ಎಎಂಟಿ ಸೌಲಭ್ಯವುಳ್ಳ ಕಾರು ಖರೀದಿಸುವುದರಿಂದ ಏನೆಲ್ಲಾ ಉಪಯೋಗವಿದೆ ಎನ್ನುವುದರ ಬಗ್ಗೆ ತಿಳಿಸಿಕೊಡಲಿದ್ದೇವೆ.

By Praveen

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark

ಸದ್ಯ ಆಟೋ ಮೊಬೈಲ್ ಉದ್ಯಮವು ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್(ಎಎಂಟಿ) ಅತ್ತ ಹೆಚ್ಚಿನ ಒಲವು ಹೊಂದುತ್ತಿದ್ದು, ಇತ್ತೀಚೆಗೆ ಕಾರು ಖರೀದಿಸುವ ಗ್ರಾಹಕರು ಈ ಕುರಿತಾಗಿ ಬಹಳ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ಎಎಂಟಿ ಸೌಲಭ್ಯವುಳ್ಳ ಕಾರು ಖರೀದಿಸುವುದರಿಂದ ಏನೆಲ್ಲಾ ಉಪಯೋಗವಿದೆ ಎನ್ನುವುದರ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

ಎಎಂಟಿ ಅಂದರೆ ಏನು? ಸಾಮಾನ್ಯ ಮ್ಯಾನುವಲ್ ಗೇರ್ ಬಾಕ್ಸ್‌ಗಿಂತಲೂ ಇದು ಹೇಗೆ ಭಿನ್ನ? ಎಂಬಿತ್ಯಾದಿ ಪ್ರಶ್ನೆಗಳ ಕುರಿತಾಗಿ ವಾಹನ ಪ್ರಿಯರಲ್ಲಿ ಗೊಂದಲ ಇದ್ದೆ ಇರುತ್ತದೆ. ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು (ಎಸ್‌ಎಟಿ) ಸುಲಭವಾಗಿ ಕ್ಲಚ್‌ಲೆಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಎಂದು ಕರೆಯುತ್ತೇವೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

ಭಾರತದಲ್ಲಿ ಈ ಹಿಂದೆ ಮಾರುತಿ ಸುಜುಕಿ ಸಂಸ್ಥೆಯು ಸೆಲೆರಿಯೊ ಕಾರುಗಳಲ್ಲಿ ಎಎಂಟಿ ಪರಿಚಯಿಸಿ ವಾಹನೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಎಬ್ಬಿಸಿತ್ತು. ತದನಂತರದಲ್ಲಿ ಬಿಡುಗಡೆಯಾಗಿರುವ ಬಹುತೇಕ ಕಾರುಗಳಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಜೊತೆಗೆ ಎಎಂಟಿ ಕೂಡಾ ಲಭ್ಯವಾಗುತ್ತಿರುವುದು ಗಮನಾರ್ಹ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

ಇನ್ನೊಂದು ಪ್ರಮುಖ ಅಂದ್ರೆ ಎಎಂಟಿ ಸೌಲಭ್ಯವಿರುವ ಕಾರುಗಳ ಬಳಕೆಯು ಇಂಧನ ದಕ್ಷತೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ಹಲವರಲ್ಲಿ ಗೊಂದವಿದೆ. ಆದ್ರೆ ಈ ಬಗ್ಗೆ ಚಿಂತೆ ಬೇಡವೇ ಬೇಡ. ಎಎಂಟಿ ಬಳಕೆಯು ಇಂಧನ ಕಾರ್ಯಕ್ಷಮತೆ ಮೇಲೆ ಯಾವುದೇ ಪರಿಣಾಮ ಬೀರದು.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

ಇದೇ ಕಾರಣಕ್ಕಾಗಿ ಇಟಲಿಯ ಮಾಗ್ನೆಟ್ಟಿ ಮರೆಲ್ಲಿ ಪೂರೈಕೆ ಮಾಡುತ್ತಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಂಡುಬರುತ್ತಿದೆ. ಇದೀಗ ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳಿಗಾಗಿ ಮುಂದಿನ ಪುಟಗಳತ್ತ ಮುಂದುವರಿಯಿರಿ..

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

1. ಕ್ಲಚ್ ಇದೆ, ಕ್ಲಚ್ ಪೆಡಲ್ ಇಲ್ಲ

ನೀವು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌‍‌ನಲ್ಲಿ ಕ್ಲಚ್ ಇರಲ್ಲ ಅಂದುಕೊಂಡಿದ್ದರೆ ತಪ್ಪಾದಿತ್ತು. ನಿಸ್ಸಂಶವಾಗಿಯೂ ಇದರಲ್ಲಿ ಕ್ಲಚ್ ಇದ್ದು, ಕ್ಲಚ್ ಪೆಡಲ್ ಮಾತ್ರ ಕಂಡುಬರುವುದಿಲ್ಲ. ಇದು ನಿಮ್ಮ ಪಯಣವನ್ನು ಹೆಚ್ಚು ಆರಾದಾಯಕವಾಗಿಸಲಿದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

