ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸಲು ಅಗತ್ಯವಾಗಿವೆ ಈ ಆಕ್ಸೆಸರಿಗಳು!

By Drivespark Bureau

2021ರ ಮುಂಗಾರು ಈಗಾಗಲೇ ಭಾರತಕ್ಕೆ ಕಾಲಿಟ್ಟಿದೆ. ದಕ್ಷಿಣ ರಾಜ್ಯಗಳನ್ನು ಆವರಿಸಿದ್ದ ಮುಂಗಾರು ಮಾರುತಗಳು ಈಗ ಉತ್ತರ ಭಾರತದ ಕಡೆಗೆ ಚಲಿಸುತ್ತಿದೆ. ಮಳೆಗಾಲದಲ್ಲಿ ಕಾರುಗಳ ನಿರ್ವಹಣೆ ಬಹಳ ಮುಖ್ಯವಾಗುತ್ತದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ವಾಹನಗಳ ನಿರ್ವಹಣೆಗಾಗಿ ಕೆಲವು ಆಕ್ಸೇಸರೀಸ್'ಗಳನ್ನು ಕಾರಿನೊಳಗೆ ಇಟ್ಟುಕೊಳ್ಳಬೇಕು. ಈ ಆಕ್ಸೇಸರೀಸ್'ಗಳು ಮಳೆಗಾಲದಲ್ಲಿ ನೆರವಿಗೆ ಬರುತ್ತವೆ. ಮಳೆಗಾಲದಲ್ಲಿ ಕಾರಿನಲ್ಲಿರಬೇಕಾದ ಆಕ್ಸೇಸರೀಸ್'ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

1. ಪಾಲಿಮರ್ ಕಾರ್ ಕವರ್

ಸಿಂಥೆಟಿಕ್ ಕಾರ್ ಕವರ್, ಕಾರನ್ನು ಧೂಳಿನಿಂದ ರಕ್ಷಿಸುತ್ತದೆ. ಪಾಲಿಮರ್ ಕಾರ್ ಕವರ್ ವಾಟರ್ ಪ್ರೂಫ್ ಆಗಿರುವ ಕಾರಣ, ಕಾರಿನೊಳಗೆ ನೀರು ಹರಿಯದಂತೆ ತಡೆಯುತ್ತದೆ. ಈ ಕವರ್ ಮಳೆಗಾಲದಲ್ಲಿ ಕಾರನ್ನು ಮಳೆಯಿಂದ ರಕ್ಷಿಸುತ್ತದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

2. ಆ್ಯಂಟಿ-ಫಾಗ್ ಮೆಂಬರೇನ್

ಮಳೆ ಸುರಿಯುವಾಗ ಕಾರು ಚಾಲನೆ ಮಾಡುತ್ತಿದ್ದರೆ ಗೋಚರತೆ ತುಂಬಾ ಕಡಿಮೆಯಾಗಿರುತ್ತದೆ. ಕಾರುಗಳಲ್ಲಿ ಆ್ಯಂಟಿ ಫಾಗ್ ಮೆಂಬರೇನ್ ಅನ್ನು ಅಳವಡಿಸಿದರೆ ಒಆರ್‌ವಿ‌ಎಂಗಳ ಮೇಲೆ ಮಂಜು ಹಾಗೂ ನೀರಿನ ಹನಿಗಳು ಉಳಿಯದೇ ಗೋಚರತೆ ಸ್ಪಷ್ಟವಾಗುತ್ತದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

3. ಮಡ್ ಫ್ಲಾಪ್

ಮಡ್ ಫ್ಲಾಪ್'ಗಳು ಕಾರಿನ ಅತಿ ಅಗತ್ಯವಾದ ಆಕ್ಸೇಸರೀಸ್'ಗಳಲ್ಲಿ ಒಂದಾಗಿವೆ. ಅವು ಚಾಲಕರನ್ನು ಟಯರ್ ಸ್ಪ್ಲಾಶ್‌ಗಳಿಂದ ರಕ್ಷಿಸುವುದರ ಜೊತೆಗೆ, ಕಾರನ್ನು ಒದ್ದೆಯಾದ ಮಣ್ಣಿನಿಂದ ಕೊಳಕು ಬರದಂತೆ ರಕ್ಷಿಸುತ್ತವೆ. ಮಡ್ ಫ್ಲಾಪ್'ಗಳನ್ನು ಯಾವಾಗಲೂ ಕಾರಿನಲ್ಲಿಡುವುದು ಒಳ್ಳೆಯದು.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

4. ಪಾಕೆಟ್ ಕಾರ್ ಅಂಬ್ರೆಲ್ಲಾ (ಛತ್ರಿ)

