ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

By Manoj Bk

ಪ್ರತಿ ಕಾರಿನಲ್ಲಿ ಸ್ಪೇರ್ ಟಯರ್ ನೀಡಲಾಗಿರುತ್ತದೆ. ಈ ಹೆಚ್ಚುವರಿ ಟಯರ್, ಇತರ ಯಾವುದಾದರರೂ ಟಯರ್ ಪಂಕ್ಚರ್ ಆದಾಗ ನೆರವಿಗೆ ಬರುತ್ತದೆ. ಸ್ಪೇರ್ ಟಯರ್ ಅನಗತ್ಯ ಸಮಸ್ಯೆಗಳು ಎದುರಾಗುವುದನ್ನು ತಡೆಯುತ್ತದೆ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಪಂಕ್ಚರ್ ಆದಾಗ ಸ್ವತಃ ನೀವೇ ಟಯರ್ ಬದಲಿಸಿಕೊಳ್ಳಬಹುದು. ಅಥವಾ ಮೆಕಾನಿಕ್ ಬಳಿ ಬದಲಿಸಬಹುದು. ಆದರೆ ನಿಜವಾದ ಟಯರ್‌ಗೆ ಬದಲಿಯಾಗಿ ಸ್ಪೇರ್ ಟಯರ್ ಅನ್ನು ಶಾಶ್ವತವಾಗಿ ಬಳಸಬಾರದು. ಕೆಲವು ಕಿ.ಮೀಗಳವರೆಗೆ ಮಾತ್ರ ಸ್ಪೇರ್ ಟಯರ್ ಬಳಸುವುದು ಸೂಕ್ತ. ಸ್ಪೇರ್ ಟಯರ್ ಅನ್ನು ಶಾಶ್ವತವಾಗಿ ಬಳಸಿದರೆ ಸಮಸ್ಯೆಗಳನ್ನು ಎದುರಿಸುವುದು ಖಚಿತ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಕಾರು ತಯಾರಕ ಕಂಪನಿಗಳು ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಪೂರ್ಣ ಗಾತ್ರದ ಬಿಡಿ ಟಯರ್‌ಗಳಿಗೆ ಬದಲಿಗೆ ಸಣ್ಣ ಗಾತ್ರದ ಟಯರ್‌ಗಳನ್ನು ನೀಡುತ್ತಿವೆ. ಈ ಟಯರ್‌ಗಳನ್ನು ಸ್ಪೇಸ್ ಸೇವರ್ ಟಯರ್ ಅಥವಾ ಡೋನಟ್ ಟಯರ್ ಎಂದು ಕರೆಯಲಾಗುತ್ತದೆ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸಾಮಾನ್ಯ ಸ್ಪೇರ್ ಟಯರ್‌ಗಳಿಗೆ ಹೋಲಿಸಿದರೆ, ಈ ಸ್ಪೇಸ್ ಸೇವರ್ ಟಯರ್‌ಗಳು ಚಿಕ್ಕದಾಗಿರುತ್ತವೆ. ಈ ಟಯರ್‌ಗಳ ತೂಕವೂ ಕಡಿಮೆಯಾಗಿರುತ್ತದೆ. ಈ ಸ್ಪೇಸ್ ಸೇವರ್ ಟಯರ್ ಅಳವಡಿಸಿದ ನಂತರ ಹೆಚ್ಚು ದೂರ ಪ್ರಯಾಣಿಸದಿರಿ. ಈ ಟಯರ್‌ಗಳು ಚಿಕ್ಕ ಪ್ರಯಾಣಕ್ಕೆ ಮಾತ್ರ ಸೂಕ್ತವಾಗಿವೆ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಈ ಟಯರ್‌ಗಳನ್ನು ಅಳವಡಿಸಿದ ನಂತರ ಹೆಚ್ಚಿನ ವೇಗದಲ್ಲಿ ಚಲಿಸದಿರಿ. ಸ್ಪೇಸ್ ಸೇವರ್ ಟಯರ್‌ಗಳನ್ನು ಅಳವಡಿಸಿದ್ದಾಗ ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ಮಾತ್ರ ಚಲಿಸಬೇಕು. ಹಾಗೆಯೇ 250 ಕಿ.ಮೀಗಳವರೆಗೆ ಮಾತ್ರ ಚಲಿಸಿ. ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ಈ ಲೇಖನದಲ್ಲಿ ನೋಡೋಣ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಅನುಕೂಲಗಳು:

ಸಾಮಾನ್ಯ ಸ್ಪೇರ್ ಟಯರ್ ಕಾರಿನ ಬೂಟ್ ಸ್ಪೇಸ್'ನಲ್ಲಿ ಹೆಚ್ಚು ಜಾಗವನ್ನು ಪಡೆಯುತ್ತದೆ. ಆದರೆ ಸ್ಪೇಸ್ ಸೇವರ್ ಟಯರ್‌ಗಳು ಸಣ್ಣದಾಗಿರುವುದರಿಂದ ಹೆಚ್ಚು ಜಾಗವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿಯೇ ಈ ಟಯರ್‌ಗಳನ್ನು ಸ್ಪೇಸ್ ಸೇವರ್ ಟಯರ್ ಎಂದು ಕರೆಯಲಾಗುತ್ತದೆ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಪೇಸ್ ಸೇವರ್ ಟಯರ್‌ಗಳ ತೂಕ ಕಡಿಮೆ ಇರುವುದರಿಂದ, ಕಾರಿನ ಒಟ್ಟಾರೆ ತೂಕವೂ ಕಡಿಮೆಯಾಗುತ್ತದೆ. ಜೊತೆಗೆ ಕಾರಿನ ಹೊರಸೂಸುವಿಕೆಯು ಕಡಿಮೆಯಾಗುತ್ತದೆ. ಜೊತೆಗೆ ಕಾರಿನ ಮೈಲೇಜ್ ಹೆಚ್ಚುತ್ತದೆ. ಕಾರು ಹೆಚ್ಚು ತೂಕ ಹೊಂದಿದ್ದರೆ ಮೈಲೇಜ್ ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಪೇಸ್ ಸೇವರ್ ಟಯರ್‌ಗಳ ಮೇಲೆ ಸಾಮಾನ್ಯವಾಗಿ ಕಿತ್ತಳೆ, ಹಳದಿ, ಕೆಂಪು ಬಣ್ಣಗಳಿಂದ ಗುರುತು ಹಾಕಿರಲಾಗುತ್ತದೆ. ಸ್ಪೇರ್ ಟಯರ್ ಎಂಬುದನ್ನು ಸೂಚಿಸಲು ಈ ರೀತಿ ಗುರುತು ಹಾಕಲಾಗಿರುತ್ತದೆ. ಸ್ಪೇರ್ ಟಯರ್‌ನಲ್ಲಿ ಚಲಿಸುತ್ತಿದ್ದರೆ ಆದಷ್ಟು ಬೇಗ ಸಾಮಾನ್ಯ ಟಯರ್‌ಗೆ ಬದಲಿಸಿಕೊಳ್ಳುವುದು ಸೂಕ್ತ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಅನಾನುಕೂಲಗಳು:

ಸ್ಪೇಸ್ ಸೇವರ್ ಟಯರ್‌ಗಳು ಸಾಮಾನ್ಯ ಟಯರ್‌ಗಳಂತೆ ಕಾರ್ಯನಿರ್ವಹಿಸುವುದಿಲ್ಲ. ಸ್ಪೇಸ್ ಸೇವರ್ ಟಯರ್‌ಗಳ ಮೂಲಕ ಚಾಲನೆ ಮಾಡುವುದು ಸುರಕ್ಷಿತವಲ್ಲ. ಬ್ರೇಕ್ ಹಾಕಿದಾಗ ಸ್ಪೇಸ್ ಸೇವರ್ ಟಯರ್‌ಗಳು ಕಾರಿನ ನಿಲುಗಡೆ ದೂರವನ್ನು ಹೆಚ್ಚಿಸುತ್ತವೆ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಪೇಸ್ ಸೇವರ್ ಟಯರ್ ಅಳವಡಿಸಿ ನಡೆಸಲಾದ ಪರೀಕ್ಷೆಗಳಲ್ಲಿ ಕಾರುಗಳು 50%ನಷ್ಟು ದೂರ ನಿಲ್ಲುವುದು ಕಂಡು ಬಂದಿದೆ. ಕಾರಿನ ಬ್ರೇಕ್ ಹಿಡಿದರೆ ಕಾರು ತಕ್ಷಣ ನಿಲ್ಲುವುದಿಲ್ಲ. ಕಾರು ನಿಲ್ಲುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಇದು ಸ್ಪೇಸ್ ಸೇವರ್ ಟಯರ್‌ನ ಪ್ರಮುಖ ಸಮಸ್ಯೆಯಾಗಿದೆ. ಸ್ಪೇಸ್ ಸೇವರ್ ಟಯರ್‌ಗಳು ಕಾರಿನ ಕಾರ್ನರ್ ಗ್ರಿಪ್ ಅನ್ನು 13%ನಷ್ಟು ಕಡಿಮೆಗೊಳಿಸುತ್ತವೆ. ಕಾರಿನಲ್ಲಿ ಸ್ಪೇಸ್ ಸೇವರ್ ಟಯರ್ ಅಳವಡಿಸಿದ್ದಾಗ ಕಾರನ್ನು ಎಚ್ಚರಿಕೆಯಿಂದ ಚಾಲನೆ ಮಾಡುವುದು ಅವಶ್ಯಕ.

ಸ್ಪೇಸ್ ಸೇವರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಪೇಸ್ ಸೇವರ್ ಟಯರ್‌ಗಳ ಬಳಕೆಯನ್ನು ಮುಂದುವರಿಸಿದರೆ, ಕಾರಿನಲ್ಲಿ ಸಾಕಷ್ಟು ಮೆಕಾನಿಕಲ್ ಸಮಸ್ಯೆಗಳು ಕಂಡು ಬರುತ್ತವೆ. ಸ್ಪೇಸ್ ಸೇವರ್ ಟಯರ್‌ಗಳನ್ನು ಬಳಸುವಾಗ ಈ ಅಪಾಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

Most Read Articles

Kannada
English summary
Advantages and disadvantages of using space saver tyres. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X