2. ವೆಚ್ಚ ಕಡಿಮೆ

ವರದಿಯೊಂದರ ಪ್ರಕಾರ 1986ರ ಫೆರಾರಿ ರೇಸ್ ಕಾರುಗಳಲ್ಲಿ ಇದೇ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಕಡಿಮೆ ವೆಚ್ಚ ತಗುಲುತ್ತಿದ್ದು, ಹೆಚ್ಚು ಅನುಕೂಲಕರವೆನಿಸಿದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

3. ಎಎಂಟಿ ಕಿಟ್

ಮಗದೊಂದು ಪ್ರಮುಖ ವೈಶಿಷ್ಟ್ಯವೆಂದರೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೂ ಎಎಂಟಿ ಕಿಟ್ ಆಳವಡಿಸಬಹುದಾಗಿದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

4. ಫಾಕ್ಟರಿ ಫಿಟ್ಟಿಂಗ್

ಮೇಲೆ ತಿಳಿಸಲಾದ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಫಾಕ್ಟರಿಯಿಂದ ಮಾತ್ರ ಜೋಡಣೆ ಮಾಡಲು ಸಾಧ್ಯ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

5. ಎರಡು ಪ್ರಮುಖ ಘಟಕಗಳು

ಎಎಂಟಿ ಎರಡು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ. ಅವುಗಳೆಂದರೆ, ಹೈಡ್ರಾಲಿಕ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

6. ಗೇರ್ ಬದಲಾವಣೆ

ಎಎಂಟಿ ವರ್ಷನ್ ಮ್ಯಾನುವಲ್ ಗೇರ್ ಬಾಕ್ಸ್ ಮೇಲೆ ಅವಲಂಬಿತವಾಗಿದ್ದು, ಆಟೋ ಮೋಡ್‌ನಲ್ಲಿ (ಡ್ರೈವ್) ಸ್ವಯಂಚಾಲಿತವಾಗಿ ಗೇರ್‌ಗಳು ಬದಲಾಗುತ್ತಿರುತ್ತವೆ. ಇದು ಸ್ಪೋರ್ಟ್ಸ್ ಮೋಡ್ (ಮ್ಯಾನುವಲ್) ಸಹ ಪಡೆದುಕೊಂಡಿದ್ದು, ಇಲ್ಲಿ ಚಾಲಕ ಮ್ಯಾನುವಲ್ ಆಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ಲಸ್ (ಗೇರ್ ಹೆಚ್ಚಿಸಲು) ಮತ್ತು ಮೈನಸ್ (ಗೇರ್ ಕಡಿಮೆ ಮಾಡಲು) ನೀಡಲಾಗಿದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

7. ಹೆಚ್ಚು ಅನುಕೂಲಕರ

ವಾಹನ ತಜ್ಞರ ಪ್ರಕಾರ ಎಎಂಟಿ ಬಳಕೆಯು ಚಾಲಕ ಹಾಗೂ ತಯಾರಕರ ದೃಷ್ಟಿಕೋನದಲ್ಲೂ ಹೆಚ್ಚು ಅನುಕೂಲಕರವಾಗಿದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಂಪೂರ್ಣ ವಿಭಿನ್ನ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

8. ಮ್ಯಾಗ್ನೆಟ್ಟಿ ಮರೆಲ್ಲಿ

ಇಟಲಿ ಮೂಲದ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಭಾರತಕ್ಕೆ ಎಂಎಂಟಿ ವ್ಯವಸ್ಥೆಯನ್ನು ಒದಗಿಸುತ್ತದೆ. ಸಂಸ್ಥೆಯ ಪ್ರಕಾರ 2020ರ ವೇಳೆಯಾಗುವಾಗ ದೇಶದ 20ರಷ್ಟು ಪ್ರಯಾಣಿಕ ವಾಹನಗಳು ಎಎಂಟಿ ಮಾದರಿಗಳನ್ನು ಒಳಗೊಂಡಿರಲಿದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

9. ಇಂಧನ ದಕ್ಷತೆ

ಎಎಂಟಿ ವರ್ಷನ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಬಳಕೆಯಿಂದಾಗಿ ಶೇಕಡಾ 10ರಷ್ಟು ಇಂಧನ ಕ್ಷಮತೆ ಕಡಿಮೆಯಾಗುತ್ತದೆ.

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

10. ಬೆಲೆ ವ್ಯತ್ಯಾಸ

ಎಎಂಟಿ ವರ್ಷನ್ ಸಾಮಾನ್ಯ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ 40ರಿಂದ 50 ಸಾವಿರ ರು.ಗಳಷ್ಟು ದುಬಾರಿಯೆನಿಸಲಿದೆ.

Source:Economictimes

Most Read Articles

Kannada
Read more on auto tips top 10
English summary
10 things to know about Automated Manual Transmission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X