ಮಳೆಗಾಲದಲ್ಲಿ ಛತ್ರಿಯ ಅಗತ್ಯ ಎಷ್ಟಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇತ್ತೀಚಿನ ದಿನಗಳಲ್ಲಿ ಕಾಂಪ್ಯಾಕ್ಟ್ ಗಾತ್ರದ ಛತ್ರಿಗಳಿವೆ. ಅವುಗಳನ್ನು ಫೋಲ್ಡ್ ಮಾಡಿ ಕಾರು ಡೋರ್'ಗಳಲ್ಲಿಡಬಹುದು.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಕೆಲವು ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಅಂಬ್ರೆಲ್ಲಾ ಹೋಲ್ಡರ್'ಗಳನ್ನು ನೀಡುತ್ತವೆ. ಇವುಗಳನ್ನು ಡೋರ್ ಪಾಕೆಟ್‌ಗಳಲ್ಲಿ ಸಂಯೋಜಿಸಲಾಗಿರುತ್ತದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

5. ರಬ್ಬರ್ ಫ್ಲೋರ್ ಮ್ಯಾಟ್

ಫ್ಯಾಬ್ರಿಕ್ ಕಾರ್ಪೆಟ್ ಮ್ಯಾಟ್‌ಗಳು ಮಳೆಗಾಲದಲ್ಲಿ ಸುಲಭವಾಗಿ ಒದ್ದೆಯಾಗಿ ಕೊಳಕಾಗುತ್ತವೆ. ಇದರಿಂದ ಕ್ಯಾಬಿನ್‌ನಲ್ಲಿ ಅನಗತ್ಯ ತೇವಾಂಶ ಸೃಷ್ಟಿಯಾಗಿ ದುರ್ವಾಸನೆ ಉಂಟಾಗುತ್ತದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಇದನ್ನು ತಪ್ಪಿಸಲು ಕಾರಿನೊಳಗೆ ರಬ್ಬರ್ ಮ್ಯಾಟ್‌ಗಳನ್ನು ಇಡುವುದು ಒಳ್ಳೆಯದು. ರಬ್ಬರ್ ಫ್ಲೋರ್ ಮ್ಯಾಟ್‌ಗಳು, ಫ್ಯಾಬ್ರಿಕ್ ಮ್ಯಾಟ್‌ಗಳಂತೆ ಒದ್ದೆಯಾಗುವುದಿಲ್ಲ. ಜೊತೆಗೆ ಇವುಗಳ ನಿರ್ವಹಣೆಯು ಸುಲಭ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

6. ವಿಂಡೋ ವೈಸರ್

ಕಾರಿನಲ್ಲಿ ಸಂಚರಿಸುವಾಗ ಮಳೆಯನ್ನು ಆನಂದಿಸಲು ಬಯಸಿ ವಿಂಡೋಗಳನ್ನು ತೆರೆದರೆ ಕಾರಿನೊಳಗೆ ನೀರು ನುಗ್ಗುವುದು ಖಚಿತ. ಮಳೆ ಸುರಿಯುವಾಗ ವಿಂಡೋಗಳು ಕಾಣುವಂತೆ ಮಾಡಲು ವಿಂಡೋ ವೈಸರ್‌ಗಳನ್ನು ಬಳಸಿ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

7. ರೇನ್ ಶೂಸ್ ಕವರ್

ರೇನ್ ಶೂ ಕವರ್'ಗಳು ಮಾರುಕಟ್ಟೆಯಲ್ಲಿರುವ ಆಧುನಿಕ ಆಕ್ಸೇಸರೀಸ್'ಗಳಲ್ಲಿ ಒಂದಾಗಿದ್ದು, ಮಳೆಗಾಲಕ್ಕೆ ಸೂಕ್ತವಾಗಿವೆ. ಈ ಶೂ ಕವರ್‌ಗಳನ್ನು ಸಿಲಿಕಾನ್‌ನಿಂದ ಮಾಡಲಾಗಿರುತ್ತದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಇವುಗಳನ್ನು ಬೂಟುಗಳ ಮೇಲೆ ಧರಿಸಲಾಗುತ್ತದೆ. ಇವು ಬೂಟುಗಳಿಗೆ ಹೆಚ್ಚುವರಿ ವಾಟರ್ ಪ್ರೂಫ್ ಲೆಯರ್ ನೀಡುತ್ತವೆ. ಇವು ಒಂದು ರೀತಿಯಲ್ಲಿ ಬೂಟುಗಳಿಗೆರೇನ್‌ಕೋಟ್‌ಗಳಂತೆ ಕಾರ್ಯನಿರ್ವಹಿಸುತ್ತವೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಕಾರು ಪ್ರಯಾಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲೀಕನ ಕರ್ತವ್ಯವಾಗಿದೆ. ಸುಖಕರ ಪ್ರಯಾಣವನ್ನು ನಿಮ್ಮದಾಗಿಸಿಕೊಳ್ಳಲು ಪ್ರತಿಯೊಂದು ಕಾರಿನಲ್ಲೂ ಈ ಕೆಳಗಿನ ಕೆಲವು ತಾಂತ್ರಿಕ ಅಂಶಗಳನ್ನು ಕಡ್ಡಾಯವಾಗಿ ಆಳವಡಿಸಿಕೊಳ್ಳುವುದು ಉತ್ತಮ ಎನಿಸದೇ ಇರಲಾರದು.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಕಾರು ಪ್ರಯಾಣವನ್ನು ಸುರಕ್ಷಿತ ಹಾಗೂ ಆನಂದಮಯವಾಗಿಸಲು ನಾವಿಲ್ಲಿ ಪ್ರಮುಖ 9 ಕಾರು ಆಕ್ಸೆಸರಿಸ್‌ಗಳ ಬಗ್ಗೆ ಚರ್ಚಿಸಿದ್ದು, ಸುರಕ್ಷಿತ ಕಾರು ಪ್ರಯಾಣಕ್ಕೆ ಪ್ರತಿ ಕಾರು ಮಾಲೀಕರು ಕಡ್ಡಾಯವಾಗಿ ಈ ಕೆಳಗಿನ ಸೌಲಭ್ಯಗಳನ್ನು ಹೊಂದುವುದು ಒಳಿತು. ಯಾಕೆಂದ್ರೆ ಈ ಕೆಳಗಿನ ತಾಂತ್ರಿಕ ಅಂಶಗಳು ನಿಮ್ಮ ಕಾರು ಪ್ರಯಾಣವನ್ನು ಸುಲಭವಾಗಿಸಲಿವೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ನೀವು ರಿವರ್ಸ್ ಗೇರ್ ಹಾಕಿದಾಗ ಇದು ಸ್ವಯಂಚಾಲಿತವಾಗಿ ಕೆಲಸ ಆರಂಭಿಸಲಿದೆ. ಕಾರಿನ ಹಿಂಬದಿಯಲ್ಲಿರುವ ಚಿಕ್ಕ ಸೆನ್ಸಾರ್ ಗಳು ಅಲ್ಟ್ರಾಸೋನಿಕ್ ರೇಡಿಯೊ ವೇವ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಯಾವುದೇ ರೀತಿಯ ತಡೆ ಎದುರಾದರೇ ಎಚ್ಚರಿಸಲಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಆಳವಡಿಸಲಾದ ಎಲ್ ಸಿಡಿ ಪರದೆ ಮೇಲೆ ಸ್ಪಷ್ಟವಾದ ಗೋಚರತೆಯನ್ನು ನೀಡಲಿದೆ. ಬಹುತೇಕ ಎಲ್ಲಾ ಆಧುನಿಕ ಕಾರುಗಳಲ್ಲೂ ಇಂತಹ ಸೇವೆಗಳು ಲಭ್ಯವಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಇದು ಕಾರಿನ ಹಿಂಬದಿಯಲ್ಲಿ ಆಳವಡಿಸಲಾದ ಲೆನ್ಸ್ ಗಳ (ಟೈಲ್ ಗೇಟ್ ಅಥವಾ ಬಂಪರ್ ನಲ್ಲಿ) ಮೂಲಕ ಪ್ರತ್ಯಕ್ಷ ದರ್ಶನವನ್ನು ಸೀಟಿನಲ್ಲೇ ಕುಳಿತುಕೊಂಡು ನೋಡಬಹುದಾಗಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಗೇರ್ ಲಾಕ್

ಇತ್ತೀಚೆಗೆ ಕಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಡೋರ್ ಲಾಕ್ ಹೊರತಾಗಿಯು ಕೆಲವು ಪ್ರಕರಣಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿ ಡೋರ್ ಅನ್ ಲಾಕ್ ಮಾಡಿ ಕಾರು ಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಗೇರ್ ಲಾಕ್ ಹೊಂದಿದ್ದರೆ ಇಂತಹ ಪ್ರಕರಣಗಳನ್ನು ತಡೆಯಬಹುದು.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಪ್ರತಿಫಲಿತ ಟೇಪ್

ಕಾರಿನಲ್ಲಿ ಕೆಂಪು ಬಣ್ಣದ ತ್ರಿಕೋನಾಕೃತಿಯಲ್ಲಿ ಪ್ರತಿಫಲಿಸುವ ಟೇಪ್ ಲಗತ್ತಿಸುವ ಮೂಲಕ ರಾತ್ರಿ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ. ಇದು ದೂರದಿಂದಲೇ ವಾಹನ ಪ್ರತಿಬಿಂಬಿಸುವಂತೆ ಮಾಡಲಿದ್ದು, ಹಿಂಬದಿಯಲ್ಲಿ ಬರುವ ವಾಹನಗಳು ಎಚ್ಚೆತ್ತುಕೊಳ್ಳಲಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಲೈಫ್ ಹ್ಯಾಮರ್

ಲೈಫ್ ಹ್ಯಾಮರ್ ಗಳನ್ನು ಎಮರ್ಜನ್ಸಿ ಹ್ಯಾಮೆರ್ ಗಳೆಂದು ಕೂಡಾ ಕರೆಯಲ್ಪಡುತ್ತಿದ್ದು, ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಕಾರಿನಿಂದ ಹೊರಬರಲು ನೆರವಾಗಲಿದೆ. ಲೈಫ್ ಹ್ಯಾಮರ್ ನೆರವಿನಿಂದ ಕಾರಿನ ಗಾಜು ಒಡೆಯಲು ಅಥವಾ ಸೀಟು ಬೆಲ್ಟ್ ಮುರಿಯಲು ನೆರವಾಗಲಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಕನ್ವೆಕ್ಸ್ ಮಿರರ್

ಹೊರಗಿನ ಕನ್ವೆಕ್ಸ್ ಮಿರರ್ ಗಳು ನಿಮಗೆ ಕನ್ನಡಿಯೊಳಗೆ ನಿಮಗೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಇದರಿಂದ ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಸಣ್ಣದಾಗಿ ಗೋಚರಿಸಲಿದೆ. ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆ ಮಾಡಲಿದ್ದು, ಮತ್ತಷ್ಟು ದೂರದ ಪ್ರದೇಶದ ಗೋಚರತೆಯು ಲಭ್ಯವಾಗಲಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಮೊಬೈಲ್ ಹೊಲ್ಡರ್

ಕಾರು ಪ್ರಯಾಣದ ವೇಳೆ ಬಹುತೇಕ ಚಾಲಕರು ಒಂದು ಕೈಯಲ್ಲಿ ಮೊಬೈಲ್ ಇನ್ನೊಂದು ಕೈಯಲ್ಲಿ ಕಾರಿನ ಹ್ಯಾಂಡಲ್ ಹಿಡಿದು ಚಾಲನೆ ಮಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಇಂತಹ ಅಭ್ಯಾಸಗಳು ನಿಮ್ಮ ಪ್ರಾಣಕ್ಕೆ ಕುತ್ತುತರಬಹುದು. ಹೀಗಾಗಿ ಚಾಲನೆ ವೇಳೆ ಗೂಗಲ್ ಮ್ಯಾಪ್ ಬಳಕೆ ಅವಶ್ಯ ಇದ್ದಲ್ಲಿ ಮೊಬೈಲ್ ಹೊಲ್ಡರ್ ನಿಮ್ಮ ಅನುಕೂಲಕ್ಕೆ ಬರಲಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಎಲ್‌ಇಡಿ ಆಕ್ಸಿಲರಿ ಲ್ಯಾಂಪ್

ಮಾರುಕಟ್ಟೆಯಲ್ಲಿ ಹಲವು ಶ್ರೇಣಿಯ ಎಲ್‌ಇಡಿ ಆಕ್ಸಿಲರಿ ಲ್ಯಾಂಪ್ ಲಭ್ಯವಿದ್ದು, ಕಾರಿನ ನೋಟವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸುರಕ್ಷತೆಯನ್ನು ಪ್ರದಾನ ಮಾಡಲಿದೆ. ಇದು ಬೇಗನೆ ಪ್ರತಿಫಲಿಸುವುದರಿಂದ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ನೆರವಾಗಲಿದೆ.

ಮಳೆಗಾಲದಲ್ಲಿ ಕಾರುಗಳನ್ನು ಸಂರಕ್ಷಿಸುತ್ತವೆ ಈ ಆಕ್ಸೇಸರೀಸ್'ಗಳು

ಮೊಬೈಲ್ ಏರ್ ಕಂಪ್ರೆಸರ್

ದೂರದ ಪ್ರಯಾಣದಲ್ಲಿ ಆಗುವ ತೊಂದರೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ನಿಮ್ಮ ಕಾರಿನ ಪ್ರಮುಖ ಆಕ್ಸೆಸರಿಗಳಲ್ಲಿ ಮೊಬೈಲ್ ಏರ್ ಕಂಪ್ರೆಸರ್ ಸಾಧನವನ್ನು ಇಟ್ಟುಕೊಂಡಿರುವುದು ಒಳಿತು.

Most Read Articles

Kannada
English summary
Accessories Which protects car in monsoon season. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X